45 Box Office Day 4: 4ನೇ ದಿನ '45' ಕಲೆಕ್ಷನ್ ಹೇಗಿದೆ? ವೀಕೆಂಡ್ ಗೆದ್ದಿತೇ ಸಿನಿಮಾ?
ಈ ವರ್ಷ ಕ್ರಿಸ್‌ಮಸ್‌ಗೆ ತೆರೆಕಂಡಿರುವ ಕನ್ನಡ ಸಿನಿಮಾಗಳಲ್ಲಿ '45' ಕೂಡ ಒಂದು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ '45' ಮೇಲೂ ಅದೇ ನಿರೀಕ್ಷೆಯಿತ್ತು. ಅದರಲ್ಲೂ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಕಲೆಕ್ಷನ್ ಆಗುತ್ತೆ ಅನ್ನೋದೇ ಕುತೂಹಲದಲ್ಲಿ ಚಿತ್ರರಂಗವಿದೆ.
ಶಿವಣ್ಣನ ದಶವತಾರ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಉಪೇಂದ್ರ ಲುಕ್, ಮ್ಯಾನರಿಸಂ ಥ್ರಿಲ್ ಕೊಟ್ಟಿದೆ. ರಾಜ್ ಬಿ ಶೆಟ್ಟಿ ಅಭಿನಯ ಇಷ್ಟ ಆಗಿದೆ. ಹೀಗಾಗಿ '45' ಕ್ರಿಸ್‌ಮಸ್ ಹಾಗೂ ಹೊಸ ವರ್ಷದಲ್ಲಿ ಸಂಭ್ರಮದಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡುತ್ತೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕಿದ್ದರು. ಸದ್ಯಕ್ಕೀಗ '45' ಸಿನಿಮಾ ಮೊದಲ ವೀಕೆಂಡ್ ಮುಗಿಸಿ ಮುನ್ನುಗ್ಗುತ್ತಿದೆ.

ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವ ಬಹುಕೋಟಿ ವೆಚ್ಚದ ಸಿನಿಮಾ'45' ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಸಿನಿಮಾ ಮೇಕಿಂಗ್ ನಿಂದ ಹಿಡಿದು ವಿಎಫ್‌ಎಕ್ಸ್ ವರೆಗೂ ಪ್ರೇಕ್ಷಕರಿಗೆ ಇಷ್ಟ ಆಗಿದೆ. '45' ಸಿನಿಮಾ ಬಿಡುಗಡೆಗೂ ಮುನ್ನವೇ ಕುತೂಹಲ ಕೆರಳಿಸಿತ್ತು. ಸಿನಿಮಾ ರಿಲೀಸ್ ಆದ ಬಳಿಕ ಶಿವಣ್ಣನ ದಶಾವತಾರ, ಗರುಡ ಪುರಾಣದ ಕಾನ್ಸೆಪ್ಟ್ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಹಾಕಿದ್ದರೆ, '45' ಸಿನಿಮಾ 4ನೇ ದಿನ ಗಳಿಸಿದ್ದು ಎಷ್ಟು? ಇಲ್ಲಿವರೆಗೂ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
4ನೇ ದಿನದ ಕಲೆಕ್ಷನ್ ಎಷ್ಟು?
'45' ಕನ್ನಡ ಚಿತ್ರರಂಗದ ಮಟ್ಟಿಗೆ ವಿಶೇಷ ಸಿನಿಮಾ. ಸಿನಿಮಾ ಕಾನ್ಸೆಪ್ಟ್‌ನಿಂದ ಹಿಡಿದು ಮೇಕಿಂಗ್‌ವರೆಗೂ ಈ ಸಿನಿಮಾ ವಿಶಿಷ್ಟವಾಗಿ ನಿಂತಿದೆ. ಅಲ್ಲದೆ ಶಿವಣ್ಣ ದಶಾವತಾರ ಪ್ರೇಕ್ಷಕರಿಗೆ ಇಷ್ಟ ಆಗಿದ್ದು, ಥಿಯೇಟರ್ ಕಡೆಗೆ ಮುಖ ಮಾಡುತ್ತಿದ್ದಾರೆ. ಬಾಕ್ಸಾಫೀಸ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ 4ನೇ ದಿನದ ಕಲೆಕ್ಷನ್ ರಿವೀಲ್ ಮಾಡಿದೆ. 4ನೇ ದಿನ ₹2 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ವೀಕೆಂಡ್‌ನಲ್ಲಿ ಅವರೇಜ್ ಕಲೆಕ್ಷನ್ ಮಾಡಿದೆ.
4 ದಿನಗಳಲ್ಲಿ ಗಳಿಸಿದ್ದೆಷ್ಟು?
ಅರ್ಜುನ್ ಜನ್ಯ ನಿರ್ದೇಶನದ '45' ಸಿನಿಮಾ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ಬಾರಿ ನಿರೀಕ್ಷೆಯಿತ್ತು. ಮೊದಲ ದಿನ ಭರ್ಜರಿ ಓಪನಿಂಗ್ ಕಂಡಿದ್ದ ಸಿನಿಮಾ 2ನೇ ದಿನದಿಂದ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಕ್ರಿಸ್‌ಮಸ್ ರಜೆ ಮುಗಿಸಿ ಮರಳಿರುವ ಜನರು '45' ನೋಡುವುದಕ್ಕೆ ನುಗ್ಗಿ ಬರುತ್ತಾರಾ? ಅನ್ನೋದು ನೋಡಬೇಡಬೇಕಿದೆ. ಆದರೆ, ಈ ನಾಲ್ಕು ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಹೀಗಿದೆ.
1ನೇ ದಿನ ₹5.5 ಕೋಟಿ
2ನೇ ದಿನ ₹2 ಕೋಟಿ
3ನೇ ದಿನ ₹1.95 ಕೋಟಿ
4ನೇ ದಿನ ₹2 ಕೋಟಿ
ಒಟ್ಟು ₹11.45 ಕೋಟಿ

ಸೋಮವಾರ ಅಸಲಿ ಆಟ
'45' ಸಿನಿಮಾ ಭಾನುವಾರದ ವರೆಗೂ ಕಲೆಕ್ಷನ್ ಚೆನ್ನಾಗಿಯೇ ಆಗಿದೆ. ಅದೇ 5ನೇ ದಿನ ಸಿನಿಮಾ ಕಲೆಕ್ಷನ್ ಹೇಗಿರುತ್ತೆ ಅನ್ನೋದರ ಮೇಲೆ ಸಿನಿಮಾ ಭವಿಷ್ಯ ನಿಂತಿದೆ. ಒಂದು ವೇಳೆ ಜನರು ಮೊದಲ ಸೋಮವಾರ ಕೈ ಹಿಡಿದರೆ, ಹೊಸ ವರ್ಷದವರೆಗೂ ಸಿನಿಮಾವನ್ನು ಯಾರಿಂದಲೂ ಅಲ್ಲಾಡಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳ ಕಣ್ಣು ಸೋಮವಾರದ ಮೇಲೆ ನಿಂತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











