45 Box Office Day 8: ಹೊಸ ವರ್ಷ '45'ಗೆ ಅದೃಷ್ಟ ಕೊಡ್ತಾ? 8ನೇ ದಿನ ಬಾಕ್ಸಾಫೀಸ್‌ನಲ್ಲಿ ಎಷ್ಟು ಏರಿಕೆಯಾಯ್ತು?

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರು ನಟಿಸಿರುವ ಸಿನಿಮಾ '45' ಕ್ರಿಸ್‌ಮಸ್‌ಗೆ ರಿಲೀಸ್ ಆಗಿದೆ. ಅರ್ಜುನ್ ಜನ್ಯ ಇದೇ ಮೊದಲ ಬಾರಿ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು ಭರವಸೆಯನ್ನು ಮೂಡಿಸಿತ್ತು.

ಶಿವಣ್ಣನ ದಶಾವತಾರ ಸಿನಿಮಾ ನೋಡಿದ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಮೂವರು ದಿಗ್ಗಜರನ್ನು ಇಟ್ಟುಕೊಂಡು ಅರ್ಜುನ್ ಜನ್ಯ ವಿಭಿನ್ನ ಕಥೆಯನ್ನು ತೆರೆಮೇಲೆ ಹೇಳುವುದಕ್ಕೆ ಹೊರಟಿದ್ದರು. ಹೀಗಾಗಿ '45' ಅನ್ನು ರೆಗ್ಯೂಲರ್ ಸಿನಿಮಾಗಳ ಸಾಲಿಗೆ ಸೇರಿಸಲಾಗುವುದಿಲ್ಲ. ಇದೊಂದಿಗೆ ಮೂವರು ದಿಗ್ಗಜರನ್ನು ಇಟ್ಟುಕೊಂಡು ನಿರ್ಮಿಸಿರುವ ಸಿನಿಮಾ.

Shivarajkumar Upendra Raj B Shetty 45 movie Day 8 Box Office Collection Report

ಕನ್ನಡದ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಎಂಟು ದಿನಗಳಲ್ಲಿ ಗಳಿಸಿದ್ದೆಷ್ಟು? 8ನೇ ದಿನ ಹೊಸ ವರ್ಷದಂದು ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ₹25 ಕೋಟಿ ಕ್ಲಬ್ ಸೇರುವುದಕ್ಕೆ ಇನ್ನೆಷ್ಟು ದಿನ ಬೇಕು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಹೊಸ ವರ್ಷದ ಮೊದಲ ದಿನ '45'ಗೆ ಕೈ ಹಿಡಿಯಿತೇ?

'45' ಸಿನಿಮಾದ ಕ್ಯಾರೆಕ್ಟರ್‌ಗಳು, ವಿಎಫ್‌ಎಕ್ಸ್, ಸಿನಿಮಾ ಕಾನ್ಸೆಪ್ಟ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಜನರು ನುಗ್ಗಬೇಕಿದೆ. ನಿಧಾನವಾಗಿ ಮೌತ್ ಪಬ್ಲಿಸಿಟಿ ಸಿಗುತ್ತಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಕರ್ನಾಟಕದ ವಿತರಕರ ವಲಯದಲ್ಲಿ 8ನೇ ದಿನ ₹75 ಲಕ್ಷ ಕಲೆಕ್ಷನ್ ಆಗಿದೆಯೆಂದು ಚರ್ಚೆಯಾಗುತ್ತಿದೆ.

Shivarajkumar Upendra Raj B Shetty 45 movie Day 8 Box Office Collection Report

'45' ಇಲ್ಲಿವರೆಗಿನ ಕಲೆಕ್ಷನ್ ಎಷ್ಟು?

ಬಾಕ್ಸಾಫೀಸ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ 8ನೇ ದಿನ ಅಂದರೆ, ಹೊಸ ವರ್ಷದಂದು ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಕಳೆದ 7 ದಿನಗಳ ಬಾಕ್ಸಾಫೀಸ್ ವರದಿಯನ್ನು ಸ್ಯಾಕ್ನಿಲ್ಕ್ ಕೊಟ್ಟಿದೆ. ಇನ್ನು 8ನೇ ದಿನ ಸಿನಿಮಾ ವಿತರಕರ ವಲಯದಿಂದ ಅಂಕಿ-ಅಂಶಗಳು ಹೊರಬಿದ್ದಿದ್ದೆ. ಹೀಗಾಗಿ ಒಟ್ಟು 8 ದಿನಗಳ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

1ನೇ ದಿನ ₹5.5 ಕೋಟಿ
2ನೇ ದಿನ ₹2 ಕೋಟಿ
3ನೇ ದಿನ ₹1.95 ಕೋಟಿ
4ನೇ ದಿನ ₹1.95 ಕೋಟಿ
5ನೇ ದಿನ ₹0.85 ಕೋಟಿ
6ನೇ ದಿನ ₹0.65 ಕೋಟಿ
7ನೇ ದಿನ ₹0.55 ಕೋಟಿ

8ನೇ ದಿನ ₹0.75 ಕೋಟಿ

ಒಟ್ಟು ₹14.20 ಕೋಟಿ

ವೀಕೆಂಡ್‌ನಲ್ಲಿ ಕಲೆಕ್ಷನ್ ಕೋಟಿ ದಾಟಬಹುದೇ?

ಇನ್ನು '45' ಸಿನಿಮಾ 2ನೇ ವೀಕೆಂಡ್‌ನಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. ಆರಂಭದಲ್ಲಿ ಒಂದೊಳ್ಳೆ ಕಲೆಕ್ಷನ್ ಮಾಡಿದ್ದ ಸಿನಿಮಾ ವೀಕೆಂಡ್‌ನಲ್ಲಿ ಲಕ್ಷಕ್ಕೆ ಇಳಿದಿತ್ತು. ಹೊಸ ವರ್ಷದಂದು ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆಯಾಗಿದ್ದು, ವೀಕೆಂಡ್‌ನಲ್ಲಿ ಎರಡೂ ದಿನವೂ ಸಿನಿಮಾ ಗಳಿಕೆ ಹೆಚ್ಚಾಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ಸ್ಯಾಕ್ನಿಲ್ಕ್ ವರದಿಯಂತೆ ಮೊದಲ ವೀಕೆಂಡ್‌ನಲ್ಲಿ ₹15 ರಿಂದ ₹18 ಕೋಟಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ.

More from Filmibeat

English summary
Shivarajkumar, Upendra, Raj B Shetty 45 movie Day 8 Box Office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X