SU from So Box Office: 14ನೇ ದಿನವೂ 'ಸು ಫ್ರಮ್ ಸೋ' ಮಸ್ತ್ ಕಲೆಕ್ಷನ್; ತೆಲುಗಿನಲ್ಲೂ ರಿಲೀಸ್.. ಗಳಿಕೆ ಲೆಕ್ಕಾಚಾರವೇನು?
ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಈಗಾಗಲೇ ಕರ್ನಾಟಕದಲ್ಲಿ ಸಂಚಲನ ದೃಷ್ಟಿಸಿದೆ. ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದ್ದು ಗೊತ್ತೇ ಇದೆ. ಕನ್ನಡದಲ್ಲಿ ಸಿಕ್ಕಿರೋ ರೆಸ್ಪಾನ್ಸ್ ನೋಡಿದ ಬಳಿಕ ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿಯೂ ಡಬ್ ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಸಿನಿಮಾ ತೆರೆಕಂಡು 15 ದಿನಗಳಾಗಿದ್ದರೆ, ಮಲಯಾಳಂನಲ್ಲಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ತೆಲುಗಿನಲ್ಲಿ ಇಂದು (ಆಗಸ್ಟ್ 8) ಅದ್ಧೂರಿಯಾಗಿ ತೆರೆಕಂಡಿದೆ.
'ಸು ಫ್ರಮ್ ಸೋ' ಸಿನಿಮಾ ಪ್ರಿಯರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಅದೇ ರೀತಿ ಬಾಕ್ಸಾಫೀಸ್ ಕಲೆಕ್ಷನ್ ನಿರ್ಮಾಪಕರಲ್ಲೂ ನಗುವನ್ನು ತರಿಸಿದೆ. ಕನ್ನಡದ ಈ ಸೆನ್ಸೇಷನಲ್ ಕಾಮಿಡಿ ಸಿನಿಮಾ ಈಗ ಪರಭಾಷೆಯಲ್ಲಿ ಹೇಗೆಲ್ಲ ಸದ್ದು ಮಾಡುತ್ತೆ ಅನ್ನೋ ಕುತೂಹಲ ಎಲ್ಲರಲ್ಲಿಯೂ ಇದೆ. ಸದ್ಯಕ್ಕೀಗ ಎಲ್ಲರ ಕಣ್ಣು ಇಂದು ತೆರೆಕಂಡಿರುವ ತೆಲುಗು ವರ್ಷನ್ ಮೇಲೆ ನಿಂತಿದೆ.

ಈ ಸಿನಿಮಾ ಕೇವಲ ಕರ್ನಾಟಕವೊಂದರಲ್ಲಿಯೇ ಕಳೆದ 14 ದಿನಗಳಲ್ಲಿ ₹50 ಕೋಟಿಯ ಹತ್ತಿರ ಕಲೆಕ್ಷನ್ ಮಾಡಿದೆ. 14ನೇ ದಿನ ಕಲೆಕ್ಷನ್‌ನಲ್ಲಿ ಇಳಿಕೆ ಆಗಿದ್ದರೂ, ಕೋಟಿಗಿಂತ ಕಡಿಮೆ ಇಳಿದಿಲ್ಲ. ಇನ್ನು ಮಲಯಾಳಂಲ್ಲೂ ಮೊದಲ ವಾರವೇ ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹೀಗಾಗಿ ಮೂರರಿಂದ ನಾಲ್ಕು ಕೋಟಿ ಕಲೆಕ್ಷನ್ ಮಾಡುವ ಗುರಿಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ತೆಲುಗು ವರ್ಷನ್‌ಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ ಅನ್ನೋದನ್ನು ನೋಡದಬೇಕಿದೆ.
'ಸು ಫ್ರಮ್ ಸೋ' 14ನೇ ದಿನ ಗಳಿಸಿದ್ದೆಷ್ಟು?
13ನೇ ದಿನಕ್ಕೆ ಹೋಲಿಕೆ ಮಾಡಿದರೆ, 14ನೇ ದಿನ ಸುಮಾರು ಒಂದು ಕೋಟಿ ರೂಪಾಯಿ ಕಲೆಕ್ಷನ್ ಕಮ್ಮಿಯಾಗಿದೆ. ಆದರೆ, ವೀಕ್ ಡೇಸ್‌ನಲ್ಲಿ, ಅದರಲ್ಲೂ 14ನೇ ದಿನ ಎರಡು ಕೋಟಿ ಹತ್ತಿರ ಕಲೆಕ್ಷನ್ ಮಾಡಿದ್ದು ಒಳ್ಳೆಯ ಸಾಧನೆ ಎಂದು ಹೇಳಿದೆ. ಇನ್ನು ಸ್ಯಾಕ್ನಿಲ್ಕ್ ಪ್ರಕಾರ, 'ಸು ಫ್ರಮ್ ಸೋ' ಬಾಕ್ಸಾಫೀಸ್ ಕಲೆಕ್ಷನ್ 14ನೇ ದಿನ 1.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಿದೆ. ಆದರೆ, ರಾಜ್ ಬಿ ಶೆಟ್ಟಿ ಇನ್ನೂ ಅಧಿಕೃತವಾಗಿ ಕಲೆಕ್ಷನ್ ಅನ್ನು ಬಿಟ್ಟುಕೊಟ್ಟಿಲ್ಲ.

14 ದಿನಗಳ ಒಟ್ಟು ಕಲೆಕ್ಷನ್ ಏಷ್ಟು?
14ನೇ ದಿನ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದ್ದರೂ, 15ನೇ ದಿನದಿಂದ ಮತ್ತೆ ಈ ಸಿನಿಮಾದ ಗಳಿಕೆಯಲ್ಲಿ ಏರಿಕೆ ಆಗಬಹುದು. ಸಂಜೆ ಹಾಗೂ ರಾತ್ರಿ ಶೋಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಶಿವಮೊಗ್ಗ, ಮಣಿಪಾಲ್ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಹೆಚ್ಚು ಕಲೆಕ್ಷನ್ ಆಗುತ್ತಿದೆ.
14 ದಿನಗಳ ಕಲೆಕ್ಷನ್
ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ ₹3.7 ಕೋಟಿ+ ಮಲಯಾಳಂ ₹0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ ₹5.2 ಕೋಟಿ+ ಮಲಯಾಳಂ ₹0.20 ಕೋಟಿ)
10ನೇ ದಿನ ₹6.55 ಕೋಟಿ (ಕನ್ನಡ ₹6.15 ಕೋಟಿ+ ಮಲಯಾಳಂ ₹0.40 ಕೋಟಿ)
11ನೇ ದಿನ ₹3.70 ಕೋಟಿ (ಕನ್ನಡ ₹3.30 ಕೋಟಿ+ ಮಲಯಾಳಂ ₹0.20 ಕೋಟಿ)
12ನೇ ದಿನ ₹3.40 ಕೋಟಿ (ಕನ್ನಡ ₹3.00 ಕೋಟಿ+ ಮಲಯಾಳಂ ₹0.40 ಕೋಟಿ)
13ನೇ ದಿನ ₹2.80 ಕೋಟಿ (ಕನ್ನಡ ₹2.40 ಕೋಟಿ+ ಮಲಯಾಳಂ ₹0.40 ಕೋಟಿ)
14ನೇ ದಿನ ₹1.75 ಕೋಟಿ (ಕನ್ನಡ ₹1.50 ಕೋಟಿ+ ಮಲಯಾಳಂ ₹0.25 ಕೋಟಿ)
ಒಟ್ಟು ₹47.55 ಕೋಟಿ (ಕನ್ನಡ ₹45.75 + ಮಲಯಾಳಂ ₹1.80 ಕೋಟಿ)
ತೆಲುಗು ವರ್ಷನ್ ಡೇ 1 ಲೆಕ್ಕಾಚಾರವೇನು?
'ಸು ಫ್ರಮ್ ಸೋ' ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗಿದೆ. ಇಂದಿನಿಂದ (ಆಗಸ್ಟ್ 8) ತೆಲುಗು ರಾಷ್ಟ್ರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ. ಹೀಗಾಗಿ ಈ ಎರಡು ರಾಜ್ಯಗಳಲ್ಲಿ ಕಲೆಕ್ಷನ್ ಏನಾಗಬಹುದೆಂದು ಎದುರು ನೋಡಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ತೆಲುಗು ವರ್ಷನ್‌ನಿಂದ 1 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸದ್ಯಕ್ಕೆ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











