Su From So: 25 ದಿನ ಪೂರೈಸುವುದರೊಳಗೆ ₹100 ಕೋಟಿ ಗಳಿಸಿದ 'ಸು ಫ್ರಮ್ ಸೋ'; 'ಕೂಲಿ'ಗೂ ಕ್ಯಾರೆ ಅನ್ನಲ್ಲಿಲ್ಲ
ಕನ್ನಡ ಚಿತ್ರರಂಗ ನಿಟ್ಟುಸಿರು ಬಿಡುವಂತೆ ಮಾಡಿದ ಸಿನಿಮಾ 'ಸು ಫ್ರಮ್ ಸೋ'. ರಾಜ್ ಬಿ ಶೆಟ್ಟಿ ಮುಂದಾಳತ್ವದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಿಚ್ಚು ಎಬ್ಬಿಸಿದೆ. ಈ ಸಿನಿಮಾ ರಿಲೀಸ್ ಆಗಿ ನಾಲ್ಕು ವಾರಗಳನ್ನು ಪೂರೈಸುತ್ತಿದ್ದರೂ ಇನ್ನೂ ಥಿಯೇಟರ್‌ನಿಂದ ಕದಲುವ ಮಾತೇ ಆಡುತ್ತಿಲ್ಲ. ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಅನ್ನು ಸೆಟ್ ಮಾಡಿರೋದಂತೂ ನಿಜ.
'ಸು ಫ್ರಮ್ ಸೋ' ನಾಳೆ (ಆಗಸ್ಟ್ 19) 25 ದಿನಗಳನ್ನು ಪೂರೈಸುತ್ತಿದೆ. ಅದಕ್ಕೂ ಮುನ್ನ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಈ ಹಾರರ್-ಕಾಮಿಡಿ ಸಿನಿಮಾವನ್ನು ಕನ್ನಡಿಗರು ಮುಗಿಬಿದ್ದು ನೋಡಿದ್ದು, 25 ದಿನಗಳನ್ನು ಪೂರೈಸುವುದರೊಳಗೆ ವಿಶ್ವದಾದ್ಯಂತ ₹100 ಕೋಟಿ ಗಡಿ ದಾಡಿದೆ ಎಂದು ಸ್ಯಾಕ್ನಿಲ್ಕ್ ಅಂಕಿ ಅಂಶಗಳನ್ನು ನೀಡಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಕೂಲಿ', ಹೃತಿಕ್ ರೋಷನ್-ಜೂ.ಎನ್‌ಟಿಆರ್ ಸಿನಿಮಾ 'ವಾರ್ 2' ರಿಲೀಸ್ ಆಗಿದ್ದರೂ, ಕನ್ನಡ ಸಿನಿಮಾ 'ಸು ಫ್ರಮ್ ಸೋ' ಕ್ಯಾರೆ ಎನ್ನುತ್ತಿಲ್ಲ. ಕರ್ನಾಟಕದಲ್ಲಿ ಸುಮಾರು 180ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಸು ಫ್ರಮ್ ಸೋ' ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ನಲ್ಲಿ ಈ ಸಿನಿಮಾದ ಭರ್ಜರಿ ಕಲೆಕ್ಷನ್ ಮುಂದುವರೆದಿದೆ. ಹಾಗಿದ್ದರೆ, 'ಸು ಫ್ರಮ್ ಸೋ' ಎಲ್ಲೆಲ್ಲೆ ಎಷ್ಟೆಷ್ಟು ಕೆಲಕ್ಷನ್ ಮಾಡಿದೆ? ತಿಳಿಯುವುದಕ್ಕೆ ಮುಂದೆ ಓದಿ.
24ನೇ ದಿನವೂ ಭರ್ಜರಿ ಕೆಲಕ್ಷನ್
'ಕೂಲಿ', 'ವಾರ್ 2' ಅಂತಹ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆದ ಬಳಿಕ 'ಸು ಫ್ರಮ್ ಸೋ' ಬಾಕ್ಸಾಫೀಸ್ ಕಲೆಕ್ಷನ್ ಡ್ರಾಪ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, 24ನೇ ದಿನವೂ ಈ ಸಿನಿಮಾ ಕಲೆಕ್ಷನ್ ಜೋರಾಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ 24ನೇ ದಿನ ಬಾಕ್ಸಾಫೀಸ್‌ನಲ್ಲಿ 2.89 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೊಸ ಪ್ರತಿಭೆಗಳ ಕನ್ನಡ ಸಿನಿಮಾ 24ನೇ ದಿನವೂ ಇಷ್ಟೊಂದು ಕಲೆಕ್ಷನ್ ಮಾಡುತ್ತಿರೋದು ಸ್ಯಾಂಡಲ್‌ವುಡ್‌ಗೆ ನೆಮ್ಮದಿ ಕೊಟ್ಟಿದೆ.

'ಸು ಫ್ರಮ್ ಸೋ' ₹100 ಕೋಟಿ
'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ವಿದೇಶದಲ್ಲಿಯೂ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಜರ್ಮನಿ, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಈ ಸಿನಿಮಾ ರಿಲೀಸ ಆಗಿದ್ದು, ಪ್ರೇಕ್ಷಕರು ಅಲ್ಲಿಯೂ ಎಂಜಾಯ್ ಮಾಡುತ್ತಿದ್ದಾರೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಈ ಸಿನಿಮಾ ಕೇವಲ 24 ದಿನಗಳಲ್ಲಿ ವಿಶ್ವದಾದ್ಯಂತ 104.44 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಕನ್ನಡದಲ್ಲಿ ಬಳಿಸಿದ್ದೆಷ್ಟು?
'ಸು ಫ್ರಮ್ ಸೋ' ಕನ್ನಡ ಸೇರಿದಂತೆ ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗಿತ್ತು. ಸಹಜವಾಗಿ ಕನ್ನಡದಲ್ಲಿ ಈ ಸಿನಿಮಾ ಸಖತ್ ಒಳ್ಳೆಯ ಕಲೆಕ್ಷನ್ ಮಾಡಿದೆ. 24 ದಿನಗಳಲ್ಲಿ ಬರೀ ಕನ್ನಡದಲ್ಲಿಯೇ ಈ ಸಿನಿಮಾ 72.09 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇನ್ನು ಮೂರು ಭಾಷೆಯಿಂದ ಈ ಸಿನಿಮಾದ ಕಲೆಕ್ಷನ್ ₹77.86 ಕೋಟಿ ದಾಟಿದೆ.
24 ದಿನಗಳ ಕಲೆಕ್ಷನ್
ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ
9ನೇ ದಿನ ₹5.40 ಕೋಟಿ
10ನೇ ದಿನ ₹6.55 ಕೋಟಿ
11ನೇ ದಿನ ₹3.70 ಕೋಟಿ
12ನೇ ದಿನ ₹3.40 ಕೋಟಿ
13ನೇ ದಿನ ₹2.80 ಕೋಟಿ
14ನೇ ದಿನ ₹2.25 ಕೋಟಿ
15ನೇ ದಿನ ₹3.10 ಕೋಟಿ
16ನೇ ದಿನ ₹6.00 ಕೋಟಿ
17ನೇ ದಿನ ₹6.95 ಕೋಟಿ
18ನೇ ದಿನ ₹2.05 ಕೋಟಿ
19ನೇ ದಿನ ₹1.70 ಕೋಟಿ
20ನೇ ದಿನ ₹1.60 ಕೋಟಿ
21ನೇ ದಿನ ₹1.10 ಕೋಟಿ
22ನೇ ದಿನ ₹2.55 ಕೋಟಿ
23ನೇ ದಿನ ₹2.20 ಕೋಟಿ
24ನೇ ದಿನ ₹2.56 ಕೋಟಿ
ಒಟ್ಟು ₹77.86 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











