SU from So Box Office Day 18: 18ನೇ ದಿನ 'ಸು ಫ್ರಮ್ ಸೋ' ಬಾರೀ ಇಳಿಕೆ; ಆದ್ರೂ 3ನೇ ಸೋಮವಾರ ಕೋಟಿಗಿಂತಲೂ ಅಧಿಕ ಕಲೆಕ್ಷನ್

'ಸು ಫ್ರಮ್ ಸೋ' ಬಾಕ್ಸಾಫೀಸ್ ಕಲೆಕ್ಷನ್ ಅನ್ನೋದು ಕುತೂಹಲ ಕೆರಳಿಸುತ್ತಿದೆ. ಕನ್ನಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುವುದನ್ನೇ ಮರೆತಿದ್ದವು. ಆದ್ರೀಗ ಒಂದೇ ಒಂದು ಸಿನಿಮಾ ಮತ್ತೆ ಕರ್ನಾಟಕದ ಬಾಕ್ಸಾಫೀಸ್‌ಗೆ ಹೊಸ ಹುರುಷು ಕೊಟ್ಟಿದೆ. ಜನರು ಸಿನಿಮಾ ನೋಡಿ ನಗುವುದನ್ನು ನಿಲ್ಲಿಸುತ್ತಿಲ್ಲ. ಅತ್ತ ಬಾಕ್ಸಾಫೀಸ್‌ ಕಲೆಕ್ಷನ್ ಕಮ್ಮಿಯಾಗುತ್ತಿಲ್ಲ. ಸ್ಮಾಲ್ ಬಜೆಟ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಸಕ್ಸಸ್ ಆಗುತ್ತೆ ಅನ್ನೋ ನಿರೀಕ್ಷೆಯೇ ಇರದ ಸಿನಿಮಾ ಮಂದಿಯ ಮುಖದಲ್ಲಿ ಖುಷಿ ಅರಳಿದೆ.

17 ದಿನಗಳವರೆಗೂ 'ಸು ಫ್ರಮ್ ಸೋ' ಸಿನಿಮಾ ಕಲೆಕ್ಷನ್ ತಗ್ಗಿದ್ದೇ ಇಲ್ಲ. ಅದರಲ್ಲೂ ಮೊದಲ ಸೋಮವಾರ ಹಾಗೂ ಎರಡನೇ ಸೋಮವಾರ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಲ್ಲಾಡಲಿಲ್ಲ. ಎರಡು ಸೋಮವಾರವೂ ಉತ್ತಮ ಕಲೆಕ್ಷನ್ ಆಗಿತ್ತು. ಆದರೆ, ಮೂರನೇ ಸೋಮವಾರ ಕಲೆಕ್ಷನ್‌ನಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಮೂರನೇ ವಾರದ ಆರಂಭ ದಿನ ಈ ಸಿನಿಮಾದ ಕಲೆಕ್ಷನ್ ಶೇ.50ರಷ್ಟು ಡ್ರಾಪ್ ಕಂಡಿದೆ.

Raj B Shetty s Su from So Kannada film day 18 box office collection report 73 percent drop on 3rd Monday

ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದೆ. ಈ ವೇಳೆ 'ಸು ಫ್ರಮ್ ಸೋ' ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದ್ದನ್ನು ಟ್ರೇಡ್ ಎಕ್ಸ‌ಪರ್ಟ್‌ಗಳು ನೋಟೀಸ್ ಮಾಡಿದ್ದಾರೆ. ಇದು ಕೇವಲ ಸೋಮವಾರದ ರಿಸಲ್ಟ್ ಅಷ್ಟೇನಾ? ಇಲ್ಲಾ ಮುಂದೊ ಹೀಗೆಯೇ ಮುಂದುವರೆಯುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅಷ್ಟಕ್ಕೂ 'ಸು ಫ್ರಮ್ ಸೋ' ಮೂರನೇ ಸೋಮವಾರ ಅಂದ್ರೆ, 18ನೇ ದಿನ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಸು ಫ್ರಮ್ ಸೋ' 18ನೇ ದಿನದ ಕಲೆಕ್ಷನ್

ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರು ನಿರ್ಮಿಸಿದ 'ಸು ಫ್ರಮ್ ಸೋ' ರಿಲೀಸ್ ಆಗಿ 19ನೇ ದಿನಕ್ಕೆ ಕಾಲಿಟ್ಟಿದೆ. ಯಶಸ್ವಿಯಾಗಿ ಸಿನಿಮಾ ಮುನ್ನುಗ್ಗುತ್ತಿದೆ. 17ನೇ ದಿನ ಭಾನುವಾರಕ್ಕೆ ಹೋಲಿಕೆ ಮಾಡಿದರೆ, ನಿನ್ನೆ 18ನೇ ದಿನ ಈ ಸಿನಿಮಾದ ಕಲೆಕ್ಷನ್ ಶೇ.73ರಷ್ಟು ಇಳಿಕೆ ಕಂಡಿದೆ. ಆದರೆ, ಇದು ಸೋಮವಾರದ ಎಫೆಕ್ಟ್ ಅಂತ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಸ್ಯಾಕ್ನಿಲ್ಕ್ ಪ್ರಕಾರ, 18ನೇ ದಿನ ಈ ಸಿನಿಮಾ ಗಳಿಸಿದ್ದು, 1.82 ಕೋಟಿ ರೂಪಾಯಿ. ಕನ್ನಡ ವರ್ಷನ್‌ನಿಂದ ₹1.58 ಕೋಟಿ, ಮಲಯಾಳಂ ವರ್ಷನ್ ₹17 ಲಕ್ಷ ಹಾಗೂ ತೆಲುಗು ವರ್ಷನ್ ₹7 ಲಕ್ಷ ಕಲೆಕ್ಷನ್ ಆಗಿದೆಯೆಂದು ವರದಿಯಾಗಿದೆ. ಹಾಗೇ ಮೂರನೇ ಸೋಮವಾರ ಶೇ.50ರಷ್ಟು ಡ್ರಾಪ್ ಕಂಡಿದೆ.

Raj B Shetty s Su from So Kannada film day 18 box office collection report 73 percent drop on 3rd Monday

ಸು ಫ್ರಮ್ ಸೋಮವಾರದ ಕಲೆಕ್ಷನ್

ಮೊದಲ ಸೋಮವಾರ ₹3.05 ಕೋಟಿ
2ನೇ ಸೋಮವಾರ ₹3.70 ಕೋಟಿ
3ನೇ ಸೋಮವಾರ ₹1.82 ಕೋಟಿ

18 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಸು ಫ್ರಮ್ ಸೋ' ಕನ್ನಡ ಚಿತ್ರರಂಗ ಕಂಡ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ. ಕೇವಲ ಕನ್ನಡಕ್ಕಂತಲೇ ಮಾಡಿದ ಸಿನಿಮಾಗಳ ಪೈಕಿ 'ಮುಂಗಾರು ಮಳೆ', ರಾಜಕುಮಾರ, ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ, ರಾಬರ್ಟ್ ಅಂತಹ ಸಿನಿಮಾಗಳ ಕಲೆಕ್ಷನ್‌ ಸಮೀಪಿಸಿದ ಸಿನಿಮಾ. ಸ್ಯಾಕ್ನಿಲ್ಕ್ ಪ್ರಕಾರ 18 ದಿನಗಳಲ್ಲಿ ಈ ಸಿನಿಮಾ ಗಳಿಸಿದ್ದು, ₹65.92 ಕೋಟಿ ರೂಪಾಯಿ.

18 ದಿನಗಳ ಕಲೆಕ್ಷನ್

ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ (ಕನ್ನಡ ₹3.7 ಕೋಟಿ+ ಮಲಯಾಳಂ ₹0.05 ಕೋಟಿ)
9ನೇ ದಿನ ₹5.40 ಕೋಟಿ (ಕನ್ನಡ ₹5.2 ಕೋಟಿ+ ಮಲಯಾಳಂ ₹0.20 ಕೋಟಿ)
10ನೇ ದಿನ ₹6.55 ಕೋಟಿ (ಕನ್ನಡ ₹6.15 ಕೋಟಿ+ ಮಲಯಾಳಂ ₹0.40 ಕೋಟಿ)
11ನೇ ದಿನ ₹3.70 ಕೋಟಿ (ಕನ್ನಡ ₹3.30 ಕೋಟಿ+ ಮಲಯಾಳಂ ₹0.20 ಕೋಟಿ)
12ನೇ ದಿನ ₹3.40 ಕೋಟಿ (ಕನ್ನಡ ₹3.00 ಕೋಟಿ+ ಮಲಯಾಳಂ ₹0.40 ಕೋಟಿ)
13ನೇ ದಿನ ₹2.80 ಕೋಟಿ (ಕನ್ನಡ ₹2.40 ಕೋಟಿ+ ಮಲಯಾಳಂ ₹0.40 ಕೋಟಿ)
14ನೇ ದಿನ ₹2.25 ಕೋಟಿ (ಕನ್ನಡ ₹1.85 ಕೋಟಿ+ ಮಲಯಾಳಂ ₹0.40 ಕೋಟಿ)
15ನೇ ದಿನ ₹3.10 ಕೋಟಿ (ಕನ್ನಡ ₹2.55 ಕೋಟಿ+ ಮಲಯಾಳಂ ₹0.40 ಕೋಟಿ+ ತೆಲುಗು 0.15 ಕೋಟಿ)
16ನೇ ದಿನ ₹6.00 ಕೋಟಿ (ಕನ್ನಡ ₹4.95 ಕೋಟಿ+ ಮಲಯಾಳಂ ₹0.80 ಕೋಟಿ+ ತೆಲುಗು 0.25 ಕೋಟಿ)
17ನೇ ದಿನ ₹6.95 ಕೋಟಿ (ಕನ್ನಡ ₹5.75 ಕೋಟಿ+ ಮಲಯಾಳಂ ₹0.85 ಕೋಟಿ+ ತೆಲುಗು 0.35 ಕೋಟಿ)
18ನೇ ದಿನ ₹1.82 ಕೋಟಿ (ಕನ್ನಡ ₹1.58 ಕೋಟಿ+ ಮಲಯಾಳಂ ₹0.17 ಕೋಟಿ+ ತೆಲುಗು 0.07 ಕೋಟಿ)
ಒಟ್ಟು ₹65.92 ಕೋಟಿ

'ಕೂಲಿ' ಎಫೆಕ್ಟ್ ಮಾಡುತ್ತಾ?

'ಸು ಫ್ರಮ್ ಸೋ' ಕನ್ನಡ ಸಿನಿಮಾ ಬಾಕ್ಸಾಫೀಸ್ ನಾಗಾಲೋಟಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಸಿನಿಮಾ ಎಫೆಕ್ಟ್ ಮಾಡುತ್ತಾ? ಈ ಕುತೂಹಲ ಸಿನಿಮಾ ಮಂದಿಯಲ್ಲಿ ಮನೆ ಮಾಡಿದೆ. ಮೂರನೇ ಸೋಮವಾರ ಕಲೆಕ್ಷನ್ ಆಗಿದ್ದು, ಪ್ರೇಕ್ಷಕರುಸ ಕೂಲಿ ಕಡೆಗೆ ಮುಖ ಮಾಡಬಹುದೆಂದು ಅಂದಾಜಿಸಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Raj B Shetty's Su from So Kannada film day 18 box office collection report 73 percent drop on 3rd Monday;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X