Border 2 Box Office Day 4: 4 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಬಾರ್ಡರ್ 2'; ಬಾಲಿವುಡ್‌ಗೆ ಮತ್ತೊಂದು ಸಕ್ಸಸ್
ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಹಾಗೂ ಅಹಾನ್ ಶೆಟ್ಟಿ ನಟನೆಯ 'ಬಾರ್ಡರ್ 2' ಕಳೆದ ವಾರ ರಿಲೀಸ್ ಆಗಿತ್ತು. 1997ರಲ್ಲಿ ತೆರೆಕಂಡಿದ್ದ 'ಬಾರ್ಡರ್' ಸಿನಿಮಾದ ಸೀಕ್ವೆಲ್ ಆಗಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಿಂದ ಉತ್ತರ ಪ್ರತಿಕ್ರಿಯೆ ಸಿಕ್ಕಿತ್ತು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡಲಾಗಿತ್ತು.
'ಬಾರ್ಡರ್ 2' ರಿಲೀಸ್ ಆದ ದಿನದಿಂದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ 'ಬಾರ್ಡರ್ 2'ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 2026ರ ಆರಂಭದಲ್ಲಿಯೇ 'ಬಾರ್ಡರ್ 2' ಸಿನಿಮಾ ಬಾಲಿವುಡ್‌ಗೆ ಸಕ್ಸಸ್‌ಪುಲ್ ಸಿನಿಮಾ ಕೊಟ್ಟಿದೆ. 'ಬಾರ್ಡರ್ 2' ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ. ಹೀಗಾಗಿ ರಜೆಯಲ್ಲಿ ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿವೆ.

ಮೊದಲ ದಿನದಿಂದ 'ಬಾರ್ಡರ್ 2' ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಲೇ ಇದೆ. ಇನ್ನು ನಾಲ್ಕನೇ ದಿನವಾದ ನಿನ್ನೆ (ಜನವರಿ 26) ಗಣರಾಜ್ಯೋತ್ಸವದಂದು ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದೆ. ಹಾಗಿದ್ದರೆ, 'ಬಾರ್ಡರ್ 2' 4ನೇ ದಿನ ಗಳಿಸಿದ ಹಣ ಎಷ್ಟು? ಇಲ್ಲಿವರೆಗೂ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಬಾರ್ಡರ್ 2' 4ನೇ ದಿನದ ಕಲೆಕ್ಷನ್
ಅನುರಾಗ್ ಸಿಂಗ್ ನಿರ್ದೇಶನ ಮಾಡಿರುವ 'ಬಾರ್ಡರ್ 2' ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸಾಫೀಸ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ವರದಿ ಮಾಡಿದಂತೆ 4ನೇ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. 4ನೇ ದಿನ ಈ ಸಿನಿಮಾ ಗಳಿಸಿದ್ದು, ಬರೋಬ್ಬರಿ ₹59 ಕೋಟಿ. ಭಾನುವಾರಕ್ಕೆ ಹೋಲಿಕೆ ಮಾಡಿದರೆ, ರಿಪಬ್ಲಿಕ್ ಡೇ ದಿನ ಈ ಸಿನಿಮಾ ಗಳಿಕೆಯಲ್ಲಿ ಶೇ.8.26ರಷ್ಟು ಏರಿಕೆಯಾಗಿದೆ.
4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಬಾರ್ಡರ್' ಯಶಸ್ಸನ್ನೇ 'ಬಾರ್ಡರ್ 2' ಕೂಡ ಮುಂದುವರೆಸಿಕೊಂಡು ಹೋಗುತ್ತಿದೆ. ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಹಾಗೂ ಅಹಾನ್ ಶೆಟ್ಟಿ ನಟನೆಗೆ ಫಿದಾ ಆಗಿದೆ. 4ನೇ ದಿನ ಮಧ್ಯಾಹ್ನದ ಹಾಗೂ ಸಂಜೆಯ ಶೋಗಳು ಶೇ. 80ರಷ್ಟು ಆಕ್ಯೂಪೆನ್ಸಿ ಆಗಿದ್ದರೆ, ರಾತ್ರಿ ಶೋ ಶೇ.57.06ರಷ್ಟು ಆಕ್ಯೂಪೆನ್ಸಿ ಇತ್ತು. ಇನ್ನು 4 ದಿನಗಳ ಒಟ್ಟು ಕಲೆಕ್ಷನ್ ಹೀಗಿದೆ.
1ನೇ ದಿನ ₹30 ಕೋಟಿ
2ನೇ ದಿನ ₹36.5 ಕೋಟಿ
3ನೇ ದಿನ ₹54.5 ಕೋಟಿ
4ನೇ ದಿನ ₹59 ಕೋಟಿ
ಒಟ್ಟು ₹180 ಕೋಟಿ

'ಬಾರ್ಡರ್ 2' ಗೆದ್ದಿದ್ದು ಎಲ್ಲಿ?
ಅನುರಾಗ್ ಸಿಂಗ್ ನಿರ್ದೇಶನ ಮಾಡಿರೋ 'ಬಾರ್ಡರ್ 2' 1971ರ ಭಾರತ ಹಾಗೂ ಪಾಕಿಸ್ತಾನ್ ನಡುವಿನ ಯುದ್ಧದ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಭಾರತೀಯ ಯೋಧರ ತ್ಯಾಗ ಹಾಗೂ ಬಲಿದಾನಗಳನ್ನು, ಯುದ್ಧದ ತೀವ್ರತೆ ಇವೆಲ್ಲವನ್ನೂ ತೋರಿಸಲಾಗಿದೆ. ಹೀಗಾಗಿ ಭಾರತೀಯರು ಭಾವನಾತ್ಮಕವಾಗಿ 'ಬಾರ್ಡರ್ 2' ಸಿನಿಮಾ ಜೊತೆ ಕನೆಕ್ಟ್ ಆಗಿದ್ದಾರೆ. ಅಲ್ಲದೆ ಗಣರಾಜ್ಯೋತ್ಸವದ ಮೂಡಿನಲ್ಲಿರುವ ಪ್ರೇಕ್ಷಕರನ್ನು ಥಿಯೇಟರ್ ಹತ್ತಿರಕ್ಕೆ ಸೆಳೆಯುವಂತೆ 'ಬಾರ್ಡರ್ 2' ಸಿನಿಮಾ ಮಾಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











