Retro Box Office Day 2: 2ನೇ ದಿನ ಬಾಕ್ಸಾಫೀಸ್‌ನಲ್ಲಿ ಗೆದ್ದರೇ ಸೂರ್ಯ, ಪೂಜಾ ಹೆಗ್ಡೆ?
ತಮಿಳು ನಟ ಸೂರ್ಯ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ 'ರೆಟ್ರೋ' ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ಸೂರ್ಯ, ಪೂಜಾ ಹೆಗ್ಡೆ ಹಾಗೂ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್ ಸಿನಿಮಾಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾಗೆ ಫಸ್ಟ್ ಡೇ ಉತ್ತಮ ಓಪನಿಂಗ್ ಸಿಕ್ಕಿತ್ತು.
ಆಕ್ಷನ್, ರೊಮ್ಯಾಂಟಿಕ್, ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ಸೂರ್ಯ ಹಾಗೂ ಪೂಜಾ ಹೆಗ್ಡೆ ಪರ್ಫಾಮೆನ್ಸ್ ಅನ್ನು ಪ್ರೇಕ್ಷಕರು ಇಷ್ಟ ಪಟ್ಟಿದ್ದರು. ಆದರೂ, ಸೂರ್ಯ ಹಾಗೂ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವುದರಲ್ಲಿ ಸೋತಿದೆ. ಎರಡನೇ ದಿನ ಶೇ. 50ರಷ್ಟು ಇಳಿಕೆ ಕಂಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ವರದಿ ಮಾಡುತ್ತಿದ್ದಾರೆ.
'ಕಂಗುವ' ಹೀನಾಯ ಸೋಲಿನ ಬಳಿಕ ಸೂರ್ಯ 'ರೆಟ್ರೋ' ರಿಲೀಸ್ ಅನ್ನು ಎದುರು ನೋಡುತ್ತಿದ್ದಾರೆ. ಈ ಸಿನಿಮಾ ವೀಕೆಂಡ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಹಾಗಿದ್ದರೆ, ಎರಡನೇ ದಿನ ಈ ತಮಿಳು ಸಿನಿಮಾ ಎಷ್ಟು ಗಳಿಸಿದೆ? ಎರಡು ದಿನಗಳ ಒಟ್ಟು ಗಳಿಕೆ ಎಷ್ಟು ಅನ್ನೋದನ್ನು ನೋಡೋಣ.

'ರೆಟ್ರೋ' ಎರಡನೇ ದಿನ ಗಳಿಸಿದ್ದೆಷ್ಟು?
ತಮಿಳು ನಟ ಸೂರ್ಯ ಗೆಲುವಿನಗಾಗಿ ಎದುರು ನೋಡುತ್ತಿದ್ದಾರೆ. 'ಕಂಗುವ' ಸೋಲಿನ ಬಳಿಕ 'ರೆಟ್ರೋ' ಮೂಲಕ ಮತ್ತೆ ವಿಜಯಪತಾಕೆ ಹಾರಿಸುವುದಕ್ಕೆ ಪಣತೊಟ್ಟು ನಿಂತಿದ್ದಾರೆ. ನಿರೀಕ್ಷೆಯಂತೆ ಮೊದಲ ದಿನ ಸೂಪರ್ ಕಲೆಕ್ಷನ್ ಆಗಿತ್ತು. ಆದರೆ, ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ಇಳಿಕೆ ಕಂಡಿದೆ. ಟ್ರೇಡ್ ಅನಲಿಸ್ಟ್ ಸ್ಯಾಕ್ನಿಲ್ಕ್ ವರದಿ ಮಾಡಿರುವ ಪ್ರಕಾರ, ಸೂರ್ಯ ಸಿನಿಮಾ ಎರಡನೇ ದಿನ 7.50 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ. ಇದರಲ್ಲಿ ತಮಿಳುನಾಡಿನಿಂದಲೇ ಬಹುಪಾಲು ಕಲೆಕ್ಷನ್ ಆಗಿದೆ.
2 ದಿನಗಳಲ್ಲಿ ಒಟ್ಟು ಕಲೆಕ್ಷನ್ ಎಷ್ಟು?
'ರೆಟ್ರೋ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಎರಡನೇ ದಿನ ಇಳಿಕೆ ಕಂಡಿದೆ. ಶೇ. 50ರಷ್ಟು ಡೌನ್ ಆಗಿದ್ದು, ಕೊಂಚ ಮಟ್ಟಿಗೆ ಹಿನ್ನೆಲೆಯಾಗಿದೆ. ಆದರೆ ಮೊದಲ ದಿನ ಈ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಅದೇ ಮುಂದುವರೆದಿದ್ದರೆ, ಸಿನಿಮಾ ಎರಡೇ ದಿನಕ್ಕೆ 50 ಪರ್ಸೆಂಟ್ ಗೆದ್ದಂತೆ ಆಗುತ್ತಿತ್ತು. ಇನ್ನು ಮೊದಲ ದಿನ ಈ ಸಿನಿಮಾ 19.25 ಕೋಟಿ ರೂಪಾಯಿ, 2ನೇ ದಿನ 7.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಒಟ್ಟು 26.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವೀಕೆಂಡ್ ಕಲೆಕ್ಷನ್ ಮೇಲೆ ನಿರ್ಧಾರ
ಸೂರ್ಯ, ಪೂಜಾ ಹೆಗ್ಡೆ ಹಾಗೂ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್ ಸಿನಿಮಾ 'ರೆಟ್ರೋ' ವೀಕೆಂಡ್‌ನಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋದರ ಮೇಲೆ ಯಶಸ್ಸು ನಿರ್ಧರಿಸಿದೆ. ಮೊದಲ ದಿನದಂತೆ ಶನಿವಾರ ಹಾಗೂ ಭಾನುವಾರ ಎರಡೂ ದಿನ ಕಲೆಕ್ಷನ್ ಆದರೆ, ಸೂರ್ಯ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ 75 ಕೋಟಿ ರೂಪಾಯಿ ಸನಿಹಕ್ಕೆ ಹೋಗಬಹುದು. ಇಷ್ಟಾದರೆ ಸೂರ್ಯ ಹಾಗೂ ಜ್ಯೋತಿಕಾ ಹೂಡಿರುವ ಹಣ ಆರಾಮಾಗಿ ಅವರ ಕೈ ಸೇರುತ್ತೆ. ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳು ವೀಕೆಂಡ್ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ.
₹100 ಕೋಟಿ ಕ್ಲಬ್ ಸೇರುತ್ತಾ?
ಮೊದಲ ಎರಡು ದಿನಗಳ ಲೆಕ್ಕಾಚಾರ ನೋಡಿದರೆ, ರೆಟ್ರೋ ಆರಾಮಾಗಿ ₹100 ಕೋಟಿ ಸೇರುತ್ತೆ. 7 ದಿನಗಳ ಒಳಗೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











