Retro Box Office Day 4: ಸೂರ್ಯ, ಪೂಜಾ ಹೆಗ್ಡೆಯ 'ರೆಟ್ರೋ' ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ತಮಿಳಿನ ಸ್ಟಾರ್ ನಟ ಸೂರ್ಯ ನಟನೆಯ 'ರೆಟ್ರೋ' ಸಿನಿಮಾ ಕಳೆದ ವಾರ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸೂರ್ಯ ಅಭಿಮಾನಿಗಳು ಈ ಸಿನಿಮಾವನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಯಾಕಂದ್ರೆ, ತಮಿಳು ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಕಾರ್ತಿಕ್ ಸುಬ್ಬರಾಜು ಆಕ್ಷನ್ ಕಟ್ ಹೇಳಿದ್ದರು. ಇದು ಸೂರ್ಯ ಹಾಗೂ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್‌ನ ಮೊದಲ ಸಿನಿಮಾ.

ರೆಟ್ರೋ ಥೀಮ್‌ನಲ್ಲಿ ಈ ಸಿನಿಮಾವನ್ನು ಕಥೆಯನ್ನು ಹೆಣೆಯಲಾಗಿತ್ತು. 'ಕಂಗುವ' ಸೋಲಿನ ಬಳಿಕ ಸೂರ್ಯ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ಫ್ಯಾನ್ಸ್‌ಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿಯ ಅನುಭವ ಆಗಿತ್ತು. ಪತ್ನಿ ಜ್ಯೋತಿಕಾ ಹಾಗೂ ಸೂರ್ಯ ಖುದ್ದಾಗಿ ತಮ್ಮ ಪ್ರೊಡಕ್ಷನ್ ಹೌಸ್‌ನಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಕಳೆದ ವಾರ ಅಂದರೆ, ಮೇ 1 ರಂದು ಗ್ರ್ಯಾಂಡ್ ಆಗಿ ವಿಶ್ವದಾದ್ಯಂತ ರಿಲೀಸ್ ಆಗಿತ್ತು.

Suriya Pooja Hegde starrer Retro movie Karnataka box office collection day 4 report

ಇನ್ನೊಂದು ಕಡೆ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಡಿ ಗ್ಲಾಮರ್‌ ರೋಲ್‌ನಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮೆಚ್ಚುಗೆ ಗಳಿಸಿದ್ದಾರೆ. ಮೊದಲ ದಿನ ಈ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಎರಡನೇ ದಿನದಿಂದ ಶೇ.50ರಷ್ಟು ಇಳಿಕೆ ಕಂಡಿತ್ತು. ವೀಕೆಂಡ್‌ನಲ್ಲಿ ಕೊಂಚ ಏರಿಕೆ ಕಂಡಿದೆ. ಹಾಗಿದ್ದರೆ, ನಾಲ್ಕನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು ತಿಳಿಯುವುದಕ್ಕೆ ಮುಂದೆ ಓದಿ.

4ನೇ ದಿನ 'ರೆಟ್ರೋ' ಕಲೆಕ್ಷನ್ ಎಷ್ಟು?

'ರೆಟ್ರೋ' ನಾಲ್ಕನೇ ದಿನ ಗಳಿಕೆಯಲ್ಲಿ ಏರಿಕೆಯಾಗಿದೆ. ವೀಕೆಂಡ್‌ನಲ್ಲಿ ಕೊಂಚ ಚೇತರಿಕೆ ಕಂಡಿದೆ. ಬಾಕ್ಸಾಫೀಸ್‌ ಟ್ರೇಡ್‌ ಅನ್ನು ವರದಿ ಮಾಡುವ ಸ್ಯಾಕ್ನಿಲ್ಕ್ 4ನೇ ದಿನ ಕಲೆಕ್ಷನ್ ಅನ್ನು ರಿವೀಲ್ ಮಾಡಿದೆ. ಸೂರ್ಯ, ಪೂಜಾ ಗಾಂಧಿ ಜೋಡಿಯಾಗಿ ನಟಿಸಿದ ಈ ಸಿನಿಮಾ 4ನೇ ದಿನ ಭಾರತದಾದ್ಯಂತ 8,15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ತಮಿಳು ವರ್ಷನ್ 7.45 ಕೋಟಿ ರೂಪಾಯಿ, ತೆಲುಗು ವರ್ಷನ್ 64 ಲಕ್ಷ ರೂಪಾಯಿ, ಹಿಂದಿ ವರ್ಷನ್ 4 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.

Suriya Pooja Hegde starrer Retro movie Karnataka box office collection day 4 report

ಕರ್ನಾಟಕದ ಕಲೆಕ್ಷನ್ ಎಷ್ಟು?

ಸೂರ್ಯ ಹಾಗೂ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್‌ ಸಿನಿಮಾ 'ರೆಟ್ರೋ' ಕರ್ನಾಟಕದಲ್ಲಿ ರಿಲೀಸ್ ಆಗಿದೆ. ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಹೇಳಿಕೊಳ್ಳವಂತಹದ್ದೇನೂ ಇಲ್ಲ. ಮೊದಲ ದಿನ ಸಿನಿಮಾಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ, ಎರಡನೇ ದಿನದಿಂದ ಇಳಿಕೆ ಕಂಡಿದೆ. ಒಟ್ಟು ನಾಲ್ಕು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಹೀಗಿದೆ.

ಮೊದಲ ದಿನ - ₹2.1 ಕೋಟಿ
2ನೇ ದಿನ - ₹39 ಲಕ್ಷ
3ನೇ ದಿನ - ₹55 ಲಕ್ಷ
4ನೇ ದಿನ - ₹58 ಲಕ್ಷ
ಒಟ್ಟು - ₹3.10 ಕೋಟಿ

ಭಾರತದಾದ್ಯಂತ ಗಳಿಸಿದ್ದೆಷ್ಟು?

'ರೆಟ್ರೋ'ಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ದಿನ ₹19.25 ಕೋಟಿ ಗಳಿಸಿದ್ದರೆ, ಎರಡನೇ ದಿನ ₹7.75 ಕೋಟಿ, 3ನೇ ದಿನ ₹8 ಕೋಟಿ, 4ನೇ ದಿನ 8.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕು ದಿನಗಳಲ್ಲಿ ಒಟ್ಟು ಕಲೆಕ್ಷನ್ ₹43.15 ಕೋಟಿ ಗಳಿಕೆ ಮಾಡಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Suriya, Pooja Hegde starrer Retro movie Karnataka box office collection day 4 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X