Karuppu Box Office Day 5:5ನೇ ದಿನವೂ 'ಕರುಪ್ಪು' ಕಲೆಕ್ಷನ್ ಸೂಪರ್.. ಸೂರ್ಯನ ಸೋಲುಗೆ ಕೊನೆಗೂ ಸಿಕ್ತು ಮುಕ್ತಿ

ಕಳೆದ ಕೆಲವು ವರ್ಷಗಳಿಂದ ತಮಿಳು ನಟ ಸೂರ್ಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿದ್ದವು. ಬಿಗ್ ಬಜೆಟ್‌ನಲ್ಲಿ ನಿರ್ಮಿಸಿದ್ದ 'ಕಂಗುವಾ', 'ರೆಟ್ರೋ'ದಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವುದರಲ್ಲಿ ಸೋತಿದ್ದವು. ಹೀಗಾಗಿ ಸತತ ಸೋಲುಗಳನ್ನೇ ಕಂಡಿದ್ದ ಸೂರ್ಯಗೆ 'ಕರುಪ್ಪು' ಗೆಲ್ಲಲೇಬೇಕಾಗಿತ್ತು. ಕೊನೆಗೂ ಐದು ದಿನಗಳಲ್ಲಿ ಯಶಸ್ಸಿನ ನಗೆ ಬೀರಿದ್ದಾರೆ.

'ಕರುಪ್ಪು' ರಿಲೀಸ್ ಆದ ಮೊದಲ ಮೂರು ದಿನಗಳಲ್ಲಿಯೇ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಭರವಸೆಯನ್ನು ಮೂಡಿಸಿತ್ತು. ಯಶಸ್ವಿ ನಿರ್ದೇಶಕ ಕಮ್ ನಟ ಆರ್‌ಜೆ ಬಾಲಾಜಿ ನಿರ್ದೇಶಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿದೆ. ವೀಕೆಂಡ್ ಅಷ್ಟೇ ಅಲ್ಲ. ವೀಕ್‌ಡೇಸ್‌ನಲ್ಲಿಯೂ ಸಿನಿಮಾ ಮೋಡಿ ಮಾಡುತ್ತಿದೆ.

Suriya Trisha Krishnan movie Karuppu day 5 Box Office collection report

ಹೊಸಬರ ಸಿನಿಮಾಗಳಿರಲಿ, ಸೂಪರ್‌ಸ್ಟಾರ್‌ಗಳ ಸಿನಿಮಾಗಳೇ ಇರಲಿ. ಮೊದಲ ಸೋಮವಾರ ಅಗ್ನಿ ಪರೀಕ್ಷೆಯಾಗಿರುತ್ತೆ. 'ಕರುಪ್ಪು' ಅಸಲಿ ತಾಕತ್ತು ಸೋಮವಾರದ ಬಾಕ್ಸಾಫೀಸ್‌ ಮೇಲೆ ನಿರ್ಧಾರ ಆಗುತ್ತೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳಿದ್ದರು. ಸೋಮವಾರ ಸಿನಿಮಾಗೆ ಕಲೆಕ್ಷನ್ ಕುಸಿದಿದ್ದರೂ ಸ್ಟಡಿಯಾಗಿ ಇತ್ತು. 5ನೇ ದಿನದ ಕಲೆಕ್ಷನ್ ಕೂಡ ಹಾಗೇ ಇದೆ. 'ಕರುಪ್ಪು' ಭಾರತದ ಬಾಕ್ಸಾಫೀಸ್‌ನಲ್ಲಿಯೇ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

'ಕರುಪ್ಪು' 5ನೇ ದಿನದ ಕಲೆಕ್ಷನ್

ಸೂರ್ಯ, ತ್ರಿಶಾ ಕಾಂಬಿನೇಷನ್ ವರ್ಕ್ ಆಗಿದೆ. ಮೊದಲ ದಿನವೇ ಸೂರ್ಯ ಪರ್ಫಾಮೆನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, 'ಕರುಪ್ಪು' ಕಥೆ, ಚಿತ್ರಕಥೆಯಲ್ಲಿ ಅಂತಹ ವಿಶೇಷತೆ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿದ್ದರೂ ತಮಿಳು ಜನ ಈ ಸಿನಿಮಾವನ್ನು ಕೈ ಬಿಡಲಿಲ್ಲ. ಬಾಕ್ಸಾಫೀಸ್‌ ಟ್ರೇಡ್ ರಿಪೂರ್ಟ್‌ ನೀಡಿರುವ ಸ್ಯಾಕ್ನಿಲ್ಕ್ (sacnilk.com) ಪ್ರಕಾರ 'ಕರುಪ್ಪು' 5ನೇ ದಿನ ಭಾರತದ ಬಾಕ್ಸಾಫೀಸ್‌ನಲ್ಲಿ 12.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Also Read
Karuppu Karnataka Box Office: ಕರ್ನಾಟಕದಲ್ಲಿ 'ಕರುಪ್ಪು'ಗೆ ಜೈ ಎಂದ ಪ್ರೇಕ್ಷಕರು.. ಗಳಿಸಿದ್ದೆಷ್ಟು ಗೊತ್ತೇ?
Karuppu Karnataka Box Office: ಕರ್ನಾಟಕದಲ್ಲಿ 'ಕರುಪ್ಪು'ಗೆ ಜೈ ಎಂದ ಪ್ರೇಕ್ಷಕರು.. ಗಳಿಸಿದ್ದೆಷ್ಟು ಗೊತ್ತೇ?

5 ದಿನಗಳಲ್ಲಿ ಗಳಿಸಿದ್ದೆಷ್ಟು?

'ಕರುಪ್ಪು' ಐದು ದಿನಗಳ ಬಾಕ್ಸಾಫೀಸ್‌ ಕಲೆಕ್ಷನ್ ತಮಿಳು ಚಿತ್ರರಂಗಕ್ಕೆ ಹೊಸ ಹುರುಪು ಕೊಟ್ಟಿದೆ. ಕಳೆದ ಕೆಲವು ತಿಂಗಳುಗಳಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. 'ಕರುಪ್ಪು' ತಮಿಳು ಬಾಕ್ಸಾಫೀಸ್‌ಗೆ ಮತ್ತೆ ಜೀವ ಕೊಟ್ಟಿದೆ. ಕಳೆದ ಐದು ದಿನಗಳಲ್ಲಿ 'ಕರುಪ್ಪು' ಭಾರತದ ಬಾಕ್ಸಾಫೀಸ್‌ನಲ್ಲಿ 110.04 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದೆ. ಅದೇ ವಿಶ್ವದಾದ್ಯಂತ 161.04 ಕೋಟಿ ರೂಪಾಯಿ (Gross) ಗಳಿಸಿದೆ ಎಂದು ವರದಿಯಾಗಿದೆ.

1ನೇ ದಿನ ₹15.50 ಕೋಟಿ
2ನೇ ದಿನ ₹24.15 ಕೋಟಿ
3ನೇ ದಿನ ₹28.35 ಕೋಟಿ
4ನೇ ದಿನ ₹14.30 ಕೋಟಿ
5ನೇ ದಿನ ₹12.75 ಕೋಟಿ
ಒಟ್ಟು ₹95.05 ಕೋಟಿ (Net)

Suriya Trisha Krishnan movie Karuppu day 5 Box Office collection report
ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್?

'ಕರುಪ್ಪು'ಗೆ ಕರ್ನಾಟಕದಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ನಾಲ್ಕು ದಿನಗಳಲ್ಲಿ ಸುಮಾರು 8 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇನ್ನು 5ನೇ ದಿನವೂ ಒಳ್ಳೆಯ ಕಲೆಕ್ಷನ್ ಆಗಿದೆ. 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಕರ್ನಾಟಕದ ವಿತರಕರ ಪ್ರಕಾರ ಈ ಸಿನಿಮಾ 9 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Suriya, Trisha Krishnan movie Karuppu day 5 Box Office collection report. According to sacnilk.com Karuppu collected a net of ₹12.75 Crore in India. Worldwide gross collection reached to ₹161.04 Crore.
Read more about: suriya trisha boxoffice report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X