Karuppu Karnataka Box Office: ಕರ್ನಾಟಕದಲ್ಲಿ 'ಕರುಪ್ಪು'ಗೆ ಜೈ ಎಂದ ಪ್ರೇಕ್ಷಕರು.. ಗಳಿಸಿದ್ದೆಷ್ಟು ಗೊತ್ತೇ?
ಕೊನೆಗೂ ತಮಿಳು ಚಿತ್ರರಂಗಕ್ಕೊಂದು ಬೂಸ್ಟ್ ಕೊಡುವ ಸಿನಿಮಾ ಸಿಕ್ಕೇಬಿಟ್ಟಿದೆ. ಹಾಗಂತ ಕಾಲಿವುಡ್‌ಗೆ ಅಷ್ಟೇ ಅಲ್ಲ. ಒಂದರ ಹಿಂದೊಂದು ಸೋಲುಗಳನ್ನು ಕಂಡಿದ್ದ ಸೂರ್ಯಗೂ ಸೂಪರ್ ಸಕಸ್ಸ್ ಕೊಟ್ಟಿದೆ. ಅದುವೇ ಕಳೆದ ವಾರ ತೆರೆಕಂಡಿರುವ 'ಕರುಪ್ಪು'. ಸೂರ್ಯ ಹಾಗೂ ತ್ರಿಶಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಕಳೆದ ನಾಲ್ಕು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ.
'ಕರುಪ್ಪು' ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆರ್‌ಜೆ ಬಾಲಾಜಿ ನಿರ್ದೇಶಿಸಿದ ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತೆ ಎಂದು ಕೆಲವರು ಭವಿಷ್ಯ ನುಡಿದಿದ್ದರು. ಆದರೆ, ಸಿನಿಮಾ ಮೊದಲ ನಾಲ್ಕು ದಿನ ಈ ರಿಪೋರ್ಟ್‌ಗೆ ವಿರುದ್ಧವಾಗಿದೆ. ಮೊದಲ ಮೂರು ಭಾರತ ಹಾಗೂ ವಿದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಆದರೆ, ನಾಲ್ಕನೇ ದಿನ ನಿರೀಕ್ಷೆ ಮಾಡಿದಂತೆ ಶೇ.49ರಷ್ಟು ಇಳಿಕೆ ಕಂಡಿದೆ.

ಸೂರ್ಯ ನಾಯಕನಾಗಿ ನಟಿಸಿರುವ 'ಕರುಪ್ಪು' ಕೇವಲ ತಮಿಳುನಾಡಿನಲ್ಲಷ್ಟೇ ಅಲ್ಲ. ಕರ್ನಾಟಕದಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿದೆ. ಕರ್ನಾಟಕದ ವಿತರಕರ ವಲಯದಲ್ಲಿ ಈ ಸಿನಿಮಾ ಕಲೆಕ್ಷನ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ನಮ್ಮ ರಾಜ್ಯದಲ್ಲಿ ಸೂರ್ಯ ಹಾಗೂ ತ್ರಿಶಾ ನಟನೆಯ ಸಿನಿಮಾ ಗಳಿಸಿದ್ದು ಎಷ್ಟು? ಯಾವ್ಯಾವ ದಿನ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಕರುಪ್ಪು' 4 ದಿನಗಳ ಕಲೆಕ್ಷನ್
ಸೂರ್ಯಗೆ ಈ ಸಿನಿಮಾ ಗೆಲ್ಲಲೇ ಬೇಕಿತ್ತು. ಈ ಹಿಂದೆ ರಿಲೀಸ್ ಆಗಿದ್ದ 'ರೆಟ್ರೋ', 'ಕಂಗುವಾ'ದಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಹೀಗಾಗಿ ಬ್ಯಾಕ್ ಟು ಬ್ಯಾಕ್ ಸೋಲುಗಳು ಸೂರ್ಯ ಹಾಗೂ ಅವರ ಅಭಿಮಾನಿಗಳನ್ನು ಕಂಗಾಲು ಮಾಡಿದ್ದವು. ಕೊನೆಗೂ ಸೂರ್ಯ ಖಾತೆಯಲ್ಲಿ ಸಕ್ಸಸ್‌ಪುಲ್ ಸಿನಿಮಾವೊಂದು ದಾಖಲಾಗಿದೆ. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ 'ಕರುಪ್ಪು' ವಿಶ್ವದಾದ್ಯಂತ 4 ದಿನಗಳಲ್ಲಿ ಬರೋಬ್ಬರಿ 141.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ಸೋಮವಾರ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಹಿನ್ನೆಡೆ ಕಂಡಿದ್ದರೂ, ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಕರ್ನಾಟಕದಲ್ಲಿ 4ನೇ ದಿನದ ಕಲೆಕ್ಷನ್
ಕರ್ನಾಟಕದಲ್ಲಿಯೂ 'ಕರುಪ್ಪು'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇಲ್ಲಿರುವ ತಮಿಳರು ಮುಗಿಬಿದ್ದು ಸಿನಿಮಾವನ್ನು ನೋಡಿದ್ದಾರೆ. ಮೊದಲ ಸೋಮವಾರ ಕೂಡ ನಮ್ಮ ರಾಜ್ಯದಲ್ಲಿ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರ, 'ಕರುಪ್ಪು' 4ನೇ ದಿನ ಸುಮಾರು 1.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಇದು ಒಂದೊಳ್ಳೆ ಕಲೆಕ್ಷನ್ ಎಂದು ಹೇಳಲಾಗಿದೆ.

4 ದಿನಗಳಲ್ಲಿ ಎಷ್ಟಾಯ್ತು ಕಲೆಕ್ಷನ್?
ಸೂರ್ಯ, ತ್ರಿಶಾ ಜೋಡಿಗೆ ಕರ್ನಾಟಕದಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದಲ್ಲಿ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ರಿಲೀಸ್ ಮಾಡಿದೆ. ಕೊನೆಗೂ ಈ ಸಂಸ್ಥೆಗೆ ಒಂದೊಳ್ಳೆ ಸಿನಿಮಾ ಸಿಕ್ಕಿದೆ. ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕಾಚಾರದ ಪ್ರಕಾರ 'ಕರುಪ್ಪು' ಕೆವಿಎನ್‌ಗೆ ಕೈ ಹಿಡಿದಿದೆ. ಮೊದಲ ನಾಲ್ಕು ದಿನಗಳಲ್ಲಿ ಕರ್ನಾಟಕದ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
ಕರುಪ್ಪು ಕರ್ನಾಟಕ ಕಲೆಕ್ಷನ್
1ನೇ ದಿನ ₹ 1.80 ಕೋಟಿ
2ನೇ ದಿನ ₹2.80 ಕೋಟಿ
3ನೇ ದಿನ ₹3.20 ಕೋಟಿ
4ನೇ ದಿನ ₹1.15 ಕೋಟಿ
ಒಟ್ಟು ₹8.95 ಕೋಟಿ (Net)
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
