Karuppu Box office Day 6: 6ನೇ ದಿನ ಬಾಕ್ಸಾಫೀಸ್‌ನಲ್ಲಿ ಕುಸಿದ 'ಕರುಪ್ಪು'.. ಎಷ್ಟಾಯ್ತು ಕಲೆಕ್ಷನ್?

ಕಳೆದ ವಾರ ಬಿಡುಗಡೆಯಾದ 'ಕರುಪ್ಪು' ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಇದು ನಟ ಸೂರ್ಯಗೆ ಕಮ್‌ ಬ್ಯಾಕ್ ಸಿನಿಮಾ ಅಂತಲೇ ಹೇಳಬಬಹುದು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೂರ್ಯಗೆ ಈ ಸಿನಿಮಾ ಗೆಲ್ಲಲೇ ಬೇಕಿತ್ತು. ಕೊನೆಗೂ ವಿಜಯಲಕ್ಷ್ಮಿ ಸೂರ್ಯಗೆ ಒಲಿದಿದ್ದಾಳೆ. ಮೊದಲ ನಾಲ್ಕು ದಿನಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಆಗಿದೆ.

ಆದರೆ, 6ನೇ ದಿನ 'ಕರುಪ್ಪು' ಕಲೆಕ್ಷನ್‌ನಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಹಾಗಿದ್ದರೂ, ವೀಕ್‌ಡೇಸ್‌ನಲ್ಲಿ ಈ ಗಳಿಕೆ ಉತ್ತಮ ಎಂದೇ ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಡುತ್ತಿದ್ದಾರೆ. ಸೂರ್ಯ ಹಾಗೂ ತ್ರಿಶಾ ಕಾಂಬಿನೇಷನ್ ಮತ್ತೆ ವರ್ಕ್‌ಔಟ್ ಆಗಿದೆ. ಆರ್‌ಜೆ ಬಾಲಾಜಿ ನಿರ್ದೇಶನಕ್ಕೆ ತಮಿಳು ಮಂದಿ ಬಹುಪರಾಕ್ ಹೇಳಿದ್ದಾರೆ. ಇನ್ನೇನು ಒಂದು ವಾರ ಪೂರೈಸಲಿರೋ ಸಿನಿಮಾ ವಿಶ್ವದಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

Suriya Trisha Tamil film Karuppu Day 6 Box office collection report

'ಕರುಪ್ಪು' ಅಂತಹ ಸಿನಿಮಾ ತಮಿಳು ಚಿತ್ರರಂಗಕ್ಕೂ ಬೇಕಿತ್ತು. ಕಳೆದ ಕೆಲವು ತಿಂಗಳಿಂದ ಕಾಲಿವುಡ್ ಕೂಡ ಸೈಲೆಂಟ್ ಆಗಿತ್ತು. ತೆರೆಕಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಹೀಗಾಗಿ 'ಕರುಪ್ಪು' ಗೆಲುವು ತಮಿಳು ಚಿತ್ರರಂಗಕ್ಕೆ ಮತ್ತೆ ಜೀವ ಬಂದಂತೆ ಆಗಿದೆ. ಹಾಗಿದ್ದರೆ, 6ನೇ ದಿನ 'ಕರುಪ್ಪು' ಸಿನಿಮಾ ಗಳಿಸಿದ್ದೆಷ್ಟು? ಕರ್ನಾಟಕದ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಕರುಪ್ಪು' 6ನೇ ದಿನದ ಕಲೆಕ್ಷನ್

ಸೂರ್ಯ, ತ್ರಿಶಾ ಕಾಂಬಿನೇಷನ್ ಸಿನಿಮಾ 'ಕರುಪ್ಪು' ಮೊದಲ ಮೂರು ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ತಮಿಳು ಮಂದಿ ಕೈ ಹಿಡಿದ ಬೆನ್ನಲ್ಲೇ ಸಿನಿಮಾದ ಕಲೆಕ್ಷನ್ 6 ದಿನಗಳಲ್ಲೇ ಭಾರತದಲ್ಲಿ 100 ಕೋಟಿ ರೂಪಾಯಿ ದಾಟಿದೆ. ಬಹಳ ದಿನಗಳ ಬಳಿಕ ಸೂರ್ಯ ಸಿನಿಮಾ ಕಡಿಮೆ ಸಮಯದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಸ್ಯಾಕ್ನಿಲ್ಕ್ ಪ್ರಕಾರ, 'ಕರುಪ್ಪು' ವೀಕ್‌ಡೇಸ್‌ನಲ್ಲಿ ಕೊಂಚ ಮಟ್ಟಿಗೆ ಡ್ರಾಪ್ ಕಂಡಿದೆ. 6ನೇ ದಿನ ಭಾರತದಲ್ಲಿ 6,194 ಶೋಗಳಿಂದ 10.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 5ನೇ ದಿನಕ್ಕೆ ಹೋಲಿಕೆ ಮಾಡಿದರೆ, ಸಿನಿಮಾ ಕಲೆಕ್ಷನ್‌ನಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

Also Read
Karuppu Box Office Day 5:5ನೇ ದಿನವೂ 'ಕರುಪ್ಪು' ಕಲೆಕ್ಷನ್ ಸೂಪರ್.. ಸೂರ್ಯನ ಸೋಲುಗೆ ಕೊನೆಗೂ ಸಿಕ್ತು ಮುಕ್ತಿ
Karuppu Box Office Day 5:5ನೇ ದಿನವೂ 'ಕರುಪ್ಪು' ಕಲೆಕ್ಷನ್ ಸೂಪರ್.. ಸೂರ್ಯನ ಸೋಲುಗೆ ಕೊನೆಗೂ ಸಿಕ್ತು ಮುಕ್ತಿ

6 ದಿನಗಳ ಒಟ್ಟು ಕಲೆಕ್ಷನ್

'ಕರುಪ್ಪು' ಕಳೆದ ಆರು ದಿನಗಳಲ್ಲಿ ವಿಶ್ವದಾದ್ಯಂತ 175 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದ್ದು, ಈ ವಾರದ ಅಂತ್ಯದ ವೇಳೆಗೆ 200 ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ. ಇನ್ನು ಭಾರತದ ಬಾಕ್ಸಾಫೀಸ್‌ನಲ್ಲಿ ಈಗಾಗಲೇ 100 ಕೋಟಿ ಕ್ಲಬ್ ಸೇರಿದೆ. 5ನೇ ದಿನಕ್ಕೆ ಹೋಲಿಕೆ ಮಾಡಿದರೆ 6ನೇ ದಿನ ಶೇ.19.2ರಷ್ಟು ಡ್ರಾಪ್ ಕಂಡಿದೆ. ಆದರೂ, ಭಾರತದಲ್ಲಿ 105.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

1ನೇ ದಿನ ₹15.50 ಕೋಟಿ
2ನೇ ದಿನ ₹24.15 ಕೋಟಿ
3ನೇ ದಿನ ₹28.35 ಕೋಟಿ
4ನೇ ದಿನ ₹14.30 ಕೋಟಿ
5ನೇ ದಿನ ₹12.75 ಕೋಟಿ
6ನೇ ದಿನ ₹10.30 ಕೋಟಿ
ಒಟ್ಟು ₹105.35 ಕೋಟಿ (Net)

Suriya Trisha Tamil film Karuppu Day 6 Box office collection report

ಕರ್ನಾಟಕದ ಕಲೆಕ್ಷನ್ ಎಷ್ಟು?

'ಕರುಪ್ಪು' ಕರ್ನಾಟಕದಲ್ಲೂ ಮೊದಲ ಮೂರು ದಿನ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಕರ್ನಾಟಕದ ವಿತರಕರ ವಲಯದ ಮಾಹಿತಿ ಪ್ರಕಾರ, ಕಳೆದ 6 ದಿನಗಳಲ್ಲಿ 10 ರಿಂದ 11 ಕೋಟಿವರೆಗೂ ಕಲೆಕ್ಷನ್ ಆಗಿದೆ. ಹೀಗಾಗಿ ಇಲ್ಲೂ ಒಳ್ಳೆಯ ಬ್ಯುಸಿನೆಸ್ ಮಾಡುತ್ತಿದೆ. ಈ ವೀಕೆಂಡ್ ಅಷ್ಟರಲ್ಲಿ 'ಕರುಪ್ಪು' 15 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Suriya, Trisha Tamil film Karuppu witnessed dip in Day 6 at the Box office. Here is box office collection report.
Read more about: suriya trisha boxoffice report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X