Mirai Box Office Day 2: 2ನೇ ದಿನವೂ ಗೆದ್ದ 'ಹನುಮಾನ್' ಹೀರೋ ಸಿನಿಮಾ 'ಮಿರಾಯ್'; ಕರ್ನಾಟಕದಲ್ಲಿ ಎಷ್ಟು?
ಟಾಲಿವುಡ್‌ನಲ್ಲಿ ತೇಜ ಸಜ್ಜಾ ಸಿನಿಮಾದಿಂದ ಸಿನಿಮಾಗೆ ಗಟ್ಟಿಯಾಗಿ ನೆಲೆಯೂರುತ್ತಿದ್ದಾರೆ. ಸಿನಿಮಾರಂಗಕ್ಕೆ ಬಾಲ ನಟನಾಗಿ ಎಂಟ್ರಿ ಕೊಟ್ಟಿದ್ದ ತೇಜ ಸಜ್ಜಾ ಈಗ ನಾಯಕನಾಗಿ ಮಿಂಚುತ್ತಿದ್ದಾರೆ. ಅದರಲ್ಲೂ 'ಹನುಮಾನ್'ನಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಮೇಲೆ ಅವರ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಅಷ್ಟೇ ಅಲ್ಲದೆ, ತೇಜ ಸಜ್ಜಾ ಆಯ್ಕೆ ಮಾಡಿಕೊಳ್ಳುವ ಸಿನಿಮಾ ಕೂಡ ಪ್ರೇಕ್ಷಕರಲ್ಲಿ ಅಷ್ಟೇ ಕುತೂಹಲವನ್ನು ಕೆರಳಿಸುತ್ತವೆ.
ತೇಜಾ ಸಜ್ಜಾಗೆ 'ಹನುಮಾನ್' ಪ್ಯಾನ್ ಇಂಡಿಯಾ ಇಮೇಜ್ ಕೊಟ್ಟಿತ್ತು. ಬಾಕ್ಸಾಫೀಸ್‌ನಲ್ಲಿ ಮೆಗಾ ಬ್ಲಾಕ್‌ಬಸ್ಟರ್ ಅಂತ ಸಾಬೀತಾಗಿತ್ತು. ಇದೇ ಯಶಸ್ಸು ಮುಂದುವರೆಯುತ್ತಾ? ಅನ್ನೋ ಅನುಮಾನದಲ್ಲಿ ಇದ್ದವರಿಗೆ 'ಮಿರಾಯ್' ಮೂಲಕ ಉತ್ತರ ಕೊಟ್ಟಿದ್ದಾರೆ. ಈ ಸಿನಿಮಾವನ್ನು ಟಿಜಿ ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಇಬ್ಬರೂ ಸೇರಿ ಪೀಪಲ್ ಮೀಡಿಯಾ ಫ್ಯಾಕ್ಟರಿಯಿಂದ ನಿರ್ಮಾಣ ಮಾಡಿದ್ದಾರೆ.

'ಹನುಮಾನ್' ಬಳಿಕ 'ಮಿರಾಯ್'ನಲ್ಲೂ ತೇಜ ಸಜ್ಜಾಗೆ ಸೂಪರ್‌ಮ್ಯಾನ್ ಇಮೇಜ್ ಅನ್ನೇ ಕೊಡಲಾಗಿದೆ. ಕಾರ್ತಿಕ್ ಘಟ್ಟಮನೇನಿ ನಿರ್ದೇಶಿಸಿರುವ ಈ ಸಿನಿಮಾ ಈಗ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಹಾಗಿದ್ದರೆ, 2ನೇ ದಿನ ಗಲ್ಲಾಪಟ್ಟಿಗೆಯಲ್ಲಿ 'ಮಿರಾಯ್' ಸಿನಿಮಾ ಗಳಿಸಿದ್ದೆಷ್ಟು? ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಮಿರಾಯ್' 2ನೇ ದಿನದ ಕಲೆಕ್ಷನ್ ಎಷ್ಟು?
ತೆಲುಗು ಸಿನಿಮಾ 'ಮಿರಾಯ್' ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ತೇಜ ಸಜ್ಜಾ ಸೂಪರ್‌ಮ್ಯಾನ್ ಇಮೇಜ್‌ನಲ್ಲಿ ಮಿಂಚಿದರೆ, ಇದೇ ಮೊದಲ ಬಾರಿಗೆ ಶ್ರೀಯಾ ಶರಣ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೇಜ ಸಜ್ಜಾಗೆ ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಮಂಚು ಮನೋಜ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಈ ಸಿನಿಮಾ ಹೈಲೈಟ್. ಜಗಪತಿ ಬಾಬು, ಜಯರಾಮ್ ಅಂತಹ ನಟರು ನಟಿಸಿರುವ ಈ ಸಿನಿಮಾ 2ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, 2ನೇ ದಿನ ಈ ಸಿನಿಮಾ ಬರೋಬ್ಬರಿ ₹13.45 ಕೋಟಿ ಕಲೆಕ್ಷನ್ ಮಾಡಿದೆ.
2 ದಿನಗಳಲ್ಲಿ ಎಷ್ಟಾಗಿದೆ ಕಲೆಕ್ಷನ್ ?
'ಮಿರಾಯ್' ತೆಲುಗಿನಲ್ಲಷ್ಟೇ ಅಲ್ಲ. ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ಸುಮಾರು 50 ರಿಂದ 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಮೊದಲ ದಿನ ₹13 ಕೋಟಿ ಕಲೆಕ್ಷನ್ ಮಾಡಿತ್ತು. ಅದೇ ಎರಡನೇ ದಿನ ₹13.45 ಕೋಟಿ ಕಲೆಕ್ಷನ್ ಆಗಿದೆ. ಹೀಗೆ ಬಾಕ್ಸಾಫೀಸ್ ಕಲೆಕ್ಷನ್ ಆಗುತ್ತಿದ್ದರೆ, ಇನ್ನೊಂದು ವಾರದಲ್ಲಿ ಹಾಕಿದ ಬಂಡವಾಳ ಬರೋದು ಗ್ಯಾರಂಟಿ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ.
2 ದಿನಗಳ ಬಾಕ್ಸಾಫೀಸ್ ಕಲೆಕ್ಷನ್
ಮೊದಲನೇ ದಿನ ₹13. ಕೋಟಿ
ಎರಡನೇ ದಿನ ₹13.45 ಕೋಟಿ
ಒಟ್ಟು ₹26.45 ಕೋಟಿ

ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಕಲೆಕ್ಷನ್?
ಇನ್ನು 'ಮಿರಾಯ್' ಪ್ಯಾನ್ ಇಂಡಿಯಾ ಸಿನಿಮಾ. ಮೂಲ ಭಾಷೆ ತೆಲುಗು ಆಗಿದ್ದರಿಂದ ಬಹುಪಾಲು ಕಲೆಕ್ಷನ್ ತೆಲುಗಿನಿಂದಲೇ ಬಂದಿದೆ. 'ಮಿರಾಯ್' ತೆಲುಗು ವರ್ಷನ್ ₹21.9 ಕೋಟಿ ಕಲೆಕ್ಷನ್ ಮಾಡಿದೆ. ಹಾಗೇ ಹಿಂದಿ ವರ್ಷನ್ ₹4.15 ಕೋಟಿ, ಕನ್ನಡ ವರ್ಷನ್ ₹10 ಲಕ್ಷ, ತಮಿಳು ವರ್ಷನ್ ₹20 ಲಕ್ಷ ಹಾಗೂ ಮಲಯಾಳಂ ₹10 ಲಕ್ಷ ಕಲೆಕ್ಷನ್ ಮಾಡಿವೆ. ಅದೇ ಕರ್ನಾಟಕದಲ್ಲಿ ಈ ಎಲ್ಲಾ ವರ್ಷನ್‌ನಿಂದ ಎರಡು ದಿನಕ್ಕೆ ಕರ್ನಾಟಕದಲ್ಲಿ ₹1 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











