Elumale Day 1 Box Office: 'ಸು ಫ್ರಮ್ ಸೋ' ಜಾಗ ಆವರಿಸಿಕೊಳ್ಳುತ್ತಾ 'ಏಳುಮಲೆ'? ಫಸ್ಟ್‌ ಡೇ ಕಲೆಕ್ಷನ್ ಎಷ್ಟು?

'ಕಾಟೇರ'ದಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿರುವ ತರುಣ್ ಸುಧೀರ್ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿಲ್ಲ. ಅದಕ್ಕೂ ಮೊದಲು 'ಏಳುಮಲೆ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಮೂಲಕ ನಿರ್ಮಾಪಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಗರಡಿಯಲ್ಲಿ ಪಳಗಿರುವ ಪುನೀತ್ ರಂಗಸ್ವಾಮಿಯನ್ನು ನಿರ್ದೇಶಕರನ್ನಾಗಿ ಮಾಡಿದ್ದಾರೆ.

ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಈ ಸಿನಿಮಾಗೆ ಹೀರೋ. 'ಏಕ್‌ಲವ್ಯ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಾಣಾನಿಗೆ 'ಏಳುಮಲೆ' ಎರಡನೇ ಸಿನಿಮಾ. ಇದೇ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಆಚಾರ್ ಎಂಬ ನಾಯಕಿ ಕೂಡ ಸಿಕ್ಕಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ 'ಏಳುಮಲೆ' ಸಿನಿಮಾಗೆ ಒಳ್ಳೆಯ ರಿಪೋರ್ಟ್ ಬಂದಿದೆ. ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದರಿಂದ ಬಾಕ್ಸಾಫೀಸ್‌ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

Tharun Sudhir produced Ranna starrer Elumale movie day 1 Box office collection report

'ಏಳುಮಲೆ' ರಿಲೀಸ್ ಆದ ದಿನನೇ ಪರಭಾಷೆಯಿಂದಲೂ ಎರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿವೆ. ಹೀಗಾಗಿ ಕರ್ನಾಟಕದಲ್ಲೂ ಎರಡು ಬಿಗ್ ಬಜೆಟ್ ಸಿನಿಮಾಗಳ ಜೊತೆ ಪೈಪೋಟಿ ನಡೆಸಬೇಕಿದೆ. ಆದರೆ, ಆ ಎರಡೂ ಸಿನಿಮಾಗಳಿಗಿಂತಲೂ 'ಏಳುಮಲೆ' ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಟೀಸರ್, ಟ್ರೈಲರ್‌ನಿಂದ ಸದ್ದು ಮಾಡಿದ್ದ 'ಏಳುಮಲೆ' ಮೊದಲ ದಿನ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಏಳುಮಲೆ' ಮೊದಲ ದಿನ ಕಲೆಕ್ಷನ್

'ಏಳುಮಲೆ' ಸಿನಿಮಾದಲ್ಲಿ ಬಿಗ್‌ ಸ್ಟಾರ್‌ಕಾಸ್ಟ್ ಇಲ್ಲ. ಇಲ್ಲೂ ಕೂಡ ಕಥೆಯೇ ಪ್ರಧಾನ. ಅದಕ್ಕೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ತರುಣ್ ಸುಧೀರ್ ಅಬ್ಬರದ ಪ್ರಚಾರವನ್ನೂ ಮಾಡಿಲ್ಲ. ಜನರೇ ಸಿನಿಮಾವನ್ನು ನೋಡಿ ಪ್ರಚಾರ ಮಾಡುತ್ತಾರೆ ಅನ್ನೋದು ನಂಬಿಕೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ಮೊದಲ ದಿನ ದೊಡ್ಡ ಮಟ್ಟದ ಕಲೆಕ್ಷನ್ ಏನೂ ಆಗಿಲ್ಲ. ಆದರೂ ಈಗಾಗಿರೋ ಕಲೆಕ್ಷನ್ ಏನೂ ಕಮ್ಮಿ ಅಲ್ಲ. ಮೊದಲ ದಿನ ಈ ಸಿನಿಮಾ 30 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಯುವ ಪ್ರತಿಭೆಗಳ ಸಿನಿಮಾಗೆ ಈ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿರೋದು ಪಾಸಿಟಿವ್ ಒಪಿನಿಯನ್ ಕೊಟ್ಟಿದೆ.

ಎಷ್ಟು ಸ್ಕ್ರೀನ್.. ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?

ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಸಿನಿಮಾ ಕರ್ನಾಟಕದಾದ್ಯಂತ ಸುಮಾರು 210 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಇದು ತಮಿಳುನಾಡು-ಕರ್ನಾಟಕ ಗಡಿ ಭಾಗದ ಕಥೆಯಾಗಿದ್ದರಿಂದ ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಏರಿಯಾಗಳಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಿತರಕರ ಪ್ರಕಾರ, ಬೆಂಗಳೂರಿನ ಕೆಲವು ಚಿತ್ರಮಂದಿರಗಳ ಹಾಗೂ ಬೇರೆ ಬೇರೆ ಜಿಲ್ಲೆಗಳ ಕಲೆಕ್ಷನ್ ರಿಪೋರ್ಟ್ ಹೀಗಿದೆ.

ನರ್ತಕಿ 2.80 ಲಕ್ಷ
ವೀರೇಶ 1.60 ಲಕ್ಷ
ತುಮಕೂರು 50 ಸಾವಿರ
ಮಂಡ್ಯ 68 ಸಾವಿರ
ಮೈಸೂರು 1.10 ಲಕ್ಷ
ಹಾಸನ 40 ಸಾವಿರ
ದಾವಣಗೆರೆ 86 ಸಾವಿರ

Tharun Sudhir produced Ranna starrer Elumale movie day 1 Box office collection report

ವೀಕೆಂಡ್ ಭವಿಷ್ಯ ಏನು?

'ಏಳುಮಲೆ' ಸಿನಿಮಾ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡದೇ ಹೋದರೂ, ಮೊದಲ ದಿನವೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು ವೀಕೆಂಡ್‌ಗೆ ಅನುಕೂಲವಾಗಲಿದೆ. ಜನರು ವೀಕೆಂಡ್‌ನಲ್ಲಿ ಥಿಯೇಟರ್‌ಗಳಿಗೆ ನುಗ್ಗುತ್ತಾರೆ ಅನ್ನೋ ನಂಬಿಕೆ ಕರ್ನಾಟಕದ ವಿತರಕರಲ್ಲಿ ಇದೆ. ಹೀಗಾಗಿ ಎರಡು ದಿನದ ಕಲೆಕ್ಷನ್‌ ಮೇಲೆ 'ಏಳುಮಲೆ' ಮುಂದಿನ ಭವಿಷ್ಯ ನಿಂತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna starrer Elumale movie day 1 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X