Elumale Day 3 Box Office: ವೀಕೆಂಡ್‌ನಲ್ಲಿ ಹೇಗಿತ್ತು 'ಏಳುಮಲೆ' ಕಲೆಕ್ಷನ್? 'ಸು ಫ್ರಮ್ ಸೋ'ನಂತೆ ಅಬ್ಬರಿಸುತ್ತಾ?

'ಸು ಫ್ರಮ್ ಸೋ' ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಆಗುತ್ತಿವೆ. ವಿಜಯ್ ರಾಘವೇಂದ್ರ ನಟಿಸಿದ 'ರಿಪ್ಪನ್ ಸ್ವಾಮಿ' ಸಿನಿಮಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾ ಬೆನ್ನಲ್ಲೇ ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಸೆಪ್ಟೆಂಬರ್ 5ರಂದು ರಿಲೀಸ್ ಆಗಿದ್ದ ಈ ಸಿನಿಮಾಗೆ ದಿನದಿಂದ ದಿನಕ್ಕೆ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಿದೆ.

'ಏಳುಮಲೆ' ಸಿನಿಮಾದಲ್ಲೂ ದೊಡ್ಡ ಸ್ಟಾರ್‌ಕಾಸ್ಟ್ ಏನೂ ಇಲ್ಲ. ರಕ್ಷಿತ್ ಪ್ರೇಮ್ ಸಹೋದರನಿಗೆ ಇದು ಎರಡನೇ ಸಿನಿಮಾ. ಇನ್ನು ಸಿನಿಮಾದ ನಾಯಕಿ ಪ್ರಿಯಾಂಕಾ ಆಚಾರ್‌ಗೂ ಇದು ಮೊದಲ ಸಿನಿಮಾ. ಇನ್ನು ಪೋಷಕ ಪಾತ್ರಗಳಲ್ಲಿ ನಟಿಸಿರುವ ಕಿಶೋರ್, ಟಿ.ಎಸ್.ನಾಗಾಭರಣ, ಜಗಪತಿ ಬಾಬು ನಟಿಸಿದ್ದಾರೆ. ಹೀಗಾಗಿ ಕಂಟೆಂಟ್ ಮೇಲೆ ನಂಬಿಕೆ ಇಟ್ಟು ಮಾಡಿದ ಸಿನಿಮಾವಿದು.

Tharun Sudhir produced Ranna starrer Elumale movie day 3 Box office collection report

ತರುಣ್ ಸುಧೀರ್ ಗರಡಿಯಲ್ಲಿ ಪಳಗಿದ ಪುನೀತ್ ರಂಗಸ್ವಾಮಿ ಚೊಚ್ಚಲ ಪ್ರಯತ್ನದಲ್ಲಿಯೇ ಪವರ್‌ಫುಲ್ ಸಿನಿಮಾ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಿದ್ದರೆ, 'ಏಳುಮಲೆ' ಸಿನಿಮಾಗೆ ಬ್ಯಾಕ್ ಟು ಬ್ಯಾಕ್ ರಜೆಗಳು ವರ್ಕ್‌ಔಟ್ ಆಯಿತೇ? ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಮೂರು ದಿನಗಳಲ್ಲಿ ಕಲೆಕ್ಷನ್ ಕೋಟಿ ದಾಟಿತೇ? ತಿಳಿಯುವುದಕ್ಕೆ ಮುಂದೆ ಓದಿ.

'ಏಳುಮಲೆ' 3ನೇ ದಿನದ ಕಲೆಕ್ಷನ್ ಎಷ್ಟು?

ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಸಹಜವಾಗಿ ಉತ್ತಮವಾಗಿರುತ್ತೆ. ಅದರಲ್ಲೂ ಪ್ರತಿಯೊಂದು ಸಿನಿಮಾಗೂ ಮೊದಲ ವೀಕೆಂಡ್ ಮುಖ್ಯವಾಗಿರುತ್ತೆ. 'ಏಳುಮಲೆ' ಸಿನಿಮಾ ಕೂಡ ವೀಕೆಂಡ್‌ನಲ್ಲಿ ಅಬ್ಬರಿಸುವ ನಿರೀಕ್ಷೆಯಲ್ಲಿತ್ತು. ನಿರೀಕ್ಷೆಯಂತೆ ಮೂರನೇ ದಿನ ಅಂದರೆ, ಭಾನುವಾರ (ಸೆಪ್ಟೆಂಬರ್ 7) ಬಾಕ್ಸಾಫೀಸ್‌ನಲ್ಲಿ ಡಬಲ್ ಕಲೆಕ್ಷನ್ ಆಗಿದೆ. ಸ್ಯಾಕ್ನಿಲ್ಕ್ ಪ್ರಕಾರ, ಮೂರನೇ ದಿನ ಕರ್ನಾಟಕದಲ್ಲಿ 66 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಹೊಸಬರ ಸಿನಿಮಾ ಈ ಕಲೆಕ್ಷನ್ ಬೂಸ್ಟ್ ಕೊಟ್ಟಿದೆ.

Tharun Sudhir produced Ranna starrer Elumale movie day 3 Box office collection report

3 ದಿನಗಳ ಕಲೆಕ್ಷನ್ ಹೇಗಿದೆ?

'ಏಳುಮಲೆ' ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಿರಲಿಲ್ಲ. ಆದರೆ, ಸಿನಿಮಾ ಬಗ್ಗೆ ಪಾಸಿಟಿವ್ ಒಪಿನಿಯನ್ ಸಿಗುತ್ತಿದ್ದಂತೆ ಎರಡು ಹಾಗೂ ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದೆ. ಮೊದಲ ಮೂರು ದಿನಗಳಲ್ಲಿ ಈ ಸಿನಿಮಾ 1.27 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

3 ದಿನಗಳ ಕಲೆಕ್ಷನ್ ರಿಪೋರ್ಟ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ಒಟ್ಟು ₹1.27 ಕೋಟಿ

ಸೋಮವಾರದ ಸಮರ ಗೆಲ್ಲುತ್ತಾ?

ಪ್ರತಿಯೊಂದು ಸಿನಿಮಾಗೂ ಸೋಮವಾರದ ಕಲೆಕ್ಷನ್ ಅಗ್ನಿ ಪರೀಕ್ಷೆಯಾಗಿರುತ್ತೆ. ಒಂದು ವೇಳೆ ಈ ದಿನ ಬಾಕ್ಸಾಫೀಸ್ ಕಲೆಕ್ಷನ್ ಸ್ಥಿರವಾಗಿದ್ದರೆ ಸಿನಿಮಾ ಗೆದ್ದಂತೆ. ಇನ್ನೂ ಒಂದು ವಾರ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸೋದು ಗ್ಯಾರಂಟಿ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕುತ್ತಾರೆ. 'ಏಳುಮಲೆ' ಭವಿಷ್ಯ ಮೊದಲ ಸೋಮವಾರದ ಮೇಲೆ ನಿಂತಿದೆ. ಒಂದು ವೇಳೆ ಇಂದು (ಸೆಪ್ಟೆಂಬರ್ 8) ಬಾಕ್ಸಾಫೀಸ್‌ನಲ್ಲಿ ಭಾನುವಾರ ಗಳಿಸಿದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಗಳಿಸಿದರೆ, ಸಿನಿಮಾ ಗೆದ್ದಂತೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna starrer Elumale movie day 3 Box office collection report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X