Elumale Day 4 Box Office: ಸೋಮವಾರದ ಪರೀಕ್ಷೆ ಗೆದ್ದಿತೇ 'ಏಳುಮಲೆ'? ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಬಳಿಕ ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾದ ಕಥೆ, ಸ್ಕ್ರೀನ್‌ಪ್ಲೇಯಿಂದ ಹಿಡಿದು ಪ್ರತಿಯೊಂದನ್ನೂ ಜನರು ಇಷ್ಟ ಪಡುತ್ತಿದ್ದಾರೆ. 'ಏಳುಮಲೆ' ಸಿನಿಮಾ ನೋಡಿದವರೆಲ್ಲರೂ ಮನಸಾರೆ ಮೆಚ್ಚಿ ಹೊಗಳಿಕೊಂಡಾಡುತ್ತಿದ್ದಾರೆ. ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್‌ ಕಲೆಕ್ಷನ್ ಮಾಡಿ ಬಚಾವ್ ಆಗಿತ್ತು. ಆದರೆ, ಸೋಮವಾರ ಪರೀಕ್ಷೆಯಲ್ಲಿ ಗೆದ್ದಿದೆಯೇ?

ಮೊದಲನೇ ಸೋಮವಾರ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಹೇಗೋ ಗೆದ್ದು ಬಿಡುತ್ತವೆ. ಆದರೆ, ಹೊಸ ಪ್ರತಿಭೆಗಳ ಸಿನಿಮಾಗಳು ಹಾಗೆ ಆಗುವುದಿಲ್ಲ. ಸೋಮವಾರದ ಪರೀಕ್ಷೆಯನ್ನು ಗೆಲ್ಲುವುದೇ ದೊಡ್ಡ ಟಾಸ್ಕ್ ಆಗಿರುತ್ತೆ. 'ಏಳುಮಲೆ' ಸಿನಿಮಾ ನಿಧಾನವಾಗಿ ಮೌತ್‌ ಪಬ್ಲಿಸಿಟಿ ಮೂಲಕ ಜನರನ್ನು ತಲುಪುತ್ತಿದೆ. ಆದರೆ, ದೊಡ್ಡ ಮಟ್ಟದಲ್ಲಿ ತಲುವುದಕ್ಕೆ ಇನ್ನೂ ಸಮಯ ಬೇಕಿದೆ. ಹೀಗಾಗಿ ಮೊದಲನೇ ಸೋಮವಾರ ತುಂಬಾನೇ ಮುಖ್ಯ ಆಗಿತ್ತು.

Tharun Sudhir produced Ranna starrer Elumale movie day 4 Box office collection report

'ಏಳುಮಲೆ' ಕಲೆಕ್ಷನ್ ದೊಡ್ಡದಲ್ಲಿ ಕಲೆಕ್ಷನ್ ಮಾಡದೇ ಹೋದರೂ, ತೀರಾ ತಳ್ಳಿ ಹಾಕುವಂತೆ ಇಲ್ಲ. ಬಾಕ್ಸಾಫೀಸ್‌ನಲ್ಲಿ ನಿಧಾನವಾಗಿ ತನ್ನ ಅಸ್ಥಿತ್ವವನ್ನು ತೋರಿಸುತ್ತಿದೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಹಾಗೂ ನಾಯಕಿಯಾಗಿ ಪ್ರಿಯಾಂಕಾ ಆಚಾರ್ ನಟಿಸಿರುವ ಈ ಸಿನಿಮಾ ನಾಲ್ಕನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ನೋಡೋಣ.

'ಏಳುಮಲೆ' 4ನೇ ದಿನದ ಕಲೆಕ್ಷನ್

ಪುನೀತ್ ರಂಗಸ್ವಾಮಿ ನಿರ್ದೇಶನ 'ಏಳುಮಲೆ' ಜಾನರ್ ಬೇರೆ. 'ಸು ಫ್ರಮ್ ಸೋ' ರೀತಿ ಇದು ಕಾಮಿಡಿ ಸಿನಿಮಾ ಅಲ್ಲ. ಹೀಗಾಗಿ ಒಮ್ಮೆಗೆ ಫ್ಯಾಮಿಲಿ ಸಮೇತ ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದಿಲ್ಲ. ನಿಧಾನವಾಗಿ ಜನರಿಗೆ ತಲುಪಿದ ಬಳಿಕ ಕಲೆಕ್ಷನ್‌ನಲ್ಲಿ ಏರಿಕೆ ಆಗುತ್ತೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ನಾಲ್ಕನೇ ದಿನ 32 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಹೊಸಬರ ಸಿನಿಮಾವೊಂದು ವಾರದ ಮೊದಲ ದಿನದ ಈ ಗಳಿಕೆ ಉತ್ತಮ ಎನ್ನಬಹುದು.

4 ದಿನಗಳ ಕಲೆಕ್ಷನ್ ಎಷ್ಟು?

'ಏಳುಮಲೆ' ಮೊದಲ ನಾಲ್ಕು ದಿನಗಳ ಕಲೆಕ್ಷನ್ ಸ್ಟಡಿಯಾಗಿದೆ. ಮೊದಲ ಭಾನುವಾರ ಸಿನಿಮಾದ ಕಲೆಕ್ಷನ್ ಉಳಿದ ದಿನಗಳಿಗೆ ಹೋಲಿಸಿದರೆ, ದುಪ್ಪಟ್ಟಾಗಿತ್ತು. ಸೋಮವಾರ ಕಲೆಕ್ಷನ್ ಡ್ರಾಪ್ ಆಗಿದ್ದರೂ, ಮೊದಲ ಎರಡು ದಿನಗಳು ಕಲೆಕ್ಷನ್ ಆದಷ್ಟೇ ಅಗಿದೆ. ಹೀಗಾಗಿ ಈ ನಾಲ್ಕು ದಿನಗಳ ಕಲೆಕ್ಷನ್ 1.59 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

4 ದಿನಗಳ ಕಲೆಕ್ಷನ್ ರಿಪೋರ್ಟ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಒಟ್ಟು ₹1.59 ಕೋಟಿ

Tharun Sudhir produced Ranna starrer Elumale movie day 4 Box office collection report


'ಏಳುಮಲೆ' ಭವಿಷ್ಯದ ಲೆಕ್ಕಾಚಾರವೇನು?

ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಸದ್ಯದಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಕೊಡುವವರು ಇಲ್ಲ. ಈ ವಾರ 'ಏಳುಮಲೆ' ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸಿನಿಮಾ ತಂಡ ಯಶಸ್ವಿಯಾದರೆ, ಒಳ್ಳೆಯ ಮೊತ್ತವನ್ನು ಕಲೆ ಹಾಕಬಹುದು. ಇನ್ಮುಂದೆ ಅಬ್ಬರದ ಪ್ರಚಾರ ಮಾಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna starrer Elumale movie day 4 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X