'ಡೆವಿಲ್' ಪ್ರದರ್ಶನ ಮಾಡಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಥಿಯೇಟರ್‌ಗಳ್ಯಾವುವು? ಈ ಚಿತ್ರಮಂದಿರ ಗಳಿಕೆ ಹೀಗಿದೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡೆವಿಲ್' ಸಿನಿಮಾ ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎನ್ನಬಹುದು. ಬಹುಶ: ದರ್ಶನ್ ಬದುಕಿನಲ್ಲಿ ಎಲ್ಲವೂ ಸರಿಯಾಗಿಯೇ ಇದ್ದಿದ್ದರೆ, 'ಡೆವಿಲ್' ಇನ್ನೂ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿತ್ತೇನೋ.. ಇಂತಹದ್ದೊಂದು ಟಾಕ್ ಈಗ ಶುರುವಾಗಿದೆ.
ಪ್ರತಿಯೊಂದು ಸೂಪರ್‌ಸ್ಟಾರ್ ಸಿನಿಮಾದ ಸಕ್ಸಸ್ ಅನ್ನು ಇಂದು ಬಾಕ್ಸಾಫೀಸ್ ಕಲೆಕ್ಷನ್ ಮೇಲೆನೇ ಅಳೆಯಲಾಗುತ್ತೆ. ಅದರಲ್ಲೂ ದರ್ಶನ್ ಅಂತಹ ಸೂಪರ್‌ಸ್ಟಾರ್ ಸಿನಿಮಾಗೆ ಬೇರೆ ಲೆವೆಲ್‌ನಲ್ಲಿಯೇ ಎಕ್ಸ್‌ಪೆಕ್ಟೆಷನ್ ಇರುತ್ತೆ. ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲಿನಲ್ಲಿ ಇರೋದ್ರಿಂದ ಬಾಕ್ಸಾಫೀಸ್‌ನಲ್ಲಿ ಚಿತ್ರತಂಡ ಅಂದುಕೊಂಡಷ್ಟು ಕಲೆಕ್ಷನ್ ಆಗೋದಿಲ್ಲ ಎಂದು ಭವಿಷ್ಯ ನುಡಿದಿದ್ದರು.

ಆದರೆ, ಮೂರು ದಿನಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್‌ಗಿಂತ ಹೆಚ್ಚಾಗಿ ಸಿಂಗಲ್ ಸ್ಕ್ರೀನ್‌ಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. 'ಡೆವಿಲ್' ಕೆಲವು ಸಿಂಗಲ್ ಸ್ಕ್ರೀನ್‌ಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಆ ಥಿಯೇಟರ್‌ಗಳ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ. ಹಾಗೇ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಡೆವಿಲ್' ಲೈಫ್ ಟೈಮ್ ಕಲೆಕ್ಷನ್ ರಿಪೋರ್ಟ್ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಸಿಂಗಲ್ ಸ್ಕ್ರೀನ್‌ಗಳಿಗೆ 'ಡೆವಿಲ್' ಪವರ್
'ಕಾಂತಾರ ಚಾಪ್ಟರ್ 1' ಬಳಿಕ ಸಿಂಗಲ್ ಸ್ಕ್ರೀನ್‌ಗಳು ಮತ್ತೆ ತಣ್ಣಗಾಗಿದ್ದವು. ಈಗ ದರ್ಶನ್ 'ಡೆವಿಲ್' ಸಿನಿಮಾದಿಂದ ಮತ್ತೆ ಚಿತ್ರಮಂದಿರಗಳು ತುಂಬಿದ ಪ್ರದರ್ಶನವನ್ನು ಕಾಣುತ್ತಿವೆ. ಅದರಲ್ಲೂ ಕೆಲವು ಸಿಂಗಲ್ ಸ್ಕ್ರೀನ್‌ಗಳು ಕೇವಲ ಮೂರು ದಿನಗಳಿಗೆ 26 ರಿಂದ 15 ಲಕ್ಷ ರೂಪಾಯಿವರೆಗೂ ಕಲೆಕ್ಷನ್ ಮಾಡಿವೆ. 'ಡೆವಿಲ್' ಮಲ್ಟಿಪ್ಲೆಕ್ಸ್‌ನಲ್ಲಿ ಹೆಚ್ಚು ಸದ್ದು ಮಾಡಬಹುದೆಂಬ ನಿರೀಕ್ಷೆಯಿತ್ತಾದರೂ, ಸಿಂಗಲ್ ಸ್ಕ್ರೀನ್‌ನಲ್ಲಿಯೇ ಸೌಂಡ್ ಮಾಡುತ್ತಿದೆ.
ಯಾವ್ಯಾವ ಥಿಯೇಟರ್‌ನಲ್ಲಿ ಎಷ್ಟೆಷ್ಟು ಕಲೆಕ್ಷನ್?
ದರ್ಶನ್ 'ಡೆವಿಲ್' ಸಿನಿಮಾದ ಕಲೆಕ್ಷನ್ ಬಗ್ಗೆ ಕರ್ನಾಟಕದ ವಿತಕರ ವಲಯದಲ್ಲಿ ಅಂಕಿ-ಅಂಶಗಳು ಓಡಾಡುತ್ತಿವೆ. ಅವುಗಳಲ್ಲಿ ಬೆಂಗಳೂರಿನ ಕೆಲವು ಚಿತ್ರಮಂದಿರಗಳು ಹಾಗೂ ಮೈಸೂರಿನ ಚಿತ್ರಮಂದಿರಗಳು ಒಳ್ಳೆಯ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿತ್ತಿದೆ. 'ಕಾಟೇರ'ದಷ್ಟು ಕ್ರೇಜ್ ಇರದೇ ಹೋದರೂ, 'ಡೆವಿಲ್' ಕಲೆಕ್ಷನ್ ಡಿಸೆಂಟ್ ಆಗಿಯೇ ಇದೆ. ಅತೀ ಹೆಚ್ಚು ಗಳಿಸಿದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ಸಿಂಗಲ್ ಸ್ಕ್ರೀನ್ ಕಲೆಕ್ಷನ್ ರಿಪೋರ್ಟ್
ನರ್ತಕಿ (ಬೆಂಗಳೂರು) ₹24 ಲಕ್ಷ
ಪ್ರಸನ್ನ (ಬೆಂಗಳೂರು) ₹26 ಲಕ್ಷ
ನವರಂಗ್ (ಬೆಂಗಳೂರು) ₹22 ಲಕ್ಷ
ವೀರಭದ್ರೇಶ್ವರ (ಬೆಂಗಳೂರು) ₹22 ಲಕ್ಷ
ಭಾರತಿ (ಪೀಣ್ಯ) ₹24 ಲಕ್ಷ
ಮಾರುತಿ ತುಮಕೂರು ₹18 ಲಕ್ಷ
ವುಡ್‌ಲ್ಯಾಂಡ್ (ಮೈಸೂರು) ₹20 ಲಕ್ಷ
ಗಾಯತ್ರಿ (ಮೈಸೂರು) ₹18 ಲಕ್ಷ
ವಸಂತ (ದಾವಣಗೆರೆ) ₹15 ಲಕ್ಷ
ಲೈಫ್ ಟೈಮ್ ಕಲೆಕ್ಷನ್ ಎಷ್ಟಾಗ್ಬಹುದು?
ಟ್ರೇಡ್ ಎಕ್ಸ್‌ಪರ್ಟ್‌ಗಳು ಈಗಾಗಲೇ 'ಡೆವಿಲ್' ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಬಗ್ಗೆನೂ ಲೆಕ್ಕ ಹಾಕುತ್ತಿದ್ದಾರೆ. ಸಿನಿಮಾದ ಕಲೆಕ್ಷನ್ ಹೀಗೆ ಮುಂದುವರೆದರೆ, ₹50 ಕೋಟಿ ಕ್ಲಬ್ ಅನ್ನು ಆರಾಮಾಗಿ ಸೇರುವ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಹಾಗೇ ಯಾವ್ಯಾವ ಏರಿಯಾದಲ್ಲಿ ಲೈಫ್ ಟೈಮ್ ಎಷ್ಟು ಶೇರ್ ಸಿಗಬಹುದು ಎಂಬುವ ಬಗ್ಗೆನೂ ಚರ್ಚೆಯಾಗುತ್ತಿದೆ. ಆ ಲೆಕ್ಕಾಚಾರದ ಪ್ರಕಾರ ಲೈಫ್ ಟೈಮ್ ಕಲೆಕ್ಷನ್‌ನಿಂದ ನಿರ್ಮಾಪಕರಿಗೆ ಸಿಗುವ ಶೇರ್ ₹25 ರಿಂದ ₹30 ಕೋಟಿ ಆಗಬಹುದು ಎನ್ನಲಾಗಿದೆ.
ಲೈಫ್ ಟೈಮ್ ಕಲೆಕ್ಷನ್ (ಅಂದಾಜು ಶೇರ್)
ಬಿಕೆಟಿ ₹12 ಕೋಟಿ
ಎಂಎಂಸಿಎಚ್ ₹4.5 ಕೋಟಿ
ಹುಬ್ಬಳ್ಳಿ ₹3.25 ಕೋಟಿ
ಹೈದರಾಬಾದ್ ಕರ್ನಾಟಕ ₹75 ಲಕ್ಷ
ಚಿತ್ರದುರ್ಗ-ದಾವಣೆಗೆರೆ ₹1.2 ಕೋಟಿ
ಶಿವಮೊಗ್ಗ-ದಕ್ಷಿಣ ಕನ್ನಡ ₹1.25 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಬೇರೆ ಮೂಲಗಳು, ವಿತರಕರು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











