Thug Life Day 4 Collection; ಬಾಕ್ಸಾಫೀಸ್‌ನಲ್ಲಿ ಕುಂಟುತ್ತಿರುವ 'ಥಗ್ ಲೈಫ್'; ವೀಕೆಂಡ್ ಗಳಿಕೆ ಎಷ್ಟು?
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಫ್ಲಾಪ್ ಲಿಸ್ಟ್ ಸೇರುವ ಸುಳಿವು ಸಿಕ್ತಿದೆ. ಮೊದಲ 4 ದಿನಗಳ ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ನಿರೀಕ್ಷಿತ ಮಟ್ಟಕ್ಕಿಲ್ಲ. ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬೋ ಎನ್ನುವ ಕಾರಣಕ್ಕೆ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಆ ಮಟ್ಟಕ್ಕೆ ಕಲೆಕ್ಷನ್ ಆಗ್ತಿಲ್ಲ.
ಸಾಮಾನ್ಯವಾಗಿ ಫಸ್ಟ್ ವೀಕೆಂಡ್ ಭಾನುವಾರ ಯಾವುದೇ ಸಿನಿಮಾ ಕಲೆಕ್ಷನ್ ಜಾಸ್ತಿ ಇರುತ್ತದೆ. ಆದರೆ 'ಥಗ್ ಲೈಫ್' ವಿಚಾರದಲ್ಲಿ ಇದು ಸುಳ್ಳಾಗಿದೆ. ಮೊದಲ 3 ದಿನಕ್ಕಿಂತ 4 ದಿನದ ಗಳಿಕೆ ಕಮ್ಮಿಯಿದೆ. ಗುರುವಾರ ತೆರೆಕಂಡ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ತಮಿಳು ಪ್ರೇಕ್ಷಕರೇ ಸಿನಿಮಾ ನೋಡಿ ಟ್ರೋಲ್ ಮಾಡಿದ್ದರು. ಇನ್ನು ಹಿಂದಿ, ತೆಲುಗು, ಮಲಯಾಳಂ ವರ್ಷನ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಯಾವುದೇ ಚಿತ್ರಕ್ಕೆ ಮೌತ್ ಟಾಕ್ ಬಹಳ ಮುಖ್ಯ. 'ಥಗ್ ಲೈಫ್' ಚಿತ್ರದ ವಿಚಾರದಲ್ಲಿ ಅದು ಕೈ ಕೊಟ್ಟಿದೆ. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಬಂದು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಲು ಮೀನಾಮೇಣ ಎಣಿಸುವಂತಾಗಿದೆ. ಬೇರೆ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗದಿದ್ದರೂ ಅದು ಕಮಲ್ ಚಿತ್ರಕ್ಕೆ ವರವಾಗಿಲ್ಲ. ಓಟಿಟಿಯಲ್ಲಿ ನೋಡಿದರೆ ಆಯ್ತು ಬಿಡು ಎಂದು ಸಿನಿರಸಿಕರು ನಿರ್ಧರಿಸಿಬಿಟ್ಟಿದ್ದಾರೆ.
ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗದೇ ಇರುವುದು ಕೂಡ ಭಾರೀ ಹೊಡೆತ ಬಿದ್ದಂತಾಗಿದೆ. ಕನ್ನಡ ಭಾಷೆಯ ಕುರಿತು ಕಮಲ್ ಹೇಳಿಕೆ ವಿವಾದ ಸೃಷ್ಟಿಸಿತ್ತು. ಹಾಗಾಗಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಬಿಡಲಿಲ್ಲ. 'ಥಗ್ ಲೈಫ್' ಚಿತ್ರದ ನಿರ್ಮಾಪಕರು ಆಗಿರುವ ಕಮಲ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರೂ ಪ್ರಯೋಜನವಾಗಿರಲಿಲ್ಲ. ಸದ್ಯ ಬೇರೆ ಕಡೆಗಳಲ್ಲಿ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ ಈಗ ರಾಜ್ಯದಲ್ಲಿ ಸಿನಿಮಾ ಬಿಡುಗಡೆ ಆದರೂ ಜನ ನೋಡುವುದು ಕಷ್ಟ ಎನ್ನುವಂತಾಗಿದೆ.
ಕಮಲ್ ಹಾಸನ್ ನಟನೆಯ ಈ ಹಿಂದಿನ 'ವಿಕ್ರಂ' ಹಾಗೂ 'ಇಂಡಿಯನ್-2' ಸಿನಿಮಾಗಳ ಕಲೆಕ್ಷನ್ 'ಥಗ್ ಲೈಫ್'ಗಿಂತ ಚೆನ್ನಾಗಿತ್ತು. ಶಂಕರ್ ನಿರ್ದೇಶನದ 'ಇಂಡಿಯನ್' ಸೀಕ್ವೆಲ್ ಕೂಡ ಇದೇ ರೀತಿ ಟೀಕೆ, ಟ್ರೋಲ್ ಎದುರಿಸಿತ್ತು. ಆದರೂ ಮೊದಲ 3 ದಿನಕ್ಕೆ ಕಲೆಕ್ಷನ್ 50 ಕೋಟಿ ರೂ. ಗಡಿ ದಾಟಿತ್ತು. ಆದರೆ 'ಥಗ್ ಲೈಫ್' ಚಿತ್ರಕ್ಕೆ ಬಹಳ ಹಿನ್ನಡೆಯಾಗಿದೆ.
4 ದಿನಗಳ ಕಲೆಕ್ಷನ್
ಅಧಿಕೃತವಾಗಿ 'ಥಗ್ ಲೈಫ್' ಸಿನಿಮಾ ಗಳಿಕೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಬಾಕ್ಸಾಫೀಸ್ ಪಂಡಿತರ ಪ್ರಕಾರ ಭಾರತದಲ್ಲಿ ಸಿನಿಮಾ ಮೊದಲ 4 ದಿನಕ್ಕೆ 36.52 ಕೋಟಿ ರೂ. ಎನ್ನಲಾಗ್ತಿದೆ. Sacnilk.com ವರದಿ ಪ್ರಕಾರ ಸಿನಿಮಾ ವಿಶ್ವದಾದ್ಯಂತ 73 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 43 ಕೋಟಿ ರೂ. ಗ್ರಾಸ್ ಹಾಗೂ 36.9 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ.
ಸೋಮವಾರ ಭವಿಷ್ಯ
ಯಾವುದೇ ಸಿನಿಮಾ ಬಾಕ್ಸಾಫೀಸ್ ಭವಿಷ್ಯ ನಿರ್ಧಾರ ಆಗುವುದು ಫಸ್ಟ್ ವೀಕೆಂಡ್ ಮುಗಿದ ಬಳಿಕ ಬರುವ ಸೋಮವಾರ. ಸ್ಟಾರ್ ನಟರ ಸಿನಿಮಾ ನೋಡಲು ಮೊದಲ ವಾರ ಅಭಿಮಾನಿಗಳು ಮುಗಿಬೀಳುತ್ತಾರೆ. ಶನಿವಾರ, ಭಾನುವಾರದ ರಜೆ ಕೂಡ ಅದಕ್ಕೆ ಸಾಥ್ ಕೊಡುತ್ತದೆ. ಶನಿವಾರ ಬಕ್ರೀದ್ ಹಬ್ಬದ ರಜೆ ಕೂಡ ಇತ್ತು. ಹಾಗಾಗಿ 'ಥಗ್ ಲೈಫ್' ಸಿನಿಮಾ ತಕ್ಕಮಟ್ಟಿಗೆ ಗಳಿಕೆ ಕಂಡಿದೆ. ಸೋಮವಾರ ಚಿತ್ರದ ಅಸಲಿ ತಾಕತ್ತು ಗೊತ್ತಾಗುತ್ತದೆ. ವಾರದ ದಿನದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆದರೆ ಮುಂದೆ ಗಳಿಕೆ ಏನಾಗಬಹುದು ಎಂದು ತಿಳಿಯುತ್ತದೆ.
'ವಿಕ್ರಂ', 'ಇಂಡಿಯನ್-2' ವೀಕೆಂಡ್ ಗಳಿಕೆ
ಲೋಕೇಶ್ ಕನಕರಾಜ್ ನಿರ್ದೇಶನದ 'ವಿಕ್ರಂ' ಸಿನಿಮಾ ಕಮಲ್ ಹಾಸನ್‌ಗೆ ಒಳ್ಳೆ ಬ್ರೇಕ್ ಕೊಟ್ಟಿತ್ತು. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೊದಲ 3 ದಿನಕ್ಕೆ ಭಾರತದಲ್ಲಿ 110.8 ನೆಟ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇನ್ನು 'ಇಂಡಿಯನ್-2 ಸಿನಿಮಾ 69.15 ಕೋಟಿ ರೂ. ಬಾಚಿಕೊಂಡಿತ್ತು.
ಸುಪ್ರೀಂನಲ್ಲಿ ಅರ್ಜಿ ವಿಚಾರಣೆ
ಕರ್ನಾಟಕದಲ್ಲಿ 'ಥಗ್ ಲೈಫ್' ಸಿಿಮಾ ಬಿಡುಗಡೆಗೆ ಅನುಮತಿ ಕೋರಿ ಕಮಲ್ ಹಾಸನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಜೂನ್ 3ರಂದು ಅರ್ಜಿ ವಿಚಾರಣೆ ನಡೆಸಿ ಕಮಲ್ ಕ್ಷಮೆ ಕೇಳಬೇಕು ಎಂದು ಕೋರ್ಟ್ ಹೇಳಿತ್ತು. ಕಮಲ್ ಹೇಳಿಕೆಯನ್ನು ಖಂಡಿಸಿತ್ತು. ಅರ್ಜಿಯ ವಿಚಾರಣೆಯನ್ನು ನಾಳೆ(ಜೂನ್ 10)ಗೆ ಮುಂದೂಡಿತ್ತು. ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಕಮಲ್ ಅಲ್ಲಿ ಸಲ್ಲಿಸಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ಕೇಳಿದ್ದರು. ಅಲ್ಲಿ ಕೂಡ ಹಿನ್ನಡೆಯಾಗಿದೆ. ಅರ್ಜಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲೇ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ. ಇದರಿಂದ ನಟ ಕಮಲ್ ಹಾಸನ್‌ಗೆ ಮತ್ತಷ್ಟು ಹಿನ್ನಡೆ ಆದಂತಾಗಿದೆ.


Click it and Unblock the Notifications











