ಚಿತ್ರರಂಗದ ದಿಕ್ಕು ಬದಲಿಸಿದ 'ಶ್' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಎಲ್ಲೆಲ್ಲಿಂದ ಎಷ್ಟಾಯ್ತು ಕಲೆಕ್ಷನ್?

ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಸಿನಿಮಾಗಳಲ್ಲಿ 'ಶ್' ಸಿನಿಮಾ ಕೂಡ ಒಂದು. ಆಗತಾನೇ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಓಡಾಡುತ್ತಿದ್ದ ಉಪೇಂದ್ರ ಹೊಸ ರೀತಿಯ ಕಥೆಯೊಂದನ್ನು ರೆಡಿ ಮಾಡಿಟ್ಟುಕೊಂಡಿದ್ದರು. ಕಾಶೀನಾಥ್ ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಉಪ್ಪಿ ಎಸ್ಟೇಟ್ ಕಥೆಯೊಂದನ್ನು ರೆಡಿ ಮಾಡಿಟ್ಟುಕೊಂಡಿದ್ದರು.

ಇತ್ತ ಕುಮಾರ್ ಗೋವಿಂದ್‌ ಕೂಡ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಹೀಗಾಗಿ ಸಿನಿಮಾ ನಂಟು ಬೆಳೆದಿತ್ತು. ರವಿಚಂದನ್ ಅಂತಹ ದಿಗ್ಗಜರ ಸಂಪರ್ಕಕ್ಕೆ ಬಂದಿದ್ದರು. ಹೀಗೆ ಉಪೇಂದ್ರ ಡಬ್ಬಿಂಗ್ ಸಿನಿಮಾವೊಂದಕ್ಕೆ ಡೈಲಾಗ್ ಬರೆಯುತ್ತಿದ್ದರು. ಆ ವೇಳೆ ಕುಮಾರ್ ಗೋವಿಂದ್ ಸ್ನೇಹಿತರ ನಿರ್ಮಾಣಕ್ಕೆ ಕೈ ಹಾಕಿದ್ದರು. ಅಲ್ಲಿ ಇಬ್ಬರಿಗೂ ಪರಿಚಯವಾಗಿ 'ಶ್' ಸಿನಿಮಾ ಉಗಮಕ್ಕೆ ಕಾರಣ ಆಯ್ತು. ಕೇವಲ ಒಂದು ಎಸ್ಟೇಟ್‌ನಲ್ಲಿ ನಡೆಯುವ ಕಥೆ ಕನ್ನಡ ಚಿತ್ರರಂಗದ ಟ್ರೆಂಡ್ ಅನ್ನೇ ಬದಲಿಸಿತ್ತು.

Upendra and Kumar Govind movie Shhh Box Office Collection Report in 1993

'ಶ್' ಸಿನಿಮಾ ಮಾಡುವಾಗ ಇಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಗುತ್ತೆ ಎನ್ನುವ ನಿರೀಕ್ಷೆನೇ ಇರಲಿಲ್ಲ. ಉಪೇಂದ್ರಗೆ ಕುಮಾರ್ ಗೋವಿಂದ್ ₹10 ಲಕ್ಷ ಬಜೆಟ್ ಕೊಟ್ಟಿದ್ದರು. ಇಷ್ಟರಲ್ಲೇ ಸಿನಿಮಾ ಆಗಬೇಕು ಅಂತನೂ ಹೇಳಿದ್ದರು. ಕೊನೆಗೆ ಸಿನಿಮಾದ ಬಜೆಟ್ ಬೇರೆ ಲೆವೆಲ್‌ಗೆ ಹೋಯ್ತು. ಹಾಗಿದ್ದರೆ, 1993ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿತ್ತು. ಮೊದಲ ಸಿನಿಮಾದ ವ್ಯಾವಹಾರವನ್ನು ಕುಮಾರ್ ಗೋವಿಂದ್ ಮಾಡಿದ್ದು ಹೇಗೆ? ತಿಳಿಯುವುದಕ್ಕೆ ಮುಂದೆ ಓದಿ.

'ಶ್' ಸಿನಿಮಾದ ಬಜೆಟ್ ಎಷ್ಟು?

90ರ ದಶಕದಲ್ಲಿ ಒಂದು ಕನ್ನಡ ಸಿನಿಮಾ ಮಾಡುವುದಕ್ಕೆ ಕಮ್ಮಿ ಅಂದರೂ 60 ಲಕ್ಷ ರೂಪಾಯಿ ಬೇಡಿಕಿತ್ತು ಆದರೆ, ಉಪೇಂದ್ರ ₹10 ಲಕ್ಷದಲ್ಲಿ ಸಿನಿಮಾ ಮಾಡುವುದಾಗಿ ಮಾತು ಕೊಟ್ಟಿದ್ದರು. ಹಾಗೇ ಶುರುವಾಗಿದ್ದೇ ಶ್. ಈ ಬಗ್ಗೆ ನಿರ್ಮಾಪಕ ಕಮ್ ನಟ ಕುಮಾರ್ ಗೋವಿಂದ್ 'ಶ' ಸಿನಿಮಾ ಆರಂಭ ಆದ ಬಗ್ಗೆ, ಬಜೆಟ್ ಬಗ್ಗೆ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

Upendra and Kumar Govind movie Shhh Box Office Collection Report in 1993

ಸರ್. ಒಂದು ಸಿನಿಮಾ ಮಾಡುತ್ತಿದ್ದೇನೆ. ತರ್ಲೆ ನನ್ ಮಗ ಅಂತ. ಇನ್ನೂ ಕಂಪ್ಲೀಟ್ ಆಗಿಲ್ಲ ಅಂತ ಉಪೇಂದ್ರ. ನನ್ನ ಹತ್ತಿರ ಇನ್ನೊಂದು ಸಿನಿಮಾವಿದೆ. ರೌಡಿಸಂ ಕಥೆ. ನೀವು ಮಾಡಿ ಸರ್ ಅಂದರು. ಎಷ್ಟು ಬಜೆಟ್ ಆಗುತ್ತೆ ಅಂತ ಕೇಳಿದೆ. ಅದಕ್ಕೆ ಅವರು ಎಲ್ಲಾ 10 ಲಕ್ಷದಲ್ಲಿ ಮಾಡಿಬಿಡೋಣ ಅಂದರು. ಅಷ್ಟೊತ್ತಿಗಾಗಲೇ ನಾನು ರವಿ ಸರ್ ಜೊತೆ ಬಾಂಧವ್ಯ ಬೆಳೆದಿತ್ತು. ಒಂದು ಸಿನಿಮಾ ಮಾಡಬೇಕು ಅಂದರೆ, 60 ಲಕ್ಷ ಬೇಕಿತ್ತು. 60 ಲಕ್ಷ ಎಲ್ಲಿ? 10 ಲಕ್ಷ ಎಲ್ಲಿ? ಆ ಮೇಲೆ ಸಬ್ಸಿಡಿ ಬರುತ್ತೆ ಅಂತ ಅದು ಬೇರೆ. ಸರಿ ನೋಡಿ ಹಾಕಿದ್ದರೆ ಅಂತ ಹೇಳಿದೆ. ಅಲ್ಲಿಂದ ಕಾಂಟೆಕ್ಟ್ ಇರಲಿಲ್ಲ. ಅದಕ್ಕೆ ಬಜೆಟ್ ಹೆಚ್ಚಾಗಿದ್ದರಿಂದ ಡ್ರಾಪ್ ಮಾಡಿದ್ದರು. ಬಳಿಕ ಕುಮಾರ್ ಗೋವಿಂದ್ ಆಫೀಸ್‌ಗೆ ಉಪ್ಪಿನೇ ಹೋಗಿ ಭೇಟಿ ಮಾಡಿ ಮತ್ತೊಂದು ಕಥೆಯನ್ನು ಹೇಳಿದ್ದರು. ಅದುವೇ 'ಶ್'.

"ಸರ್, ನಾನು ಎಸ್ಟೇಟ್‌ನಲ್ಲಿ ನಡೆಯುವ ಒಂದು ಕಥೆ ಮಾಡಿದ್ದೆ. ಅದನ್ನು ಕಾಶೀನಾಥ್‌ ಅವರಿಗೆ ಕೊಟ್ಟಿದ್ದೀನಿ ಅಂದರು. ಆಮೇಲೆ ಅವರ ಮನೆಗೆ ಹೋಗಿ ಸ್ಕ್ರಿಪ್ಟ್ ತೆಗೆದುಕೊಂಡು ಬಂದ್ವಿ. ಹಾಗೇ ಶ್ ಶುರುವಾಗಿದ್ದು. ಆಗ 10 ಲಕ್ಷ ರೂಪಾಯಿಯಲ್ಲಿ ಸಿನಿಮಾ ಅಂತ ಶುರುವಾಗಿದ್ದು 19 ಲಕ್ಷ ರೂಪಾಯಿ ಆಯ್ತು. ರಿಲೀಸ್‌ಗೆ ನಾನೇ ಬಂದಿದ್ದೆ. ಹಾಗಾಗಿ ಅದು 11 ಲಕ್ಷ ರೂಪಾಯಿ ಹಚ್ಚಿಗೆ ಆಯ್ತು. ಎಲ್ಲಾ ಸೇರಿ 31.25 ಲಕ್ಷ ರೂಪಾಯಿ ಆಯಿತು." ಎನ್ನುತ್ತಾರೆ ಕುಮಾರ್ ಗೋವಿಂದ್.

ರಿಲೀಸ್‌ಗೆ ರವಿಚಂದ್ರನ್ ನೆರವು

ಸಿನಿಮಾವೇನೋ ರೆಡಿಯಾಗಿತ್ತು. ಆದರೆ, ರಿಲೀಸ್ ಮಾಡುವಾಗ ಕುಮಾರ್ ಗೋವಿಂದ್ ನೇರವಾಗಿ ರವಿಚಂದ್ರನ್ ಅವರ ಸಲಹೆ ತೆಗೆದುಕೊಂಡಿದ್ದರು. ಅವರಿಗೊಮ್ಮೆ ಸಿನಿಮಾವನ್ನು ತೋರಿಸಿದ್ದರು. ಅಲ್ಲಿಂದ ಪಾಸಿಟಿವ್ ಒಪಿನಿಯನ್ ಬಂದ್ಮೇಲೆ ಸಿನಿಮಾ ಬಿಡುಗಡೆಗೆ ಪ್ಲಾನಿಂಗ್ ಮಾಡಿದ್ದರು. ಈ ವೇಳೆ ರವಿಚಂದ್ರನ್ ಒಂದು ಸಲಹೆಯನ್ನು ನೀಡಿದ್ದರು. ಅದನ್ನೂ ಕುಮಾರ್ ಗೋವಿಂದ್ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

"ನನಗೆ ವ್ಯಾಪಾರಕ್ಕೆ ರವಿ ಸರ್ ಸಹಾಯ ಮಾಡಿದ್ದು. ಮೊದಲು ಸಿನಿಮಾ ಅವರಿಗೆ ತೋರಿಸಿದೆ. ಸಿನಿಮಾ ನೋಡಿ ನನ್ನ ಆಕ್ಷನ್ ಬಗ್ಗೆ ತುಂಬಾನೇ ಹೊಗಳಿದರು. ಇದು ಸಿಟಿ ಆಡಿಯನ್ಸ್ ಸಿನಿಮಾ. ಸಿಟಿ ಏರಿಯಾ ನೀನೆ ಇಟ್ಟುಕೋ ಯಾರಿಗೂ ಕೊಡಬೇಡ ನೀನೆ ಮಾಡು. ಉಳಿದಿದ್ದೆಲ್ಲ ಏರಿಯಾ ಕೊಟ್ಟು ಬಿಡು ಅಂದರು. ರವಿ ಸರ್ ಅವರೇ ವಿತರಕ ರವೀಂದ್ರ ಎನ್ನುವವರನ್ನು ಕರೆಸಿದ್ದರು. ಅವರು ಸಿನಿಮಾ ನೋಡಿ ರವಿ ಜೊತೆ ಮಾತಾಡುತ್ತೇನೆ ಎಂದು ಹೊರಟು ಹೋದರು" ಎಂದು ಬ್ಯುಸಿನೆಸ್ ಬಗ್ಗೆನೂ ರಿವೀಲ್ ಮಾಡಿದ್ದಾರೆ.

'ಶ್' ಸಿನಿಮಾ ಬ್ಯುಸಿನೆಸ್ ಎಷ್ಟು?

ವಿತರಕ ರವೀಂದ್ರ ಎನ್ನುವವರು 'ಶ್' ಸಿನಿಮಾ ನೋಡ ಬಳಿಕ ವ್ಯಾಪಾರ ಮಾಡಿದ್ದರು. ಇದರಿಂದ ಸಿನಿಮಾಗೆ ಅಂತ ಹಾಕಿದ್ದ 19 ಲಕ್ಷ ರೂಪಾಯಿ ಬಜೆಟ್ ವಾಪಾಸ್ ಬಂದಿತ್ತು. ಇನ್ನು ಸಿಟಿ ಏರಿಯಾಗಳನ್ನು ಬೆಂಗಳೂರು, ಕೋಲಾರ ಹಾಗೂ ತುಮಕೂರು ಏರಿಯಾಗಳನ್ನು ರಾಮು ಅವರನ್ನು ಇಟ್ಕೊಂಡು ಕುಮಾರ್ ಗೋವಿಂದ್ ರಿಲೀಸ್ ಮಾಡಿದ್ದರು.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ 'ಶ್' ಸಿನಿಮಾದ ಡಬ್ಬಿಂಗ್ ಹಕ್ಕುಗಳನ್ನು 5. 5 ಲಕ್ಷಕ್ಕೆ ಖರೀದಿಸಿದ್ದರು. ಬಿಕೆಟಿ ಬಿಟ್ಟು ವಿತರಕರಿಂದ 19 ಲಕ್ಷ ರೂಪಾಯಿ ಅದಾಗಲೇ ಬಂದಿತ್ತು. ಇನ್ನು ಬಿಕೆಟಿ ಏರಿಯಾಗಳಲ್ಲೂ ಭರ್ಜರಿ ಕಲೆಕ್ಷನ್ ಬಂದಿತ್ತು.

ಡಬ್ಬಿಂಗ್ ರೈಟ್ ₹5.5 ಲಕ್ಷ
ಡಿಸ್ಟ್ರಿಬ್ಯೂಷನ್ ರೈಟ್ಸ್ ₹19 ಲಕ್ಷ (ಬಿಕೆಟಿ ಬಿಟ್ಟು)
ಆಡಿಯೋ ರೈಟ್ಸ್ ₹6 ಲಕ್ಷ

ಇಲ್ಲಿಗೆ ಹೆಚ್ಚು ಕಡಿಮೆ 'ಶ್' ಸಿನಿಮಾಗೆ ಹಾಕಿದ ಖರ್ಚು ಮಾಡಿದ ಹಣ ಕುಮಾರ್ ಗೋವಿಂದ್‌ಗೆ ವಾಪಾಸ್ ಬಂದಿತ್ತು. ಇನ್ನು ಬೆಂಗಳೂರು, ತುಮಕೂರು, ಕೋಲಾರ ಏರಿಯಾದಲ್ಲೂ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಈ ಸಿನಿಮಾ ಸುಮಾರು 36 ವಾರಗಳ ಕಾಲ ಸಿನಿಮಾ ಮಂದಿರಗಳಲ್ಲಿ ಓಡಿತ್ತು. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿತ್ತು. ಕನ್ನಡ ಚಿತ್ರರಂಗದ ವಿತರಕರು ಹೇಳುವ ಪ್ರಕಾರ, ಈ ಸಿನಿಮಾ ಆಗಿನ ಕಾಲಕ್ಕೆ 2 ರಿಂದ 2.50 ಕೋಟಿ ರೂಪಾಯಿ ಥಿಯೇಟರ್‌ನಿಂದ ಕಲೆಕ್ಷನ್ ಮಾಡಿತ್ತು. ಆದರೆ, ಟೋಟಲ್ ಕಲೆಕ್ಷನ್ ಬಗ್ಗೆ ಕುಮಾರ್ ಗೋವಿಂದ್ ಸಂದರ್ಶನಗಳಲ್ಲಿ ರಿವೀಲ್ ಮಾಡಿಲ್ಲ.

'ಶ್' ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದು. ಅದರಲ್ಲೂ ಉಪೇಂದ್ರ ನಿರ್ದೇಶಿಸಿದ ವಿಭಿನ್ನ ಜಾನರ್‌ನ ಸಿನಿಮಾಗಳಲ್ಲೊಂದು. ಇಂದಿಗೂ ಉಪೇಂದ್ರ ನಿರ್ದೇಶಿಸಿದ ಸಿನಿಮಾಗಳ ಬಗ್ಗೆ ಸಿನಿ ಪ್ರಿಯರು ಪಿಎಚ್‌ಡಿಯನ್ನೇ ಮಾಡಿದ್ದಾರೆ. ಅದರಲ್ಲಿ 'ಶ್‌' ಸಿನಿಮಾ ಕೂಡ ಇದೆ. ಇಷ್ಟು ಪರ್ಫೆಕ್ಟ್ ಆಗಿ ಇಂತಹ ಹಾರರ್ ಸಿನಿಮಾವನ್ನು ಈಗಲೂ ನಿರ್ಮಾಣ ಮಾಡುವುದಕ್ಕೆ ಪರದಾಡುತ್ತಾರೆ. ಆದರೆ, ಇಷ್ಟೊಂದು ಸಕ್ಸಸ್ ಕಂಡಿರುವ ಸಿನಿಮಾ ಈ ಸೀಕ್ವೆಲ್ ಜಮಾನದಲ್ಲಿ ಸದ್ದು ಮಾಡುತ್ತಿಲ್ಲ ಅನ್ನೋದೇ ಅಚ್ಚರಿ. ಕುಮಾರ್ ಗೋವಿಂದ್ ಈ ಹಿಂದೆ 'ಶ್ 2' ಕೈ ಹಾಕಿದ್ದರೂ ಮತ್ತೆ ಅದು ಸದ್ದು ಮಾಡಲಿಲ್ಲ.

More from Filmibeat

English summary
Upendra and Kumar Govind movie Shhh Box Office Collection Report in 1993;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X