Vamana Vs Vidyapati:ವಾಮನಾ-ವಿದ್ಯಾಪತಿ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗೆದ್ದವರು ಯಾರು?

ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಎರಡು ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಧನ್ವೀರ್ ನಟಿಸಿರುವ 'ವಾಮನ' ಸಿನಿಮಾ. ಇನ್ನೊಂದು ನಾಗಭೂಷಣ, ಮಲೈಕಾ ವಸುಪಾಲ್, ಡಾಲಿ ಧನಂಜಯ್ ನಟನೆಯ 'ವಿದ್ಯಾಪತಿ'. ಈ ಎರಡು ಸಿನಿಮಾಗಳು ಭರ್ಜರಿ ಪ್ರಚಾರ ಮಾಡಿ ಅಖಾಡಕ್ಕೆ ಇಳಿದಿವೆ. ಎರಡೂ ಸಿನಿಮಾಗಳೂ ಸ್ಟಾರ್ ನಟರ ಬೆಂಬಲದೊಂದಿಗೆ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದವು.

'ವಾಮನ' ಧನ್ವೀರ್ ನಟಿಸುತ್ತಿರುವ ನಾಲ್ಕನೇ ಸಿನಿಮಾ. ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ನೀಡಿದ್ದರು. ತಮ್ಮ ಆತ್ಮೀಯನ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ವಾಮನ ಸಿನಿಮಾಗೆ ಸ್ಟಾರ್ ಬಲ ಬಂದಂತೆ ಆಗಿತ್ತು. ಹಾಗೇ ನಾಗಭೂಷಣ್ ನಟಿಸಿರುವ 'ವಿದ್ಯಾಪತಿ'ಗೂ ಡಾಲಿ ಧನಂಜಯ್ ಬಲವಿದೆ. ಈ ಸಿನಿಮಾಗೇ ಡಾಲಿನೇ ನಿರ್ಮಾಪಕ. ಅಲ್ಲದೇ ಒಂದು ವಿಶೇಷ ಪಾತ್ರದಲ್ಲೂ ನಟಿಸಿದ್ದಾರೆ.

Vamana Vs Vidyapati who own the Day 1 box office collection in Karnataka

ಈ ವಾರ ಒಂದರ ಹಿಂದೊಂದು ರಜೆಗಳು ಇರುವುದರಿಂದ ನಿನ್ನೆ (ಏಪ್ರಿಲ್ 10) ರಂದು 'ವಾಮನ' ಹಾಗೂ 'ವಿದ್ಯಾಪತಿ' ಎರಡೂ ಸಿನಿಮಾಗಳು ರಿವೀಲ್ ಆಗಿದ್ದವು. ಹಾಗಿದ್ದರೆ, ಮೊದಲ ಬಾಕ್ಸಾಫೀಸ್‌ನಲ್ಲಿ ಈ ಎರಡು ಸಿನಿಮಾಗಳ ಪೈಕಿ ಗೆದ್ದಿದ್ದು ಯಾವುದು? ಯಾವ ಸಿನಿಮಾ ಕಡೆಗೆ ಪ್ರೇಕ್ಷಕರನ ಒಲವು ಇತ್ತು. ಆಕ್ಷನ್ ಮಾಸ್ ಸಿನಿಮಾನಾ? ಆಕ್ಷನ್ ಕಾಮಿಡಿ ಸಿನಿಮಾ? ಪ್ರೇಕ್ಷಕರ ಆಯ್ಕೆ ಯಾವುದು? ತಿಳಿಯಲು ಮುಂದೆ ಓದಿ.

'ವಾಮನ' ಮೊದಲ ದಿನದ ಕಲೆಕ್ಷನ್?

ಧನ್ವೀರ್ ನಟಿಸಿರುವ ನಾಲ್ಕನೇ ಸಿನಿಮಾ ಮಾಸ್ ಎಂಟರ್‌ಟೈನರ್ ಸಿನಿಮಾ. ಜೊತೆ ಸೆಂಟಿಮೆಂಟ್ ಎಲಿಮೆಂಟ್‌ಗಳನ್ನು ಸೇರಿಸಲಾಗಿದೆ. ದರ್ಶನ್ ಸಿನಿಮಾ ನೋಡಿ ಧನ್ವೀರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಸಿನಿಪ್ರಿಯರ ಜೊತೆಗೆ ದರ್ಶನ್ ಅಭಿಮಾನಿಗಳು ಕೂಡ ಥಿಯೇಟರ್‌ಗೆ ನುಗ್ಗಿ ಸಿನಿಮಾಗಳನ್ನು ನೋಡಿದ್ದಾರೆ. ಬಹುತೇಕ ಕಡೆ ಹಲವು ಶೋಗಳು ಹೌಸ್‌ಫುಲ್ ಆಗಿದ್ದವು. ಆದರೆ, ಸ್ಯಾಕ್ನಿಲ್ಕ್ ಹಾಗೂ ಕರ್ನಾಟಕದ ವಿತರಕರ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಸ್ಯಾಕ್ನಿಲ್ಕ್ ಪ್ರಕಾರ, ವಾಮನ ಮೊದಲ ದಿನ 63 ಲಕ್ಷ ರೂ. (Net) ಕಲೆಕ್ಷನ್ ಮಾಡಿದೆ. ಆದರೆ, ಕರ್ನಾಟಕದ ವಿತರಕರು 86 ಲಕ್ಷ ರೂಪಾಯಿ (Net) ಎನ್ನುತ್ತಿದ್ದಾರೆ.

Vamana Vs Vidyapati who own the Day 1 box office collection in Karnataka

'ವಾಮನ' ಎಲ್ಲೆಲ್ಲಿ ಹೇಗಿದೆ ಕಲೆಕ್ಷನ್?

ಧನ್ವೀರ್ ಸಿನಿಮಾ ವಾಮನಗೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ತುಮಕೂರು ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿತರಕರ ಪ್ರಕಾರ ಬೆಂಗಳೂರಿನ ನರ್ತಕಿಯಲ್ಲಿ ₹2.60 ಲಕ್ಷ, ಗೋವರ್ಧನ್‌ನಲ್ಲಿ ₹66 ಸಾವಿರ, ಭಾರತಿ ಚಿತ್ರಮಂದಿರ ₹71 ಸಾವಿರ, ಸಿದ್ದೇಶ್ವರ 1.10 ಲಕ್ಷ ರೂಪಾಯಿ, ಪ್ರಸನ್ನ 1.80 ಲಕ್ಷ ರೂಪಾಯಿ, ಮಂಡ್ಯ ಗುರುಶ್ರೀ 50 ಸಾವಿರ, ಹಾಸನದ ಚಿತ್ರಮಂದಿರಲ್ಲಿ ₹51 ಸಾವಿರ, ತುಮಕೂರು ಗಾಯತ್ರಿ ₹96 ಸಾವಿರ, ದಾವಣಗೆರೆ ₹1.17 ಲಕ್ಷ ರೂಪಾಯಿಗಳನ್ನು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

'ವಿದ್ಯಾಪತಿ' ಮೊದಲ ದಿನದ ಕಲೆಕ್ಷನ್?

ನಾಗಭೂಷಣ, ಮಲೈಕಾ ವಸುಪಾಲ್ ಹಾಗೂ ನಾಗಭೂಷಣ್ ನಟಿಸಿದ 'ವಿದ್ಯಾಪತಿ' ಕಾಮಿಡಿ ಆಕ್ಷನ್ ಸಿನಿಮಾ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಂತ ಅದು ಬಾಕ್ಸಾಫೀಸ್‌ ನಂಬರ್‌ಗಳಾಗಿ ಪರಿವರ್ತನೆ ಆಗಿಲ್ಲ. ಹೀಗಾಗಿ ಕಲೆಕ್ಷನ್ ಸಿಕ್ಕಾಪಟ್ಟೆ ಕಡಿಮೆಯಿದೆ. ಸ್ಯಾಕ್ನಿಲ್ಕ್ ಪ್ರಕಾರ, ಮೊದಲ ದಿನ ಈ ಸಿನಿಮಾ ಗಳಿಸಿದ್ದು, ಕೇವಲ 13 ಲಕ್ಷ ರೂಪಾಯಿ (Net). ಆದರೆ, ಕರ್ನಾಟಕದ ವಿತರಕರು ಈ ಸಿನಿಮಾದ 23 ಲಕ್ಷಕ್ಕೂ ಅಧಿಕ ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ.

ಇಬ್ಬರಲ್ಲಿ ಗೆದ್ದವರು ಯಾರು?

ಧನ್ವೀರ ನಟಿಸಿದ 'ವಾಮನ' ಸಿನಿಮಾದ ಕಲೆಕ್ಷನ್ ಮೊದಲ ಉತ್ತಮವಾಗಿದ್ದರೂ, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಫಸ್ಟ್ ಡೇ ದರ್ಶನ್ ಅಭಿಮಾನಿಗಳು ಪ್ರಭಾವ ಹೆಚ್ಚಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇತ್ತ 'ವಾಮನ'ಗೆ ಹೋಲಿಸಿದರೆ, 'ವಿದ್ಯಾಪತಿ'ಗೆ ಪ್ರತಿಕ್ರಿಯೆ ಚೆನ್ನಾಗಿದೆ. ಆದರೆ, ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಉತ್ತಮವಾಗಿಲ್ಲ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾ ವೀಕೆಂಡ್‌ಗಳಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಬಹುದು ಎನ್ನುತ್ತಿದ್ದಾರೆ.

More from Filmibeat

English summary
Vamana Vs Vidyapati who own the Day 1 box office collection in Karnataka;
Read more about: box office sandalwood karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X