Vamana Vs Vidyapati Day 4: 'ವಾಮನ'-'ವಿದ್ಯಾಪತಿ' ಇಬ್ಬರಲ್ಲಿ ವೀಕೆಂಡ್ ಬಾಕ್ಸಾಫೀಸ್ ಗೆದ್ದವರ್‍ಯಾರು?

ಕಳೆದ ವಾರ ಬ್ಯಾಕ್ ಟು ಬ್ಯಾಕ್ ರಜೆಗಳು ಇದ್ದವು. ಹೀಗಾಗಿ ಪರ ಭಾಷೆಯ ಬಿಗ್ ಬಜೆಟ್ ಚಿತ್ರಗಳ ಜೊತೆಗೆ ಕನ್ನಡದ ಎರಡು ಸ್ಮಾಲ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿದ್ದವು. ಧನ್ವೀರ್ ನಟಿಸಿರುವ 'ವಾಮನ' ಒಂದಾದರೆ, ಇನ್ನೊಂದು ನಾಗಭೂಷಣ್, ಮಲೈಕಾ ವಸುಪಾಲ್ ಹಾಗೂ ಡಾಲಿ ಧನಂಜಯ್ ನಟಿಸಿರುವ 'ವಿದ್ಯಾಪತಿ'. ಎರಡೂ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ದವು.

ಡಾಲಿ ಧನಂಜಯ್ ನಿರ್ಮಿಸಿರುವ 'ವಿದ್ಯಾಪತಿ' ಸಿನಿಮಾಗೆ ಗೆಳೆಯ ನಾಗಭೂಷಣ್ ಅವರೇ ಹೀರೋ. ಇವರೊಂದಿಗೆ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದ ಉಪಾಧ್ಯಕ್ಷ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿ. ಇನ್ನು ಡಾಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಧನ್ವೀರ್ ನಟಿಸಿರುವ ನಾಲ್ಕನೇ ಸಿನಿಮಾ 'ವಾಮನ'.

Vamana Vs Vidyapati who won the Day 4 box office collection in Karnataka

ಗುರುವಾರ (ಏಪ್ರಿಲ್ 10) ರಂದು ಈ ಎರಡು ಸಿನಿಮಾಗಳು ತೆರೆಕಂಡಿದ್ದವು. ಒಂದರ ಹಿಂದೊಂದು ರಜೆಗಳು ಇರುವುದರಿಂದ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಹಾಗಿದ್ದರೆ, ಕಳೆದ ನಾಲ್ಕು ದಿನಗಳಲ್ಲಿ ಈ ಎರಡು ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಯಶಸ್ವಿ ಆಯಿತೇ? ಈ ಎರಡೂ ಸಿನಿಮಾಗಳ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಅನ್ನೋದನ್ನು ನೋಡೋಣ.

'ವಾಮನ' 4ನೇ ದಿನದ ಕಲೆಕ್ಷನ್ ಎಷ್ಟು?

ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಸಂಪೂರ್ಣ ಬೆಂಬಲ ನೀಡಿದ ಸಿನಿಮಾ 'ವಾಮನ'. ಧನ್ವೀರ್ ನಾಯಕನಾಗಿ ನಟಿಸಿರುವ ಈ ಸಿನಿಮಾಗೆ ಮೊದಲ ದಿನ ತಕ್ಕ ಮಟ್ಟಿಗೆ ಕಲೆಕ್ಷನ್ ಆಗಿತ್ತು. ಆದರೆ, ನಂತರ ದಿನವೂ ಹಾಗೇ ಕಲೆಕ್ಷನ್ ಆಗಿದೆಯೇ? ಅನ್ನೋದೇ ಪ್ರಶ್ನೆ. ನಾಲ್ಕನೇ ದಿನ ಅಂದರೆ, ಭಾನುವಾರ (ಏಪ್ರಿಲ್ 13) 'ವಾಮನ' 40 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಆದರೆ, ಈ ಸಿನಿಮಾ ಇನ್ನೂ ದೊಡ್ಡದಾಗಿ ಕಲೆಕ್ಷನ್ ಮಾಡಬೇಕಿತ್ತು ಎಂಬ ನಿರೀಕ್ಷೆಯಿದೆ.

'ವಾಮನ' 4 ದಿನಗಳ ಕಲೆಕ್ಷನ್ ಎಷ್ಟು?

'ವಾಮನ' ಸಿನಿಮಾ ನಾಲ್ಕು ದಿನಗಳ ಕಲೆಕ್ಷನ್ ಒಂದೂವರೆ ಕೋಟಿ ರೂಪಾಯಿ ದಾಟಿದೆ. ಆದರೆ, ಬ್ಯಾಕ್‌ ಟು ಬ್ಯಾಕ್‌ ರಜೆಗಳ ಹೊರತಾಗಿಯೂ 'ವಾಮನ' ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಹಾಗಿದ್ದರೆ, ಸ್ಯಾಕ್ನಿಲ್ಕ್ ವರದಿ ಮಾಡಿರುವ ನಾಲ್ಕು ದಿನಗಳ ಬಾಕ್ಸಾಫೀಸ್‌ ಕಲೆಕ್ಷನ್ ಹೇಗಿದೆ ಅಂತ ನೋಡುವುದಾರೇ.

Vamana Vs Vidyapati who won the Day 4 box office collection in Karnataka

ಮೊದಲ ದಿನ ₹56 ಲಕ್ಷ
2ನೇ ದಿನ ₹37 ಲಕ್ಷ
3ನೇ ದಿನ ₹39 ಲಕ್ಷ
4ನೇ ದಿನ ₹40 ಲಕ್ಷ
ಒಟ್ಟು ₹1.72 ಕೋಟಿ

'ವಿದ್ಯಾಪತಿ' 4ನೇ ದಿನದ ಕಲೆಕ್ಷನ್ ಎಷ್ಟು?

ನಾಗಭೂಷಣ್, ಮಲೈಕಾ ವಸುಪಾಲ್ ಹಾಗೂ ಡಾಲಿ ಧನಂಜಯ್ ನಟನೆಯ 'ವಿದ್ಯಾಪತಿ' ಸಿನಿಮಾ 4ನೇ ದಿನ ಸಾಧಾರಣ ಕಲೆಕ್ಷನ್ ಮಾಡಿದೆ. ಟ್ರೇಡಿಂಗ್ ವೆಬ್‌ ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, 'ವಿದ್ಯಾಪತಿ' ಸಿನಿಮಾ ಭಾನುವಾರ ಅಂದರೆ, ನಿನ್ನೆ (ಏಪ್ರಿಲ್ 13) ಕೇವಲ 13 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಿದೆ. ವೀಕೆಂಡ್‌ನಲ್ಲೂ ಕಾಮಿಡಿ ಆಕ್ಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿಲ್ಲ. ಆದರೆ, ಚಿತ್ರತಂಡ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

'ವಿದ್ಯಾಪತಿ' 4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಮೊದಲ ದಿನದಿಂದಲೇ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಮಾಡಿಲ್ಲ. ರಜೆಯ ಮೂಡಿನಲ್ಲಿರುವ ಪ್ರೇಕ್ಷಕರನ್ನು ಈ ಸಿನಿಮಾ ಥಿಯೇಟರ್‌ಗೆ ಸೆಳೆದಿಲ್ಲ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ಮೊದಲ ದಿನ ₹11 ಲಕ್ಷ, 2ನೇ ದಿನ ₹8ಲಕ್ಷ, 3ನೇ ದಿನ ₹10 ಲಕ್ಷ ಹಾಗೂ 4ನೇ ದಿನ ₹13 ಲಕ್ಷ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: sandalwood karnataka box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X