Vamana Vs Vidyapati Day 6: ಒಂದು ವಾರದಲ್ಲಿ ವಾಮನ-ವಿದ್ಯಾಪತಿ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಕನ್ನಡ ಚಿತ್ರರಂಗ ಕಳೆದ ಎರಡೂವರೆ ಮೂರು ವರ್ಷಗಳಿಂದ ನಷ್ಟದಲ್ಲಿ ಸಾಗುತ್ತಿದೆ. ಗ್ಯಾಪ್‌ನಲ್ಲಿ ಆಗಾಗ ಒಂದೆರಡು ಸಿನಿಮಾಗಳು ಗೆದ್ದಿದ್ದು ಬಿಟ್ಟರೆ, ಶೇ. 90ರಷ್ಟು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದೇ ಹೆಚ್ಚು. ಗೆಲ್ಲಬಹುದು ಎಂದು ನಿರೀಕ್ಷೆ ಮಾಡಿದ್ದ ಸಿನಿಮಾಗಳು ಹೀನಾಯವಾಗಿ ಸೋತಿದೆ. ಹೊಸಬರ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿಲ್ಲ.
ಆದರೆ, ಕಳೆದ ವಾರ ರಿಲೀಸ್ ಆಗಿದ್ದ ಎರಡು ಕನ್ನಡ ಸಿನಿಮಾಗಳು ಕೊಂಚ ಮಟ್ಟಿಗೆ ಸಮಾಧಾನ ತಂದಿವೆ. ಧನ್ವೀರ್ ನಟಿಸಿದ 'ವಾಮನ' ಹಾಗೂ ನಾಗಭೂಷಣ್ ನಟನೆಯ 'ವಿದ್ಯಾಪತಿ'. ಈ ಎರಡು ಸಿನಿಮಾಗಳಲ್ಲಿ 'ವಾಮನ' ದೊಡ್ಡ ಮಟ್ಟದಲ್ಲಿ ಅಲ್ಲದೇ ಹೋದರೂ, ಐಪಿಎಲ್ ಸಮಯದಲ್ಲಿ ಅಖಾಡಕ್ಕೆ ಇಳಿದು ಸಾಧಾರಾಣ ಯಶಸ್ಸು ಕಂಡಿದೆ ಎನ್ನಬಹುದು.

ಇನ್ನೊಂದಿಷ್ಟು ದಿನ ಕನ್ನಡದ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗುವುದಿಲ್ಲ. ಅಲ್ಲಿವರೆಗೂ ಉದಯೋನ್ಮುಖ ಕಲಾವಿದರ ಸಿನಿಮಾಗಳೇ ಗಟ್ಟಿ. ಒಳ್ಳೆಯ ಕಥೆ, ಮೇಕಿಂಗ್‌ನಿಂದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಸಾಧ್ಯವಿದೆ. ಆದರೆ, ಅದು ಸದ್ಯಕ್ಕೆ ಆಗುತ್ತಿಲ್ಲ. ಹಾಗಿದ್ದರೆ, 'ವಾಮನ' ಹಾಗೂ 'ವಿದ್ಯಾಪತಿ' ಈ ಎರಡು ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ತಿಳಿಯಲು ಮುಂದೆ ಓದಿ.
'ವಾಮನ' 6 ದಿನಗಳ ಕಲೆಕ್ಷನ್ ಎಷ್ಟು?
ಧನ್ವೀರ್ ಸಿನಿಮಾ 'ವಾಮನ' ಏಪ್ರಿಲ್ 10ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಸಿನಿಮಾಗೆ ಬೆಂಬಲ ಸೂಚಿಸಿದ್ದರು. ಇದು 'ವಾಮನ' ಸಿನಿಮಾಗೆ ವರದಾನವಾದಂತೆ ಇದೆ. ಟ್ರೇಡಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ 'ವಾಮನ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ವರದಿ ಮಾಡಿದೆ. ಈ ವರದಿ ಪ್ರಕಾರ, ಮೊದಲ ಆರು ದಿನಗಳಲ್ಲಿ ವಾಮನ 2.13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ.

ಮೊದಲ ದಿನ ₹56 ಲಕ್ಷ
2ನೇ ದಿನ ₹37 ಲಕ್ಷ
3ನೇ ದಿನ ₹39 ಲಕ್ಷ
4ನೇ ದಿನ ₹40 ಲಕ್ಷ
5ನೇ ದಿನ ₹22 ಲಕ್ಷ
6ನೇ ದಿನ ₹19 ಲಕ್ಷ
ಒಟ್ಟು ₹2.13 ಕೋಟಿ
ವಿತರಕರ ವಲಯದ ಲೆಕ್ಕವೇನು?
ಇನ್ನು ವಿತರಕರ ವಲಯದಲ್ಲಿ 'ವಾಮನ' ಸಿನಿಮಾದ ಲೆಕ್ಕ ಬೇರೆನೇ ಇದೆ. ಸ್ಯಾಕ್ನಿಲ್ಕ್‌ಗೂ ವಿತರಕರ ವಲಯದ ಲೆಕ್ಕಕ್ಕೂ ಕೊಂಚ ಮಟ್ಟಿಗೆ ವ್ಯತ್ಯಾಸವಿದೆ. ಹೆಚ್ಚು ಕಡಿಮೆ 60 ಲಕ್ಷ ರೂಪಾಯಿಗೂ ಅಧಿಕ ಅಂತರ ಕಾಣಿಸುತ್ತಿದೆ. ಮೊದಲ ಆರು ದಿನಗಳ ಕಲೆಕ್ಷನ್ ಸಮಾಧಾನಕರ ಎಂದಿದೆ.
ಮೊದಲ ದಿನ ₹65 ಲಕ್ಷ
2ನೇ ದಿನ ₹45 ಲಕ್ಷ
3ನೇ ದಿನ ₹55 ಲಕ್ಷ
4ನೇ ದಿನ ₹55 ಲಕ್ಷ
5ನೇ ದಿನ ₹35 ಲಕ್ಷ
6ನೇ ದಿನ ₹24 ಲಕ್ಷ
ಒಟ್ಟು ₹2.79 ಕೋಟಿ
'ವಿದ್ಯಾಪತಿ' 6 ದಿನಗಳ ಕಲೆಕ್ಷನ್ ಏನು?
'ವಾಮನ' ಸಿನಿಮಾ ಜೊತೆ ರಿಲೀಸ್ ಆಗಿದ್ದ ಮತ್ತೊಂದು ಸಿನಿಮಾ 'ವಿದ್ಯಾಪತಿ'. ನಾಗಭೂಷಣ್, ಮಲೈಕಾ ವಸುಪಾಲ್ ಹಾಗೂ ಗರುಡ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಾಲಿ ಧನಂಜಯ್ ನಿರ್ಮಾಣದ ಜೊತೆಗೆ ಅತಿಥಿ ಪಾತ್ರದಲ್ಲಿಯೂ ಮಿಂಚಿದ್ದಾರೆ. ಹೀಗಾಗಿದ್ದರೂ ಈ ಸಿನಿಮಾಗೆ ಅತೀ ಸಾಧಾರಣ ಓಪನಿಂಗ್ ಸಿಕ್ಕಿದೆ. ಅಸಲಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಸ್ಯಾಕ್ನಿಲ್ಕ್ ಪ್ರಕಾರ 'ವಿದ್ಯಾಪತಿ' ಕಳೆದ ಆರು ದಿನಗಳಲ್ಲಿ 67 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.
ಈ ವಾರವೂ 'ಯುದ್ಧಕಾಂಡ'
ಈ ವಾರ ಮತ್ತೊಂದು ಸಿನಿಮಾ ನಿರೀಕ್ಷೆಯನ್ನು ಹುಟ್ಟಾಕಿದೆ. ಅದುವೇ ಅಜಯ್ ರಾವ್ ನಟನೆಯ 'ಯುದ್ಧಕಾಂಡ'. ಅತ್ಯಾಚಾರದಂತಹ ಗಂಭೀರ ಪ್ರಕರಣವನ್ನು ಇಟ್ಟುಕೊಂಡು 'ಯುದ್ಧಕಾಂಡ' ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಅಜಯ್ ರಾವ್ ಈ ಸಿನಿಮಾದಲ್ಲಿ ವಕೀಲರಾಗಿ ಕಾಣಿಸಿಕೊಂಡಿದ್ದು, ಇವರ ಎದುರು ಪ್ರಕಾಶ್ ಬೆಳವಾಡಿ ಅಂತಹ ಹಿರಿಯ ಕಲಾವಿದ ನಟಿಸಿದ್ದಾರೆ. ಇವರಿಬ್ಬರ ಜುಗಲ್‌ಬಂಧಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ ಎನ್ನುವ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











