Graamaayana Box Office Day 3: ಮೊದಲ 3 ದಿನಗಳಲ್ಲಿ 'ಗ್ರಾಮಾಯಣ' ಕಲೆಕ್ಷನ್ ಎಷ್ಟಾಯ್ತು? ಭಾನುವಾರ ಗಳಿಸಿದ್ದೆಷ್ಟು?

ಹಂಗೂ-ಹಿಂಗೂ ಒಂದಿಷ್ಟು ಅಡೆ-ತಡೆಗಳನ್ನು ದಾಟಿ ತೆರೆಗೆ ಬಂದಿದ್ದ 'ಗ್ರಾಮಾಯಾಣ' 4ನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಜುಲೈ 6) 'ಗ್ರಾಮಾಯಣ' ಅಸಲಿ ಪರೀಕ್ಷೆಗೆ ಮುಂದಾಗಿದೆ. ಪ್ರತಿ ಹೊಸ ಸಿನಿಮಾಗಳು ಎದುರಿಸುವಂತೆ 'ಮಂಡೇ ಟೆಸ್ಟ್' ಎದುರಿಸುತ್ತಿದೆ. ಲಹರಿ ಸಂಸ್ಥೆ ನಿರ್ಮಾಣ ಮಾಡಿರುವ ಈ ಸಿನಿಮಾ ಕಳೆದ ಮೂರು ದಿನಗಳಲ್ಲಿ ಗಳಿಸಿದ ಕಲೆಕ್ಷನ್‌ನ ಅಂಕಿ-ಅಂಶಗಳ ಬಗ್ಗೆ ಚರ್ಚೆಯಾಗುತ್ತಿವೆ.

ವಿನಯ್ ರಾಜ್‌ಕುಮಾರ್, ಮೇಘಾ ಶೆಟ್ಟಿ, ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಗ್ರಾಮಾಯಣ' ಜುಲೈ 3 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹುಟ್ಟಿಕೊಂಡಿದೆ. ಅದರಲ್ಲೂ ಲಹರಿ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದ್ದರಿಂದ ಕಲೆಕ್ಷನ್ ಅಂಕಿ-ಅಂಶಗಳ ಬಗ್ಗೆ ಚರ್ಚೆ ಶುರುವಾಗಿದೆ. ಹಾಗಿದ್ದರೆ, ಮೊದಲ ಮೂರು ದಿನಗಳ ಕಲೆಕ್ಷನ್ ರಿಪೋರ್ಟ್ ಏನಿದೆ? ವೀಕೆಂಡ್‌ನಲ್ಲಿ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

Vinay Rajkumar Megha Shetty Loose Mada Yogi movie Graamaayana first 3 days box office collection report

'ಗ್ರಾಮಾಯಣ' ಭಾನುವಾರದ ಕಲೆಕ್ಷನ್

ಲಹರಿ ಸಂಸ್ಥೆ ನಿರ್ಮಿಸಿರುವ 'ಗ್ರಾಮಾಯಣ' ಟೀಸರ್, ಹಾಡುಗಳಿಂದ ಸದ್ದು ಮಾಡಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಹಿಟ್ ಸಿನಿಮಾಗಳ ಸಾಲಿಗೆ ಸೇರಬಹುದೆಂಬ ನಿರೀಕ್ಷೆಯಿದೆ. ಹೀಗಾಗಿ ಸ್ಯಾಂಡಲ್‌ವುಡ್‌ ಮಂದಿ ಮೊದಲ ಮೂರು ದಿನಗಳ ಬಾಕ್ಸಾಫೀಸ್ ಲೆಕ್ಕಾಚಾರ ಹಾಕುತ್ತಿದ್ದಾರೆ. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ವರದಿ ಮಾಡುವ Sacnilk ಪ್ರಕಾರ ಭಾನುವಾರ ಮೊದಲೆರಡು ದಿನಗಳಿಗಿಂತ ಹೆಚ್ಚು ಕಲೆಕ್ಷನ್ ಆಗಿದೆ. ಅಂದರೆ, 3ನೇ ದಿನ 40 ಲಕ್ಷ ರೂಪಾಯಿ (Net) ಗಳಿಕೆ ಆಗಿದೆ ಎಂದು ಹೇಳಲಾಗಿದೆ.


3 ದಿನಗಳಲ್ಲಿ ಕೋಟಿ ದಾಟಿತೇ?

ಯಾವುದೇ ಹೊಸ ಸಿನಿಮಾ ಆಗಿದ್ದರೂ ಮೊದಲ ಮೂರು ದಿನಗಳ ಕಲೆಕ್ಷನ್ ತುಂಬಾನೇ ಮುಖ್ಯ. 'ಗ್ರಾಮಾಯಣ'ಗೂ ಮೊದಲ ಮೂರು ದಿನಗಳ ಕಲೆಕ್ಷನ್ ಅಷ್ಟೇ ಅನಿವಾರ್ಯವಾಗಿತ್ತು. Sacnilk ವರದಿ ಮಾಡಿದಂತೆ ಈ ಸಿನಿಮಾ ಮೊದಲ ಮೂರು ದಿನಗಳಲ್ಲಿ ಸುಮಾರು 1 ಕೋಟಿ 8 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನಗಳ ಕಲೆಕ್ಷನ್ ರಿಪೋರ್ಟ್ ಹೀಗಿದೆ.

ಗ್ರಾಮಾಯಣ ಬಾಕ್ಸಾಫೀಸ್ ಕಲೆಕ್ಷನ್

1ನೇ ದಿನ ₹32 ಲಕ್ಷ (Net)
2ನೇ ದಿನ ₹32 ಲಕ್ಷ (Net)
3ನೇ ದಿನ ₹44 ಲಕ್ಷ (Net)
ಒಟ್ಟು ₹1.08 ಕೋಟಿ (Net)
₹1.20 ಕೋಟಿ (Gross)

Vinay Rajkumar Megha Shetty Loose Mada Yogi movie Graamaayana first 3 days box office collection report

ಪಂಡಿತರ ಲೆಕ್ಕಾಚಾರವೇನು?

'ಗ್ರಾಮಾಯಣ' ಮೊದಲ ಮೂರು ದಿನದ ಕಲೆಕ್ಷನ್ ಸ್ಯಾಂಡಲ್‌ವುಡ್ ಮಂದಿ ಕೊಂಚ ಮಟ್ಟಿಗೆ ಸಮಾಧಾನ ತಂದಿದೆ. ಅದರಲ್ಲೂ ಭಾನುವಾರದ ಕಲೆಕ್ಷನ್ ಭರವಸೆ ಮೂಡಿಸಿದೆ. ಒಂದು ವಾರ ಕಳೆಯುವುದರೊಳಗೆ ಕಲೆಕ್ಷನ್ ಏನಾದರೂ 2 ಕೋಟಿಗೂ ಅಧಿಕ ದಾಟಿದರೆ, ನಿರ್ಮಾಪಕರು ಎರಡನೇ ವಾರದಿಂದ ಲಾಭವನ್ನು ನೋಡಬಹುದು ಎಂಬುವುದು ಸ್ಯಾಂಡಲ್‌ವುಡ್ ಮಂದಿಯ ಲೆಕ್ಕಾಚಾರ.

ಮಂಡೆ ಟೆಸ್ಟ್ ಪಾಸಾಗಬೇಕು

ಮೊದಲ ಮೂರು ದಿನ ಹೇಗೋ ಕಲೆಕ್ಷನ್ ಕೋಟಿ ದಾಟಿದೆ. ಭಾನುವಾರ ಕೂಡ ಹೆಚ್ಚು ಕಡಿಮೆ ₹50 ಲಕ್ಷದ ಹತ್ತಿರ ಕಲೆಕ್ಷನ್ ಆಗಿದೆ. ಹೀಗಾಗಿ ಸೋಮವಾರದ ಗಳಿಕೆ ಮೇಲೆ ಸಿನಿಮಾ ಭವಿಷ್ಯ ಲೆಕ್ಕಾಚಾರ ಹಾಕಲಾಗುತ್ತಿದೆ. ಒಂದು ವೇಳೆ 'ಗ್ರಾಮಾಯಣ' ಸಿನಿಮಾ ಸೋಮವಾರವೂ 30 ಲಕ್ಷ ರೂಪಾಯಿ ಮೇಲೆ ಕಲೆಕ್ಷನ್ ಆದರೆ, ಮೊದಲ ವಾರ 2 ಕೋಟಿ ರೂಪಾಯಿ ಕಲೆಕ್ಷನ್‌ಗೆ ಮೋಸವಿಲ್ಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Vinay Rajkumar, Megha Shetty, Loose Mada Yogi movie Graamaayana first 3 days box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X