Balaramana Dinagalu Box Office Day 3: 'ಬಲರಾಮನ ದಿನಗಳು' 3 ದಿನಗಳಲ್ಲಿ ಗಳಿಸಿದ್ದೆಷ್ಟು? ಒಂದೊಂದ್ಕಡೆ ಒಂದೊಂದು ಲೆಕ್ಕ!

ಐಪಿಎಲ್ ಮುಗೀತು.. ದೊಡ್ಡ ಇವೆಂಟ್ ಯಾವುದೂ ಇಲ್ಲ. ಈಗಲಾದರೂ ಕನ್ನಡ ಚಿತ್ರರಂಗ ಟ್ರ್ಯಾಕ್‌ ಬರಬಹುದೆಂಬ ನಿರೀಕ್ಷೆಯಿತ್ತು. ಆದರೆ, ಆ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ವರ್ಷ ಸ್ಯಾಂಡಲ್‌ವುಡ್‌ಗೆ ಮೊದಲ ಗೆಲುವು ತಂದುಕೊಟ್ಟಿದ್ದ ವಿನೋದ್ ಪ್ರಭಾಕರ್ ಈ ಬಾರಿ ಕೂಡ ಅದೇ ರೀತಿ ತಂದುಕೊಡಬಹುದು ಎಂಬ ನಿರೀಕ್ಷೆಯಿದೆ. 2025ರಲ್ಲಿ 'ಮಾದೇವ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು. ಈಗ ಅದೇ ಸಮಯಕ್ಕೆ 'ಬಲರಾಮನ ದಿನಗಳು' ರಿಲೀಸ್ ಆಗಿದೆ.

'ಬಲರಾಮನ ದಿನಗಳು' 2026ರ ಸೆಕೆಂಡ್‌ ಹಾಫ್‌ನ ಮತ್ತೊಂದು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಅದರಲ್ಲೂ 'ಆ ದಿನಗಳು' ಶೈಲಿಯಲ್ಲಿ ಮತ್ತೆ ಕೆಎಂ ಚೈತನ್ಯ ನಿರ್ದೇಶನ ಮಾಡಿದ್ದರಿಂದ ಸಿನಿಮಾ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟು ಇವೆ. ವಿನೋದ್ ಪ್ರಭಾಕರ್ ಜೊತೆ ಪ್ರಿಯಾ ಆನಂದ್, ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ನಟನೆಯ ಈ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಕಣ್ಣು ನೆಟ್ಟಿದೆ.

Vinod Prabhakar Priya Anand movie Balaramana Dinagalu day 3 Box Office collection report

ಶುಕ್ರವಾರವೂ ಸೇರಿ ಬ್ಯಾಕ್ ಟು ಬ್ಯಾಕ್ ರಜೆಗಳು ಇತ್ತು. ಇದು 'ಬಲರಾಮನ ದಿನಗಳು' ಸಿನಿಮಾಗೆ ಲಾಭ ತಂದುಕೊಡಬಹುದೆಂಬ ಲೆಕ್ಕಾಚಾರವಿತ್ತು. ಹಾಗಿದ್ದರೆ, ವಿನೋದ್ ಪ್ರಭಾಕರ್-ಕೆಎಂ ಚೈತನ್ಯ ಕಾಂಬಿನೇಷನ್ ವರ್ಕ್‌ ಆಯ್ತಾ? 3ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಮೊದಲ ಮೂರು ದಿನಗಳ ಕಲೆಕ್ಷನ್ ಎಷ್ಟಾಗಿದೆ? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.

3ನೇ ದಿನ 'ಬಲರಾಮನ ದಿನಗಳು' ಕಲೆಕ್ಷನ್

'ಮಾದೇವ' ಯಶಸ್ಸಿನಲ್ಲಿ ಹಿಂದೆ ಹೊರಟಿರೋ ವಿನೋದ್ ಪ್ರಭಾಕರ್‌ಗೆ 'ಬಲರಾಮನ ದಿನಗಳು' ಗೆಲುವು ಕೂಡ ಅಷ್ಟೇ ಮುಖ್ಯ. ಯಾಕಂದ್ರೆ, ಅವರ ವೃತ್ತಿ ಬದುಕಿನ ಬಿಗ್ ಬಜೆಟ್ ಸಿನಿಮಾವಿದು. ಹೀಗಾಗಿ ಈ ಸಿನಿಮಾಗಾಗಿ ಸಾಕಷ್ಟು ಪ್ರಚಾರ ಮಾಡಿದ್ದರು. ಹಾಗಿದ್ದರೆ, ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಎಷ್ಟಾಗಿದೆ? 3ನೇ ದಿನದ ಗಳಿಕೆ ಎಷ್ಟು? ಅನ್ನೋ ಕುತೂಹಲವಿದ್ದೇ ಇದೆ. ಆದರೆ, ಬೇರೆ ಮೂಲಗಳಿಂದ ಒಂದೊಂದು ಲೆಕ್ಕ ಹೊರ ಬಿದ್ದಿದೆ. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ನೀಡುವ Sacnilk ವರದಿ ಪ್ರಕಾರ 3ನೇ ದಿನ 23 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಅದೇ ಕರ್ನಾಟಕದ ವಿತರಕರ ವಲಯಕ್ಕೆ 40 ಲಕ್ಷ ರೂಪಾಯಿ ಕಲೆಕ್ಷನ್ ಆಗಿರುವ ಲೆಕ್ಕ ಸಿಕ್ಕಿದೆ.

Also Read
Balaramana Dinagalu Review: ಗ್ಯಾಂಗ್‌ಸ್ಟರ್ ಕಥೆಯಲ್ಲಿ ವಿಷಾದ.. 'ಆ ದಿನಗಳನ್ನು ನೆನಪಿಸಿತೇ 'ಬಲರಾಮನ ದಿನಗಳು'?
Balaramana Dinagalu Review: ಗ್ಯಾಂಗ್‌ಸ್ಟರ್ ಕಥೆಯಲ್ಲಿ ವಿಷಾದ.. 'ಆ ದಿನಗಳನ್ನು ನೆನಪಿಸಿತೇ 'ಬಲರಾಮನ ದಿನಗಳು'?

3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಬಲರಾಮನ ದಿನಗಳು' ಈ ಸಿನಿಮಾಗೆ ಮೂರು ರಜೆ ದಿನಗಳು ಸಿಕ್ಕಿದ್ದವು. ಹೀಗಾಗಿ ದೊಡ್ಡ ಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗಿತ್ತು. ಆದರೆ, ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಗಿಲ್ಲ ಎಂದು ಈ ವರದಿಗಳು ಹೇಳುತ್ತಿವೆ. ಕರ್ನಾಟಕದ ವಿತರಕರ ವಲಯದಿಂದ ಫಿಲ್ಮಿಬೀಟ್ ಕನ್ನಡಕ್ಕೆ ಸಿಕ್ಕಿರುವ ವರದಿ ಪ್ರಕಾರ ಇನ್ನೂ ಹೆಚ್ಚು ಕಲೆಕ್ಷನ್ ಆಗಬೇಕಿತ್ತು. Sacnilk ಹಾಗೂ ವಿತರಕರ ವಲಯದ ಲೆಕ್ಕಾಚಾರ ಮ್ಯಾಚ್ ಆಗದೇ ಇದ್ದರೂ, ಎರಡೂ ವರದಿಗಳಲ್ಲಿ ಕಲೆಕ್ಷನ್ ಕಮ್ಮಿನೇ ಇದೆ.

Vinod Prabhakar Priya Anand movie Balaramana Dinagalu day 3 Box Office collection report

'ಬಲರಾಮನ ದಿನಗಳು' 3 ದಿನಗಳ ಕಲೆಕ್ಷನ್

ಈ ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್ ಬಗ್ಗೆ ಎರಡು ಅಂಕಿ-ಅಂಶಗಳು ಸಿಕ್ಕಿವೆ. Sacnilk ಪ್ರಕಾರ ಮೊದಲ ದಿನ 24 ಲಕ್ಷ ರೂ., 2ನೇ ದಿನ 24 ಲಕ್ಷ ರೂ, 3ನೇ ದಿನ 23 ಲಕ್ಷ ರೂ, ಕಲೆಕ್ಷನ್ ಆಗಿದೆ. ಅದೇ ಕರ್ನಾಟಕದ ವಿತರಕರ ವಲಯದ ಲೆಕ್ಕ ಹೀಗಿದೆ. ಮೊದಲ ದಿನ 55 ಲಕ್ಷ ರೂ, 2ನೇ ದಿನ 40 ಲಕ್ಷ, 3ನೇ ದಿನ 40 ಲಕ್ಷಗಳಷ್ಟು ಆಗಿದೆ. ಒಟ್ಟು ಲೆಕ್ಕಾಚಾರಗಳನ್ನು ನೋಡುವುದಾರೇ,

Sacnilk ವರದಿ- ₹79 ಲಕ್ಷ (Net)
ವಿತರಕರ ವಲಯದ ಲೆಕ್ಕ-1.05 ಕೋಟಿ (Net)

ರಜೆಗಳನ್ನು ಮುಗಿಸಿ ಕೆಲಸಕ್ಕೆ ಮರಳಿರೋ ಜನರು ಇನ್ಮುಂದೆ 'ಬಲರಾಮನ ದಿನಗಳು' ಸಿನಿಮಾವನ್ನು ವೀಕ್ಷಿಸುವುದಕ್ಕೆ ಥಿಯೇಟರ್ ಕಡೆಗೆ ಬರುತ್ತಾರಾ? ಕಲೆಕ್ಷನ್‌ನಲ್ಲಿ ಏರಿಕೆ ಆಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅಷ್ಟಕ್ಕೂ ಚಿತ್ರತಂಡ ಇನ್ನೂ ಕಲೆಕ್ಷನ್‌ನ ಅಂಕಿ-ಅಂಶಗಳನ್ನು ಅಧಿಕೃತವಾಗಿ ರಿವೀಲ್ ಮಾಡಿಲ್ಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Vinod Prabhakar, Priya Anand movie Balaramana Dinagalu day 3 Box Office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X