Balaramana Dinagalu Box Office Day 4:4ನೇ ದಿನ ಬಲರಾಮನ ಕಲೆಕ್ಷನ್ ಎಷ್ಟು? 'ಮಂಡೇ ಟೆಸ್ಟ್' ಪಾಸ್ ಆಯ್ತಾ?
ಕ್ರಿಕೆಟ್ ಜ್ವರ ಮುಗಿದಿದೆ. ಜನರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆದುಕೊಂಡು ಬರುವತ್ತ ಸಿನಿಮಾ ಮಂದಿ ಗಮನ ಹರಿಸುತ್ತಿದ್ದಾರೆ. ಐಪಿಎಲ್ ಮುಗಿದ ಮೇಲಾದರೂ ಚಿತ್ರಮಂದಿರಗಳ ಕಡೆಗೆ ಪ್ರೇಕ್ಷಕರು ಎಂಬ ಲೆಕ್ಕಾಚಾರದಲ್ಲಿ ಸ್ಯಾಂಡಲ್‌ವುಡ್ ಮಂದಿ ಇದ್ದಾರೆ. ಆದರೆ, ಅದು ಈ ವಾರ ಯಾಕೋ ತಲೆ ಕೆಳಗಾದಂತೆ ಕಾಣಿಸುತ್ತಿದೆ.
ಚಿತ್ರರಂಗ ಎದುರಿಸುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ ಭರವಸೆಯ ಕಿರಣವಾಗಿ 'ಬಲರಾಮನ ದಿನಗಳು' ಮೂಡಿ ಬಂದಿತ್ತು. ನಟ ವಿನೋದ್ ಪ್ರಭಾಕರ್ ವೃತ್ತಿ ಬದುಕಿನ ಈ ಬಿಗ್ ಬಜೆಟ್ ಸಿನಿಮಾ ಮೊದಲ ದಿನಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಹೀಗಾಗಿ ಅಗ್ನಿ ಪರೀಕ್ಷೆ 'ಮಂಡೆ ಟೆಸ್ಟ್'ನಲ್ಲಿ ಏನಾಗಬಹುದು? ಬಾಕ್ಸಾಫೀಸ್‌ನಲ್ಲಿ ಏನಾದರೂ ಚಮತ್ಕಾರ ನಡೆಯಿತೇ? ವಿನೋದ್ ಪ್ರಭಾಕರ್ ಮತ್ತೊಂದು ಹಿಟ್ ಸಿನಿಮಾವನ್ನು ಕೊಡಬಹುದೇ? ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಬಲರಾಮನ ದಿನಗಳು' ಮೊದಲ ಸೋಮವಾರದ ಕಠಿಣ ಪರೀಕ್ಷೆಯಲ್ಲಿ ಸೋತಿದೆ. 2025ರಲ್ಲಿ 'ಮಾದೇವ' ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಮ್ಯಾಜಿಕ್ ಮಾಡಿದ್ದ ವಿನೋದ್, ಈ ಬಾರಿಯೂ ಚಿತ್ರರಂಗಕ್ಕೆ ತಿರುವು ಕೊಡಬಹುದು ಎಂಬ ನಿರೀಕ್ಷೆಗೆ ಥಿಯೇಟರ್‌ನಲ್ಲಿ 'ಮೋಡ ಕವಿದ ವಾತಾವರಣ' ಇರೋದು ಎದ್ದು ಕಾಣಿಸುತ್ತಿದೆ.
'ಮಂಡೇ ಟೆಸ್ಟ್'ನಲ್ಲಿ ಮಂಕಾದ 'ಬಲರಾಮ'
ಯಾವುದೇ ಸಿನಿಮಾ ಆಗಿದ್ದರೂ ಅದರ ಅಸಲಿ ಆಟ, ಬಾಕ್ಸಾಫೀಸ್ ಓಟ ನಿರ್ಧಾರ ಆಗೋದೇ ಸೋಮವಾರದ ಅಗ್ನಿಪರೀಕ್ಷೆಯಲ್ಲಿ. ರಜೆ ಮುಗಿಸಿ ಜನರು ಕಚೇರಿ, ಕೆಲಸ ಅಂತ ಬ್ಯುಸಿಯಾದಾಗ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುವುದು ಅಪರೂಪ. ಹೀಗಿದ್ದರೂ, ಚಿತ್ರಮಂದಿರಗಳಲ್ಲಿ ಜನರು ಕಾಣಿಸುತ್ತಿದ್ದಾರೆ ಅಂದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಂತೆ. ಆದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಬಲರಾಮನ ದಿನಗಳು' ಮಂಡೆ ಟೆಸ್ಟ್‌ನಲ್ಲಿ ಮಂಕಾಗಿದೆ.
'ಬಲರಾಮನ' 4ನೇ ದಿನ ಏನಾಯ್ತು?
'ಬಲರಾಮನ ದಿನಗಳು' ರಿಲೀಸ್ ಆದ 4ನೇ ದಿನ, ಅಂದರೆ ಸೋಮವಾರ ಬಾಕ್ಸಾಫೀಸ್‌ನಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಬರುವ ಮನಸ್ಸು ಮಾಡಿಲ್ಲ. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ನೀಡುವ sacnilk ಪ್ರಕಾರ, ಸೋಮವಾರದ ಗಳಿಕೆ ಕೇವಲ ₹15 ಲಕ್ಷ ರೂಪಾಯಿ. ವೀಕೆಂಡ್‌ನಲ್ಲಿದ್ದ ಜೋಶ್ ಕೂಡ ಸೋಮವಾರದ ಹೊತ್ತಿಗೆ ತಣ್ಣಗಾಗಿದೆ. ಇನ್ನು ವೀಕ್‌ಡೇಸ್‌ನಲ್ಲಿ ಈ ಸಿನಿಮಾ ಚೇತರಿಸಿಕೊಳ್ಳಲೇ ಬೇಕಿದೆ.
ಇಲ್ಲಿವರೆಗೂ ಎಷ್ಟಾಗಿದೆ ಕಲೆಕ್ಷನ್?
ವಿನೋದ್ ಪ್ರಭಾಕರ್ ಅವರೇ ಹೇಳಿದಂತೆ ಈ ಸಿನಿಮಾ ಬಜೆಟ್ 14 ರಿಂದ 15 ಕೋಟಿ ರೂಪಾಯಿ ಆಗಿದೆ. ಇದು ಅವರ ವೃತ್ತಿ ಬದುಕಿನ ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಸಿನಿಮಾದ ಕಲೆಕ್ಷನ್ ಒಂದೆರಡು ವಾರದ ಒಳಗೆ ರಿಕವರಿ ಆಗಲೇಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಕಾಣಿಸುತ್ತಿಲ್ಲ. Sacnilk 4ನೇ ದಿನದ ಕಲೆಕ್ಷನ್ 15 ಲಕ್ಷ ರೂಪಾಯಿ ಎಂದರೆ, ಕರ್ನಾಟಕದ ವಿತರಕರ ವಲಯ 20 ಲಕ್ಷ ರೂಪಾಯಿ ಎನ್ನುತ್ತಿದೆ. ಹಾಗಿದ್ದರೆ, ಈ ನಾಲ್ಕು ದಿನಗಳಲ್ಲಿ ಎಷ್ಟು ಗಳಿಕೆ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
Sacnilk ವರದಿ- ₹94 ಲಕ್ಷ (Net)
ವಿತರಕರ ವಲಯದ ಲೆಕ್ಕ-1.25 ಕೋಟಿ (Net)
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
