Maadeva Box Office:ಈ ವರ್ಷದ ಮೊದಲ ಹಿಟ್ 'ಮಾದೇವ'; ಲಾಭ ಎಷ್ಟು? ಗಳಿಸಿದ್ದೆಷ್ಟು?
ಕನ್ನಡ ಚಿತ್ರರಂಗ ಕಳೆದ ಎರಡು ವರ್ಷಗಳಿಂದ ಸೊರಗಿ ಹೋಗಿದ್ದು ಹೊಸ ವಿಷಯವೇನಲ್ಲ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ ಬಳಿಕ ಆ ಯಶಸ್ಸು ಮುಂದುವರೆಸಿಕೊಂಡು ಹೋಗುವುದರಲ್ಲಿ ಕನ್ನಡ ಫಿಲ್ಮ್ ಮೇಕರ್ಸ್ ಸೋತಿರುವುದನ್ನು ತಳ್ಳಿ ಹಾಕುವಂತಿಲ್ಲ. 2025ರಲ್ಲೂ ಮೊದಲ ಆರು ತಿಂಗಳು ಒಂದೇ ಒಂದು ಸಿನಿಮಾನೂ ಹಿಟ್ ಲಿಸ್ಟ್ ಸೇರಿರಲಿಲ್ಲ.
2024ರ ಡಿಸೆಂಬರ್ 25ರಂದು ತೆರೆಕಂಡಿದ್ದ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಬಿಟ್ಟರೆ, ಮತ್ತೊಂದು ಹಿಟ್ ನೋಡುವುದಕ್ಕೆ ಆರು ತಿಂಗಳು ಬೇಕಾಯ್ತು. 2025ರ ಆರಂಭದಿಂದ ಜೂನ್ ತಿಂಗಳವರೆಗೂ 107ಕ್ಕೂ ಅಧಿಕ ಸಿನಿಮಾಗಳು ತೆರೆಕಂಡಿವೆ. ಆದರೆ, ಇವುಗಳಲ್ಲಿ ನಿರ್ಮಾಪಕ ಮುಖದಲ್ಲಿ ನಗುವನ್ನು ತರಿಸುವಂತಹ ಒಂದೇ ಒಂದು ಸಿನಿಮಾನೂ ಬಂದಿಲ್ಲ ಅನ್ನೋದೇ ಬೇಸರದ ಸಂಗತಿ.

ಇನ್ನೇನು ಕನ್ನಡ ಚಿತ್ರರಂಗ ಮುಳುಗಿ ಹೋಯ್ತು ಎನ್ನುವಾಗಲೇ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಂತೆ ಒಂದು ಸಿನಿಮಾ ಥಿಯೇಟರ್‌ಗಳಲ್ಲಿ 25 ದಿನಗಳನ್ನು ಪೂರೈಸಿದೆ. ಅದುವೇ ವಿನೋದ್ ಪ್ರಭಾಕರ್ ನಟನೆಯ 'ಮಾದೇವ'. ಸ್ಯಾಂಡಲ್‌ವುಡ್‌ನ ವಿತರಕರ ಪ್ರಕಾರ ಈ ಸಿನಿಮಾ 25 ದಿನಗಳ ಬಳಿಕವೂ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಒದ್ದಾಡುತ್ತಿದ್ದ ಕಾಲದಲ್ಲಿ 'ಮಾದೇವ' ಯಶಸ್ಸು ಕಂಡಿದ್ದೇಗೆ? ಮೂರು ವಾರಗಳ ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಮುಂದೆ ಓದಿ
'ಮಾದೇವ' 100 ಅಧಿಕ ಚಿತ್ರಮಂದಿರಗಳಲ್ಲಿ 25 ದಿನ
ಮೂರು ವಾರಗಳ 'ಮಾದೇವ' ಬಾಕ್ಸಾಫೀಸ್ ಕಲೆಕ್ಷನ್
2025ರ ಮೊದಲ ಸ್ಯಾಂಡಲ್‌ವುಡ್ ಹಿಟ್ 'ಮಾದೇವ'
ಸೋಲಿನ ಸುಳಿಯಿಂದ ಪಾರಾದ ವಿನೋದ್ ಪ್ರಭಾಕರ್
'ಮಾದೇವ' ಈ ವರ್ಷ ಮೊದಲ ಹಿಟ್
2025ರಲ್ಲಾದರೂ ಕನ್ನಡಕ್ಕೆ ಒಂದೊಳ್ಳೆ ಓಪನಿಂಗ್ ಸಿಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ನಂಬಿಕೆ ಕೂಡ ಹುಸಿಯಾಯ್ತು. ಆರು ತಿಂಗಳಿನಿಂದ ನೂರಾರು ಕನ್ನಡ ಸಿನಿಮಾಗಳು ತೆರೆಕಂಡಿದ್ದರೂ ಹಿಟ್ ಲಿಸ್ಟ್ ಸೇರುವಲ್ಲಿ ವಿಫಲವಾಗಿದ್ದವು. ಕೆಲವು ಸಿನಿಮಾಗಳಿಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದರೂ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿರಲಿಲ್ಲ. ಆದರೆ, 'ಮಾದೇವ' ಸಿನಿಮಾ ಮಂದಿಗೆ ಸರ್ಪ್ರೈಸ್ ಹಿಟ್ ಕೊಟ್ಟಿದೆ. ಈ ವರ್ಷದ ಮೊದಲ ಹಿಟ್ ಅಂತ ಸಾಬೀತಾಗಿದೆ. ಮೂರು ವಾರಗಳಲ್ಲಿ ನಿರ್ಮಾಪಕರಿಗೆ ಕೋಟಿ ಲೆಕ್ಕದಲ್ಲಿ ಶೇರು ಸಿಕ್ಕಿದೆ.

3 ವಾರಗಳ ಕಲೆಕ್ಷನ್ ಎಷ್ಟು?
'ಮಾದೇವ' ಪಕ್ಕಾ ಲೋಕಲ್ ಸಬ್ಜೆಕ್ಟ್. ಮತ್ತೊಮ್ಮೆ ಒರಿಜಿನಲ್ ಕಂಟೆಂಟ್‌ಗೆ ಗೆಲುವ ಸಿಕ್ಕಂತೆ ಆಗಿದೆ. ವಿನೋದ್ ಪ್ರಭಾಕರ್ ಈ ಸಿನಿಮಾದಲ್ಲಿ ಪ್ರಬುದ್ಧ ಪಾತ್ರದಲ್ಲಿ ಮಿಂಚಿದ್ದಾರೆ. ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮಾಂಟೇರೊ ಜೋಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಕಳೆದ 3 ವಾರಗಳಿಂದ ಈ ಸಿನಿಮಾದ ಒಂದೇ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿರೋದು ಮತ್ತೊಂದು ವಿಶೇಷ. ವಿತರಕರ ವಲಯದಿಂದ ಸಿಕ್ಕಿರುವ ಲೆಕ್ಕಾಚಾರ ಹೀಗಿದೆ.
ಮೊದಲ ವಾರ Gross ₹1.86 Crore Net ₹1.49 Crore
ಎರಡನೇವಾರ Gross ₹1.77 Crore Net ₹1.31 Crore
ಮೂರನೇ ವಾರ Gross ₹1.36 Crore Net ₹1.01 Crore
ಒಟ್ಟು Gross ₹4.99 Crore Net ₹2.81 Crore
ನಿರ್ಮಾಪಕರ ಶೇರ್ ಎಷ್ಟು?
ಸಿನಿಮಾ ಟ್ರೇಡಿಂಗ್ ವೆಬ್ ಸೈಟ್ ಸ್ಯಾಕ್ನಿಲ್ಕ್ ಪ್ರಕಾರ 'ಮಾದೇವ' ಸಿನಿಮಾ 25 ದಿನಗಳಲ್ಲಿ 5.53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡದ ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕಕ್ಕೂ ಸ್ಯಾಕ್ನಿಲ್ಕ್ ಲೆಕ್ಕಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಹೀಗಾಗಿ ನಿರ್ಮಾಪಕರಿಗೆ ಬಂದ ಶೇರ್ ಬಗ್ಗೆನೂ ಚರ್ಚೆಯಾಗುತ್ತಿದೆ. ಸುಮಾರು 2 ಕೋಟಿ ರೂಪಾಯಿ ಶೇರ್ ನಿರ್ಮಾಪಕರಿಗೆ ಬಂದಿದೆ ಎನ್ನಲಾಗಿದೆ.
ಮೊದಲ ವಾರ ₹78 ಲಕ್ಷ (share)
2ನೇ ವಾರ ₹66 ಲಕ್ಷ (share)
3ನೇ ವಾರ ₹40 ಲಕ್ಷ (share)
ಒಟ್ಟು ₹1.84 ಕೋಟಿ (share)
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











