Maadeva Box Office:30ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಗೆದ್ದ 'ಮಾದೇವ'; ಗೆದ್ದು ಬೀಗಿದ ವಿನೋದ್ ಪ್ರಭಾಕರ್

ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ನೋಡುವುದಕ್ಕೆ ಥಿಯೇಟರ್‌ಗೆ ಬರುತ್ತಿಲ್ಲ ಸಿನಿಮಾ ಮಂದಿ ಗೋಳಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆರಳೆಣಿಕೆಯಷ್ಟು ಸಿನಿಮಾಗಳು ಗೆದ್ದಿದ್ದು ಬಿಟ್ಟರೆ, ಸೋತ ಚಿತ್ರಗಳೇ ಹೆಚ್ಚು. ಜೊತೆ ಬೆರಳೆಣಿಕೆಯಷ್ಟು ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗಿವೆಯಷ್ಟೇ. ಜನರು ಥಿಯೇಟರ್‌ಗೆ ಬಾರದೇ ಇರುವುದಕ್ಕೆ ಇದೂ ಒಂದು ಒಂದು ಕಾರಣ. ಇನ್ನು 2025 ಕೂಡ ಇದರಿಂದ ಹೊರತಾಗಿಲ್ಲ.

2025ರ ಆರಂಭದಿಂದಲೇ ಕನ್ನಡ ಚಿತ್ರರಂಗ ನಷ್ಟವನ್ನು ಅನುಭವಿಸಿದೆ. ನಿರ್ಮಾಪಕರು ಹಣ ಹೂಡಿಕೆ ಮಾಡಿ ಸಿನಿಮಾ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ. ಈ ಗ್ಯಾಪ್‌ನಲ್ಲೇ ಕನ್ನಡದಲ್ಲೊಂದು ಸಿನಿಮಾ ಸಿನಿಮಾ ಮಂದಿಯಲ್ಲಿ ಆಶಾಭಾವ ಮೂಡಿಸಿದೆ. ಅದುವೇ 'ಮಾದೇವ'. ವಿನೋದ್ ಪ್ರಭಾಕರ್ ನಟಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಒಂದು ತಿಂಗಳಿನಿಂದ ಈ ಸಿನಿಮಾದ ಕಲೆಕ್ಷನ್ ಸ್ಟಡಿಯಾಗಿದೆ.

Vinod Prabhakar starrer Maadeva movie Day 30 Box office Collection report

'ಮಾದೇವ' 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದು ಈ ವರ್ಷ ಬಾಕ್ಸಾಫೀಸ್‌ನಲ್ಲಿ ಗೆದ್ದ ಮೊದಲ ಸಿನಿಮಾ. ಇತ್ತೀಚೆಗಷ್ಟೇ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ನಾಲ್ಕು ವಾರಗಳನ್ನು ಯಶಸ್ವಿಯಾಗಿ ಪೂರೈಸಿ, ಐದನೇ ವಾರಕ್ಕೆ ಕಾಲಿಟ್ಟಿರುವ ಈ ಸಿನಿಮಾದ ಕಲೆಕ್ಷನ್ ಎಷ್ಟು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.


ಮುಂದೆ ಓದಿ

30ನೇ ದಿನವೂ 'ಮಾದೇವ' ಸಿನಿಮಾ ಕಲೆಕ್ಷನ್ ಏರಿಕೆ
5ನೇ ವಾರಕ್ಕೆ ಕಾಲಿಟ್ಟ ವಿನೋದ್ ಪ್ರಭಾಕರ್ 'ಮಾದೇವ'
ಈ ವರ್ಷದ ಮೊದಲ ಹಿಟ್ ಸಿನಿಮಾ 'ಮಾದೇವ'
ವಿನೋದ್ ಪ್ರಭಾಕರ್‌ ವೃತ್ತಿ ಬದುಕಿನ ಹಿಟ್ ಸಿನಿಮಾ

30ನೇ ದಿನ 'ಮಾದೇವ' ಕಲೆಕ್ಷನ್ ಎಷ್ಟು?

ಲೋಕಲ್‌ ಕಂಟೆಂಟ್‌ಗೆ ಕನ್ನಡದ ಪ್ರೇಕ್ಷಕರು ಮತ್ತೊಮ್ಮೆ ಜೈ ಎಂದಿದ್ದಾರೆ. ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮಾಂಟೇರೊ ನಟಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಮಾದೇವ ಸಿನಿಮಾ ಮೂವತ್ತನೇ ದಿನ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಜುಲೈ 5ನೇ ತಾರೀಕು ಈ ಸಿನಿಮಾ 7 ಲಕ್ಷ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ. ಈ ಮೂಲಕ 30 ದಿನಗಳ ಒಟ್ಟು ₹5.84 ಕೋಟಿ (Net) ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ.

ನಾಲ್ಕು ವಾರಗಳ ಒಟ್ಟು ಕಲೆಕ್ಷನ್ ಎಷ್ಟು?

ವಿನೋದ್ ಪ್ರಭಾಕರ್ ನಟಿಸಿರುವ 'ಮಾದೇವ' ಸಿನಿಮಾ ಐದನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ನಾಲ್ಕನೇ ವಾರ ಸುಮಾರು 73 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಕರ್ನಾಟಕದ ವಿತರಕ ವಲಯಕ್ಕೆ ಸಿಕ್ಕಿರುವ ಲೆಕ್ಕ. ಹಾಗೇ ನಿರ್ಮಾಪಕರಿಗೆ ಈ ಸಿನಿಮಾದಿಂದ ನಾಲ್ಕನೇ ವಾರಕ್ಕೆ ಬಂದಿರುವ ಶೇರ್ 29 ಲಕ್ಷ ರೂಪಾಯಿ. ವಿತರಕರ ಪ್ರಕಾರ 'ಮಾದೇವ' ಸಿನಿಮಾ ಗಳಿಸಿದ ಕಲೆಕ್ಷನ್ ಎಷ್ಟು? ಅನ್ನೋದನ್ನು ನೋಡುವುದಾರೇ..

ಮೊದಲ ವಾರ Gross ₹1.86 Crore Net ₹1.49 Crore
ಎರಡನೇವಾರ Gross ₹1.77 Crore Net ₹1.31 Crore
ಮೂರನೇ ವಾರ Gross ₹1.36 Crore Net ₹1.01 Crore
ನಾಲ್ಕನೇ ವಾರ Gross ₹0.89 Crore Net ₹0.73 Crore
ಒಟ್ಟು Gross ₹5.88 Crore Net ₹4.54 Crore

Vinod Prabhakar starrer Maadeva movie Day 30 Box office Collection report

ನಿರ್ಮಾಪಕರಿಗೆ ಬಂದ ಶೇರ್ ಎಷ್ಟು?

'ಮಾದೇವ' ಸಿನಿಮಾದ ನಿರ್ಮಾಪಕರು ಲಾಭದಲ್ಲಿ ಇದ್ದಾರೆ. ಸಿನಿಮಾದ ಕಲೆಕ್ಷನ್ ₹5.88 ಕೋಟಿ ಮಾಡಿದೆ. ಅದರಲ್ಲಿ ನಾಲ್ಕನೇ ವಾರಕ್ಕೆ ನಿರ್ಮಾಪಕರ ಜೇಬು ಸೇರಿದ್ದು 29 ಲಕ್ಷ ರೂಪಾಯಿ. ಇತ್ತೀಚೆಗೆ ವಿನೋದ್ ಪ್ರಭಾಕರ್ ಕೂಡ ನಿರ್ಮಾಪಕರು ಲಾಭದಲ್ಲಿ ಇದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಹಾಗಿದ್ದರೆ, ನಾಲ್ಕು ವಾರಗಳಲ್ಲಿ ನಿರ್ಮಾಪಕರಿಗೆ ಬಂದ ಶೇರ್ ಲೆಕ್ಕಾಚಾರವಿದೆ.

ಮೊದಲ ವಾರ ₹78 ಲಕ್ಷ (share)
2ನೇ ವಾರ ₹66 ಲಕ್ಷ (share)
3ನೇ ವಾರ ₹40 ಲಕ್ಷ (share)
4ನೇ ವಾರ ₹29 ಲಕ್ಷ (share)
ಒಟ್ಟು ₹2.13 ಕೋಟಿ (share)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Vinod Prabhakar starrer Maadeva movie Day 30 Box office Collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X