Kannappa Box Office Day 2: 2ನೇ ದಿನ ತೆಲುಗಿನ 'ಕಣ್ಣಪ್ಪ' ನೋಡಲು ಬಂದರೇ ಪ್ರೇಕ್ಷಕರು? ಎಷ್ಟಾಯ್ತು ಕಲೆಕ್ಷನ್?
ಈ ಹಿಂದೆ ಬಂದ ಶಿವನ ಭಕ್ತ 'ಕಣ್ಣಪ್ಪ'ನ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಡಾ.ರಾಜ್‌ಕುಮಾರ್ ನಟಿಸಿದ 'ಬೇಡರ ಕಣ್ಣಪ್ಪ' ಇತಿಹಾಸವಾಗಿಯೇ ಉಳಿದುಕೊಂಡಿದೆ. ಈಗ ತೆಲುಗು ಚಿತ್ರರಂಗದಲ್ಲಿ ಇದೇ 'ಕಣ್ಣಪ್ಪ'ನ ಕಥೆಯನ್ನು ತೆರೆಮೇಲೆ ಅದ್ಧೂರಿಯಾಗಿ ತರಲಾಗಿದೆ. ತೆಲುಗಿನ ಹಿರಿಯ ನಟ ಮೋಹನ್ ಬಾಬು ಪುತ್ರ ವಿಷ್ಣು ಮಂಚು 'ಕಣ್ಣಪ್ಪ'ನಾಗಿ ನಟಿಸಿದ್ದಾರೆ. ಆ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಕಂಡಿದೆ.
ಟಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ 'ಕಣ್ಣಪ್ಪ' ರಿಲೀಸ್ ಆಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿಷ್ಣು ಮಂಚು ಕಣ್ಣಪ್ಪನಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ವಿಷ್ಣು ಮಂಚು ವೃತ್ತಿ ಬದುಕಿನಲ್ಲೇ ಅತೀ ಗಳಿಕೆ ಕಂಡ ಸಿನಿಮಾ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ. ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್‌ಲಾಲ್, ಮೋಹನ್ ಬಾಬು ಅಂತಹ ದಿಗ್ಗಜರು ಈ ಸಿನಿಮಾದಲ್ಲಿ ವಿಷ್ಣು ಮಂಚುಗೆ ಸಾಥ್ ಕೊಟ್ಟಿದ್ದಾರೆ.

'ಕಣ್ಣಪ್ಪ' ಮೊದಲ ದಿನ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಬಿಡುಗಡೆಗೂ ಮುನ್ನವೇ 'ಕಣ್ಣಪ್ಪ' ಸಿನಿಮಾವನ್ನು ಭರ್ಜರಿಯಾಗಿ ಪ್ರಚಾರ ಮಾಡಲಾಗಿತ್ತು. ಹೀಗಾಗಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಮೊದಲ ದಿನ ಒಂದೊಳ್ಳೆ ಒಪನಿಂಗ್ ಪಡೆದುಕೊಂಡ ಸಿನಿಮಾ ಎರಡನೇ ದಿನ ಎಷ್ಟು ಕಲೆಕ್ಷನ್ ಮಾಡಿತು. ಅಣ್ಣಾವ್ರ ಸಿನಿಮಾದಂತೆ 'ಕಣ್ಣಪ್ಪ' ಕೂಡ ಇತಿಹಾಸವನ್ನ ಸೃಷ್ಟಿ ಮಾಡಬಹುದೇ? ಟ್ರೇಡ್ ರಿಪೋಟ್ ಏನಿದೆ? ಎನ್ನುವುದನ್ನು ತಿಳಿಯೋಣ.
'ಕಣ್ಣಪ್ಪ' 2ನೇ ದಿನದ ಕಲೆಕ್ಷನ್
ವಿಷ್ಣು ಮಂಚು ಟಾಲಿವುಡ್‌ಗೆ ಕಮ್‌ಬ್ಯಾಕ್ ಮಾಡುವುದಕ್ಕೆ ಕಳೆದ ಹಲವು ದಿನಗಳಿಂದ ಓಡಾಡುತ್ತಿದ್ದರು. ಹೀಗಾಗಿ ಪವರ್‌ಫುಲ್ ಕಥೆಯನ್ನು ಹುಡುಕಿ, 'ಕಣ್ಣಪ್ಪ' ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಅದೇ ಸಿನಿಮಾ ಈಗ ರಿಲೀಸ್ ಆಗಿದ್ದು, ಎರಡನೇ ದಿನ (ಜೂನ್ 28) ಭಾರತದಾದ್ಯಂತ ಸುಮಾರು ₹7 ಕೋಟಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಮೊದಲನೇ ದಿನಕ್ಕೆ ಹೋಲಿಸಿದರೆ, 2ನೇ ದಿನದ ಗಳಿಕೆ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ.
ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?
ವಿಷ್ಣು ಮಂಚು ಜೊತೆಗೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್‌ಲಾಲ್, ಮೋಹನ್ ಬಾಬು, ಶರತ್ ಕುಮಾರ್ ಅಂತಹ ದಿಗ್ಗಜರು ನಟಿಸಿದ್ದರಿಂದ ವೀಕೆಂಡ್‌ನಲ್ಲಿ ಕಲೆಕ್ಷನ್ ಸ್ಟಡಿಯಾಗಿ ನಿಂತಿದೆ. ಎರಡನೇ ದಿನ ತೆಲುಗು ರಾಜ್ಯಗಳಲ್ಲಿ ಶೇ. 44ರಷ್ಟು ಥಿಯೇಟರ್‌ಗಳಿಗೆ ಫುಲ್ ಆಗಿದ್ದರೆ, ತಮಿಳುನಾಡಿನಲ್ಲಿ ಶೇ.20ರಷ್ಟು ಚಿತ್ರಮಂದಿಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಇನ್ನು ಹಿಂದಿಯಲ್ಲಿ ಶೇ.17ರಷ್ಟು ಮಂದಿ ಸಿನಿಮಾ ನೋಡಿದ್ದಾರೆ ಎಂದು ವರದಿ ಮಾಡಲಾಗಿದೆ.

ಎರಡು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಕಣ್ಣಪ್ಪ' ವಿಷ್ಣು ಮಂಚುಗೆ ಸೂಪರ್ ರೆಸ್ಪಾನ್ಸ್ ಸಿಗಬಹುದೆಂಬ ನಿರೀಕ್ಷೆಯಿದೆ. ಮೊದಲ ಎರಡು ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ಎರಡನೇ ದಿನವೂ 'ಕಣ್ಣಪ್ಪ' ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಆಸಕ್ತಿ ತೋರಿದ್ದಾರೆ. ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಬಹುದು ಎಂಬ ನಿರೀಕ್ಷೆಯಿದೆ. ಮೊದಲ ಎರಡು ದಿನಗಳ ಕಲೆಕ್ಷನ್ ಹೀಗಿದೆ. ಮೂರನೇ ದಿನವಾದ ಭಾನುವಾರ 'ಕಣ್ಣಪ್ಪ' ಒಂದೊಳ್ಳೆ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ.
ಮೊದಲ ದಿನ ₹9.35 ಕೋಟಿ
2ನೇ ದಿನ ₹7 ಕೋಟಿ
ಒಟ್ಟು ₹16.35 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











