Kotigobba Box Office Day 1: 'ಕೋಟಿಗೊಬ್ಬ' ರಿ-ರಿಲೀಸ್; ಮೊದಲ ದಿನದ ಕಲೆಕ್ಷನ್ ಎಷ್ಟು?

ಸಾಹಸ ಸಿಂಹ ವಿಷ್ಣುವರ್ಧನ್ ವೃತ್ತಿ ಬದುಕಿನಲ್ಲಿ ಬಿಗ್ ಹಿಟ್ ಕೊಟ್ಟ ಸಿನಿಮಾಗಳ ಪಟ್ಟಿಯಲ್ಲಿ 'ಕೋಟಿಗೊಬ್ಬ' ಕೂಡ ಒಂದು. ನಾಗಣ್ಣ ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಸೂಪರ್‌ ಹಿಟ್ ಆಗಿತ್ತು. 2001ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ ಬಸ್ಟರ್ ಅಂತ ಸಾಬೀತಾಗಿತ್ತು. ಸುಮಾರು 30 ವಾರಗಳ ಕಾಲ ಈ ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು.

ವಿಷ್ಣುದಾದ ಬ್ಯಾಕ್ ಟು ಬ್ಯಾಕ್ ವಿಲೇಜ್ ಸಬ್ಜೆಕ್ಟ್‌ಗಳಲ್ಲಿ ನಟಿಸಿದ್ದರು. 'ಸೂರಪ್ಪ', 'ಯಜಮಾನ', 'ದಿಗ್ಗಜರು' ಅಂತಹ ಹಳ್ಳಿ ಬ್ಯಾಕ್‌ಗ್ರೌಂಡ್‌ ಸಿನಿಮಾಗಳಲ್ಲಿ ನಟಿಸಿದ್ದರು. ಈ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೂಪರ್‌ ಹಿಟ್ ಅಂತ ಸಾಬೀತಾಗಿತ್ತು. ಹೀಗಾಗಿ ಮಾಸ್‌ ಸಬ್ಜೆಕ್ಟ್‌ ಹುಡುಕಾಟದಲ್ಲಿದ್ದ ವಿಷ್ಣುದಾದದಗೆ ಸಿಕ್ಕಿದ್ದೇ 'ಕೋಟಿಗೊಬ್ಬ'. ಸೂರಪ್ಪ ಬಾಬು ಈ ಟೈಟಲ್ ರಿಜಿಸ್ಟರ್ ಮಾಡಿ ಇಟ್ಟುಕೊಂಡಿದ್ದರು. ವಿಷ್ಣುದಾದ ಜೊತೆ ಚರ್ಚೆ ಮಾಡಿ ಮಾಸ್ ಸಬ್ಜೆಕ್ಟ್‌ನಲ್ಲಿ ನಟಿಸುವುದಕ್ಕೆ ಒಪ್ಪಿಸಿದ್ದರು.

Vishnuvardhan blockbuster movie Kotigobba re release day 1 box office collection in Prasanna theater

ಅಂದ್ಹಾಗೆ, ಇದು 1995ರಲ್ಲಿ ತೆರೆಕಂಡಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ 'ಭಾಷಾ' ಸಿನಿಮಾದ ರಿಮೇಕ್. ತಮಿಳಿನಲ್ಲಿ ಮೆಗಾ ಸಕ್ಸಸ್ ಸಿಕ್ಕಂತೆ ಕನ್ನಡದಲ್ಲಿಯೂ ಮೆಗಾ ಹಿಟ್ ಅಂತ ಸಾಬೀತಾಗಿತ್ತು. ಈ ಸಿನಿಮಾ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ 'ಕೋಟಿಗೊಬ್ಬ' ಸಿನಿಮಾವನ್ನು ರಿ-ರಿಲೀಸ್ ಮಾಡಲಾಗಿದೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮೊದಲ ದಿನ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಹಾಗಿದ್ದರೆ, ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?

'ಕೋಟಿಗೊಬ್ಬ' ಡೇ 1 ಕಲೆಕ್ಷನ್ ಎಷ್ಟು?

ವಿಷ್ಣುವರ್ಧನ್, ಪ್ರಿಯಾಂಕಾ ಉಪೇಂದ್ರ ಹಾಗೂ ಆಶಿಷ್ ವಿದ್ಯಾರ್ಥಿ ನಟನೆಯ 'ಕೋಟಿಗೊಬ್ಬ' ಅಭಿಮಾನಿಗಳ ಒತ್ತಾಯಕ್ಕೆ ಬೆಂಗಳೂರಿನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರ ಪ್ರಮುಖ ಚಿತ್ರಮಂದಿರ ಆಗಿತ್ತು. ಮೊದಲ ದಿನ ವಿಷ್ಣುದಾದ ಅಭಿಮಾನಿಗಳು ಚಿತ್ರಮಂದಿರಕ್ಕೆ ನುಗ್ಗಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ಕರ್ನಾಟಕದ ವಿತರಕರ ಪ್ರಕಾರ, 'ಕೋಟಿಗೊಬ್ಬ' ರಿ-ರಿಲೀಸ್ ಆದ ಮೊದಲ ದಿನ ಕೇವಲ ಪ್ರಸನ್ನ ಚಿತ್ರಮಂದಿರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲನೇ ದಿನವೇ 4.50 ಲಕ್ಷ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Also Read
Kotigobba Re-release; 'ಕೋಟಿಗೊಬ್ಬ' ದಾದಾ ಅಬ್ಬರ ನೋಡಲು ಫ್ಯಾನ್ಸ್ ಕಾತರ; ಟಿಕೆಟ್ ಸೋಲ್ಡೌಟ್
Kotigobba Re-release; 'ಕೋಟಿಗೊಬ್ಬ' ದಾದಾ ಅಬ್ಬರ ನೋಡಲು ಫ್ಯಾನ್ಸ್ ಕಾತರ; ಟಿಕೆಟ್ ಸೋಲ್ಡೌಟ್

2ನೇ ದಿನ ದಿನ ರೆಸ್ಪಾನ್ಸ್ ಹೇಗಿದೆ?

'ಕೋಟಿಗೊಬ್ಬ 2' 2ನೇ ದಿನದ ಕಲೆಕ್ಷನ್‌ನಲ್ಲಿ ಕೊಂಚ ಮಟ್ಟಿಗೆ ಡ್ರಾಪ್ ಕಂಡಿದೆ. ಅಭಿಮಾನಿಗಳು ಅದ್ಧೂರಿ ಓಪನಿಂಗ್ ಕೊಟ್ಟಿದ್ದರು. ಮೊದಲ ದಿನ ಸಿನಿಮಾ ಚೆನ್ನಾಗಿ ಓಡಿತ್ತು. ಆದರೆ, ಎರಡನೇ ದಿನ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ. ಆದರೆ, ಸಂಜೆ ಶೋಗಳಿಂದ ಜನರು ವಿಷ್ಣುದಾದ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಸಿಗುವ ಸಾಧ್ಯತೆಯಿದೆ. ಆದರೂ, 2ನೇ ದಿನ ಒಂದೂವರೆಯಿಂದ 2 ಲಕ್ಷ ರೂಪಾಯಿ ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

Vishnuvardhan blockbuster movie Kotigobba re release day 1 box office collection in Prasanna theater

ವೀಕೆಂಡ್‌ನಲ್ಲಿ ಹೆಚ್ಚಾಗುವ ನಿರೀಕ್ಷೆ

ಭಾನುವಾರ 'ಕೋಟಿಗೊಬ್ಬ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ. ಹೀಗಾಗಲೇ ಪ್ರಸನ್ನ ಚಿತ್ರಮಂದಿರದ ಎರಡು ಶೋಗಳ ಟಿಕೆಟ್‌ಗಳು ಫುಲ್ ಆಗಿವೆ. ಇನ್ನು ಎರಡು ಶೋಗಳು ಫಾಸ್ಟ್ ಫಿಲ್ಲಿಂಗ್‌ ಇದೆ. ಹೀಗಾಗಿ 3ನೇ ದಿನದ ಕಲೆಕ್ಷನ್ ಕೂಡ 4 ಲಕ್ಷ ರೂಪಾಯಿ ದಾಟುವ ಎಲ್ಲಾ ಸಾಧ್ಯತೆಗಳೂ ಇವೆ. ಒಟ್ನಲ್ಲಿ ಮೂರು ದಿನಗಳಲ್ಲಿ ವಿಷ್ಣುದಾದ ನಟಿಸಿದ 'ಕೋಟಿಗೊಬ್ಬ' ಸಿನಿಮಾ ರಿ ರಿಲೀಸ್‌ನಲ್ಲಿ 10 ಲಕ್ಷ ದಾಟುವ ಸಾಧ್ಯತೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Vishnuvardhan blockbuster movie Kotigobba re release day 1 box office collection in Prasanna theater.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X