Kotigobba Box Office Day 4:4ನೇ ದಿನವೂ 'ಕೋಟಿಗೊಬ್ಬ' ಸಿನಿಮಾಗೆ ಭರ್ಜರಿ ಕಲೆಕ್ಷನ್.. ಹೇಗಿದೆ ರೆಸ್ಪಾನ್ಸ್?

ಡಾ.ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ರಿಲೀಸ್ ಆಗಿ 25 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಸೂರಪ್ಪ ಬಾಬು 'ಕೋಟಿಗೊಬ್ಬ' ಸಿನಿಮಾವನ್ನು ಅಭಿಮಾನಿಗಳ ಒತ್ತಾಯದ ಮೇಲೆ ರಿ-ರಿಲೀಸ್ ಮಾಡಿದ್ದಾರೆ. ಏಪ್ರಿಲ್ 10ಕ್ಕೆ ಈ ಸಿನಿಮಾ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಗ್ರ್ಯಾಂಡ್‌ ಆಗಿ ರಿಲೀಸ್ ಆಗಿತ್ತು. ಸಿನಿಮಾಗೆ ಒಂದೊಳ್ಳೆ ಓಪನಿಂಗ್ ಕೂಡ ಸಿಕ್ಕಿತ್ತು.

'ಕೋಟಿಗೊಬ್ಬ' ವಿಷ್ಣುದಾದ ವೃತ್ತಿ ಬದುಕಿನಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದು. ಸುಮಾರು 30 ವಾರಗಳಿಗೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿತ್ತು. ಸ್ಟೈಲಿಶ್ ಲುಕ್‌ನಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಇವರ ಮಾಸ್ ಲುಕ್ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. 25 ವರ್ಷಗಳ ಹಿಂದೆ ಬಾಕ್ಸಾಫೀಸ್‌ ಚಿಂದಿ ಕಲೆಕ್ಷನ್ ಕೂಡ ಮಾಡಿತ್ತು.

Vishnuvardhan movie Kotigobba re release day 4 box office collection report

ಇದು ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ 'ಬಾಶಾ' ಸಿನಿಮಾದ ರಿಮೇಕ್. ಈ ಸಿನಿಮಾ ಕೂಡ ತಮಿಳಿನಲ್ಲಿ ಹೊಸ ದಾಖಲೆಗಳನ್ನು ಬರೆದಿತ್ತು. ಆ ಯಶಸ್ಸು ನೋಡಿದ್ದ ಸೂರಪ್ಪ ಬಾಬು ಕನ್ನಡದಲ್ಲಿ ರಿಮೇಕ್ ಮಾಡುವುಕ್ಕೆ ನಿರ್ಧರಿಸಿದ್ದರು. ಆಗಲೇ 'ಕೋಟಿಗೊಬ್ಬ' ಕೂಡ ರಿಜಿಸ್ಟರ್ ಆಗಿತ್ತು. ಅಂದುಕೊಂಡಂತೆ ಸಿನಿಮಾವನ್ನು ಕರ್ನಾಟಕ ಹಾಗೂ ಮುಂಬೈನ ಹಲವು ಭಾಗಗಳಲ್ಲಿ ಶೂಟಿಂಗ್ ಮಾಡಲಾಗಿತ್ತು. 25 ವರ್ಷಗಳ ಹಿಂದೆ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿದ್ದ 'ಬಾಶಾ' ಮತ್ತೆ ರಿಲೀಸ್ ಆಗಿದೆ. ಕಳೆದ ನಾಲ್ಕು ದಿನಗಳಿಂದ ಸಿನಿಮಾ ಕಲೆಕ್ಷನ್ ಸಖತ್ ಆಗಿದೆ. ಹಾಗಿದ್ದರೆ, 4 ದಿನಗಳ ಕಲೆಕ್ಷನ್ ಎಷ್ಟು ಅನ್ನೋದನ್ನು ತಿಳಿಯೋಣ.

4ನೇ ದಿನ 'ಕೋಟಿಗೊಬ್ಬ' ಕಲೆಕ್ಷನ್

'ಕೋಟಿಗೊಬ್ಬ' ರಿ-ರಿಲೀಸ್ ಆದ ಬಳಿಕ ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜಿಸದಷ್ಟು ಕಲೆಕ್ಷನ್ ಆಗಿದೆ. 4ನೇ ದಿನ ಅಂದರೆ, ಸೋಮವಾರದ ಪರೀಕ್ಷೆಯಲ್ಲಿಯೂ ಪಾಸ್ ಆಗಿದೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಈ ಸಿನಿಮಾ 4ನೇ ದಿನ 90 ಸಾವಿರದವರೆಗೂ ಕಲೆಕ್ಷನ್ ಆಗಿದೆ ಎಂದು ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿರುವ ಲೆಕ್ಕ. ಹೀಗಾಗಿ ಸೋಮವಾರದ ಪರೀಕ್ಷೆಯಲ್ಲಿ ವಿಷ್ಣುದಾದ ಸಿನಿಮಾ ಗೆದ್ದು ಬೀಗಿದೆ.

Also Read
Kotigobba Box Office Day 1: 'ಕೋಟಿಗೊಬ್ಬ' ರಿ-ರಿಲೀಸ್; ಮೊದಲ ದಿನದ ಕಲೆಕ್ಷನ್ ಎಷ್ಟು?
Kotigobba Box Office Day 1: 'ಕೋಟಿಗೊಬ್ಬ' ರಿ-ರಿಲೀಸ್; ಮೊದಲ ದಿನದ ಕಲೆಕ್ಷನ್ ಎಷ್ಟು?

4 ದಿನಗಳ ಒಟ್ಟು ಕಲೆಕ್ಷನ್

ಬಾಕ್ಸಾಫೀಸ್‌ನಲ್ಲಿ 'ಕೋಟಿಗೊಬ್ಬ' ರಿ-ರಿಲೀಸ್ ಕಲೆಕ್ಷನ್ ಅಚ್ಚರಿ ಮೂಡಿಸಿದೆ. ಒಟ್ಟು ನಾಲ್ಕು ದಿನಗಳಲ್ಲಿ ಈ ಸಿನಿಮಾ ದಾಖಲೆ ಗಳಿಕೆ ಮಾಡಿದೆ. ಮೊದಲ ದಿನವೇ ಪ್ರಸನ್ನ ಚಿತ್ರಮಂದಿರದಲ್ಲಿ ಒಳ್ಳೆಯ ಕಲೆಕ್ಷನ್ ಆಗಿದ್ದು, 2ನೇ ದಿನ ಕೊಂಚ ಮಟ್ಟಿಗೆ ಡೌನ್ ಆಗಿತ್ತು. ಮತ್ತೆ 3ನೇ ದಿನವಾದ ಭಾನುವಾರ ಒಳ್ಳೆಯ ಕಲೆಕ್ಷನ್ ಆಗಿದ್ದು, 4ನೇ ದಿನವೂ ಕಲೆಕ್ಷನ್ ಚೆನ್ನಾಗಿದೆ ಎನ್ನಲಾಗಿದೆ.

'ಕೋಟಿಗೊಬ್ಬ' 4 ದಿನಗಳ ಲೆಕ್ಕಾಚಾರ (ವಿತರಕರ ವಲಯದ ಲೆಕ್ಕ)

ಮೊದಲ ದಿನ ₹3.60 ಲಕ್ಷ (ಅಂದಾಜು)
2ನೇ ದಿನ ₹1.50 ಲಕ್ಷ (ಅಂದಾಜು)
3ನೇ ದಿನ ₹3.60 ಲಕ್ಷ (ಅಂದಾಜು)
4ನೇ ದಿನ ₹90 ಸಾವಿರ (ಅಂದಾಜು)
ಒಟ್ಟು ₹9.60 ಕೋಟಿ (ಅಂದಾಜು)

Vishnuvardhan movie Kotigobba re release day 4 box office collection report

ಬೇರೆ ಎಲ್ಲೆಲ್ಲಿ ರಿಲೀಸ್?

ಬೆಂಗಳೂರಿನಲ್ಲಿ ಒಂದೇ ಚಿತ್ರಮಂದಿರಲ್ಲಿ 'ಕೋಟಿಗೊಬ್ಬ' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ 'ಕೋಟಿಗೊಬ್ಬ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಬೇರೆ ಬೇರೆ ಭಾಗಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಸೂರಪ್ಪ ಬಾಬು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, ಮಂಡ್ಯದ ಮಹಾವೀರ್, ಮೈಸೂರಿನ ಗಾಯತ್ರಿ ಹಾಗೂ ಹಾಸನದ ಸಹ್ಯಾದ್ರಿ ಥಿಯೇಟರ್‌ಗಳಲ್ಲಿ 'ಕೋಟಿಗೊಬ್ಬ' ಸಿನಿಮಾ ರಿ-ರಿಲೀಸ್ ಮಾಡಲಾಗುತ್ತಿದೆ ಎನ್ನಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Vishnuvardhan movie Kotigobba re release day 4 box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X