Ekka Box Office Day 10: ಅತ್ತ 'ಸು ಫ್ರಮ್ ಸೋ'.. ಇತ್ತ 'ಎಕ್ಕ'.. 10ನೇ ದಿನದ ಕಲೆಕ್ಷನ್‌ನಲ್ಲೂ ಏರಿಕೆ
ಯುವ ರಾಜ್‌ಕುಮಾರ್ ಎರಡನೇ ಸಿನಿಮಾ 'ಎಕ್ಕ' ಎರಡನೇ ದಿನ ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೊದಲ ವೀಕೆಂಡ್ ಮುಗಿಯುತ್ತಿದ್ದಂತೆ ಗಳಿಕೆಯಲ್ಲಿ ಇಳಿಕೆ ಕಂಡಿದ್ದ ಎರಡು ವಾರಕ್ಕೆ ಸೈಲೆಂಟ್ ಆಗುತ್ತೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಎರಡನೇ ವೀಕೆಂಡ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ ಸಿನಿಮಾ ಮಂದಿಗೆ ಅಚ್ಚರಿ ಮೂಡಿಸಿದೆ. 'ಸು ಫ್ರಮ್ ಸೋ' ಕಲೆಕ್ಷನ್ ಏರಿಕೆ ಆಗುತ್ತಿದ್ದಂತೆ, 'ಎಕ್ಕ' ಗಳಿಕೆ ಕೂಡ ಏರಿಕೆ ಕಂಡಿರೋದು ಖುಷಿ ವಿಚಾರ.
ಕನ್ನಡ ಚಿತ್ರರಂಗಕ್ಕೆ 'ಎಕ್ಕ' ಸಿನಿಮಾ ಗೆಲ್ಲಲೇ ಬೇಕಿತ್ತು. ಯಾಕಂದ್ರೆ, ಮೂರು ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ಸೇರಿ ಈ ಸಿನಿಮಾಗೆ ಕೈ ಹಾಕಿತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋ ಮೂರು ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಒಡಂಬಡಿಕೆಗಳ ಅಗತ್ಯವಿದೆ. ಅದಕ್ಕೆ 'ಎಕ್ಕ' ಉತ್ತರ ಕೊಟ್ಟಿದೆ.

ಮೊದಲ ಮೂರು ದಿನ 'ಎಕ್ಕ' ಕಲೆಕ್ಷನ್ ಅದ್ಭುತವಾಗಿತ್ತು. ಆದರೆ, ನಾಲ್ಕನೇ ದಿನದಿಂದ ಈ ಸಿನಿಮಾ ಕಲೆಕ್ಷನ್ ಸಹಜವಾಗಿ ಡ್ರಾಪ್ ಆಗಿತ್ತು. ಈ ಕಾರಣಕ್ಕೆ 2ನೇ ವೀಕೆಂಡ್ ವೀಕ್ ಆಗಬಹುದೆಂದ ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದರು. ಆದರೆ,ಅದಕ್ಕೆ ತದ್ವಿರುದ್ಧವಾದ ಕಲೆಕ್ಷನ್ ಆಗಿದೆ. ಶನಿವಾರ ಹಾಗೂ ಭಾನುವಾರ ಈ ಎರಡೂ ದಿನವೂ ಕಲೆಕ್ಷನ್ ಏರಿಕೆಯಾಗಿದೆ. ಹಾಗಿದ್ದರೆ, 10ನೇ ದಿನದ ಸ್ಯಾಕ್ನಿಲ್ಕ್ ರಿಪೋರ್ಟ್ ಹೇಗಿದೆ ನೋಡುವುದಕ್ಕೆ ಮುಂದೆ ಓದಿ.
'ಎಕ್ಕ' 10ನೇ ದಿನ ಕಲೆಕ್ಷನ್ ಎಷ್ಟು?
'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡುತ್ತಿದ್ದಂತೆ 'ಎಕ್ಕ'ಗೂ ಬೂಸ್ಟ್ ಸಿಕ್ಕಿತ್ತು. ಯುವ ರಾಜ್‌ಕುಮಾರ್ ಸಿನಿಮಾದ ಕಲೆಕ್ಷನ್ 9ನೇ ದಿನವೂ ದುಪ್ಪಟ್ಟು ಕಲೆಕ್ಷನ್ ಆಗಿತ್ತು. ಹಾಗೇ 10ನೇ ದಿನವೂ ಕೂಡ ಏರಿಕೆಯಾಗಿದೆ. 9ನೇ ದಿನಕ್ಕೆ ಹೋಲಿಕೆ ಮಾಡಿದರೆ, 10ನೇ ದಿನ ₹23 ಲಕ್ಷ ಏರಿಕೆಯಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ 10ನೇ ದಿನ 86 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಶನಿವಾರಕ್ಕೆ ಹೋಲಿಸಿದರೆ, ಭಾನುವಾರ ಇನ್ನೂ ಏರಿಕೆ ಕಂಡಿದ್ದು, ಸಿನಿಮಾ ತಂಡಕ್ಕೆ ಕಿಕ್ ಕೊಟ್ಟಿದೆ.

'ಎಕ್ಕ' ಇಲ್ಲಿವರೆಗೂ ಗಳಿಸಿದ್ದೆಷ್ಟು?
ಮೊದಲ ವೀಕೆಂಡ್‌ಗೆ ಹೋಲಿಕೆ ಮಾಡಿದರೆ, ಎರಡನೇ ವೀಕೆಂಡ್‌ಗೆ ಸ್ಕ್ರೀನ್‌ಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಹೀಗಿದ್ದರೂ ಎರಡನೇ ವೀಕೆಂಡ್‌ನಲ್ಲಿ ಕಲೆಕ್ಷನ್ ತೃಪ್ತಿದಾಯಕವಾಗಿದೆ. ಮೊದಲ ದಿನ 1.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ 'ಎಕ್ಕ' 10ನೇ ದಿನಕ್ಕೆ ₹86 ಲಕ್ಷ ಕಲೆಕ್ಷನ್ ಮಾಡಿದೆ. 'ಎಕ್ಕ' ಬಿಡುಗಡೆಯಾದ 10 ದಿನಗಳಲ್ಲಿ 8.44 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ 10 ಕೋಟಿ ಕ್ಲಬ್ ಸೇರಲಿದೆ. ಹಾಗೇನಾದರೂ ಆದರೆ, ಯುವ ನಟಿಸಿದ ಎರಡನೇ ಸಿನಿಮಾ ₹10 ಕೋಟಿ ಕ್ಲಬ್ ಸೇರಿದಂತಾಗುತ್ತೆ.
ಅಸಲಿ ಪರೀಕ್ಷೆ ಈಗ ಶುರು
ಯಾವುದೇ ಸಿನಿಮಾ ಆಗಿದ್ದರೂ, ಮೊದಲ ಸೋಮವಾರದ ಕಲೆಕ್ಷನ್ ತುಂಬಾನೇ ಮುಖ್ಯ ಆಗಿರುತ್ತೆ. ಈ ಟೆಸ್ಟ್‌ನಲ್ಲಿ 'ಎಕ್ಕ' ಪಾಸಾಗಿತ್ತು. ಈಗ ಎರಡನೇ ಸೋಮವಾರವೂ ಸಿನಿಮಾದ ಕಲೆಕ್ಷನ್ ಭಾನುವಾರ ಗಳಿಸಿದ್ದಕ್ಕಿಂತ ಅರ್ಧಕ್ಕೆ ಬಂದರೂ 'ಎಕ್ಕ' ಗೆದ್ದಂತೆ. ಇನ್ನೊಂದು ವಾರ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಬಹುದು. ಮೂರನೇ ವೀಕೆಂಡ್‌ವರೆಗೂ ಸಿನಿಮಾ ಥಿಯೇಟರ್‌ನಲ್ಲಿ ಆರಾಮಾಗಿ ಉಳಿದುಕೊಳ್ಳೋದು ಗ್ಯಾರಂಟಿ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











