Ekka Box Office Day 11: ವೀಕೆಂಡ್‌ನಲ್ಲಿ 'ಎಕ್ಕ' ಭರ್ಜರಿ ಕಲೆಕ್ಷನ್; 11ನೇ ದಿನವೂ ಹೀಗೆ ಇದೆಯಾ ಕಲೆಕ್ಷನ್?
2025ರ ಸೆಂಕೆಂಡ್ ಹಾಫ್ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಭರವಸೆ ಮೂಡಿಸಿದ್ದು 'ಎಕ್ಕ'. ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ನಟನೆಯ ಎರಡನೇ ಸಿನಿಮಾ ಅನ್ನೋದು ಒಂದು ಕಡೆಯದರೆ, ಇನ್ನೊಂದು ಕಡೆ ಮೂವರು ದಿಗ್ಗಜರು ಒಟ್ಟಿಗೆ ಸೇರಿ ನಿರ್ಮಾಣ ಮಾಡಿರುವ ಸಿನಿಮವಿದು. ಈ ಎಲ್ಲಾ ಕಾರಣಕ್ಕೆ 'ಎಕ್ಕ' ಸ್ಯಾಂಡಲ್‌ವುಡ್ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಎರಡು ವಾರವನ್ನು ಯಶಸ್ವಿಯಾಗಿ ಪೂರೈಸುತ್ತಿದೆ.
ಪಕ್ಕಾ ಮಾಸ್ ಕಮರ್ಷಿಯಲ್ ಎಲಿಮೆಂಟ್ಸ್ ಅನ್ನು ಇಟ್ಕೊಂಡು ಬಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿದೆ. 2025 ಸೆಕೆಂಡ್ ಹಾಫ್‌ನಲ್ಲಿ ಹಿಟ್ ಲಿಸ್ಟ್ ಸೇರಿದ ಮೊದಲನೇ ಸಿನಿಮಾ ಎನ್ನಬಹುದು. ಸದ್ಯ ಕನ್ನಡ ಚಿತ್ರರಂಗದಲ್ಲಿ ಒಂದು ಕಡೆ ಪಕ್ಕಾ ಕಂಟೆಂಟ್ ಸಿನಿಮಾ 'ಸು ಫ್ರಮ್ ಸೋ' ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದ್ದರೆ, ಇನ್ನೊಂದು ಕಡೆ ಪಕ್ಕಾ ಮಾಸ್ ಕಮರ್ಷಿಯಲ್ ಸಿನಿಮಾ 'ಎಕ್ಕ'ನೂ ಇಷ್ಟ ಆಗುತ್ತಿದೆ.

ಯುವ ರಾಜ್‌ಕುಮಾರ್ ಎರಡನೇ ಸಿನಿಮಾ 'ಎಕ್ಕ' 2ನೇ ವೀಕೆಂಡ್‌ನಲ್ಲಿ ಅಬ್ಬರಿಸಿತ್ತು. ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ವೀಕ್ ಆಗಿರಲಿಲ್ಲ. ಆದರೆ, ವೀಕೆಂಡ್ ಮುಗಿದ ಬಳಿಕವೂ ಕಲೆಕ್ಷನ್ ಹಾಗೇ ಇದೆಯೇ? ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆಯಾ? ಮುಂದಿನ ದಿನಗಳಲ್ಲಿ ಈ ಸಿನಿಮಾದ ಲೆಕ್ಕಾಚಾರವೇನು? 11ನೇ ದಿನ ಗಳಿಸಿದ್ದು ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
11ನೇ ದಿನ ಹೇಗಿದೆ ಕಲೆಕ್ಷನ್?
"ಬ್ಯಾಂಗಲ್ ಬಂಗಾರಿ" ಸಾಂಗ್, ಜಬರ್ದಸ್ತ್ ಮಾಸ್ ಟೀಸರ್ ಮತ್ತು ಟ್ರೈಲರ್ ಸಿನಿಮಾ ಪ್ರೇಮಿಗಳ ಮನ ಸೆಳೆದಿತ್ತು. ಥಿಯೇಟರ್‌ಗೆ ಮತ್ತೆ ಜನರು ಬರುತ್ತಾರೆ ಅನ್ನೋದು ಖಾತ್ರಿಯಾಗಿತ್ತು. ಮೊದಲ ವಾರ ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿತ್ತು. ವೀಕ್ ಡೇಸ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ ಕೊಂಚ ಮಟ್ಟಿಗೆ ಡ್ರಾಪ್ ಆಗಿತ್ತು. ಹಾಗೇ ಎರಡನೇ ವೀಕೆಂಡ್‌ನಲ್ಲಿ ಮತ್ತೆ ಕಲೆಕ್ಷನ್‌ನಲ್ಲಿ ಏರಿಕೆಯಾಗಿತ್ತು. ಆದರೆ, 11ನೇ ದಿನ ಗಳಿಕೆಯಲ್ಲಿ ಡ್ರಾಪ್ ಆಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ 11ನೇ ದಿನ 19 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿಕ್ಕಾಪಟ್ಟೆ ಡ್ರಾಪ್ ಆಗಿದೆ.
ಇಲ್ಲಿವರೆಗೂ ಎಷ್ಟು ಕಲೆಕ್ಷನ್ ಆಗಿದೆ?
ಯುವ ರಾಜ್‌ಕುಮಾರ್ ಸಿನಿಮಾ 'ಎಕ್ಕ' ರಿಲೀಸ್ ಆಗಿ 12ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 11 ದಿನಗಳಲ್ಲಿ 10 ದಿನಗಳ ಕಲೆಕ್ಷನ್ ಸ್ಟಡಿಯಾಗಿತ್ತು. ಸಿನಿಮಾದ ಆರಂಭಿಕ ಕಲೆಕ್ಷನ್ ಭರ್ಜರಿಯಾಗಿತ್ತು. ಮೊದಲ ಮೂರು ದಿನ 4.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಉಳಿದ 8 ದಿನಗಳಲ್ಲಿ 4.20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಒಟ್ಟು 11 ದಿನಗಳಲ್ಲಿ 8.63 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಮೂರನೇ ವಾರಕ್ಕೆ ಕಲೆಕ್ಷನ್ ಹೇಗಿರುತ್ತೆ? ಸದ್ಯಕ್ಕೆ ಕುತೂಹಲ.

ಮೂರನೇ ವಾರದ ಕಲೆಕ್ಷನ್ ಹೇಗಿರುತ್ತೆ?
'ಎಕ್ಕ' ಎರಡು ವಾರಗಳ ಕಲೆಕ್ಷನ್ ಇಂಪ್ರೆಸಿವ್ ಆಗಿದ್ದು, ಮೂರನೇ ವಾರದ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ. 3ನೇ ವೀಕೆಂಡ್‌ನಲ್ಲಿ 'ಎಕ್ಕ' ಕಲೆಕ್ಷನ್ ಕೋಟಿ ಲೆಕ್ಕದಲ್ಲಿ ಆದರೆ, ಆರಾಮಾಗಿ 10 ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ. ಒಂದು ವೇಳೆ ಮೂರನೇ ವಾರವೂ ಸಿನಿಮಾ ಸ್ಟೇಬಲ್ ಆದರೆ, ₹10 ಕೋಟಿ ಕ್ಲಬ್ ಸೇರಲಿದೆ. ಒಟ್ನಲ್ಲಿ ಈ ವರ್ಷದ ಸೆಕೆಂಡ್ ಹಾಫ್‌ನಲ್ಲಿ ಥಿಯೇಟರ್‌ಗೆ ಜನರನ್ನು ಕರೆದುಕೊಂಡ ಮೊದಲ ಸಿನಿಮಾ ಆಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











