Ekka Box Office Day 2: 'ಎಕ್ಕ' ಎರಡನೇ ದಿನ ಡ್ರಾಪ್ ಆಯ್ತಾ? ಹೆಚ್ಚಾಯ್ತಾ? ಯುವ ಸಿನಿಮಾದ ಭವಿಷ್ಯವೇನು?
ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ರಿಲೀಸ್ ಆಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. 'ಯುವ' ಬಳಿಕ ಕಂಪ್ಲೀಟ್ ಮಾಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿರುವ ದೊಡ್ಮನೆಯ ಕುಡಿಗೆ 'ಎಕ್ಕ' ಸಕ್ಸಸ್ ಕೊಡುತ್ತಾ? ಸದ್ಯಕ್ಕೆ ಹೇಳುವುದಕ್ಕೆ ಕಷ್ಟ. ಇನ್ನೂ ಒಂದು ವಾರ ಸಿನಿಮಾದ ಕಲೆಕ್ಷನ್ ಹೇಗಿರುತ್ತೆ? ಅನ್ನೋದನ್ನು ನೋಡಿಕೊಂಡು ಈ ನಿರ್ಧಾರ ಮಾಡಬೇಕಾಗುತ್ತೆ. ಇನ್ನೂ ಸಿನಿಮಾ ರಿಲೀಸ್ ಆಗಿ ಎರಡು ದಿನಗಳಾಗಿದ್ದರಿಂದ ಎಲ್ಲರ ಕಣ್ಣು ಸಿನಿಮಾದ ಕಲೆಕ್ಷನ್ ಮೇಲೆ ನಿಂತಿದೆ.
'ಎಕ್ಕ' ಓಪನಿಂಗ್ ಚೆನ್ನಾಗಿದೆ. ಮೊದಲ ದಿನ ಡಿಸೆಂಟ್ ಕಲೆಕ್ಷನ್ ಮಾಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಸಿನಿಮಾ ಕಲೆಕ್ಷನ್ ಚೆನ್ನಾಗಿತ್ತು. ಮೈಸೂರು, ಮಂಡ್ಯ ಭಾಗಗಳಲ್ಲಿ ಹೆಚ್ಚು ಕಲೆಕ್ಷನ್ ಆಗಿವೆ. ಇನ್ನು ತುಮಕೂರು, ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕ ಭಾಗದ ಕೆಲವು ಏರಿಯಾಗಳಲ್ಲಿ ಮೊದಲ ದಿನ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಿದ್ದರೆ, ಎರಡನೇ ದಿನನೂ ಹೀಗೆ ರೆಸ್ಪಾನ್ಸ್ ಸಿಕ್ಕಿದೆಯಾ?

ಯುವ ರಾಜ್‌ಕುಮಾರ್ 'ಎಕ್ಕ' ಕಲೆಕ್ಷನ್ ಬಗ್ಗೆ ಎರಡೆರಡು ಅಂಕಿ ಅಂಶಗಳು ಸಿಗುತ್ತಿವೆ. ಒಂದು ಕಡೆ ಟ್ರೇಡ್ ರಿಪೋರ್ಟ್ ಮಾಡುವ ಸ್ಯಾಕ್ನಿಲ್ಕ್.ಕಾಮ್ ಮೊದಲನೇ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದ್ದರೆ, ಕರ್ನಾಟಕದ ವಿತಕರ ವಲಯದಲ್ಲಿಯೇ ಮತ್ತೊಂದು ರಿಪೋರ್ಟ್ ಸಿಗುತ್ತೆ. ಅಸಲಿಗೆ ಈ ಎರಡು ರಿಪೋರ್ಟ್‌ಗಳ ಪ್ರಕಾರ 'ಎಕ್ಕ' 2ನೇ ದಿನ ಎಷ್ಟು ಕಲೆಕ್ಷನ್ ಆಗಿದೆ ಅನ್ನೋದನ್ನು ನೋಡೋಣ.
2ನೇ ದಿನ 'ಎಕ್ಕ' ಕಲೆಕ್ಷನ್ ಎಷ್ಟು?
ಯುವ ರಾಜ್‌ಕುಮಾರ್ 'ಎಕ್ಕ' ಸಿನಿಮಾ ಕಲೆಕ್ಷನ್ ವಿಚಾರವಾಗಿ ಸ್ಪಷ್ಟ ಚಿತ್ರಣ ಇನ್ನೂ ಸಿಗದೇ ಹೋದರೂ ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ ಮೊದಲನೇ ದಿನಕ್ಕಿಂತ ಎರಡನೇ ದಿನ ಹೆಚ್ಚು ಗಳಿಕೆ ಕಂಡಿದೆ. ಅಂದರೆ, ಎರಡನೇ ದಿನ ಸುಮಾರು 1.82 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ. ಆದರೆ, ವಿತರಕರ ವಲಯದಲ್ಲಿ ರಿಪೋರ್ಟ್ ಬೇರೆನೇ ಸಿಗುತ್ತಿದೆ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾದ ಎರಡು ದಿನಗಳ ಕಲೆಕ್ಷನ್ ₹3.27 ಕೋಟಿ ಆಗಿದೆ.
ವಿತರಕರ ವಲಯದ ಕಲೆಕ್ಷನ್ ಎಷ್ಟು?
ಇನ್ನು ಕರ್ನಾಟಕದ ವಿತರಕರು ಕೊಡುವ ಲೆಕ್ಕಾಚಾರ ಬೇರೆನೇ ಇದೆ. ಶುಕ್ರವಾರಕ್ಕಿಂತ ಶನಿವಾರ ಗಳಿಕೆಯಲ್ಲಿ ಡ್ರಾಪ್ ಆಗಿದೆ. ವೀಕೆಂಡ್ ಇದ್ದರೂ ಸಂಜೆ ವೇಳೆಗೆ ಮಳೆ ಬಂದಿದ್ದರಿಂದ ಜನರು ಥಿಯೇಟರ್ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿಲ್ಲ. ಹೀಗಾಗಿ ಎರಡನೇ ಡ್ರಾಪ್ ಆಗಿದ್ದು, ₹80 ಲಕ್ಷದಿಂದ ₹1 ಕೋಟಿ ಆಸುಪಾಸಿನಲ್ಲಿ ಸಿನಿಮಾ ಕಲೆಕ್ಷನ್ ಮಾಡಿರಬಹುದು. ಹಾಗೇ ಥಿಯೇಟರ್‌ಗಳ ಕಲೆಕ್ಷನ್ ಲೆಕ್ಕವನ್ನೂ ಕೊಟ್ಟಿದ್ದಾರೆ.
ಸಂತೋಷ್ 2.90 ಲಕ್ಷ
ವೀರೇಶ್ 3.10 ಲಕ್ಷ
ಮೈಸೂರು, ಸಂಗಮ್ 1.40 ಲಕ್ಷ
ತುಮಕೂರು ಗಾಯತ್ರಿ 85 ಸಾವಿರ
ಮಂಡ್ಯ ಗುರುಶ್ರೀ 1.40 ಲಕ್ಷ

ಭಾನುವಾರದ ಕಲೆಕ್ಷನ್?
ಇನ್ನು ಭಾನುವಾರದ ಕಲೆಕ್ಷನ್ ಸಖತ್ ಆಗಿ ಆದರೆ, ಸಿನಿಮಾ ಹೆಚ್ಚು ಕಡಿಮೆ ಸೇಫರ್ ಜೋನ್ ಹೋಗಬಹುದು. ಮೂರನೇ ದಿನ ₹1.5 ಕೋಟಿ ಮೇಲೆ ಕಲೆಕ್ಷನ್ ಆದರೆ, ಉಳಿದ ನಾಲ್ಕು ದಿನಗಳಲ್ಲಿ ಸಿನಿಮಾ ಹಾಕಿದ ಬಂಡವಾಳ ದುಡಿದುಕೊಳ್ಳುತ್ತೆ. ಹಾಗೇ ಎರಡನೇ ವಾರದಿಂದ 'ಎಕ್ಕ' ಲಾಭವನ್ನು ನೋಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಒಟ್ಬಲ್ಲಿ ಥಿಯೇಟರ್‌ಗಳು ಬಹಳ ದಿನಗಳ ಬಳಿಕ ಒಳ್ಳೆಯ ಕಲೆಕ್ಷನ್ ಅನ್ನು ನೋಡುತ್ತಿವೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











