Ekka Box Office Day 8: 8ನೇ ದಿನವೂ 'ಎಕ್ಕ' ಫುಲ್ ಸ್ಟಡಿ; ₹10 ಕೋಟಿ ಕ್ಲಬ್‌ಗೆ ಸೇರುತ್ತಾ ಯುವ 2ನೇ ಸಿನಿಮಾ
ಅಣ್ಣಾವ್ರ ಮೊಮ್ಮಗ ಯುವ ರಾಜ್‌ಕುಮಾರ್ ಎರಡನೇ ಸಿನಿಮಾಗೆ ಮಾಸ್ ಕಡೆ ವಾಲಿದ್ದಾರೆ. ದೊಡ್ಮನೆ ಅಭಿಮಾನಿಗಳ ಭರವಸೆಯ ಹೀರೋ ಯುವ ರಾಜ್‌ಕುಮಾರ್‌ಗೆ 'ಎಕ್ಕ' ಮಾಸ್ ಹೀರೋ ಪಟ್ಟ ಕೊಟ್ಟಿದ್ದಾಗಿದೆ. ಯುವ ಮ್ಯಾನರಿಸಂ, ಮಾಸ್ ಅಪೀಲ್ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಕನ್ನಡಿಗರನ್ನು ಥಿಯೇಟರ್‌ಗೆ ಕರೆದುಕೊಂಡು ಬರೋದಕ್ಕೆ ಸಿನಿಮಾಗಳು ಪರದಾಡುತ್ತಿದ್ದವು. ಸೆಕೆಂಡ್ ಹಾಫ್‌ನಲ್ಲಿ 'ಎಕ್ಕ' ಯಶಸ್ವಿಯಾಗಿದೆ.
'ಎಕ್ಕ' ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಅನ್ನೋದು ಒಂದ್ಕಡೆಯಾದರೆ, ಮೂರು ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ಸೇರಿ ಸಿನಿಮಾ ನಿರ್ಮಿಸಿರೋದು ಇನ್ನೊಂದು ಕಡೆ. ಹೀಗಾಗಿ ಒಟ್ಟಿಗೆ ಸೇರಿ ಸಿನಿಮಾ ನಿರ್ಮಾಣಗಳಾರೆ, ಕನ್ನಡ ಚಿತ್ರರಂಗ ಮತ್ತೆ ಯಶಸ್ಸಿನ ರುಚಿಯನ್ನು ನೋಡಬಹುದು. 'ಎಕ್ಕ' ಒಂದು ಹಂತಕ್ಕೆ ಯಶಸ್ವಿಯಾಗಿದೆ ಎಂದೇ ಭಾವಿಸಬಹುದು. ಗಳಿಕೆಯಲ್ಲಿ ಈ ಸಿನಿಮಾ ಸ್ಟಡಿಯಾಗಿದೆ.

'ಎಕ್ಕ'ಒಂದು ಲೋಕಲ್ ಮಾಸ್ ಸಿನಿಮಾ. ಪಕ್ಕಾ ಕಮರ್ಷಿಯ್ ಎಲಿಮೆಂಟ್ಸ್ ಅನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸಿನಿಮಾದ ಹಾಡುಗಳು, ಟ್ರೈಲರ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಹೀಗಾಗಿ 'ಎಕ್ಕ' ಬಾಕ್ಸಾಫೀಸ್‌ನಲ್ಲಿ ಬಿಗ್ ಸಕ್ಸಸ್ ಕಾಣಬಹುದೆಂಬ ನಿರೀಕ್ಷೆಯಿತ್ತು. ಅಷ್ಟು ದೊಡ್ಡ ಮಟ್ಟಕ್ಕೆ ಸಿನಿಮಾ ಗಳಿಕೆ ಮಾಡದೇ ಹೋದರೂ, ಡಿಸೆಂಟ್ ಆಗಿ ಮುನ್ನುಗ್ಗುತ್ತಿದೆ. ಹಾಗಿದ್ದರೆ, 8 ದಿನ ಸಿನಿಮಾ ಗಳಿಸಿದ್ದು ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ಎಕ್ಕ' 8ನೇ ದಿನದ ಕಲೆಕ್ಷನ್ ಎಷ್ಟು?
ಈ ಮಾಸ್ ಸ್ಟೋರಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಎರಡರಲ್ಲೂ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕಳೆದ 8 ದಿನಗಳಿಂದ ಸಿನಿಮಾ ಕಲೆಕ್ಷನ್ ಏರದೆ ಇಳಿಯದ ಮುಂದೆ ಸಾಗುತ್ತಿದೆ. ಬಾಕ್ಸಾಫೀಸನಲ್ಲಿ ಯುವ ಸಿನಿಮಾದ ಕಲೆಕ್ಷನ್ ಒಂದೇ ರೀತಿ ಇದ್ದು, ಇನ್ನೇನು ಕೆಲವೇ ದಿನಗಳಲ್ಲಿ ₹10 ಕೋಟಿ ಕ್ಲಬ್ ಸೇರಲಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ಈ ಸಿನಿಮಾ 8ನೇ ದಿನ 32 ಲಕ್ಷ ರೂಪಾಯಿಯನ್ನು ಕಲೆ ಹಾಕಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

8 ದಿನಗಳಲ್ಲಿ 'ಎಕ್ಕ' ಗಳಿಸಿದ್ದೆಷ್ಟು?
ಯುವ ರಾಜ್‌ಕುಮಾರ್ 'ಎಕ್ಕ' ಸಿನಿಮಾ 8ನೇ ದಿನ ಗಳಿಸಿದ 32 ಲಕ್ಷ ರೂಪಾಯಿ ಸೇರಿ ಸುಮಾರು ₹7 ಕೋಟಿಯಷ್ಟು ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಮೊದಲ ಮೂರು ದಿನ ಕೋಟಿ ಲೆಕ್ಕದಲ್ಲಿ ಗಳಿಕೆ ಮಾಡಿದೆ, ನಾಲ್ಕನೇ ದಿನದಿಂದ ಲಕ್ಷಗಳಲ್ಲಿ ಕಲೆಕ್ಷನ್ ಆಗಿದೆ. ಒಟ್ಟು 6.95 ಕೋಟಿ ರೂಪಾಯಿ ಕೇವಲ ಕರ್ನಾಟಕದಿಂದ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.
ಮೊದಲನೇ ದಿನ ₹1.45 ಕೋಟಿ
2ನೇ ದಿನ ₹1.35 ಕೋಟಿ
3ನೇ ದಿನ ₹1.65 ಕೋಟಿ
4ನೇ ದಿನ ₹0.70 ಕೋಟಿ
5ನೇ ದಿನ ₹0.60 ಕೋಟಿ
6ನೇ ದಿನ ₹0.46 ಕೋಟಿ
7ನೇ ದಿನ ₹0.42 ಕೋಟಿ
8ನೇ ದಿನ ₹0.32 ಕೋಟಿ
ಒಟ್ಟು ₹6.95 ಕೋಟಿ
₹10 ಕೋಟಿ ಕ್ಲಬ್ ಸೇರಬಹುದೇ?
ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮ 'ಯುವ' ಬಾಕ್ಸಾಫೀಸ್‌ನಲ್ಲಿ ₹10 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಎರಡನೇ ಸಿನಿಮಾ 'ಎಕ್ಕ' ಕೂಡ ₹10 ಕೋಟಿ ಕ್ಲಬ್ ಸೇರಬೇಕು ಎಂದು ಅಭಿಮಾನಿಗಳು ಬಯಸಿದ್ದಾರೆ. ಸದ್ಯ ₹7 ಕೋಟಿ ಕಲೆಕ್ಷನ್ ಮಾಡಿರುವ ಈ ಸಿನಿಮಾ ಇನ್ನೊಂದು ವಾರದಲ್ಲಿ ಮೂರು ಕೋಟಿ ಕಲೆ ಹಾಕುತ್ತಾ? ಎಂದು ನೋಡಬೇಕಿದೆ. ಟ್ರೇಡ್ ಪಂಡಿತರ ಪ್ರಕಾರ ಎರಡನೇ ವೀಕೆಂಡ್‌ನಲ್ಲಿ 10 ಕೋಟಿ ಕ್ಲಬ್ ಸೇರಬಹುದೆಂಬ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











