Ekka Box Office Day 9: ವೀಕೆಂಡ್ ಮತ್ತೆ ಚಿಗುರಿದ ಯುವ ರಾಜ್‌ಕುಮಾರ್ 'ಎಕ್ಕ'; ಬಾಕ್ಸಾಫೀಸ್‌ನಲ್ಲಿ ಡಬಲ್ ಕಲೆಕ್ಷನ್

ಯುವ ರಾಜ್‌ಕುಮಾರ್ ನಟನೆಯ ಎರಡನೇ ಸಿನಿಮಾ 'ಎಕ್ಕ' ಎರಡನೇ ವೀಕೆಂಡ್‌ನಲ್ಲಿ ಕಲೆಕ್ಷನ್ ದುಪ್ಪಟ್ಟು ಮಾಡಿದೆ. ಜುಲೈ 18ರಂದು ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಸ್ಟಡಿಯಾಗಿತ್ತು. ಇನ್ನೇನು 'ಸು ಫ್ರಮ್ ಸೋ' ಸಿನಿಮಾ ಎಲ್ಲಡೆ ಮಸ್ತ್ ಕಲೆಕ್ಷನ್ ಆಗುತ್ತಿದ್ದಂತೆ ಹಿಂದಿನ ವಾರ ರಿಲೀಸ್ ಆಗಿದ್ದ 'ಎಕ್ಕ' ಹಾಗೂ 'ಜೂನಿಯರ್‌' ಕಲೆಕ್ಷನ್ ಮೇಲೆ ಹೊಡೆತ ಬೀಳಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, 'ಎಕ್ಕ' ಸಿನಿಮಾದ ಕಲೆಕ್ಷನ್ 9ನೇ ದಿನ ಏರಿಕೆಯಾಗಿದೆ.

ರೋಹಿತ್ ಪದಕಿ ನಿರ್ದೇಶಿಸಿದ 'ಎಕ್ಕ'ದಲ್ಲಿ ಯುವ ರಾಜ್‌ಕುಮಾರ್ ಮಾಸ್ ಅವತಾರ ತಾಳಿದ್ದರು. ಯುವ ರಾಜ್‌ಕುಮಾರ್ ಮ್ಯಾನರಿಸಂ ಹಾಗೂ ಲುಕ್‌ಗೆ ದೊಡ್ಮನೆಯ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಆದರೆ, ವೀಕ್‌ ಡೇಸ್‌ನಲ್ಲಿ 'ಎಕ್ಕ' ಕಲೆಕ್ಷನ್ ಕೋಟಿಯಿಂದ ಲಕ್ಷಕ್ಕೆ ಇಳಿದಿತ್ತು. ಆದರೂ ಸ್ಟಡಿಯಾಗಿ ಮುಂದುವರೆದಿತ್ತು. ಇದರ ಹಿಂದೇನೆ 'ಸು ಫ್ರಮ್ ಸೋ' ರಿಲೀಸ್ ಆಗಿದ್ದರಿಂದ ಬಾಕ್ಸಾಫೀಸ್‌ಗೆ ಏಟು ಕೊಡಬಹುದೆಂದು ಅಂದಾಜಿಸಲಾಗಿತ್ತು.

Yuva Rajkumar Sanjana Sampada starrer Ekka film box office day 9 collection report

ಆದರೆ, ಎರಡನೇ ವೀಕೆಂಡ್‌ನಲ್ಲಿ 'ಎಕ್ಕ' ಸಿನಿಮಾದ ಕಲೆಕ್ಷನ್ ದುಪ್ಪಟ್ಟು ಏರಿಕೆಯಾಗಿದೆ. 8ನೇ ದಿನಕ್ಕೆ ಹೋಲಿಕೆ ಮಾಡಿದರೇ, 9ನೇ ದಿನ ಸಿನಿಮಾದ ಕಲೆಕ್ಷನ್ ಡಬಲ್ ಆಗಿದೆ. ವೀಕೆಂಡ್‌ನಲ್ಲಿ ಯುವ ರಾಜ್‌ಕುಮಾರ್ ಸಿನಿಮಾಗೆ ಅಷ್ಟೇ ಏಟು ಬಿದ್ದಿಲ್ಲ. 'ಸು ಫ್ರಮ್ ಸೋ' ಸಿನಿಮಾದಿಂದ 'ಎಕ್ಕ' ಶನಿವಾರ (ಜುಲೈ 26) ರಂದು ಆಗಿಲ್ಲ. ಹಾಗಿದ್ದರೆ, 9ನೇ ದಿನ ಈ ಸಿನಿಮ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

9ನೇ ದಿನ 'ಎಕ್ಕ' ಕಲೆಕ್ಷನ್ ಎಷ್ಟು?

'ಎಕ್ಕ' ಪಕ್ಕಾ ಕಮರ್ಷಿಯಲ್ ಸಿನಿಮಾ. ಈ ಸಿನಿಮಾದಲ್ಲಿ ಮಾಸ್ ಸಾಂಗ್, ಮಾಸ್ ಡೈಲಾಗ್, ಮಾಸ್ ಎಂಟ್ರಿ ಹೀಗೆ ಸಿನಿಮಾದ ಉದ್ದಕ್ಕೂ ಮಾಸ್ ಎಲಿಮೆಂಟ್‌ಗಳೇ ಇವೆ. ಹೀಗಾಗಿ ಮಾಸ್ ಸಿನಿಮಾ ಪ್ರಿಯರಿಗೆ 'ಎಕ್ಕ' ಸಿಕ್ಕಾಪಟ್ಟೆ ಇಷ್ಟ ಆಗಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ 'ಎಕ್ಕ' ಸಿನಿಮಾ 8ನೇ ದಿನಕ್ಕಿಂತ 9ನೇ ದಿನ ಡಬಲ್ ಗಳಿಕೆಯನ್ನು ಕಂಡಿದೆ. 9ನೇ ದಿನ ಈ ಸಿನಿಮಾ ಸುಮಾರು 63 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ವೀಕೆಂಡ್‌ನಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡೋದು ಕನ್ಫರ್ಮ್.

9 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಯುವ ರಾಜ್‌ಕುಮಾರ್ ಸಿನಿಮಾ 9ನೇ ದಿನ ಮಾಸ್ ಡಬಲ್ ಕಲೆಕ್ಷನ್ ಮಾಡಿದ್ದು ಮೂರು ನಿರ್ಮಾಣ ಸಂಸ್ಥೆಗಳಾದ ಪಿಆರ್‌ಕೆ ಸ್ಟುಡಿಯೋ, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಗೆ ಬಲ ಬಂದಂತೆ ಆಗಿದೆ. ಇನ್ನೊಂದು ವೀಕೆಂಡ್ ಒಳಗೆ ಎಕ್ಕ ಕಲೆಕ್ಷನ್ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಿದೆ. ಈಗ 9 ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 8.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ.

Yuva Rajkumar Sanjana Sampada starrer Ekka film box office day 9 collection report


ಭಾನುವಾರ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ

ನಿನ್ನೆ ಶನಿವಾರ ಅಂದರೆ 9ನೇ ದಿನ ಡಬಲ್ ಕಲೆಕ್ಷನ್ ಆಗಿದ್ದು, ಮತ್ತೊಂದು ನಿರೀಕ್ಷೆಯನ್ನು ಹುಟ್ಟಾಕಿದೆ. 10ನೇ ದಿನವೂ 'ಎಕ್ಕ' 70 ಲಕ್ಷದಿಂದ 80 ಲಕ್ಷ ರೂಪಾಯಿವರೆಗೂ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ಇಂದು (ಜುಲೈ 27) 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, 'ಎಕ್ಕ' ₹10 ಕೋಟಿ ಕ್ಲಬ್ ಸೇರುವುದಕ್ಕೆ ಇನ್ನೂ ಸನಿಹ ಬರಲಿದೆ. ಹೀಗಾಗಿ ಸಿನಿಮಾ ಮಂದಿಯ ಈ ಘಳಿಗೆಗಾಗಿ ಎದುರು ನೋಡುತ್ತಿದ್ದಾರೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Yuva Rajkumar, Sanjana, Sampada starrer Ekka film box office day 8 collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X