Ekka Box Office Day 1: 'ಎಕ್ಕ' ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕವೇನು? ಕರ್ನಾಟಕದ ವಿತರಕರ ಅಂಕಿ ಅಂಶಗಳೇನು?

'ಎಕ್ಕ' ಸಿನಿಮಾದಿಂದ ಆದರೂ ಸ್ಯಾಂಡಲ್‌ವುಡ್‌ ಮತ್ತೆ ಯಶಸ್ಸಿನ ಹಾದಿ ಹಿಡಿಯಲಿ ಅನ್ನೋ ಸಿನಿಮಾ ಮಂದಿಯದ್ದು. ಕನ್ನಡದ ಮೂರು ಪ್ರಮುಖ ಸಂಸ್ಥೆಗಳು ಒಟ್ಟಾಗಿ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಹಾಗಾಗಿ ಒಂದು ಹಂತಕ್ಕೆ ಈ ಸಿನಿಮಾ ಯೋಚಿಸಿ ಮಾಡಿರುತ್ತಾರೆ ಅನ್ನೋ ನಂಬಿಕೆ ಇತ್ತು. ಜಯಣ್ಣ ಫಿಲ್ಮ್ಸ್, ಕೆಆರ್‌ಜಿ ಸ್ಟುಡಿಯೋ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆ ಈ ಸಿನಿಮಾಗೆ ಹಣವನ್ನು ಹೂಡಿದೆ.

ಈ ಮೂರೂ ಸಂಸ್ಥೆಗಳು ಒಟ್ಟಿಗೆ ಸೇರಿ ಬಳಲಿ ಬೆಂಡಾಗಿರುವ ಕನ್ನಡ ಚಿತ್ರರಂಗಕ್ಕೆ ಕೇವಲ ಆರೇಳು ತಿಂಗಳಲ್ಲಿ ಒಂದು ಮಾಸ್ ಸಿನಿಮಾ ಕೊಡಬೇಕು ಅನ್ನೋ ಪ್ರಯತ್ನಕ್ಕೆ ಮುಂದಾಗಿತ್ತು. ಅಂದುಕೊಂಡಂತೆ ಸಿನಿಮಾ ಮಾಡಿ, ರಿಲೀಸ್ ಮಾಡಲಾಗಿದೆ. ಯುವ ರಾಜ್‌ಕುಮಾರ್ ಅವರನ್ನು ಮಾಸ್ ಅವತಾರದಲ್ಲಿ ತೆರೆತಂದು ನಿಲ್ಲಿಸಿದ್ದೂ ಆಗಿದೆ. ಈಗ ಎದ್ದಿರೋ ಪ್ರಶ್ನೆ ಮೊದಲ ದಿನ ಸಿನಿಮಾ ಕಲೆಕ್ಷನ್ ಎಷ್ಟಾಯ್ತು? ಹಾಕಿದ ಬಂಡವಾಳ ಬರುತ್ತಾ?

Yuva Rajkumar Sanjana Sampada starrer Ekka movie box office day 1 collection report

ನಿರ್ಮಾಪಕ ಹಾಕಿದ ಹಣ ವಾಪಾಸ್ ಬಂದರೆ ಸಾಕು ಎನ್ನುವ ಸ್ಥಿತಿ ಇರುವಾಗ, 'ಎಕ್ಕ' ಆ ಪರಿಸ್ಥಿತಿಯಿಂದ ಸಿನಿಮಾ ಮಂದಿಯನ್ನು ಹೊರಗೆ ತರುತ್ತಾ? ಈ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತೆ. ಆದರೆ, ಮೊದಲ ದಿನ 'ಎಕ್ಕ' ಎಷ್ಟು ಕಲೆಕ್ಷನ್ ಮಾಡಿತು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕವೇನು? ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕ ಎಷ್ಟು? ಯಾವ್ಯಾವ ಏರಿಯಾದಲ್ಲಿ 'ಎಕ್ಕ' ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ ತಿಳಿಯುವುದಕ್ಕೆ ಮುಂದೆ ಓದಿ.

ಫಸ್ಟ್‌ ಡೇ ಕಲೆಕ್ಷನ್ ಎಷ್ಟು?

ಯುವರಾಜ್‌ಕುಮಾರ್ 'ಎಕ್ಕ' ಮೊದಲ ದಿನ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಬ್ಬ ಹರಿದಿನ, ವಿಶೇಷ ದಿನಗಳಲ್ಲದ ವಾರದಲ್ಲಿ ಸಿನಿಮಾ ರಿಲೀಸ್ ಆಗಿದೆ. ಹೀಗಾಗಿ ಮೊದಲ ದಿನ ದೊಡ್ಡ ಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡದೇ ಹೋದರೂ, ದಿಗ್ಗಜರೇ ಸೇರಿ ನಿರ್ಮಿಸಿರುವ ಈ ಸಿನಿಮಾ ಒಂದು ಹಂತಕ್ಕೆ ಗಳಿಕೆ ಮಾಡುತ್ತೆ ಎನ್ನುವ ನಿರೀಕ್ಷೆಯಿತ್ತು. ಆನಿರೀಕ್ಷೆ ಸುಳ್ಳಾಗಲಿಲ್ಲ. 'ಎಕ್ಕ' ಫಸ್ಟ್ ಡೇ ಕಲೆಕ್ಷನ್ 1.60 ಕೋಟಿ ರೂಪಾಯಿ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

ವಿತರಕರ ವಲಯಕ್ಕೆ ಸಿಕ್ಕಿರುವ ಲೆಕ್ಕವೇನು?

ಇನ್ನೂ ಕರ್ನಾಟಕದ ವಿತರಕರ ವಲಯದಲ್ಲೂ ಹೆಚ್ಚು ಅಷ್ಟೇ ಲೆಕ್ಕ ಸಿಕ್ಕಿದೆ. ವಿತರಕರ ಪ್ರಕಾರ, 'ಎಕ್ಕ' ಸಿನಿಮಾ ಮೊದಲ ದಿನ 1.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗದಂತಹ ಏರಿಯಾಗಳಲ್ಲಿ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಪ್ರಮುಖ ಏರಿಯಾಗಳಲ್ಲಿ 'ಎಕ್ಕ' ಸಿನಿಮಾದ ಕಲೆಕ್ಷನ್ ಇಷ್ಟಾಗಿದೆ ಎನ್ನುತ್ತಿವೆ ಮೂಲಗಳು. ಅದರ ಡಿಟೈಲ್ಸ್ ಇಲ್ಲಿದೆ.

ಬಿಕೆಟಿ ₹84 ಲಕ್ಷ
ಎಂಎಂಸಿಎಚ್ ₹28 ಲಕ್ಷ
ಚಿತ್ರದುರ್ಗ-ದಾವಣಗೆರೆ ₹8.50 ಲಕ್ಷ
ಶಿವಮೊಗ್ಗ, ದಕ್ಷಿಣ ಕನ್ನಡ ₹8 ಲಕ್ಷ
ಹುಬ್ಬಳ್ಳಿ ₹14 ಲಕ್ಷ

ಒಟ್ಟು ₹1.42 ಕೋಟಿ

Yuva Rajkumar Sanjana Sampada starrer Ekka movie box office day 1 collection report

ವೀಕೆಂಡ್ ಲೆಕ್ಕಾಚಾರವೇನು?

'ಎಕ್ಕ' ಸಿನಿಮಾಗೆ ರಾಜವಂಶದ ಅಭಿಮಾನಿಗಳ ಬೆಂಬಲವಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಂತೂ ಮಿಸ್ ಇಲ್ಲದೆ ಈ ಸಿನಿಮಾ ನೋಡುತ್ತಾರೆ. ಹೀಗಾಗಿ ವೀಕೆಂಡ್‌ನಲ್ಲಿ ಅಂದರೆ, ಶನಿವಾರ ಹಾಗೂ ಭಾನುವಾರದಂದು ದಿನಕ್ಕೆ ಒಂದು ಕೋಟಿಯಂತೆ ಎರಡು ಕೋಟಿ ಕಲೆಕ್ಷನ್ ಆಗಬಹುದೆಂದು ವಿತರಕರು ಭವಿಷ್ಯ ನುಡಿಸಿದ್ದಾರೆ. ಹಾಗೇ ಮೊದಲ ವಾರದ ಅಂತ್ಯಕ್ಕೆ 5 ರಿಂದ 5.50 ಕೋಟಿ ರೂಪಾಯಿಯನ್ನು ನಿರೀಕ್ಷೆ ಮಾಡಬಹುದೆಂದು ಹೇಳಲಾಗುತ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Yuva Rajkumar, Sanjana, Sampada starrer Ekka movie box office day 1 collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X