Cult Box Office Day 2: ಜಮೀರ್ ಪುತ್ರ ಝೈದ್ ಖಾನ್ ಸಿನಿಮಾ 'ಕಲ್ಟ್' 2ನೇ ದಿನ ಗಳಿಸಿದ್ದೆಷ್ಟು?

ಜಮೀರ್ ಅಹಮದ್‌ ಖಾನ್ ಪುತ್ರ ಝೈದ್ ಖಾನ್ ಎರಡನೇ 'ಕಲ್ಟ್' ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮೊದಲ ಸಿನಿಮಾ 'ಬನಾರಸ್‌'ಗೂ 2ನೇ ದಿನ 'ಕಲ್ಟ್‌'ಗೂ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. 'ಕಲ್ಟ್' ಸಿನಿಮಾದಲ್ಲಿ ಝೈದ್‌ ಖಾನ್ ಎರಡು-ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ 2ನೇ ಸಿನಿಮಾ ಝೈದ್ ಖಾನ್‌ಗೆ ಯಶಸ್ಸು ತಂದು ಕೊಡುತ್ತಾ? ಇಲ್ವಾ? ಅಂತ ಸ್ಯಾಂಡಲ್‌ವುಡ್ ಮಂದಿ ಲೆಕ್ಕಾಚಾರ ಹಾಕುತ್ತಿದ್ದಾರೆ

ಝೈದ್ ಖಾನ್ ಜೊತೆ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್, ಉಪಾದ್ಯಕ್ಷನ ಅರಗಿಣಿ ಮಲೈಕಾ ವಸುಪಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂವರು ಒಟ್ಟಿಗೆ ನಟಿಸಿರುವ ಈ ಸಿನಿಮಾ ಇಂದಿಗೆ (ಜನವರಿ 25) ಮೂರನೇ ದಿನಕ್ಕೆ ಕಾಲಿಟ್ಟಿದೆ. ವೀಕೆಂಡ್ ಜೊತೆ ಬ್ಯಾಕ್‌ ಟು ಬ್ಯಾಕ್ ರಜೆಗಳ ಲಾಭವನ್ನು ಪಡೆಯುವ ಲೆಕ್ಕಾಚಾರದಲ್ಲಿ ಇದೆ.

Zaid Khan Rachita Ram Malaika Vasupal movie Cult Day 2 Box Office Collection Report

ಝೈದ್ ಖಾನ್‌ಗೆ 'ಬನಾರಸ್' ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಯಶಸ್ಸು ತಂದುಕೊಟ್ಟಿಲ್ಲ. ಆದರೆ, ಸ್ಕ್ರೀನ್ ಅಪೀಯರೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ 2ನೇ ಸಿನಿಮಾ 'ಕಲ್ಟ್' ಮೇಲೆ ಎಲ್ಲರ ಕಣ್ಣಿದೆ. ಹಾಗಿದ್ದರೆ, 2ನೇ ದಿನ 'ಕಲ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.

'ಕಲ್ಟ್' 2ನೇ ದಿನ ಗಳಿಸಿದ್ದೆಷ್ಟು?

ಅನಿಲ್ ಕುಮಾರ್ ನಿರ್ದೇಶಿಸಿದ 'ಕಲ್ಟ್' ರಗಡ್ ಫೀಲ್ ಕೊಡಲಾಗಿದೆ. ಚಾಕೊಲೆಟ್ ಬಾಯ್ ಆಗಿದ್ದ ಝೈದ್ ಖಾನ್ 2ನೇ ಸಿನಿಮಾಗೆ ವೈಲೆಂಟ್ ಆಗಿದ್ದಾರೆ. ಜೊತೆ ರಚಿತಾ ರಾಮ್ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೇ ಮಲೈಕಾ ವಸುಪಾಲ್ ಹಾಗೂ ಝೈದ್ ಜೋಡಿ ಬಗ್ಗೆನೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಡ್ ರಿಪೋರ್ಟ್ ಕೊಡುವ ಸ್ಯಾಕ್ನಿಲ್ಕ್ ಪ್ರಕಾರ, 2ನೇ ದಿನ ಗಳಿಸಿದ್ದು ₹41 ಲಕ್ಷ (Net), ಹಾಗೇ ಮೊದಲನೇ ದಿನ ₹53 ಲಕ್ಷ (Net) ಗಳಿದ್ದು, ಎರಡು ದಿನಗಳ ಗಳಿಕೆ 1.06 ಕೋಟಿ (Gross) ಆಗಿದೆ ಎಂದು ಅಂಕಿ ಅಂಶಗಳನ್ನು ನೀಡಿದೆ.

ವಿತರಕರ ವಲಯದ ಲೆಕ್ಕಾಚಾರವೇನು?

'ಕಲ್ಟ್' ಬೆಂಗಳೂರಿನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಝೈದ್ ಖಾನ್ 2ನೇ ಸಿನಿಮಾ 2ನೇ ದಿನ ಗಳಿಕೆಯಲ್ಲಿ ಏರಿಕೆಯಾಗಿದೆ ಎಂದು ಹೇಳುತ್ತಿವೆ ವಿತರಕರ ಮೂಲಗಳು. ಕರ್ನಾಟಕದ ವಿತರಕರ ವಲಯದ ಪ್ರಕಾರ ಮೊದಲ ದಿನ ₹69 ಲಕ್ಷ ಗಳಿಸಿದ್ದರೆ, 2ನೇ ದಿನ ₹81 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಒಟ್ಟು ಎರಡು ದಿನಗಳ ಗಳಿಕೆ ₹1.50 ಕೋಟಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸ್ಯಾಕ್ನಿಲ್ಕ್ ಹಾಗೂ ಕರ್ನಾಟಕದ ವಿತರಕ ಲೆಕ್ಕಾಚಾರಗಳು ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿವೆ.

Zaid Khan Rachita Ram Malaika Vasupal movie Cult Day 2 Box Office Collection Report

ಸೋಮವಾರದ ಮೇಲೆ ಅಸಲಿ ಆಟ

ಝೈದ್ ಖಾನ್ ಸಿನಿಮಾಗೆ ಸೋಮವಾರ (ಗಣರಾಜ್ಯೋತ್ಸವ) ಕೂಡ ರಜೆಯ ದಿನವಾಗಿ ಸಿಗಲಿದೆ. ಹೀಗಾಗಿ ಸತತ ನಾಲ್ಕು ದಿನಗಳ ಕಲೆಕ್ಷನ್‌ ಮೇಲೆ ಸ್ಯಾಂಡಲ್‌ವುಡ್ ಮಂದಿಗೆ ಕಣ್ಣಿದೆ. ಮೂಲಗಳ ಪ್ರಕಾರ, ಕಲ್ಟ್ ಭಾನುವಾರ (ಜನವರಿ 25) ಕೂಡ ಒಳ್ಳೆಯ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇದು ಸೋಮವಾರವೂ ಮುಂದುವರೆದರೆ, ಚಿತ್ರತಂಡಕ್ಕೆ ಜಾಕ್‌ಪಾಟ್ ಅಂತಲೇ ಹೇಳಬಹುದು. ಆದರೆ, ಸೋಮವಾರದ ನಂತರ ಅಸಲಿ ಆಟ ಶುರುವಾಗುವುದಂತೂ ಗ್ಯಾರಂಟಿ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Zaid Khan Rachita Ram, Malaika Vasupal movie Cult Day 2 Box Office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X