Cult Box Office Day 3: 3 ದಿನಗಳಲ್ಲಿ ಝೈದ್ ಖಾನ್ ಸಿನಿಮಾ 'ಕಲ್ಟ್' ಗಳಿಸಿದ್ದೆಷ್ಟು? 2ನೇ ಚಿತ್ರ ಗೆದ್ದಿತೇ?
ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 2ನೇ ಸಿನಿಮಾ 'ಕಲ್ಟ್' ಕಳೆದ ವಾರ ರಿಲೀಸ್ ಆಗಿದೆ. ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿಯೇ ರಿಲೀಸ್ ಮಾಡಲಾಗಿತ್ತು. ಇಂದು (ಜನವರಿ 26) ಈ ಸಿನಿಮಾ ರಿಲೀಸ್ ಆಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. 2ನೇ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ನಿರೀಕ್ಷೆಯಲ್ಲಿ ಝೈದ್ ಖಾನ್ ಹಾಗೂ ತಂಡವಿದೆ.
'ಬನಾರಸ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಝೈದ್ ಖಾನ್ ಸಾಪ್ಟ್ ಲುಕ್ ಕೊಟ್ಟಿದ್ದರು. ಆದರೆ, 2ನೇ ಸಿನಿಮಾ 'ಕಲ್ಟ್' ಪಕ್ಕ ಮಾಸ್ ಸಿನಿಮಾ. ಝೈದ್ ಖಾನ್ ಪಕ್ಕಾ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಮೂರು ಶೇಡ್‌ಗಳಲ್ಲಿ ಝೈದ್ ಖಾನ್ ಕಾಣಿಸಿಕೊಂಡಿದ್ದು, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಿಸಲೇ ಬೇಕು ಅಂತ ಪಣ ತೊಟ್ಟು ಮಾಡಿದ್ದಂತೆ ಇದೆ.

'ಕಲ್ಟ್' ಸಿನಿಮಾದ ಇನ್ನೊಂದು ಹೈಲೈಟ್ ಅಂದರೆ, ಸ್ಟಾರ್ ಕಾಸ್ಟ್. ಝೈದ್ ಖಾನ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದ್ದಾರೆ. ಹೀಗಾಗಿ ಸಿನಿಮಾ ಥಿಯೇಟರ್‌ಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಹಾಗಿದ್ದರೆ, ಮೂರು ದಿನಗಳಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು? ವೀಕೆಂಡ್‌ನಲ್ಲಿ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಕಲ್ಟ್' 3ನೇ ದಿನದ ಕಲೆಕ್ಷನ್ ಎಷ್ಟು?
'ಬನಾರಸ್' ಸಿನಿಮಾ ಬಳಿಕ ಝೈದ್ ಖಾನ್ ಯೋಚನೆ ಮಾಡಿ ಸಿನಿಮಾ ಒಪ್ಪಿಕೊಂಡಿದ್ದರು. 2ನೇ ಸಿನಿಮಾ ಹೊತ್ತಿಗೆ ಮಾಸ್ ಹೀರೋ ಆಗಬೇಕು ಅಂತ ನಿರ್ಧರಿಸಿದಂತಿದೆ. ಏನೇ ಇದ್ದರೂ ಸಿನಿಮಾ ರಿಲೀಸ್ ಆದಲ್ಲಿಂದ ಸ್ಟಡಿಯಾಗಿಯೇ ಮುನ್ನುಗ್ಗುತ್ತಿದೆ. ಮೊದಲ ಮೂರು ದಿನಗಳಲ್ಲಿ ಹೆಚ್ಚು ವ್ಯತ್ಯಾಸಗಳೇನು ಆಗಿಲ್ಲ. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ವರದಿ ಮಾಡುವ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ 3ನೇ ದಿನ ₹50 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.
3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬ್ಯಾಕ್ ಟು ಬ್ಯಾಕ್ ರಜೆಗಳಿವೆ. ಹೀಗಾಗಿ ಸಿನಿಮಾದ ಕಲೆಕ್ಷನ್ ಇನ್ನೂ ಹೆಚ್ಚಾಗಬಹುದೆಂಬ ನಿರೀಕ್ಷೆಯಿತ್ತು. ಝೈದ್ ಖಾನ್ ಜೊತೆಗೆ ರಚಿತಾ ರಾಮ್ ಕೂಡ ನಟಿಸಿರುವುದರಿಂದ ಸಿನಿಮಾ ಕಲೆಕ್ಷನ್ ರಜೆಯ ದಿನಗಳಲ್ಲಿ ಏರಿಕೆಯಾಗಬಹುದೆಂದು ಅಂದಾಜು ಹಾಕಲಾಗಿತ್ತು. ಸಿನಿಮಾ ರಿಲೀಸ್ ಆದ ಮೊದಲ ಮೂರು ದಿನಗಳ ಕಲೆಕ್ಷನ್ ಹೀಗಿದೆ.
ಮೊದಲ ದಿನ ₹53 ಲಕ್ಷ
2ನೇ ದಿನ ₹41 ಲಕ್ಷ
3ನೇ ದಿನ ₹50 ಲಕ್ಷ
ಒಟ್ಟು ₹1.44 ಕೋಟಿ (Net)

ವಿತರಕರ ವಲಯದ ಲೆಕ್ಕಾಚಾರವೇನು?
ಸ್ಯಾಕ್ನಿಲ್ಕ್‌ಗೂ ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿರುವ ಲೆಕ್ಕಕ್ಕೂ ವ್ಯತ್ಯಾಸವಿದೆ. ಮೊದಲ ಮೂರು ದಿನಗಳ ಕಲೆಕ್ಷನ್ ಅಂಕಿ-ಅಂಶಗಳಲ್ಲಿ ಬೇರೆನೇ ಇದೆ. ವಿತರಕ ವಲಯದಲ್ಲಿ ಸಿಕ್ಕಿರುವ ಲೆಕ್ಕದ ಪ್ರಕಾರ, ಮೊದಲ ದಿನ ₹69 ಲಕ್ಷ, 2ನೇ ದಿನ ₹81 ಲಕ್ಷ, 3ನೇ ದಿನ ₹66 ಲಕ್ಷ ಆಗಿದೆ. ಅಂದರೆ, 3 ದಿನಗಳಲ್ಲಿ ₹2.16 ಕೋಟಿ ಕಲೆಕ್ಷನ್ ಆಗಿದೆ ಎಂದು ಕರ್ನಾಟಕದ ವಿತರಕರ ವಲಯ ಅಂಕಿ-ಅಂಶಗಳನ್ನು ನೀಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











