Cult Box Office Day 4:4ನೇ ದಿನ 'ಕಲ್ಟ್' ಕಲೆಕ್ಷನ್ ಎಷ್ಟು? ಜಮೀರ್ ಪುತ್ರ ಝೈದ್ ಖಾನ್ ಗೆದ್ದರೇ?

ಗಣರಾಜ್ಯೋತ್ಸದ ರಜೆಯಲ್ಲಿ ಗಮನದಲ್ಲಿ ಇಟ್ಟಕೊಂಡು ಸ್ಯಾಂಡಲ್‌ವುಡ‌ನಲ್ಲಿ ಎರಡು ಪ್ರಮುಖ ಸಿನಿಮಾಗಳು ರಿಲೀಸ್ ಆಗಿದ್ದವು. ಅವುಗಳಲ್ಲಿ ಒಂದು ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ 'ಕಲ್ಟ್' ಕೂಡ ಒಂದು. ರಗಡ್ ಮಾಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿರುವ ಝೈದ್ ಖಾನ್‌ಗೆ ಸಿನಿಮಾಗೆ ಪ್ರೇಕ್ಷಕರಿಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ? ಅನ್ನೋದು ಯಕ್ಷ ಪ್ರಶ್ನೆಯಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ದುನಿಯಾ ವಿಜಯ್ ಸಿನಿಮಾ 'ಲ್ಯಾಂಡ್‌ಲಾರ್ಡ್' ಜೊತೆ ಝೈದ್ ಖಾನ್ 'ಕಲ್ಟ್' ರಿಲೀಸ್ ಆಗಿತ್ತು. ಕಳೆದ ನಾಲ್ಕು ದಿನಗಳಿಂದ ಸಿನಿಮಾದ ಕಲೆಕ್ಷನ್ ಸ್ಟಡಿಯಾಗಿ ಇದೆ. ಎರಡೂ ಸಿನಿಮಾಗಳಲ್ಲೂ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ. ಝೈದ್ ಖಾನ್ ಅನ್ನು 'ಬನಾರಸ್‌'ನಲ್ಲಿ ಸಾಫ್ಟ್ ಕ್ಯಾರೆಕ್ಟರ್‌ನಲ್ಲಿ ನೋಡಿದ್ದವರಿಗೆ ಎರಡನೇ ಸಿನಿಮಾ 'ಕಲ್ಟ್‌'ನಲ್ಲಿ 'ರಾ' ಆಗಿ ಕಾಣಿಸಿಕೊಂಡಿದ್ದಾರೆ.

Zaid Khan Rachita Ram Malaika Vasupal movie Cult Day 4 Box Office Collection Report

ಜಮೀರ್ ಅಹಮದ್ ಖಾನ್ ಪುತ್ರ ಅನ್ನೋದು ಒಂದ್ಕಡೆಯಾದರೆ, ಇನ್ನೊಂದು ಕಡೆ ದುನಿಯಾ ವಿಜಯ್ ಅಂತಹ ದಿಗ್ಗಜರ ಮುಂದೆ ಹೊಸಬರ ಸಿನಿಮಾ ಹೇಗೆ ನಿಲ್ಲುತ್ತೆ ಅನ್ನೋ ಕುತೂಹಲ. ಸದ್ಯಕ್ಕೆ ಬಾಕ್ಸಾಫೀಸ್‌ನಲ್ಲಿ 'ಕಲ್ಟ್' ಕಲೆಕ್ಷನ್ ಹೇಗಿದೆ? 4ನೇ ದಿನವಾದ ಗಣರಾಜ್ಯೋತ್ಸವದಂದು ಸಿನಿಮಾದ ಕಲೆಕ್ಷನ್ ಎಷ್ಟಿದೆ? ತಿಳಿಯುವುದಕ್ಕೆ ಮುಂದೆ ಓದಿ.

'ಕಲ್ಟ್' 4ನೇ ದಿನದ ಕಲೆಕ್ಷನ್ ಎಷ್ಟು?

ಝೈದ್ ಖಾನ್ ನಟನೆಯ 'ಕಲ್ಟ್' ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿತ್ತು. ಬ್ಯಾಕ್ ಟು ಬ್ಯಾಕ್ ರಜೆಗಳು ಇದ್ದಿದ್ದರಿಂದ ಸಿನಿಮಾದ ಕಲೆಕ್ಷನ್ ಜೋರಾಗಿ ಆಗಬಹುದಾ? ಝೈದ್ ಖಾನ್ ಕನ್ನಡ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬಹುದೇ? ಎಂಬ ಕುತೂಹಲವಿತ್ತು. ಆದರೆ, ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ 4ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ ಕೊಟ್ಟಿದೆ. ಇದರ ಪ್ರಕಾರ, ಗಣರಾಜ್ಯೋತ್ಸವದಂದು ₹38 ಲಕ್ಷ ಕಲೆಕ್ಷನ್ ಮಾಡಿದೆ.

Zaid Khan Rachita Ram Malaika Vasupal movie Cult Day 4 Box Office Collection Report

4 ದಿನಗಳಲ್ಲಿ ₹2 ಕೋಟಿ ದಾಟಿತೇ?

ಅನಿಲ್ ಕುಮಾರ್ ನಿರ್ದೇಶಿಸಿದ 'ಕಲ್ಟ್' 4 ದಿನಗಳನ್ನು ಯಶಸ್ವಿಯಾಗಿ ಪೂರೈಸಿ, 5ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ವಾರ ಶುಕ್ರವಾರದಿಂದ ನಿನ್ನೆ ಸೋಮವಾರದವರೆಗೂ ರಜೆ ಇದ್ದಿದ್ದರಿಂದ ಇನ್ನಷ್ಟು ಪ್ರೇಕ್ಷಕರನ್ನು ಥಿಯೇಟರ್‌ ಕಡೆಗೆ ಸೆಳೆಯಬಹುದಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಮೊದಲ ನಾಲ್ಕು ದಿನಗಳಲ್ಲಿ ಸ್ಯಾಕ್ನಿಲ್ಕ್ ವರದಿ ಪ್ರಕಾರ ಆಗಿರುವ ಕಲೆಕ್ಷನ್ ಹೀಗಿದೆ.

1ನೇ ದಿನ ₹53 ಲಕ್ಷ
2ನೇ ದಿನ ₹41 ಲಕ್ಷ
3ನೇ ದಿನ ₹50 ಲಕ್ಷ
4ನೇ ದಿನ ₹38 ಲಕ್ಷ
ಒಟ್ಟು ₹1.82 ಕೋಟಿ (Net)

ವಿತರಕರ ಲೆಕ್ಕಾಚಾರವೇನು?

ಕರ್ನಾಟಕದ ವಿತರಕರ ಲೆಕ್ಕಾಚಾರ ಸ್ಯಾಕ್ನಿಲ್ಕ್‌ಗಿಂತ ವಿಭಿನ್ನವಾಗಿದೆ. ಇವರ ಲೆಕ್ಕಾಚಾರದ ಪ್ರಕಾರ, 'ಕಲ್ಟ್' 4ನೇ ದಿನ ಗಳಿಸಿದ್ದು ₹55 ಲಕ್ಷ. ಇನ್ನು ಮೊದಲ ದಿನ ₹69 ಲಕ್ಷ, 2ನೇ ದಿನ ₹81 ಲಕ್ಷ, 3ನೇ ದಿನ ₹66 ಲಕ್ಷ ಆಗಿದೆ. ಹೀಗಾಗಿ ಒಟ್ಟು 4 ದಿನಗಳ ಕಲೆಕ್ಷನ್ ₹2.67 ಕೋಟಿ. 'ಕಲ್ಟ್' ಸಿನಿಮಾದ ಅಸಲಿ ಆಟ ಶುರುವಾಗುವುದೇ ಇಂದಿನಿಂದ (ಮಂಗಳವಾರ). ರಜೆ ಮುಗಿಸಿ, ಮತ್ತೆ ಕೆಲಸಗಳ ಮುಖ ಮಾಡಿರುವ ಜನರು ಸಿನಿಮಾ ನೋಡುವುದಕ್ಕೆ ಬರುತ್ತಾರಾ? ಅನ್ನೋ ಅನುಮಾವಿದೆ. ಒಂದು ವೇಳೆ ವೀಕ್‌ಡೇಸ್‌ನಲ್ಲೂ ಸಿನಿಮಾ ಗೆದ್ದರೆ, ಬಾಕ್ಸಾಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡೋದು ಗ್ಯಾರಂಟಿ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Zaid Khan, Rachita Ram, Malaika Vasupal movie Cult Day 4 Box Office Collection Report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X