Cult Box Office Day 7: 7ನೇ ದಿನದ 'ಕಲ್ಟ್' ಕಲೆಕ್ಷನ್ ಎಷ್ಟು? ಇಲ್ಲಿವರೆಗೂ ಗಳಿಸಿದ್ದೆಷ್ಟು?

ಕಳೆದ ವಾರ ಸ್ಯಾಂಡಲ್‌ವುಡ್‌ನಿಂದ ಎರಡು ಸಿನಿಮಾಗಳು ರಿಲೀಸ್ ಆಗಿದ್ದವು. ದುನಿಯಾ ವಿಜಯ್, ರಚಿತಾ ರಾಮ್ ನಟನೆಯ 'ಲಾಂಡ್‌ಲಾರ್ಡ್' ಒಂದಾದರೆ, ಇನ್ನೊಂದು ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ 2ನೇ ಸಿನಿಮಾ 'ಕಲ್ಟ್'. ಈ ಎರಡೂ ಸಿನಿಮಾಗಳಲ್ಲೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಈ ಕಾರಣ ಎರಡೂ ಸಿನಿಮಾಗಳ ಬಾಕ್ಸಾಫೀಸ್‌ನಲ್ಲಿ ಎಷ್ಟು ಸದ್ದು ಮಾಡುತ್ತವೆ ಅನ್ನೋ ಕುತೂಹಲವಿತ್ತು.

ಜಮೀರ್ ಅಹಮದ್ ಖಾನ್ ಪುತ್ರ ರಗಡ್ ಲುಕ್‌ನಲ್ಲಿ ಥಿಯೇಟರ್‌ನಲ್ಲಿ ಲಗ್ಗೆ ಇಟ್ಟಾಗಿ ಸಿನಿಮಾ ಮಂದಿಯ ಕಣ್ಣು ಆ ಕಡೆಗೆ ವಾಲಿತ್ತು. 'ಬನಾರಸ್' ಮೂಲಕ ಚಾಕೊಲೇಟ್ ಬಾಯ್ ಲುಕ್ ಕೊಟ್ಟಿದ್ದ ಝೈದ್ ಖಾನ್ 'ಕಲ್ಟ್' ಸಿನಿಮಾದಲ್ಲಿ ಮಾಸ್ ಲುಕ್ ಕೊಟ್ಟಿದ್ದರು. ಎರಡು ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ 'ಕಲ್ಟ್' ಬಾಕ್ಸಾಫೀಸ್ ಸದ್ದು ಮಾಡುವ ಲೆಕ್ಕಾಚಾರವಿತ್ತು.

Zaid Khan Rachita Ram movie Cult Day 7 Box Office Collection witnessed drop here is the Report

'ಕಲ್ಟ್' ನಿರೀಕ್ಷೆ ಮಾಡಿದಷ್ಟು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಈಗಾಗಲೇ ಸಿನಿಮಾ ರಿಲೀಸ್ ಆಗಿ ಒಂದು ವಾರ ಆಗಿದೆ. ಕಳೆದ ಏಳು ದಿನಗಳಲ್ಲಿ 'ಕಲ್ಟ್' ಮೊದಲ ನಾಲ್ಕೈದು ದಿನ ಕಲೆಕ್ಷನ್ ಏಕ ರೂಪದಲ್ಲಿಯೇ ಸಾಗುತ್ತಿತ್ತು. ಆದರೆ, ಆದರೆ, ನಂತರದ ದಿನಗಳಲ್ಲಿ ಸಿನಿಮಾ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ಹಾಗಿದ್ದರೆ, 'ಕಲ್ಟ್' 7ನೇ ದಿನ ಗಳಿಸಿದ್ದೆಷ್ಟು? ಒಂದು ವಾರದ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

7ನೇ ದಿನದ 'ಕಲ್ಟ್' ಗಳಿಕೆ ಎಷ್ಟು?

'ಕಲ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆಯನ್ನು ಹುಟ್ಟಿ ಹಾಕಿತ್ತು. ಬ್ಯಾಕ್ ಟು ಬ್ಯಾಕ್ ರಜೆ ದಿನಗಳು 'ಕಲ್ಟ್' ಪಾಲಿಗೆ ಬಂದಿತ್ತು. ಬಾಕ್ಸಾಫೀಸ್‌ ಕಲೆಕ್ಷನ್ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ 7ನೇ ದಿನ 'ಕಲ್ಟ್' ಸಿನಿಮಾ ₹16 ಲಕ್ಷ ಕಲೆಕ್ಷನ್ ಆಗಿದೆ. ಆದರೆ, ಸಿನಿಮಾ ತಂಡ ಕೊಟ್ಟ ಅಂಕಿ ಅಂಶಗಳ ಪ್ರಕಾರ 7ನೇ ದಿನ ₹34 ಲಕ್ಷ ಕಲೆಕ್ಷನ್ ಆಗಿದೆ. ಈ ಸಿನಿಮಾ ಹೀರೋ ಝೈದ್ ಖಾನ್ 7 ದಿನಗಳ ಒಟ್ಟು ಕಲೆಕ್ಷನ್‌ ಅಂಕಿ ಅಂಶಗಳನ್ನೂ ರಿವೀಲ್ ಮಾಡಿದ್ದಾರೆ.

7 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಝೈದ್ ಖಾನ್ ಜೊತೆ ಕನ್ನಡ ಚಿತ್ರರಂಗದ ಸ್ಟಾರ್ ನಟಿ ರಚಿತಾ ರಾಮ್ ಪ್ರಮುಖ ಆಕರ್ಷಣೆಯಾಗಿದ್ದರು. ಜೊತೆಗೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಹಾಗೂ 'ಉಪಾಧ್ಯಕ್ಷ' ಸಿನಿಮಾದ ನಾಯಕಿ ಮಲೈಕಾ ವಸುಪಾಲ್ ನಾಯಕಿಯರಾಗಿ ನಟಿಸಿದ್ದರು. ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಕಾರಣಕ್ಕೆ 'ಕಲ್ಟ್' ಸಿನಿಮಾದ ಕಲೆಕ್ಷನ್ ಒಂದು ವಾರಕ್ಕೆ ₹5 ಕೋಟಿ ದಾಟಿದೆ. ಝೈದ್ ಖಾನ್ ಹಂಚಿಕೊಂಡ ಪೋಸ್ಟ್ ಹಾಗೂ ತಂಡ ನೀಡಿದ ಅಂಕಿ ಅಂಶಗಳು ಹೀಗಿವೆ.

1ನೇ ದಿನ ₹1.05 ಕೋಟಿ
2ನೇ ದಿನ ₹79 ಲಕ್ಷ
3ನೇ ದಿನ ₹1.17 ಕೋಟಿ
4ನೇ ದಿನ ₹74 ಲಕ್ಷ
5ನೇ ದಿನ ₹51 ಲಕ್ಷ
6ನೇ ದಿನ ₹43 ಲಕ್ಷ
7ನೇ ದಿನ ₹34 ಲಕ್ಷ
ಒಟ್ಟು ₹5.03 ಕೋಟಿ (Gross)


ವಿತರಕರ ಲೆಕ್ಕಾಚಾರದಲ್ಲಿ ಎಷ್ಟು?

ಬಾಕ್ಸಾಫೀಸ್ ವರದಿ ಒಪ್ಪಿಸುವ ಸ್ನಾಕ್ಲಿಲ್ಕ್ ವರದಿಗೂ ವಿತರಕರ ಲೆಕ್ಕಕ್ಕೂ ವ್ಯತ್ಯಾಸವಿದೆ. ವಿತರಕರ ಪ್ರಕಾರ 'ಕಲ್ಟ್' ಸಿನಿಮಾದ ಲೆಕ್ಕಾಚಾರ ಹೀಗಿದೆ. ಬೆಂಗಳೂರು, ತುಮಕೂರು, ಕೋಲಾರ ₹1.70 ಕೋಟಿ, ಮಂಡ್ಯ,ಮೈಸೂರು, ಹಾಸನ, ಕೂರ್ಗ್ ₹70 ಲಕ್ಷ, ಚಿತ್ರದುರ್ಗ-ದಾವಣಗೆರೆ ₹35 ಲಕ್ಷ, ಹುಬ್ಬಳ್ಳಿ ₹60 ಲಕ್ಷ, ಶಿವಮೊಗ್ಗ-ದಕ್ಷಿಣ ಕನ್ನಡ ₹50 ಲಕ್ಷ, ಹುಬ್ಬಳ್ಳಿ ₹60 ಲಕ್ಷ, ಹೈದರಾಬಾದ್ ಕರ್ನಾಟಕ ₹25 ಕೋಟಿ ಗಳಿಸಿದೆ. ಮೊದಲ ಏಳು ದಿನಗಳಲ್ಲಿ 'ಕಲ್ಟ್' ವಿತರಕರ ಲೆಕ್ಕ ₹4.70 ಕೋಟಿ (Net) ಕಲೆಕ್ಷನ್ ಆಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Zaid Khan Rachita Ram movie Cult Day 7 Box Office Collection witnessed drop here is the Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X