Lakshmi: ಜಿಮ್, ಯೋಗ ಅಲ್ಲ... 70ರ ದಶಕದಲ್ಲಿಯೇ ಫಿಟ್‌ನೆಸ್ ಹೇಗೆ ಮೆಂಟೈನ್ ಮಾಡ್ತಿದ್ರು ಗೊತ್ತಾ 'ಜ್ಯೂಲಿ ಲಕ್ಷ್ಮಿ'?
ಫಿಟ್‌ನೆಸ್ ಎಂಬುದು ಈಗ ಎಲ್ಲರಿಗೂ ಬೇಕು. ಆರೋಗ್ಯಕರ ಜೀವನ ಶೈಲಿಯ ಜೊತೆಗೆ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಕೂಡ ಮುಖ್ಯ. ಈಗಂತೂ ಬೀದಿಗೆ ಎರಡೆರಡು ಜಿಮ್‌ಗಳು ಇವೆ. ಯೋಗ ಸೆಂಟರ್‌ಗಳಿವೆ. ಇಂದಿನ ನಟ, ನಟಿಯರಿಗೆ ಪ್ರತ್ಯೇಕವಾಗಿ ಜಿಮ್ ಟ್ರೈನರ್ಸ್ ಇರುತ್ತಾರೆ. ಆದರೆ, 70, 80ರ ದಶಕದಲ್ಲಿ ಹಾಗಿರಲಿಲ್ಲ. ನಟಿಯರೇ ತಮ್ಮನ್ನು ತಾವು ಫಿಟ್ ಆಗಿ ಇಟ್ಟುಕೊಳ್ಳಬೇಕಿತ್ತು.
70, 80ರ ದಶಕದಲ್ಲಿ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಮೋಡಿ ಮಾಡಿದವರು ನಟಿ ಲಕ್ಷ್ಮಿ. ಜ್ಯೂಲಿ ಸಿನಿಮಾದಿಂದಾಗಿ ಜ್ಯೂಲಿ ಲಕ್ಷ್ಮಿ ಎಂದೇ ಫೇಮಸ್ ಆದ ಅವರು, ತಮ್ಮ ಫಿಟ್‌ನೆಸ್‌ನಿಂದಾಗಿ ಹೆಚ್ಚು ಗುರುತಿಸಿಕೊಂಡವರು. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರ ಫಿಟ್‌ನೆಸ್ ಕಾಪಾಡಿಕೊಂಡಿದ್ದು ಹೇಗೆ ಎನ್ನುವ ರಹಸ್ಯ ಇಲ್ಲಿದೆ.

ಜ್ಯೂಲಿ ಲಕ್ಷ್ಮಿ ಫಿಟ್‌ನೆಸ್ ಸಿಕ್ರೆಟ್
ಹಿರಿಯ ನಟಿ ಲಕ್ಷ್ಮಿ ಅವರು ಇತ್ತೀಚೆಗೆ 'ಆರ್.ಕನ್ನಡ'ಕ್ಕೆ ಸಂದರ್ಶನ ನೀಡಿದ್ದು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾಗಳು, ತಮ್ಮ ಆರೋಗ್ಯ, ಫಿಟ್‌ನೆಟ್ ಸೇರಿ ಹಲವು ಮಾಹಿತಿ ಬಹಿರಂಗಪಡಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ತಾವು ಸೇವಿಸುತ್ತಿದ್ದ ಸಲಾಡ್‌ಗಳ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಆಹಾರ ಕ್ರಮದ ಬಗ್ಗೆ ಮಾತನಾಡುತ್ತಾ, "ಕ್ಯಾಟ್ಬರೀಸ್ ಚಾಕೋಲೇಟ್ ಆಗ ತಾನೇ ಬಂದಿತ್ತು. ನಮಗೆ ಅದನ್ನು ಕೂಡ ತಿನ್ನೋಕೆ ಬಿಡುತ್ತಿರಲಿಲ್ಲ. ಅದರಿಂದ ಹಲ್ಲು ಹಾಳಾಗುತ್ತದೆ ಎಂದು ಹೇಳುತ್ತಿದ್ದರು. ನಮಗೆ ಯಾವುದು ಮಾಡಬೇಕು... ಯಾವುದು ಮಾಡಬಾರದು ಎಂಬ ಬಗ್ಗೆ ತುಂಬಾ ರೂಲ್ಸ್ ಇರುತ್ತಿತ್ತು. ಇಂತಹ ವೇಳೆಯಲ್ಲಿ ಒಂದು ಮ್ಯಾಗಜೀನ್ ಇತ್ತು.. ಅದು ಫೇಮಿನಾ ಇರಬೇಕು... ಅದರಲ್ಲಿ ಒಂದು ಮೀಲ್‌ನಲ್ಲಿ ತುಂಬಾ ತರಕಾರಿಗಳನ್ನು ತಿನ್ನಬೇಕು ಅಂತ ಬರೆದಿತ್ತು. ಅದರಿಂದ ನಿಮಗೆ ದಿನ ಪೂರ್ತಿ ಏನರ್ಜಿ ಮತ್ತು ಬಾಡಿ ಮೆಂಟೈನ್ ಮಾಡೋಕೆ ಸಹಾಯ ಆಗಲಿದೆ ಅಂತ" ಎಂದಿದ್ದಾರೆ.
ಪ್ರತಿದಿನ ವೆರೈಟಿ ಆಗಿ ಸಲಾಡ್ ಮಾಡಿಕೊಳ್ಳುತ್ತಿದೆ: ನಟಿ ಲಕ್ಷ್ಮಿ
"ಆಗ ಬರೀ ಅದನ್ನು ಮಾತ್ರ ತಿಂತಿದ್ದೆ. ಆ ಸಮಯದಲ್ಲಿ ಅದೊಂದೆ ನನ್ನ ಊಟ ಆಗಿತ್ತು. ಕಾರ್ಬೋಹೈಡ್ರೆಟ್ಸ್ ಬಳಸುತ್ತಿರಲಿಲ್ಲ. ಬೆಳಗ್ಗೆ ಬೋರ್ನ್‌ವಿಟಾ, ಹಾಲು ಅಂತದ್ದೇನಾದರೂ ಕುಡಿತಿದ್ದೆ. ಅಂದರೆ ನಾಲ್ಕು ಗಂಟೆಗೆ ಶೂಟಿಂಗ್‌ಗೆ ಹೊರಡುತ್ತಿದೆ. ಆರು ಆರೂವರೆ ಸಮಯಕ್ಕೆ ಸೆಟ್‌ನಲ್ಲಿ ಇರಬೇಕಿತ್ತು. ಆಗೆಲ್ಲಾ ಇಪ್ಪತ್ತು ಗಂಟೆ ಶೂಟಿಂಗ್ ಮಾಡುತ್ತಿದ್ದೇವು. ಬೆಳಗ್ಗೆ ಹೋಗೋದು ಹತ್ತು ಹತ್ತುವರೆಗೆ ಮನೆಗೆ ಬಂದು ಮಗುಗೆ ಫೀಡ್ ಮಾಡಿ ಮತ್ತೆ ಹೋಗದು. ಮಧ್ಯಾಹ್ನ ಒಂದು ಗಂಟೆಗೆ ಮಜ್ಜಿಗೆ ಕುಡಿಯೋದು.. ಎರಡು ಗಂಟೆಗೆ ನಾನೇ ತರಕಾರಿ ಹಚ್ಚಿಕೊಂಡು ವೆರೈಟಿ ಆಗಿ ಸಲಾಡ್ ಮಾಡಿಕೊಳ್ಳುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ಮುಂದುವರಿದು, "ನನಗೆ ಮೊಸರು ಬೇಕೆ ಬೇಕು. ಲಾಸ್ಟ್ ಕಪ್ ಸಲಾಡ್‌ಗೆ ಒಂದು ಕಪ್ ಮೊಸರು. ಅದಕ್ಕೆ ಸ್ವಲ್ಪ ಶುಗರ್ ಸೇರಿಸಿಕೊಳ್ಳುತ್ತಿದೆ, ಜೊತೆಗೆ ಸ್ವಲ್ವ ಜೇನುತುಪ್ಪ ಸೇರಿಸಿ ತಿಂತಿದ್ದೆ. ಇದು ನನ್ನ ಲಂಚ್ ಆಗಿತ್ತು. ನಂಗೆ ಕಾಫೀ, ಟೀ ಅಭ್ಯಾಸ ಇಲ್ಲದ ಕಾರಣ ಸಂಜೆ ನಾಲ್ಕು ಗಂಟೆ ಸಮಯಕ್ಕೆ ಒಂದು ಸಲಾಡ್ ತಿನ್ನುತ್ತಿದೆ" ಎಂದಿದ್ದಾರೆ ನಟಿ ಲಕ್ಷ್ಮಿ.
"ಇದು 71 ರಿಂದ 88 ವರೆಗೂ ಇದೆ ನನ್ನ ಮುಖ್ಯ ಆಹಾರ. ಹಣ್ಣು, ವೆಜಿಟೆಬಲ್ಸ್ ಮತ್ತು ಸಲಾಡ್. ಆ ಸಲಾಡ್‌ನಲ್ಲಿ ವೆರೈಟಿಸ್ ಆಫ್ ಕಾಂಬಿನೇಷನ್ ನೋಡುತ್ತಿದೆ. ಸಲಾಡ್‌ಗೆ ಹಪ್ಪಳ ಒಡೆದು ಹಾಕಿಕೊಳ್ಳುತ್ತಿದೆ. ತೆಲುಗು ಸಿನಿಮಾ ಮಾಡುವಾಗ ನಾಗಾರ್ಜುನ್ ಕೂಡ ಇಂತಹ ಟೆಸ್ಟಿ ಸಲಾಡ್ ತಿಂದಿಲ್ಲ ಎಂದು ಹೇಳಿ ನಮ್ಮ ಜೊತೆ ತಿನ್ನುತ್ತಿದ್ದರು. ನಂಗೆ ಯಾವತ್ತೂ ರೈಸ್ ತಿನ್ನಬೇಕು ಅಂತ ಕ್ರೇವಿಗ್ಸ್ ಆಗಲಿಲ್ಲ. ರಸಂ ಸಾಂಬಾರ್, ಮೊಸರನ್ನ ತಿಂದು ಬೆಳೆದಿದ್ರೂ ಕೂಡ ನಂಗೆ ಬೇಕು ಎನ್ನಿಸಲಿಲ್ಲ. 88 ರಲ್ಲಿ ನನ್ನ ಪತಿ ಇದನ್ನೇಲ್ಲಾ ತಿಂದು ನೀನು ಏನು ಸಾಧಿಸುತ್ತಿಯಾ ಅಂತ ಪ್ರಶ್ನಿಸಿದ್ರು. ಇದಾದ ನಂತರ ಸಲಾಡ್ ಜೊತೆಗೆ ಸ್ವಲ್ಪ ಸ್ವಲ್ಪ ರೈಸ್ ಸೇರಿಸಿಕೊಂಡೆ" ಎಂದು ತಮ್ಮ ಡಯಟ್ ಮತ್ತು ಫಿಟ್‌ನೆಸ್ ಸಿಕ್ರೆಟ್ ರಿವೀಲ್ ಮಾಡಿದ್ದಾರೆ.


Click it and Unblock the Notifications











