ವೀಕೆಂಡ್ ಬಾಕ್ಸಾಫೀಸ್‌ನಲ್ಲಿ '777 ಚಾರ್ಲಿ' ಜೊತೆ ಗೆದ್ದು ಬೀಗಿದ ಸಿನಿಮಾಗಳ ಕಲೆಕ್ಷನ್ ಎಷ್ಟು?

ವೀಕೆಂಡ್ ಬಂದರೆ ಸಿನಿಮಾ ಮಂದಿಗೆ ಎಲ್ಲಿಲ್ಲದ ಖುಷಿ. ಎರಡು ದಿನ ಪ್ರೇಕ್ಷಕರು ತಮ್ಮ ಫ್ಯಾಮಿಲಿ ಜೊತೆ ಸಿನಿಮಾ ನೋಡುತ್ತಾರೆ ಅನ್ನುವ ನಂಬಿಕೆ. ಈ ವಾರ ಕೂಡ ಬಾಕ್ಸಾಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಆಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ' ಅಷ್ಟೇ ಅಲ್ಲ. ಇದೊಂದಿಗೆ ಬಿಡುಗಡೆಯಾದ ಹಲವು ಸಿನಿಮಾಗಳೂ ಕೂಡ ಗಲ್ಲಾಪಟ್ಟಿಗೆಯಲ್ಲಿ ಗೆಲುವಿನ ನಗೆ ಬೀರಿದೆ.

ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಸಿನಿಮಾ ದೇಶಾದ್ಯಂತ ಗಮನ ಸೆಳೆದಿತ್ತು. ಭಾರತೀಯ ಸಿನಿಮಾ ಪ್ರೇಮಿಗಳಿಗಾಗಿ ವಿದೇಶದಲ್ಲೂ '777 ಚಾರ್ಲಿ'ಯನ್ನು ರಿಲೀಸ್ ಮಾಡಲಾಗಿದೆ. ಹಾಗಂತ ಕಳೆದ ವಾರ ಕೇವಲ '777 ಚಾರ್ಲಿ' ಒಂದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಹಾಲಿವುಡ್, ಟಾಲಿವುಡ್, ಬಾಲಿವುಡ್, ಸಿನಿಮಾಗಳೂ ಕೂಡ ರಿಲೀಸ್ ಆಗಿವೆ. ಅಲ್ಲದೆ, ಈಗಾಗಲೇ ರಿಲೀಸ್ ಆಗಿರುವ ಸಿನಿಮಾಗಳು ಕೂಡ ಅದ್ಭುತ ಕಲೆಕ್ಷನ್ ಮಾಡುತ್ತಿವೆ.

'777 ಚಾರ್ಲಿ' ಜೊತೆಗೆ ಹಾಲಿವುಡ್‌ ಸಿನಿಮಾ 'ಜುರಾಸಿಕ್ ವರ್ಲ್ಡ್ ಡೊಮಿನಿಯನ್', ಬಾಲಿವುಡ್‌ ಸಿನಿಮಾ 'ಜನ್‌ ಹಿತ್ ಮೇ ಜಾರಿ', ಟಾಲಿವುಡ್‌ನಲ್ಲಿ ನಾನಿ ಅಭಿನಯದ 'ಅಂಟೆ ಸುಂದರಾನಿಕಿ' ಸಿನಿಮಾಗಳು ರಿಲೀಸ್ ಆಗಿದ್ದವು. ಅಲ್ಲದೆ, ಈಗಾಗಲೇ ಬಾಕ್ಸಾಫೀಸ್‌ನಲ್ಲಿ 'ವಿಕ್ರಂ' ಹಾಗೂ 'ಭೂಲ್‌ ಭುಲಯ್ಯ 2' ಚಿತ್ರಗಳು ಉತ್ತಮ ಗಳಿಕೆ ಮಾಡುತ್ತಿವೆ. ಈ ಎಲ್ಲಾ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಜುರಾಸಿಕ್ ವರ್ಲ್ಡ್ ಕಲೆಕ್ಷನ್ ಎಷ್ಟು?

ಜುರಾಸಿಕ್ ವರ್ಲ್ಡ್ ಕಲೆಕ್ಷನ್ ಎಷ್ಟು?

ಹಾಲಿವುಡ್ ಸಿನಿಮಾ 'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಜೂನ್ 10ರಂದು ಭಾರತದಲ್ಲಿ ಬಿಡುಗಡೆಯಾಗಿದೆ. 'ಜುರಾಸಿಕ್ ಪಾರ್ಕ್' ಸಿರೀಸ್‌ನ ಕೊನೆಯ ಸರಣಿ ಭಾರತದ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಮೊದಲ ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಉತ್ತಮವಾಗಿದೆ. ಭಾನುವಾರ ಜುರಾಸಿಕ್ ವರ್ಲ್ಡ್ ಡೊನಿಯನ್ 14 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ಪಂಡಿತರು ಲೆಕ್ಕ ಕೊಟ್ಟಿದ್ದಾರೆ. ಇವರ ಲೆಕ್ಕದ ಪ್ರಕಾರ ಮೂರು ದಿನಗಳಲ್ಲಿ ಸಿನಿಮಾ 37.54 ಕೋಟಿ ರೂ. ಕಲೆಕ್ಷನ್ ಆಗಿದೆ.

'ಅಂಟೆ ಸುಂದರಾನಿಕಿ' ಕಲೆಕ್ಷನ್ ಎಷ್ಟು?

'ಅಂಟೆ ಸುಂದರಾನಿಕಿ' ಕಲೆಕ್ಷನ್ ಎಷ್ಟು?

'777 ಚಾರ್ಲಿ'ಗೆ ಹೋಲಿಸಿದರೆ, ನಾನಿ ಸಿನಿಮಾ 'ಅಂಟೆ ಸುಂದರಾನಿಕಿ' ಕಲೆಕ್ಷನ್ ಅಷ್ಟೇನು ಆಶಾದಾಯಕವಾಗಿಲ್ಲ. ಮೊದಲ ಮೂರು ದಿನ 'ಅಂಟೆ ಸುಂದರಾನಿಕಿ' ಕಲೆಕ್ಷನ್ ಸಾಧಾರಣವೆನಿಸಿದೆ. ನಾನಿ ಹಾಗೂ ನಜ್ರಿಯಾ ಜೋಡಿ ಕಾಮಿಡಿ ಸೆಂಟಿಮೆಂಟ್ ಸಿನಿಮಾ ಮೂರು ದಿನಗಳಲ್ಲಿ 10 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಮೊದಲ ದಿನ 3.87 ಕೋಟಿ ರೂ.
ಎರಡನೇ ದಿನ 3.48 ಕೋಟಿ ರೂ.
ಮೂರನೇ ದಿನ 3 ಕೋಟಿ ರೂ.

ಒಟ್ಟು 10.35 ಕೋಟಿ ರೂ.

'ಜನ್‌ ಹಿತ್ ಮೇ ಜಾರಿ' ಸಿನಿಮಾ

'ಜನ್‌ ಹಿತ್ ಮೇ ಜಾರಿ' ಸಿನಿಮಾ

ಬಾಲಿವುಡ್‌ನಲ್ಲಿ ಸ್ಮಾಲ್ ಬಜೆಟ್ ಸಿನಿಮಾವೊಂದು ಕಳೆದ ವಾರ ರಿಲೀಸ್ ಆಗಿತ್ತು. ಕಾಮಿಡಿ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುವಲ್ಲಿ ಸೋತಿದೆ. ಕಳೆದ ಮೂರು ದಿನಗಳಲ್ಲಿ ಈ ಸಿನಿಮಾ 2 ಕೋಟಿ ರೂ. ಗಡಿ ದಾಟಿದೆಯಷ್ಟೆ. ಮೊದಲ ದಿನ 43 ಲಕ್ಷ ರೂ. ಎರಡನೇ ದಿನ 83 ಲಕ್ಷ ರೂ. ಮೂರನೇ ದಿನ 94 ಲಕ್ಷ ರೂ. ಗಳಿಸಿದ್ದು, ಒಟ್ಟು ಗಳಿಕೆ 2.20 ಕೋಟಿ ರೂ. ದಾಟಿದೆ.

'ಭುಲ್ ಭುಲಯ್ಯ 2' ಗಳಿಸಿದ್ದೆಷ್ಟು?

'ಭುಲ್ ಭುಲಯ್ಯ 2' ಗಳಿಸಿದ್ದೆಷ್ಟು?

ಕಾರ್ತಿಕ್ ಆರ್ಯನ್ ಸಿನಿಮಾ 'ಭುಲ್ ಭುಲಯ್ಯ 2' ಹೊಸ ಸಿನಿಮಾಗಳೊಂದಿಗೆ ಅಖಾಡಕ್ಕಿಳಿದಿದೆ. ನಾಲ್ಕನೇ ವಾರವೂ ಸಿನಿಮಾ ಕಲೆಕ್ಷನ್ ಅದ್ಭುತವಾಗಿದೆ. ಈ ವೀಕೆಂಡ್‌ನಲ್ಲಿ 8.37 ಕೋಟಿ ರೂ. ಗಳಿಸಿದ್ದು, ನಾಲ್ಕನೇ ಭಾನುವಾರ 3.80 ಕೋಟಿ ರೂ. ಗಳಿಸಿದೆ. ಈ ಮೂಲಕ ಒಟ್ಟು ಗಳಿಕೆ 171.52 ಕೋಟಿ ರೂ. ಗಳಿಸಿದೆ.

ಕಮಲ್ ಹಾಸನ್ 'ವಿಕ್ರಂ'

ಕಮಲ್ ಹಾಸನ್ 'ವಿಕ್ರಂ'

ಕಮಲ್ ಹಾಸನ್ ಸಿನಿಮಾ 'ವಿಕ್ರಂ' ಬಾಕ್ಸಾಫೀಸ್‌ನಲ್ಲಿ ಇನ್ನೂ ತನ್ನ ಆರ್ಭಟವನ್ನು ಮುಂದುವರೆಸಿದೆ. ಕಮಲ್ ಹಾಸನ್ ಸಿನಿಮಾ 'ವಿಕ್ರಂ' ಬಾಕ್ಸಾಫೀಸ್‌ನಲ್ಲಿ ಈ ವಾರಾಂತ್ಯಕ್ಕೆ 300 ಕೋಟಿ ರೂ. ಕಲೆಕ್ಷನ್ ಮಾಡಿದೆ.

'777 ಚಾರ್ಲಿ' ಗಳಿಕೆ ಎಷ್ಟು?

'777 ಚಾರ್ಲಿ' ಗಳಿಕೆ ಎಷ್ಟು?

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'ಗೆ ವಿಶ್ವದಾದ್ಯಂತ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ದಿನದಿಂದ ದಿನಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಚೆನ್ನಾಗಿದೆ. ಮೂರು ದಿನಗಳಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 23.50 ಕೋಟಿ ರೂ. ಗಳಿಸಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕೊಂಚ ಕಡಿಮೆ ಅಂತ ಅನಿಸಿದ್ದರು. ಪಾಸಿಟಿವ್ ಟಾಕ್‌ನಿಂದ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

More from Filmibeat

English summary
777 Charlie, Jurassic World Dominion, Janhit Mein Jaari, Bhool Bhulaiyaa 2, Prithviraj Boxoffice Collection, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X