RCB Vs RR ಪಂದ್ಯದ ಬೆನ್ನಲ್ಲೇ RCB Vs CSK ಮ್ಯಾಚ್ ವೇಳೆ ಕುಣಿದ ಮಹಿಳೆ ವಿಡಿಯೋ ವೈರಲ್: ಯಾರೀಕೆ?
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಹಾಗೂ CSK ನಡುವೆ ನಡೆದಿದ್ದ ಹೈ ವೋಲ್ಟೇಜ್ ಪಂದ್ಯವನ್ನು ಇನ್ನೂ ಜನರು ಮರೆತಿಲ್ಲ. ಇನ್ನೂ ಅದೇ ಗುಂಗಿನಲ್ಲಿ ಇರುವಾಗಲೇ ಆರ್‌ಸಿಬಿ ಮತ್ತೊಂದು ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು (ಮೇ 22) ರಾಜಸ್ತಾನ್ ರಾಯಲ್ಸ್ ತಂಡವನ್ನು ಆರ್‌ಸಿಬಿ ಎದುರಿಸಲಿದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಪೂಜೆ ಹೋಮ ಹವನಗಳಲ್ಲಿ ಬ್ಯುಸಿಯಾಗಿದ್ದಾರೆ.
RCB ಒಂದೇ ಒಂದು ಬಾರಿ ಐಪಿಎಲ್ ಕಪ್ ಗೆಲ್ಲದೇ ಹೋದರೂ, ಈ ತಂಡಕ್ಕಿರೋ ಫ್ಯಾನ್ಸ್ ಫಾಲೋವಿಂಗ್ ಬೇರೊಂದು ತಂಡಕ್ಕಿ ಇಲ್ಲ. ಅದರಲ್ಲೂ ಪ್ಲೇ ಆಫ್‌ಗೆ ಅರ್ಹತೆ ಪಡೆಯುವುದಕ್ಕೆ CSK ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವುದು ತುಂಬಾನೇ ಮುಖ್ಯ ಆಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಆ ಪಂದ್ಯದ ಬಗ್ಗೆ ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇದೆ.

ಇದೇ RCB Vs CSK ಪಂದ್ಯದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಈ ಮ್ಯಾಚ್ ನೋಡಲು ಬಂದಿದ್ದ ಮಹಿಳೆಯೊಬ್ಬರು ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಇಂದು (ಮೇ 22) ಆರ್‌ಸಿಬಿ ಮತ್ತೊಂದು ಪಂದ್ಯಕ್ಕೆ ಸಜ್ಜಾಗುತ್ತಿರುವಾಗಲೇ, ಆ ಮಹಿಳೆ ವಿಡಿಯೋ ಕೂಡ ಸಂಚಲನ ಸೃಷ್ಟಿಸಿದೆ. ಮಾಡುತ್ತಿದೆ.
ಆರ್‌ಸಿಬಿ ತಂಡ ಸಿಎಸ್‌ಕೆ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ನಿರಂತರ ಸೋಲುಗಳನ್ನು ಕಂಡಿದ್ದ ಆರ್‌ಸಿಬಿ ತಂಡ ಒಂದರ ಹಿಂದೊಂದು ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಪ್ ಪ್ರವೇಶಿಸಿದೆ. ಅದರಲ್ಲೂ ಸಂಪ್ರದಾಯಿಕ ಎದುರಾಳಿ ಸಿಎಸ್‌ಕೆ ವಿರುದ್ಧ ಸವಾಲುಗಳನ್ನು ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿದಿದ್ದ ತಂಡ ಸುಮಾರು 27 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯ ಐಪಿಎಲ್ ಇತಿಹಾಸದಲ್ಲೇ ಬೆಸ್ಟ್ ಮ್ಯಾಚ್ ಎನಿಸಿಕೊಂಡಿದೆ.
ಈ ರೋಚಕ ಪಂದ್ಯದಲ್ಲಿ ಪ್ರೇಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪಂದ್ಯ ವೀಕ್ಷಿಸಿಲು ಬಂದಿದ್ದ ಅಭಿಮಾನಿಗಳು ಕೂಡ ಕುಣಿದು ಕುಪ್ಪಳಿಸಿದ್ದರು. ಆದರೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ 'ಜಿಂದಗಿ ನಾ ಮಿಲೇಗಿ ದುಬಾರ' ಸಿನಿಮಾದ ಸೆನೊರಿಟಾ ಹಾಡನ್ನು ಪ್ಲೇ ಮಾಡಲಾಗಿತ್ತು. ಈ ಹಾಡಿಗೆ ಮಹಿಳೆ ಮಗುವಿನೊಂದಿಗೆ ಹೆಜ್ಜೆ ಹಾಕಿದ್ದರು. ಕ್ಯಾಮರಾ ಮುಂದೆ ಕುಣಿದು ಪಂದ್ಯವನ್ನು ಎಂಜಾಯ್ ಮಾಡಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿ ನೆಟ್ಟಿಗರು ಕಾಮೆಂಟ್‌ಗಳ ಮಾಡುತ್ತಿದ್ದಾರೆ. "ನಾನು ನನ್ನ ಕಣ್ಣುಗಳಿಂದ ಎಷ್ಟು ನೋಡಲು ಸಾಧ್ಯವೋ ಅಷ್ಟು ಈಕೆಯನ್ನು ನೋಡಿದೆ. ಆ ಎರಡು ಕಣ್ಣಗಳಿಂದ ಅಷ್ಟೇ ನೋಡುವುದಕ್ಕೆ ಸಾಧ್ಯವಿತ್ತು." ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೇ ಇನ್ನೊಬ್ಬರು " ನಾನು ಈಕೆಯನ್ನು ನೋಡಿದೆ. ಹಾಗೇ ಆಕೆ ವಿಡಿಯೋ ನೋಡಿ ಡ್ಯಾನ್ಸ್ ಕೂಡ ಮಾಡಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆರ್‌ಸಿಬಿ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲು ಇಂದು (ಮೆ 22) ಆರ್‌ಆರ್ ತಂಡವನ್ನು ಎದುರಿಸಬೇಕಿದೆ. ಸತತ ಆರು ಪಂದ್ಯಗಳನ್ನು ಗೆದ್ದಿರೋ ಆರ್‌ಸಿಬಿ ಇಂದಿನ ಪಂದ್ಯವನ್ನು ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತಾ? ಅನ್ನೋ ಕುತೂಹಲ ಅಭಿಮಾನಿಗಳಿಗೆ ಎದುರಾಗಿದೆ.


Click it and Unblock the Notifications











