ಪ್ರತಿಷ್ಠೆಯ ಕಣವಾಯ್ತಾ 'ದಾದಾ ಸಾಹೇಬ್ ಫಾಲ್ಕೆ' ಬಯೋಪಿಕ್? ಆಮಿರ್ ಖಾನ್-ಜೂ.ಎನ್‌ಟಿಆರ್ ಯಾಕೀ ಪೈಪೋಟಿ?

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಗ್ಗೆ ಪ್ರತಿಯೊಬ್ಬ ಸಿನಿಮಾ ಪ್ರೇಮಿಗಳು ಗೊತ್ತಿರುತ್ತೆ. ಇವರು ಭಾರತೀಯ ಚಿತ್ರರಂಗದ ಪಿತಾಮಹ. ಇಂಡಿಯನ್ ಸಿನಿಮಾ ಈ ಮಟ್ಟಿಗೆ ಬೆಳೆದು ನಿಲ್ಲುವುದಕ್ಕೆ ಅಡಿಪಾಯ ಹಾಕಿದ್ದು ಇವರೇ. 1913ರಲ್ಲಿ ದಾದಾ ಸಾಹೇಬ್ ಫಾಲ್ಕೆ ಅವರ 'ರಾಜಾ ಹರಿಶ್ವಂದ್ರ' ಭಾರತದ ಮೊದಲ ಮೂಖಿ ಚಿತ್ರ. ಅಂದು 15 ಸಾವಿರ ರೂಪಾಯಿಗಳಿಗೆ ನಿರ್ಮಾಣ ಆಗಿದ್ದ ಈ ಸಿನಿಮಾ ಜರ್ನಿ ಇಂದು ನೂರಾರು ಕೋಟಿ ತಲುಪಿದೆ. ಆ ಕ್ರೆಡಿಕ್ ಇವರಿಗೆ ಸಲ್ಲಬೇಕು.

ಇವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದಕ್ಕೆ ಈಗ ಸೂಪರ್‌ಸ್ಟಾರ್‌ಗಳು ಪೈಪೋಟಿಗೆ ಬಿದ್ದಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದು ದಿಢೀರನೇ ಆದ ಬದಲಾವಣೆ. ಒಂದು ಬಾಲಿವುಡ್‌ ಸೂಪರ್‌ಸ್ಟಾರ್ ಆಮಿರ್ ಖಾನ್. ಇನ್ನೊಂದು ಕಡೆ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್. ಇವರಿಬ್ಬರೂ ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಎರಡು ತಂಡಗಳು ಪ್ರತ್ಯೇಕವಾಗಿ ಈ ಸಿನಿಮಾಗಾಗಿ ಕೆಲಸ ಮಾಡುತ್ತಿದೆ.

Aamir Khan and Jr NTR Who will win in the Dadasaheb Phalke biopic competition

ಹಾಗಂತ ಕೇವಲ ಆಮಿರ್ ಖಾನ್ ಹಾಗೂ ಜೂ.ಎನ್‌ಟಿಆರ್ ಮಧ್ಯೆ ಪೈಪೋಟಿ ಅಷ್ಟೇ ಅಲ್ಲ. ಇದು ಭಾರತೀಯ ಚಿತ್ರರಂಗ ಕಂಡ ಸ್ಟಾರ್ ನಿರ್ದೇಶಕ ಪ್ರತಿಷ್ಠೆಯಾಗಿದೆ. ಅಮಿರ್ ಖಾನ್ ನಟಿಸಲಿರುವ ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್‌ಗೆ ರಾಜ್‌ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳುತ್ತಿದ್ದರೆ, ಜೂ.ಎನ್‌ಟಿಆರ್ ನಟಿಸುತ್ತಿರುವ ಬಯೋಪಿಕ್‌ಗೆ ಎಸ್‌ ಎಸ್ ರಾಜಮೌಳಿ ಮೆಂಟರ್‌ ಆಗಿದ್ದಾರೆ. ಹೀಗಾಗಿ ಒಬ್ಬ ವ್ಯಕ್ತಿಯ ಮೇಲೆ ನಿರ್ಮಾಣ ಆಗುತ್ತಿರುವ ಎರಡು ಬಯೋಪಿಕ್‌ಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆಯೇ? ಆಮಿರ್ ಖಾನ್ ಹಾಗೂ ಜೂ.ಎನ್‌ಟಿಆರ್ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ? ಒಂದು ವಿಶ್ಲೇಷಣೆ ಇಲ್ಲಿದೆ.

ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್‌ನಲ್ಲಿ ಜೂ.ಎನ್‌ಟಿಆರ್

2023ರಲ್ಲಿಯೇ ಎಸ್‌ ಎಸ್ ರಾಜಮೌಳಿ ದಾದಾ ಸಾಹೇಬ್ ಫಾಲ್ಕೆ ಸಿನಿಮಾ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮ್ಯಾಕ್ಸ್ ಸ್ಟುಡಿಯೋದ ವರುಣ್ ಗುಪ್ತಾ, ರಾಜಮೌಳಿ ಪುತ್ರ ಎಸ್‌ ಎಸ್‌ ಕಾರ್ತಿಕೇಯ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದ್ದರು. ಅದಕ್ಕೆ 'ಮೇಡ್‌ ಇನ್ ಇಂಡಿಯಾ' ಅಂತ ಹೆಸರಿಟ್ಟಿದ್ದರು. ಅಲ್ಲಿಂದ ಈ ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿತ್ತು. ಈಗ ಅದು ಮುಗಿದಿದ್ದು, ಜೂ.ಎನ್‌ಟಿಆರ್‌ಗೆ ಕಥೆಯನ್ನು ಹೇಳಿದ್ದೂ ಆಗಿದೆ. ಯಂಗ್ ಟೈಗರ್‌ ಸಿನಿಮಾ ಕಾನ್ಸೆಪ್ಟ್‌ ಕೇಳಿ ಫಿದಾ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇತ್ತ ಅಭಿಮಾನಿಗಳು ಫ್ಯಾನ್ ಮೇಡ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. ಇದೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕುರಿತ ಮತ್ತೊಂದು ಬಯೋಪಿಕ್‌ ಕೂಡ ಶೀಘ್ರದಲ್ಲೇ ಸೆಟ್ಟೇರಲಿದೆ.

ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್‌ನಲ್ಲಿ ಆಮಿರ್ ಖಾನ್

ಜೂ.ಎನ್‌ಟಿಆರ್ ಬಳಿಕ ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್‌ ಮಾಡುವುದಕ್ಕೆ ಆಮಿರ್ ಖಾನ್ ಮುಂದೆ ಬಂದಿದ್ದಾರೆ. ಆಮಿರ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಈ ಸಿನಿಮಾವನ್ನು ಮಾಡುತ್ತಿದೆ. ಅಲ್ಲಿಗೆ ಇಬ್ಬರು ಸೂಪರ್‌ಸ್ಟಾರ್‌ಗಳು ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್‌ಗೆ ಪೈಪೋಟಿಗೆ ಬಿದ್ದಿವೆ ಅಂತಾಯ್ತು. ರಾಜ್‌ಕುಮಾರ್ ಹಿರಾನಿ ತಂಡ ಕೂಡ ಸ್ಕ್ರಿಪ್ಟ್‌ ಕೆಲಸ ಮುಗಿಸಿದೆ. ಅಲ್ಲದೆ ಲಾಸ್‌ ಏಂಜಲಿಸ್‌ನ ವಿಎಫ್‌ಎಕ್ಸ್ ತಂಡ ಎಐ ಮೂಲಕ ದಾದಾ ಸಾಹೇಬ್ ಜೀವಿಸಿದ್ದ ಕಾಲಘಟ್ಟವನ್ನು ಕ್ರಿಯೇಟ್ ಮಾಡಿದೆ ಎಂದು ತಂಡ ಹೇಳಿಕೊಂಡಿದೆ. ಈಗ ಎದ್ದಿರುವ ಪ್ರಶ್ನೆ. ಇವರಿಬ್ಬರಲ್ಲಿ ಯಾರು ಸೂಕ್ತ? ಗೆಲ್ಲೋದು ರಾಜ್‌ಕುಮಾರ್ ಹಿರಾನಿನಾ? ರಾಜಮೌಳಿನಾ?

Aamir Khan and Jr NTR Who will win in the Dadasaheb Phalke biopic competition

ಜೂ.ಎನ್‌ಟಿಆರ್ Vs ಆಮಿರ್ ಖಾನ್

ದಾದಾ ಸಾಹೇಬ್ ಫಾಲ್ಕೆ ಅವರ ಚರಿತ್ರೆಯಲ್ಲಿ ಆಮಿರ್ ಖಾನ್ ಹಾಗೂ ಜೂ.ಎನ್‌ಟಿಆರ್ ನಟಿಸಲಿದ್ದಾರೆ. ಇವರಿಗೂ ಪಸ್ಲ್ ಹಾಗೂ ಮೈನಸ್ ಆಗಬಹುದಾದ ಕೆಲವು ಅಂಶಗಳು ಇವೆ. ಆಮಿರ್ ಖಾನ್‌ ಹಾಗೂ ರಾಜ್‌ಕುಮಾರ್‌ ಹಿರಾನಿ ಕಾಂಬಿನೇಷನ್ ಅನ್ನೋದು ಮೊದಲ ಅಡ್ವಾಂಟೆಜ್. ಇದರೊಂದಿಗೆ ಮಹಾರಾಷ್ಟ್ರದವರಾಗಿದ್ದರಿಂದ ಸೆಂಟಿಮೆಂಟ್ ಇಲ್ಲಿ ವರ್ಕ್ ಆಗಬಹುದು. ಬಾಲಿವುಡ್‌ಗೆ ಹೇಳಿ ಮಾಡಿಸಿದ ಸಿನಿಮಾ. ಯಾಕಂದ್ರೆ ಬಯೋಪಿಕ್‌ಗಳು ಗೆದ್ದಿರುವ ಉದಾಹರಣೆ ಹೆಚ್ಚಿದೆ. ಹಾಗೇ ರಾಜ್‌ಕುಮಾರ್ ಹಿರಾನಿ ಈಗಾಗಲೇ ಬಯೋಪಿಕ್ ಮಾಡಿ ಗೆದ್ದಿದ್ದಾರೆ. ಇನ್ನು ಜೂ.ಎನ್‌ಟಿಆರ್‌ಗೆ ಬಯೋಪಿಕ್ ಅನ್ನೋದು ಹೊಸದು. RRR ಮೂಲಕ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿರುವ ನಟನಿಗೆ ಹೊಸ ಪ್ರಯತ್ನ. ಜೊತೆಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಜೂ.ಎನ್‌ಟಿಆರ್ ಮೇಲುಗೈ ಸಾಧಿಸುತ್ತಾರೆ. ಆದರೆ, ಗ್ಲೋಬಲ್ ಆಡಿಯನ್ಸ್‌ಗೆ ಹೇಗೆ ತಲುಪುತ್ತಾರೆ ಅನ್ನೋದು ಚಾಲೆಂಜಿಂಗ್.

ರಾಜ್‌ಕುಮಾರ್ ಹಿರಾನಿ Vs ರಾಜಮೌಳಿ

ಆಮಿರ್ ಖಾನ್ ನಟಿಸುತ್ತಿರುವ ಸಿನಿಮಾವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದರೆ. ಜೂ. ಎನ್‌ಟಿಆರ್ ಸಿನಿಮಾಗೆ ರಾಜಮೌಳಿ ಸಲಹೆ ಇರುತ್ತೆ. ಅಲ್ಲದೆ ಪುತ್ರನೇ ನಿರ್ಮಾಪಕನಾಗಿರುವುದರಿಂದ ಈ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಬಹುದು. ರಾಜಮೌಳಿಗೆ ಈ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗಬಹುದು. ಹಾಲಿವುಡ್, ಆಸ್ಕರ್ ಅಂತ ರೀಚ್ ಆಗೋದು ಅಷ್ಟು ಕಷ್ಟ ಆಗುವುದಿಲ್ಲ. ಇತ್ತ ಆಮಿರ್ ಖಾನ್ ಚೀನಾ, ಜಪಾನ್, ಕೊರಿಯಾ ಭಾಗಗಳಿಗೆ ರೀಚ್ ಆಗಬಹುದು. ಆದರೆ, ಮಧ್ಯೆದಲ್ಲಿ ಸಿಕ್ಕಿಕೊಳ್ಳುವು ಪ್ರೇಕ್ಷಕರು. ಯಾವ ಸಿನಿಮಾ ನೋಡಬೇಕು? ಯಾವುದು ನೋಡಬಾರದು ಅನ್ನೋ ಗೊಂದಲಕ್ಕೆ ಬೀಳುವುದು ಗ್ಯಾರಂಟಿ.

ಆದರೆ, ದಾದಾ ಸಾಹೇಬ್ ಫಾಲ್ಕೆಯಂತಹ ದಿಗ್ಗಜನ ಬಗ್ಗೆ ಇದೂವರೆಗೂ ಯಾಕೆ ಬಯೋಪಿಕ್ ಆಗಲಿಲ್ಲ? ಅನ್ನೋದೇ ದೊಡ್ಡ ಪ್ರಶ್ನೆ. ಯಾಕಂದ್ರೆ, ಬಾಲಿವುಡ್ ಮಂದಿ ಈಗಾಗಲೇ ದಾದಾ ಸಾಹೇಬ್ ಬಯೋಪಿಕ್ ಅನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಯಾರೂ ಅಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಆದ್ರೀಗ ಇಬ್ಬಿಬ್ಬರು ದಿಗ್ಗಜರು ಬಯೋಪಿಕ್‌ಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ.

ಆಮಿರ್ ಖಾನ್ ಸದ್ಯ 'ಸಿತಾರೆ ಜಮೀನ್ ಪರ್' ಸಿನಿಮಾ ಬಿಡುಗಡೆಯ ತಯಾರಿಯಲ್ಲಿ ತೊಡಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ದಾದಾ ಸಾಹೇಬ್ ಫಾಲ್ಕೆಯವರ ಸಿನಿಮಾವನ್ನು ಕೈಗೆತ್ತಿಗೊಳ್ಳಲಿದ್ದಾರೆ. ಅಂದರೆ, ಈ ಸಿನಿಮಾ ಅಕ್ಟೋವರ್ ತಿಂಗಳಿನಿಂದ ಆರಂಭ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಸದ್ಯ ರಾಜ್‌ಕುಮಾರ್ ಹಿರಾನಿ ಹಾಗೂ ಆಮಿರ್ ಖಾನ್ ಇಬ್ಬರೂ ಸಿನಿಮಾವನ್ನಂತೂ ಅನೌನ್ಸ್ ಮಾಡಿದ್ದಾರೆ.

ಇನ್ನೊಂದು ಕಡೆ ಜೂ.ಎನ್‌ಟಿಆರ್ ಕೂಡ 'ವಾರ್ 2' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ಇಬ್ಬರೂ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಮೇ 20ರಂದು ಟೀಸರ್ ರಿಲೀಸ್ ಆಗಬಹುದು ಎಂಬ ನಿರೀಕ್ಷೆಯಿದೆ. ಸದ್ಯ ಬಾಲಿವುಡ್‌ನಲ್ಲಿ ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಯಾಕಂದ್ರೆ, ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ಇಬ್ಬರೂ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಅಲ್ಲದೆ ಜೂ. ಎನ್‌ಟಿಆರ್‌ಗೂ ಇದು ಮೊದಲ ಬಾಲಿವುಡ್ ಸಿನಿಮಾ. ಹೀಗಾಗಿ 'ವಾರ್ 2' ಮೇಲೆ ಹೆಚ್ಚು ಗಮನ ಹರಿಸಿದ್ದಾರೆ.

'ವಾರ್ 2' ರಿಲೀಸ್ ಬಳಿಕ 'ದಾದಾ ಸಾಹೇಬ್ ಫಾಲ್ಕೆ' ಚರಿತ್ರೆ ಕುರಿತ ಸಿನಿಮಾ ಕಡೆಗೆ ಗಮನ ಹರಿಸಬಹುದು. RRR, ದೇವರ ಅಂತಹ ಯಶಸ್ವಿ ಸಿನಿಮಾಗಳ ಅಲೆಯಲ್ಲಿ ತೇಲುತ್ತಿರುವ ಜೂ.ಎನ್‌ಟಿಆರ್‌ಗೆ ಉತ್ತರ ಭಾರತದಲ್ಲಿಯೂ ಫ್ಯಾನ್ ಬೇಸ್ ಹುಟ್ಟುಕೊಂಡಿದ್ದಾರೆ. ಹೀಗಾಗಿ ಎರಡು ಸಿನಿಮಾಗಳಲ್ಲಿ ಯಾವುದು ಚೆನ್ನಾಗಿದೆಯೋ ಆ ಕಡೆಗೆ ಸಿನಿ ಪ್ರಿಯರು ವಾಲಬಹುದು ಎಂಬ ನಿರೀಕ್ಷೆಯಿದೆ.

More from Filmibeat

English summary
Aamir Khan and Jr NTR Who will win in the Dadasaheb Phalke biopic competition?;
Read more about: aamir khan ntr biopic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X