"ಅಭಿಷೇಕ್ ಬಚ್ಚನ್ ಜೊತೆ ಮದುವೆ ಆಗಿದೆ" ಅಂತ ಕ್ಯಾತೆ ತೆಗೆದಿದ್ದ ಈ ಜಾಹ್ನವಿ ಕಪೂರ್ ಯಾರು?
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಸದ್ಯ ಸುದ್ದಿಯಲ್ಲಿರುವ ಜೋಡಿ. ಇಬ್ಬರೂ ವಿಚ್ಚೇದನಕ್ಕೆ ಮುಂದಾಗಿರೋ ಸುದ್ದಿ ಹಲವು ತಿಂಗಳಿನಿಂದ ಓಡಾಡುತ್ತಲೇ ಇದೆ. ಆದರೆ, ಈ ಬಗ್ಗೆ ಐಶ್ವರ್ಯಾ ರೈ ಆಗಲಿ, ಅಭಿಷೇಕ್ ಬಚ್ಚನ್ ಆಗಿ ಬಾಯಿ ಬಿಟ್ಟಿಲ್ಲ. ಇಬ್ಬರೂ ಸೈಲೆಂಟ್ ಆಗಿದ್ದು, ಅಭಿಮಾನಿಗಳ ಗೊಂದಲವನ್ನು ಹೆಚ್ಚಿಸುತ್ತಿದ್ದಾರೆ.
ಆದರೆ, ನಿಮಗೆ ಗೊತ್ತಾ? ಐಶ್ವರ್ಯಾ ರೈ ಜೊತೆ ಅಭಿಷೇಕ್ ಬಚ್ಚನ್ ಮದುವೆ ಆಗುವಾಗಲೇ ಒಂದು ಅಹಿತಕರ ಘಟನೆ ನಡೆದಿತ್ತು. ಈ ಜೋಡಿ ಹೊಸ ಜೀವನಕ್ಕೆ ಕಾಲಿಡುತ್ತಿರುವಾಗಲೇ ಆ ಖುಷಿಯನ್ನು ಕೆಡಿಸುವ ಘಟನೆ ನಡೆದಿತ್ತು. ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಸೊಸೆಯಾಗುವ ಖುಷಿಯಲ್ಲಿ ಇದ್ದರು. ಇತ್ತ ಅಭಿಷೇಕ್ ಮಾಜಿ ವಿಶ್ವ ಸುಂದರಿಯ ಜೊತೆ ಸಪ್ತಪದಿ ತುಳಿಯುವ ಸಂಭ್ರಮದಲ್ಲಿ ಇದ್ದರು. ಈ ವೇಳೆ ಅಭಿಷೇಕ್ ಬಚ್ಚನ್ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿತ್ತು.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ 2007, ಏಪ್ರಿಲ್ 20ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ವೇಳೆ ಜಾಹ್ನವಿ ಕಪೂರ್ ತನಗೆ ಈಗಾಗಲೇ ಅಭಿಷೇಕ್ ಬಚ್ಚನ್ ಜೊತೆ ಮದುವೆ ಆಗಿದೆ ಎಂದು ಖ್ಯಾತೆ ತೆಗೆದಿದ್ದಳು. ಅಮಿತಾಭ್ ಬಚ್ಚನ್ ಮನೆ 'ಪ್ರತಿಕ್ಷಾ' ಮುಂದೆ ಗಲಾಟೆ ಎಬ್ಬಿಸಿದ್ದಳು. ಜಾಹ್ನವಿ ಕಪೂರ್ ಅಂದ ಕೂಡಲೇ ಇದು ಶ್ರೀದೇವಿ ಪುತ್ರಿ ಅಂತ ಭಾವಿಸಬೇಡಿ. ಬಾಲಿವುಡ್‌ನಲ್ಲೂ ಜಾಹ್ನವಿ ಕಪೂರ್ ಅನ್ನುವ ಮತ್ತೊಬ್ಬ ನಟಿ ಕಮ್ ಮಾಡಲ್ ಇದ್ದಳು.
ಅಭಿಷೇಕ್ ಬಚ್ಚನ್ ನಟಿಸಿದ 'ದಸ್' ಸಿನಿಮಾದ ಭಾಗವಾಗಿದ್ದೆ ಎಂದು ಮಾಡೆಲ್ ಕಮ್ ನಟಿ ಜಾಹ್ನವಿ ಕಪೂರ್ ಅಂದು ಹೇಳಿಕೊಂಡಿದ್ದಳು. ಆ ಸಿನಿಮಾದ ವೇಳೆ ಅಭಿಷೇಕ್ ಬಚ್ಚನ್ ನ್ನನ್ನು ಮದುವೆ ಆಗಿದ್ದರು. ಈಗ ಐಶ್ವರ್ಯಾ ರೈ ಅನ್ನು ವಿವಾಹವಾಗುವ ಮೂಲಕ ತನಗೆ ಮೋಸ ಮಾಡುತ್ತಿದ್ದಾರೆಂದು ಕ್ಯಾತೆ ತೆಗೆದು ಸಂಚಲನ ಸೃಷ್ಟಿಸಿದ್ದಳು.

ಮಾಡೆಲ್ ಜಾಹ್ನವಿ ಕಪೂರ್ ಕೇವಲ ಅಭಿಷೇಕ್ ಬಚ್ಚನ್ ವಿರುದ್ಧವಷ್ಟೇ ಆರೋಪ ಮಾಡಿಲ್ಲ. ಐಶ್ವರ್ಯಾ ರೈ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಳು. ಅಭಿಷೇಕ್ ಬಚ್ಚನ್ ತನ್ನ ಗಂಡ ಅಂತ ಗೊತ್ತಿದ್ದರೂ ಐಶ್ವರ್ಯಾ ರೈ ತನ್ನಿಂದ ಕಿತ್ತುಕೊಂಡಿದ್ದಾಳೆಂದು ಆರೋಪ ಮಾಡಿದ್ದಳು. ಅಮಿತಾಭ್ ಬಚ್ಚನ್ ಮನೆ ಮುಂದೆ ಇಷ್ಟೆಲ್ಲ ಹಂಗಾಮ ಸೃಷ್ಟಿಸಿದ ಬಳಿಕ ಮುಂಬೈನ ಜುಹು ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲಿಸಿದ್ದಳು. ಆದರೆ, ಸಾಕ್ಷಿಗಳ ಕೊರತೆಯಿಂದ ಪೊಲೀಸರು ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು.
ಹಾಗಂತ ಡ್ರಾಮ ಇಲ್ಲಿಗೆ ನಿಲ್ಲಲಿಲ್ಲ. ಅಭಿಷೇಕ್ ಬಚ್ಚನ್ ಮನೆ ಮುಂದೆ ಜಾಹ್ನವಿ ಕಪೂರ್ ಆತ್ಮಹತ್ಯೆಗೂ ಯತ್ನಿಸಿದ್ದಳು. ತನ್ನ ಕೈಯನ್ನು ಕುಯ್ದುಕೊಂಡು ಅವಾಂತರ ಸೃಷ್ಟಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಆಕೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ಕೇಸ್ ಅನ್ನು ದಾಖಲಿಸಿದ್ದರು. ಬಳಿಕ 10 ಸಾವಿರ ದಂಡ ಕಟ್ಟಿದ ಬಳಿಕ ಜಾಮೀನನ್ನು ನೀಡಲಾಗಿತ್ತು.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಮದುವೆ ಸಂದರ್ಭದಲ್ಲಿ ನಡೆದಿದ್ದ ಈ ಘಟನೆ ಮರೆತು ಹೋಗಿದೆ. ಈಗ ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿರುವ ಜಾಹ್ನವಿ ಕಪೂರ್ ಹೆಸರು ಮತ್ತೊಬ್ಬ ನಟಿ 17 ವರ್ಷಗಳ ಹಿಂದೆ ಇಂತಹದ್ದೊಂದು ಹಂಗಾಮ ಸೃಷ್ಟಿಸಿದ್ದಳು ಅನ್ನೋ ಸುದ್ದಿ ಈ ನಟಿ ಫ್ಯಾನ್ಸ್‌ಗೆ ಅಚ್ಚರಿಯಂತೂ ಮೂಡಿಸಿದೆ.
ಇನ್ನು ಇಷ್ಟೆಲ್ಲ ಎದುರಿಸಿ ಮದುವೆ ಆಗಿದ್ದ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ 17 ವರ್ಷಗಳ ಬಳಿಕ ಬಿರುಗಾಳಿ ಎದ್ದಿದೆ ಎನ್ನಲಾಗಿದೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ. ಹೀಗಾಗಿ ಇಬ್ಬರೂ ಬೇರೆಯಾಗುವುದಕ್ಕೆ ನಿರ್ಧರಿಸಿದ್ದಾರೆಂದು ಸುದ್ದಿ ಹಬ್ಬಿದೆ.


Click it and Unblock the Notifications











