ಶಂಕರ್ ನಾಗ್ ರೈಲಿನಲ್ಲಿ ಪ್ರಯಾಣ ಮಾಡಿದಿದ್ದರೆ ಬದುಕುತಿದ್ರು; ರೈಲು ಮಿಸ್ ಆಗಿದ್ದೇಗೆ?

1990, ಸೆಪ್ಟೆಂಬರ್ 30 ಕನ್ನಡ ಚಿತ್ರರಂಗಕ್ಕೆ ಕರಾಳ ದಿನ. ಕನ್ನಡ ನಾಡು ಕಂಡ ಕ್ರಿಯೆಟಿವ್ ಡೈರೆಕ್ಟರ್ ಕಮ್ ನಟ ಶಂಕರ್ ನಾಗ್ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಈ ಸುದ್ದಿ ಬೆಳ್ಳಂಬೆಳಗಾಗುವಷ್ಟರಲ್ಲಿ ಕಾಡ್ಚಿನಂತೆ ಹಬ್ಬಿತ್ತು. ಶಂಕರ್ ನಾಗ್ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಶಂಕರ್ ನಾಗ್ ಪಾದರಸದಂತೆ ಇದ್ದರು. ಎಲ್ಲದರಲ್ಲೂ ವೇಗ. ಒಂದೇ ಒಂದು ನಿಮಿಷವನ್ನು ಹಾಳು ಮಾಡುತ್ತಿರಲಿಲ್ಲ. ಹೀಗಾಗಿ ಶಂಕರ್ ನಾಗ್ ಅವರನ್ನು ಹತ್ತಿರದಿಂದ ಬಲ್ಲವರು ಈ ಎಲ್ಲಾ ವಿಷಯಗಳನ್ನು ಹೇಳುತ್ತಾರೆ. ಶಂಕರ್ ನಾಗ್ 'ಜೋಕುಮಾರಸ್ವಾಮಿ' ಸಿನಿಮಾದಲ್ಲಿ ನಟಿಸಬೇಕಿತ್ತು. ಹೀಗಾಗಿ ಧಾರವಾಡಕ್ಕೆ ತೆರಳುತ್ತಿದ್ದರು. ಈ ವೇಳೆ ಬೆಳಗಿನ ಜಾವ ದಾವಣಗೆರೆ ಸಮೀಪ ರಸ್ತೆ ಅಪಘಾತವಾಗಿತ್ತು.

Actor-director Shankar Nag may survive if he travels by train on that day

ಶಂಕರ್ ನಾಗ್ ಅಂದು ರೈಲಿನಲ್ಲಿ ಪ್ರಯಾಣ ಮಾಡಬೇಕಿತ್ತು. ಆದರೆ ಅಂದು ಆ ರೈಲನ್ನು ಮಿಸ್ ಮಾಡಿಕೊಂಡಿದ್ದರು. ಒಂದು ವೇಳೆ ರೈಲಿನಲ್ಲಿ ಪ್ರಯಾಣ ಮಾಡಿದ್ದಿದ್ದರೆ, ಅವರ ಪ್ರಾಣ ಉಳಿದಿರುತ್ತಿತ್ತೋ ಏನೋ..? ಅಷ್ಟಕ್ಕೂ ಅವರು ರೈಲಿನಲ್ಲಿ ಪ್ರಯಾಣ ಮಾಡಿಲ್ಲ ಯಾಕೆ? ಮಿಸ್ ಮಾಡಿಕೊಂಡಿದ್ದೇಕೆ? ತಿಳಿಯಲು ಮುಂದೆ ಓದಿ..

'ರಾಣಿ ಮಹಾರಾಣಿ', 'ಲವ್ ಟ್ರೈನಿಂಗ್' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ಬಿ ರಾಮಮೂರ್ತಿ ಶಂಕರ್ ನಾಗ್ ಸಿನಿಮಾವನ್ನು ಮಾಡಬೇಕಿತ್ತು. ಶಂಕರ್ ನಾಗ್ ಅಗಲುವ ಹಿಂದಿನ ದಿನ ಅವರಿಗೆ ಕತೆ ಕೂಡ ಹೇಳಿದ್ದರು. ಸಿನಿಮಾ ಶೂಟಿಂಗ್ ಮುಗಿಸಿ ಬರೋದು ತಡವಾಗಿತ್ತು. ಅದೇ ದಿನ ಸಂಕೇತ್ ಸ್ಟುಡಿಯೋದ ಪೂಜೆ ಇಟ್ಟುಕೊಂಡಿದ್ದರು. ಆ ರಾತ್ರಿಯೇ 'ಜೋಕುಮಾರಸ್ವಾಮಿ' ಶೂಟಿಂಗ್‌ಗೆ ಧಾರವಾಡಕ್ಕೆ ಶಂಕರ್ ನಾಗ್ ತೆರಳಿದ್ದರು.

ಶಂಕರ್ ನಾಗ್ ಅಗಲುವ ಹಿಂದಿನ ದಿನ ಏನಾಯ್ತು ಅನ್ನೋದನ್ನು ನಿರ್ದೇಶಕ ಬಿ. ರಾಮಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಹಿಂದಿನ ದಿನ ನಾನು ನದಿ ಹಿಲ್ಸ್‌ನಲ್ಲಿ ಶೂಟಿಂಗ್ ಮಗಿಸಿಕೊಂಡು ಹೊರಟಿದ್ವಿ. ಅದರಲ್ಲೂ ಸಾಯುವ ಕೊನೆ ಸೀನ್ ಇತ್ತು. ಜಯಂತಿಯವರ ತೊಡೆ ಮೇಲೆ ಸಾಯುವ ಸೀನ್ ಅದು. ಸಿನಿಮಾ ಶೂಟಿಂಗ್ ಮುಗಿಸಿಕೊಂಡು ನಂದಿ ಹಿಲ್ಸ್‌ನಿಂದ ಡ್ರೈವ್ ಮಾಡಿಕೊಂಡು ಬಂದರು. ನಾನು ಅಲ್ಲಿಂದ ಕಥೆ ಹೇಳಿಕೊಂಡು ಬಂದಿದ್ದೆ." ಎಂದು ಆದಿನವನ್ನು ನೆನಪಿಸಿಕೊಂಡಿದ್ದಾರೆ.

Actor-director Shankar Nag may survive if he travels by train on that day

ಆ ದಿನ ಸಂಜೆನೇ ಧಾರವಾಡಕ್ಕೆ ತೆಲಳುವುದಕ್ಕೆ ರೈಲು ಬುಕ್ ಮಾಡಿದ್ದರು. ಆದರೆ ಟ್ರೈನ್ ಮಿಸ್ ಆಗಿತ್ತು. "ಅವತ್ತೇ ನೈಟ್ ಅವರು ಜೋಕುಮಾರಸ್ವಾಮಿ ಶೂಟಿಂಗ್‌ಗೆ ಹೊರಡಬೇಕಿತ್ತು. ಸಂಕೇತ್ ಬಳಿ ಇಳಿದರು. ಆ ಮೇಲೆ ನಾನು ನನ್ನ ಕಾರಿನಲ್ಲಿ ಹೊರಟು ಹೋದೆ. ಅವತ್ತು ಟ್ರೈನ್ ಬುಕ್ ಮಾಡಿದ್ದರು. ಆದರೆ, ಅವರು ಕಾರಿನಲ್ಲಿ ಹೋದರು. ಅವರು ಟ್ರೈನ್ ಮಿಸ್ ಆಗುವುದಕ್ಕೆ ಕಾರಣ ಏನಂದ್ರೆ, ನನಗೆ ತಿಳಿದ ಹಾಗೆ ಸಂಕೇತ್‌ನಲ್ಲಿ ಪೂಜೆ ಮುಗಿಸಿ ಹೊರಡಲು ಆಗದೇ ಇದ್ದಾಗ ಟ್ರೈನ್ ಮಿಸ್ಸಾಗಿತ್ತು. ರೈಲು ಕ್ಯಾನ್ಸಲ್ ಆದಾಗ ಕಾರಿನಲ್ಲಿ ಹೋದರು. ದುರ್ವಿದಿ ಬಲಿಯಾಗಿಬಿಟ್ಟರು." ಎಂದು ನಿರ್ದೇಶಕ ಬಿ ರಾಮಮೂರ್ತಿ ಹೇಳಿಕೊಂಡಿದ್ದಾರೆ.

ಹಾಗೇ "ನನ್ನದೊಂದು ಸಿನಿಮಾ ಅವರಿಗೆ ಡೈರೆಕ್ಟ್ ಮಾಡಬೇಕು ಅಂತ ಅಡ್ವಾನ್ಸ್ ಕೂಡ ಕೊಟ್ಟಿದ್ದೆ. ಆದರೆ ನಮಗೆ ಕೆಲವು ಅಲಭ್ಯ ಅನ್ನೋದು ಗೊತ್ತಾಗುತ್ತೆ. ಇಲ್ಲಾ ಅಂದರೆ, ರಕ್ಷಕರೇ ಬಕ್ಷಕರು ಅಂತ ಸಿನಿಮಾ ಮಾಡಬೇಕಿತ್ತು. ಸಾಂಗ್ಲಿಯಾನ ಶೈಲಿಯಲ್ಲಿಯೇ ಕಥೆ ಮಾಡಿದ್ದೆ. ಅದು ಕೆಟ್ಟ ಪೊಲೀಸ್ ಹಾಗೂ ಒಳ್ಳೆಯ ಪೊಲೀಸ್ ನಡುವೆ ಇರುವ ಸಂಘರ್ಷ ಅದು. ಇಲ್ಲ ಅದನು ಬೇರೆಯವರಿಗೆ ಮಾಡುವುದಕ್ಕೆ ಮನಸ್ಸೇ ಬರಲಿಲ್ಲ." ಎಂದು ರಾಮಮೂರ್ತಿ ಹೇಳಿದ್ದಾರೆ.

More from Filmibeat

English summary
Shankar Nag missed the train on that day. If he had been able to catch the train, he would have survived
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X