ಉಪ್ಪಿ ಮುಂದೆ ಸುಮ್ ಸುಮ್ನೆ ನಕ್ಕ ನಟಿ ಚಾಂದಿನಿ ಎಲ್ ಹೋದ್ರು? ಸೈಲೆಂಟ್ ಆಗಿದ್ದೇಕೆ?

ರಿಯಲ್ ಸ್ಟಾರ್ ಉಪೇಂದ್ರ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿದ ಸಿನಿಮಾ 'ಎ'. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಹುಟ್ಟಾಕಿದ್ದ ಈ ಸಿನಿಮಾ ಉಪ್ಪಿಗೆ ಹೊಸ ಇಮೇಜ್ ಕೊಟ್ಟಿತ್ತು. ರಿಯಲ್ ಸ್ಟಾರ್ ಅನ್ನುವ ಪಟ್ಟವನ್ನು ನೀಡಿತ್ತು. ಬುದ್ಧಿವಂತರಿಗೆ ಮಾತ್ರ ಅಂತ ಸಬ್ ಟೈಟಲ್ ಕೊಟ್ಟು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಈಗ ಮತ್ತೆ ಈ ಸಿನಿಮಾ ಇದೇ ವಾರ ಮರುಬಿಡುಗಡೆಯಾಗುತ್ತಿದೆ.

'ಎ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ನಿರ್ದೇಶಕನಾಗಿ ಹೆಸರು ಮಾಡಿದ್ದ ಉಪೇಂದ್ರ ಹೀರೊ ಆಗಿ ಗೆದ್ದಿದ್ದರು. ಅದೇ ಇನ್ನೊಂದು ಕಡೆ ಇದೇ ಸಿನಿಮಾ ಮೂಲಕ ಹೊಸ ಪ್ರತಿಭೆಯೊಂದು ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಅವರೇ ಕನ್ನಡದ ನಟಿ ಚಾಂದಿನಿ. 'ಎ' ಸಿನಿಮಾ ನೆನಪಿನಲ್ಲಿ ಇರುವವರೆಗೂ ಈ ನಟಿಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ.

Actress Chandini who acted with Upendra in A movie do you know what she is doing

ಉಪ್ಪಿ ಜೊತೆ 'ಎ' ಸಿನಿಮಾದಲ್ಲಿ ನಟಿಸಿದ್ದ ಚಾಂದಿನಿ ಕನ್ನಡದ ಕೆಲವು ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಶಿವಣ್ಣ ನಟಿಸಿದ 'AK 47' ಸಿನಿಮಾದಲ್ಲೂ ಚಾಂದಿನಿ ನಾಯಕಿಯಾಗಿ ಗಮನ ಗಳಿಸಿದ್ದರು. ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ಚಾಂದಿನಿ ದಿಢೀರನೇ ಕಣ್ಮರೆಯಾಗಿ ಬಿಟ್ಟರು. ಅಷ್ಟಕ್ಕೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದ ಈ ನಟಿ ಸಿನಿಮಾದಿಂದ ದೂರ ಉಳಿದಿದ್ದೇಕೆ? ತಿಳಿಯಲು ಮುಂದೆ ಓದಿ.

1998ರಲ್ಲಿ ಉಪೇಂದ್ರ ಹೀರೊ ಆಗುವುದಕ್ಕೆ ನಿರ್ಧರಿಸಿದ್ದರು. 'ಎ' ಸಿನಿಮಾ ಮೂಲಕ ತಾವೇ ಕಥೆ, ಚಿತ್ರಕಥೆ ಬರೆದು ಹೀರೊ ಕೂಡ ಆದರು. ಈ ಸಿನಿಮಾ ಮೂಲಕ ದೂರದ ನ್ಯೂಯಾರ್ಕ್‌ನಲ್ಲಿದ್ದ ಚಾಂದಿನಿ ಹೀರೋಯಿನ್ ಆದರು. ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಉಪ್ಪಿ ನಾಯಕಿಯಾಗಿ ಹೊಸ ಪ್ರತಿಭೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ನಟಿ ಚಾಂದಿನಿಗೂ ಕನ್ನಡ ಚಿತ್ರರಂಗಕ್ಕೂ ಸಂಬಂಧವೇ ಇರಲಿಲ್ಲ. ನ್ಯೂಯಾರ್ಕ್‌ನಲ್ಲಿ ನಡೆದ ಮಿಸ್‌ ಇಂಡಿಯಾ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಚಾಂದಿನಿಗೆ 'ಮಿಸ್ ಫೋಟೋಜೆನಿಕ್' ಕಿರೀಟ ಸಿಕ್ಕಿತ್ತು. ಆ ಬಳಿಕ ಇವರ ಫೋಟೊಗಳು ಅದ್ಯಾರಿಂದಲೋ ರಿಯಲ್ ಸ್ಟಾರ್ ಉಪೇಂದ್ರ ಅವರ ಕೈ ಸೇರಿತ್ತು. ಉಪ್ಪಿ ಈಕೆಯ ಫೋಟೊವನ್ನು ನೋಡಿದ ಕೂಡಲೇ ಚಾಂದಿನಿ ನಾಯಕಿ ಆಗಲೇ ಬೇಕು ಅಂತ ಪಟ್ಟು ಹಿಡಿದಿದ್ದರು. ಆಗ ನ್ಯೂಯಾರ್ಕ್‌ನಿಂದ ಚಾಂದಿನಿಯನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದರು.

Actress Chandini who acted with Upendra in A movie do you know what she is doing

ಇಲ್ಲಿಂದ ನಟಿ ಚಾಂದಿನಿಯ ಸಿನಿಮಾ ಬದುಕು ಆರಂಭ ಆಗಿತ್ತು. 'ಎ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಸಿನಿಪ್ರಿಯರಲ್ಲಿ ಚಾಂದಿನಿ ಹೊಸ ಕ್ರೇಜ್ ಹುಟ್ಟಿಸಿದ್ದರು. 'ಎ' ಸಿನಿಮಾ ಮಾಡುವಾಗ ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದ ನಟಿ, ಮತ್ತೆ ಶಿಕ್ಷಣ ಮುಂದುವರೆಸಲು ನ್ಯೂಯಾರ್ಕ್‌ಗೆ ಹೋಗಿದ್ದರು. ಮತ್ತೆ ಸೂಪರ್‌ಹಿಟ್ ಸಿನಿಮಾಗಳಾದ 'AK47' ಸೇರಿದಂತೆ ಹಲವು ಯಶಸ್ಸಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆದರೆ, ಬಳಿಕ ಚಾಂದಿನಿ ನಟಿಸಿದ ಕೆಲವು ಸಿನಿಮಾಗಳು ಸೋತು ಸುಣ್ಣವಾದವು. ಇಲ್ಲಿಂದ ಚಾಂದಿನಿನಿಧಾನಕ್ಕೆ ಸಿನಿಮಾರಂಗದಿಂದ ಕಣ್ಮರೆಯಾದರು. ಅಲ್ಲಿವರೆಗೂ ಕನ್ನಡ, ಬೋಜ್‌ಪುರಿ, ಗುಜರಾತಿ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಚಾಂದಿನಿ ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಆದರೆ, ಚಾಂದಿನಿ ಹಾಲಿವುಡ್‌ನ ಪ್ರತಿಷ್ಠಿತ ಸಂಸ್ಥೆಯ ಸಿನಿಮಾಗಳನ್ನು ಭಾರತದಲ್ಲಿ ವಿತರಣೆ ಕೂಡ ಮಾಡಿದ್ದರು.
ಚಾಂದಿನಿ ಕೇವಲ ನಟಿಯಾಗಿ ಗುರುತಿಸಿಕೊಂಡಿದ್ದಷ್ಟೇ ಅಲ್ಲದೆ, ಹಾಲಿವುಡ್ ಸಿನಿಮಾಗಳ ವಿತರಕಿಯಾಗಿ, ಪಿಎಚ್‌ಡಿ ಪದವಿಧರೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಚಾಂದಿನಿ ಚೆನ್ನೈನಲ್ಲಿ ವಾಸವಿದ್ದಾರೆ ಅನ್ನೋದ ಮಾತುಗಳು ಕೇಳಿ ಬರುತ್ತಿವೆ. ಚಾಂದಿನಿ ಎಲ್ಲಿ ವಾಸವಿದ್ದಾರೆ ಅನ್ನೋ ಅಧಿಕೃತ ಮಾಹಿತಿ ಇಲ್ಲ.

More from Filmibeat

English summary
Do you know where is 'A' movie actress Chandini?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X