ಈ ನಟಿಯನ್ನು ವೇಶ್ಯಾವಾಟಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು; ವೃತ್ತಿ ಬದುಕನ್ನೇ ಮುಗಿಸಿತ್ತು ಒಂದು ಸುಳ್ಳಿನ ಕೇಸ್ ?

ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆಂದು ನೂರೆಂಟು ಕನಸುಗಳನ್ನು ಹೊತ್ತು ಅದೆಷ್ಟೋ ಮಂದಿ ಬರುತ್ತಾರೆ. ಕೆಲವರಿಗೆ ಅದೃಷ್ಟ ಬಹುಬೇಗನೇ ಕೈ ಹಿಡಿಯುತ್ತೆ. ಮತ್ತೆ ಕೆಲವರಿಗೆ ಸಿನಿಮಾ ಅನ್ನೋದು ಮರೀಚಿಕೆಯಾಗಿಯೇ ಉಳಿದು ಬಿಡುತ್ತೆ. ಇನ್ನು ಕೆಲವು ಪರಿಸ್ಥಿತಿಗೆ ಸಿಲುಕಿ ವೃತ್ತಿ ಬದುಕಿಗೆ ಗುಡ್‌ ಬೈ ಹೇಳಿದ್ದೂ ಇದೆ. ಇಂತಹ ಹಲವು ಘಟನೆಗಳು ಅದೆಷ್ಟೋ ಕಲಾವಿದರ ಬಾಳಲ್ಲಿ ನಡೆದಿವೆ. 90 ದಶಕದ ಈ ಜನಪ್ರಿಯ ನಟಿಯದ್ದು ಕೂಡ ಇಂತಹದ್ದೇ ಒಂದು ಕಥೆ.

1990ರಲ್ಲಿ ಗ್ಲಾಮರ್ ಜಗತ್ತಿಗೆ ಕಾಲಿಟ್ಟಿದ್ದ ಈ ನಟಿ ಒಂದೂವರೆ ದಶಕದ ಅವಧಿಯಲ್ಲಿಯೇ ಸ್ಟಾರ್ ನಟಿಯಾಗಿ ಬೆಳೆದಿದ್ದರು. ದಕ್ಷಿಣ ಭಾರತದಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದ ಸ್ಟಾರ್‌ಗಳೊಂದಿಗೆ ನಟಿಸಿದ್ದರು. ಈ ಎರಡು ಚಿತ್ರರಂಗದ ಸ್ಟಾರ್‌ಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದ ಈ ನಟಿ ಮುಂದೊಂದು ದಿನ ಸುಳ್ಳು ಪ್ರಕರಣವೊಂದರಲ್ಲಿ ಸಿಕ್ಕಿಕೊಳ್ಳುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ.

Actress Vineetha wrongly accused a fake case that took her career and limelight

ಒಂದು ಸುಳ್ಳಿನ ಕೇಸ್‌ನಿಂದ ವೃತ್ತಿ ಬದುಕಿಗೆ ತಿಲಾಂಜಲಿ ಇಟ್ಟಿದ್ದ ಆ ನಟಿಯೇ ವಿನೀತಾ. ಇವರು ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲಷ್ಟೇ ನಟಿಸಿಲ್ಲ. ಕನ್ನಡದಲ್ಲೂ ನಾಲ್ಕು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. 'ಧಣಿ', 'ಮಾನವ 2022', 'ದುರ್ಗದ ಹುಲಿ', 'ಪಾಪಿಗಳ ಲೋಕದಲ್ಲಿ' ಅಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ನಾಲ್ಕೂ ಭಾಷೆಯಲ್ಲಿಯೂ ನಟಿಸಿದ್ದ ವಿನೀತಾ ಅವರನ್ನು ವೇಶ್ಯಾವಾಟಿಕೆ ಆರೋಪದ ಮೇಲೆ ಬಂಧಿಸಿದ್ದರು. ಅಷ್ಟಕ್ಕೂ ಏನಿದು ಘಟನೆ? ಆಮೇಲೆ ಏನಾಯ್ತು? ತಿಳಿಯಲು ಮುಂದೆ ಓದಿ.

ಬಹುಭಾಷಾ ನಟಿ ವಿನೀತಾ ಸುಮಾರು ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಿಂದ ಸುಮಾರು 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಸಿನಿಮಾಗೆ ಅವಕಾಶ ಸಿಗುತ್ತಿದ್ದಂತೆ ಅವರು ಮೂಲ ಹೆಸರನ್ನು ಬದಲಿಸಿಕೊಂಡಿದ್ದರು. ಲಕ್ಷ್ಮಿ ಅಂತಿದ್ದ ತಮ್ಮ ಹೆಸರನ್ನು ವಿನೀತಾ ಎಂದು ಬದಲಾಯಿಸಿಕೊಂಡಿದ್ದರು. ವಿನೀತಾ 'ಉಳಿಯನ್' ಎಂಬ ತಮಿಳು ಸಿನಿಮಾದಲ್ಲಿ ಮೊದಲ ನಟಿಸಿದ್ದರೂ, ರಿಲೀಸ್ ಆಗಿದ್ದು ಶರತ್ ಕುಮಾರ್ ನಟಿಸಿದ್ದ 'ಕಟ್ಟಬೊಮ್ಮನ್' ಸಿನಿಮಾ. ಇಲ್ಲಿಂದ ವಿನೀತಾಗೆ ಸಾಲು ಸಾಲು ಅವಕಾಶಗಳು ಸಿಗುವುದಕ್ಕೆ ಶುರುವಾಗಿತ್ತು.

5 ವರ್ಷಗಳಲ್ಲಿ ನಟಿಸಿದ್ದು 11 ಚಿತ್ರಗಳಲ್ಲಿ ನಟನೆ; ಪ್ರೀತಿಗಾಗಿ 22 ವರ್ಷಕ್ಕೆ ಪ್ರಾಣ ಬಿಟ್ಟ ಈ ನಾಯಕಿ ಯಾರು?
ಎಲ್ಲವೂ ಸರಿಯಾಗಿಯೇ ಸಾಗುತ್ತಿತ್ತು. ಹಿಂದಿಯಲ್ಲೂ ನಟಿಸಿದ್ದರೂ, ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲೂ ಜನಪ್ರಿಯರಾಗಿದ್ದರು. ನಟಿ ವಿನೀತಾ ತಮ್ಮ ವೃತ್ತಿ ಬದುಕಿನಲ್ಲಿ 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಉತ್ತಮ ಸ್ಥಿತಿಯಲ್ಲಿದ್ದರು. ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ವಿನೀತಾರನ್ನು 2003ರಲ್ಲಿ ವೇಶ್ಯಾವಾಟಿಕೆ ಆರೋಪದ ಮೇಲೆ ಬಂಧಿಸಿದ್ದರು. ಕೊನೆಗೆ ವಿನೀತಾ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು 2004ರಲ್ಲಿ ಬಿಡುಗಡೆ ಮಾಡಿದ್ದರು. ಈ ಘಟನೆಯ ನಂತರ ವಿನೀತಾ ಮಾನಸಿಕವಾಗಿ ಕುಗ್ಗಿದ್ದರು. ಹೀಗಾಗಿ ಸಿನಿಮಾರಂಗದಿಂದಲೇ ಸುದೀರ್ಘ ದಿನಗಳ ಕಾಲ ದೂರ ಉಳಿದುಬಿಟ್ಟರು.

Actress Vineetha wrongly accused a fake case that took her career and limelight

ವಿನೀತಾ ತಮ್ಮ ಸಹೋದರನಿಗಾಗಿ ಸಿನಿಮಾ ಮಾಡುವುದಕ್ಕೆ ಓಡುತ್ತಿದ್ದರು. ಇದೇ ಸಂದರ್ಭವನ್ನು ಕೆಲವರು ಬಳಸಿಕೊಂಡಿದ್ದರು. ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ವಿನೀತಾ ಸಹೋದರ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡು ಪಿತೂರಿ ನಡೆಸಲಾಗಿತ್ತು. ವಿನೀತಾ ಅವರನ್ನು ವೇಶ್ಯಾವಾಟಿಕೆ ಕೇಸ್‌ನಲ್ಲಿ ಸಿಕ್ಕಿಸಲಾಯಿತೆಂಬ ಟೀಕೆ ಕೂಡ ಇದೆ. 2003ರಲ್ಲಿ ಬಂಧಿಸಿದ್ದ ಪೊಲೀಸರು 2004ರಲ್ಲಿ ಅವದ್ದು ತಪ್ಪಿಲ್ಲ ಎಂದು ಬಿಡುಗಡೆ ಮಾಡಲಾಗಿತ್ತು.

ಈ ಪ್ರಕರಣದಿಂದ ಹೊರ ಬರುತ್ತಿದ್ದಂತೆ ವಿನೀತಾ ಮಾನಸಿಕ ಯಾತನೆಯನ್ನು ಅನುಭವಿಸಿದ್ದರು. ಇಲ್ಲಿಂದ ಸಿನಿಮಾದಲ್ಲಿ ನಟಿಸುವುದನ್ನೇ ನಿಲ್ಲಿಸಿದ್ದರು. ಸುಮಾರು ಆರೇಳು ವರ್ಷಗಳ ಕಾಲ ಯಾವುದೇ ಸಿನಿಮಾದಲ್ಲಿ ನಟಿಸಲೇ ಇಲ್ಲ. ಕೊನೆಗೆ 2008ರಲ್ಲಿ 'ಎಂಗ ರಾಸಿ ನಲ್ಲ ರಾಸಿ' ಸಿನಿಮಾದಲ್ಲಿ ಪೋಷಕ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಮರಳಿದ್ದರು. ಆದರೆ, ಅಲ್ಲಿಂದ ಮತ್ತೆ ಎಲ್ಲಾ ಭಾಷೆಯ ಸಿನಿಮಾರಂಗದಿಂದ ದೂರ ಉಳಿದು ಬಿಟ್ಟರು.

More from Filmibeat

English summary
Actress Vineetha wrongly accused a fake case that took her career and limelight.
Read more about: actress case controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X