ಮದುವೆ ಆಗು ಎಂದ ನಿರ್ದೇಶಕ, ಒಲ್ಲೆ ಎಂದಿದ್ದಕ್ಕೆ ಸಿನಿಮಾದಿಂದಲೇ ಔಟ್: ಬಳಿಕ ದೇಶ ತೊರೆದ ನಟಿ ಯಾರು?
ಭಾರತೀಯ ಚಿತ್ರರಂಗದಲ್ಲಿ ತೆರೆಮರೆಯಲ್ಲಿ ಏನೇನೋ ನಡೆಯುತ್ತಿರುತ್ತೆ. ಕಿತ್ತಾಟ, ಮುನಿಸು, ಕೋಪ, ಅಸೂಯೆ ಇವೆಲ್ಲದರ ಸುತ್ತ ಗೊತ್ತಿಲ್ಲದ ಘಟನೆಗಳು ನಡೆಯುತ್ತಲೇ ಇರುತ್ತೆ. ಆ ಸಂದರ್ಭದಲ್ಲಿ ಸುಮ್ಮನಿದ್ದರೂ, ಮುಂದೊಂದು ದಿನ ಆ ನಟರೋ, ನಟಿಯರೋ ತಮಗಾದ ಅನ್ಯಾಯದ ವಿರುದ್ಧ ಮಾತಾಡಿದಾಗ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತೆ.
ಈಗ 90ರ ದಶಕದಲ್ಲಿ ಬಾಲಿವುಡ್ ನಟಿಯೊಬ್ಬರಿಗೆ ಮದುವೆ ಆಗುವಂತೆ ನಿರ್ದೇಶಕರೊಬ್ಬರು ಗಂಟು ಬಿದ್ದಿದ್ದರು. ಆ ನಟಿ ಒಪ್ಪದೇ ಇದ್ದಾಗ, ನಿರ್ದೇಶಕ ಆ ಸಿನಿಮಾದಿಂದಲೇ ತೆಗೆದು ಹಾಕಿದ್ದರು. ಬಳಿಕ ಈ ವಿಷಯ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗಿತ್ತು. ಬಳಿಕ ನಟಿಯ ಬೆಂಬಲಕ್ಕೆ ಚಿತ್ರರಂಗಕ್ಕೆ ನಿಂತಿತ್ತು. ಆದರೂ, ಈ ಘಟನೆ ಬಳಿಕ ನಟಿ ಹೆಚ್ಚು ಸಿನಿಮಾದಲ್ಲಿ ನಟಿಸಲಿಲ್ಲ. ದೇಶವನ್ನೇ ಬಿಟ್ಟು ಹೊರಟು ಹೋದರು.

90ರ ದಶಕದ ಆ ಜನಪ್ರಿಯ ಬಾಲಿವುಡ್ ನಟಿ ಮತ್ಯಾರೂ ಅಲ್ಲ ಮೀನಾಕ್ಷಿ ಶೇಷಾದ್ರಿ. ಇಂದಿ ಜಾರ್ಕಂಡ್‌ನಲ್ಲಿರುವ ಸಿಂದ್ರಿಯಲ್ಲಿ ತಮಿಳು ಕುಟುಂಬದಲ್ಲಿ ಜನಿಸಿದ್ದ ಈ ನಟಿ 17ನೇ ವಯಸ್ಸಿನಲ್ಲಿಯೇ ಮಿಸ್ ಇಂಡಿಯಾ ಪಟ್ಟ ಪಡೆದುಕೊಂಡಿದ್ದರು. ಇದು ಮೀನಾಕ್ಷಿ ಶೇಷಾದ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಅಡಿಪಾಯವಾಗಿತ್ತು.
ಆದರೆ, ಚಿತ್ರರಂಗದಲ್ಲಿ ಇನ್ನೂ ಹೆಸರು ಮಾಡುವುದಕ್ಕೆ ಅವಕಾಶವಿತ್ತು. ಆ ವೇಳೆ ಬಾಲಿವುಡ್ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಮದುವೆ ಆಗುವಂತೆ ಆಹ್ವಾನ ನೀಡಿದ್ದರು. ಮುಂದೆ ಏನಾಯ್ತು? ನಟಿಯನ್ನು ಸಿನಿಮಾದಿಂದ ತೆಗೆದು ಹಾಕಿದ್ದೇಕೆ? ಬಳಿಕ ನಟಿ ದೇಶವನ್ನೇ ತೊರೆದಿದ್ದೇಕೆ? ಅನ್ನೋದನ್ನು ಸ್ವತ: ನಟಿಯೇ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
1983ರಲ್ಲಿ ಮೀನಾಕ್ಷಿ ಶೇಷಾದ್ರಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಮೀನಾಕ್ಷಿ ನಟಿಸಿದ ಮೊದಲ ಸಿನಿಮಾ 'ಪೈಂಟರ್ ಬಾಬು'. ಇಲ್ಲಿಂದ 'ಹೀರೊ', 'ಆಂಧಿ ತೂಫಾನ್', 'ಮೇರಿ ಜಂಗ್','ದಿಲ್ವಾಲ','ಪರಿವಾರ್','ದಾಮಿನಿ' ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದರು. ಸುಮಾರು ಒಂದು ದಶಕದ ಸಿನಿ ಜರ್ನಿಯಲ್ಲಿ ಮೀನಾಕ್ಷಿ ಶೇಷಾದ್ರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

1993ರಲ್ಲಿ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ 'ದಾಮಿನಿ' ಅನ್ನೋ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ರಿಷಿ ಕಪೂರ್, ಸನ್ನಿ ಡಿಯೋಲ್ ಹಾಗೂ ಮೀನಾಕ್ಷಿ ಶೇಷಾದ್ರಿ ಈ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದ ಚಿತ್ರೀಕರಣದ ವೇಳೆ ರಾಜ್‌ಕುಮಾರ್ ಸಂತೋಷಿ ನಟಿ ಮೀನಾಕ್ಷಿ ಶೇಷಾದ್ರಿಯವರನ್ನು ಮದುವೆ ಆಗುವಂತೆ ಬೇಡಿಕೆ ಇಟ್ಟಿದ್ದರು. ಆ ವೇಳೆ ಮೀನಾಕ್ಷಿ ಶೇಷಾದ್ರಿ ನೇರವಾಗಿ ತಿರಸ್ಕರಿಸಿದ್ದರು. ಹೀಗಾಗಿ ಆ ನಿರ್ದೇಶಕ ಆ ನಟಿಯನ್ನು ಸಿನಿಮಾದಿಂದಲೇ ತೆಗೆದು ಹಾಕಿದ್ದರು.
ಇತ್ತೀಚೆಗೆ ಜೂಮ್ ಜೊತೆಗಿನ ಸಂದರ್ಶನದಲ್ಲಿ ನಟಿ ಆ ಘಟನೆಯ ಬಗ್ಗೆ ಮಾತಾಡಿದ್ದರು. " ನಿರ್ದೇಶಕ ಸಂತೋಷಿ ಹಾಗೂ ನಾನು ಈ ಬಗ್ಗೆ ಮಾತಾಡದೆ ಇರುವುದಕ್ಕೆ ನಿರ್ಧರಿಸಿದ್ವಿ. ಇದು ಸೇತುವೆ ಕೆಳಗಿರುವ ನೀರಿನಂತೆ. ಆದರೆ, ಆ ವೇಳೆ ಎದ್ದು ನಿಲ್ಲುವ ಧೈರ್ಯ ಮುಖ್ಯವಾಗಿತ್ತು. ಯಾಕಂದ್ರೆ, ಅವರು ಇನ್ಮುಂದೆ ಅಗತ್ಯವಿಲ್ಲ ಅಂತ ಯಾರಿಗೂ ಹೇಳಬಾರದು. ನಾನು ಮೌನವಾಗಿಯೇ ಆ ಸಂದರ್ಭವನ್ನು ನಿಭಾಯಿಸಿದ್ದೆ. ಅದನ್ನು ಜಗಳವಾಗಿ ಪರಿವರ್ತಿಸುವುದು ತನ್ನ ಘನತೆಗೆ ಕಡಿಮೆ ಅಂತ ಅನಿಸಿತ್ತು. ಅದಕ್ಕಾಗಿ ಪ್ರತಿಕ್ರಿಯೆ ನೀಡದೆ ಇರಲು ನಿರ್ಧರಿಸಿದ್ದೆ" ಎಂದು ಮೀನಾಕ್ಷಿ ಶೇಷಾದ್ರಿ ಹೇಳಿಕೊಂಡಿದ್ದಾರೆ.
ಈ ಘಟನೆಯ ಬಳಿಕ 'ದಾಮಿನಿ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆದ್ಮೇಲೂ ಮೀನಾಕ್ಷಿ ಶೇಷಾದ್ರಿ ಕೇವಲ ಮೂರು ಸಿನಿಮಾಗಳಲ್ಲಿ ನಟಿಸಿದ್ದರು. 1995ರಲ್ಲಿ ಉದ್ಯಮಿ ಹರೀಶ್ ಮೈಸೂರು ಜೊತೆ ವಿವಾಹವಾದರು. ಆನಂತರ ದೇಶವನ್ನೇ ಬಿಟ್ಟು ಅಮೆರಿಕದಲ್ಲಿ ಸೆಟಲ್ ಆದರು. ಕೇವಲ 32 ವರ್ಷದಲ್ಲಿಯೇ ಸಿನಿಮಾದಿಂದ ದೂರ ಉಳಿದರು.


Click it and Unblock the Notifications











