Dr.Bro:ಅಯೋಧ್ಯೆ ಸಿರೀಸ್ ಬಳಿಕ ಡಾ.ಬ್ರೋ ಮತ್ತೆ ಸೈಲೆಂಟ್; ನೆಟ್ಟಿಗರ ಫೇವರಿಟ್ ಯೂಟ್ಯೂಬರ್ ಎಲ್ಲಿಗೆ ಹೋದ್ರು?

ಸೋಶಿಯಲ್ ಮೀಡಿಯಾದ ವಿಶ್ವದ ಮೂಲೆ ಮೂಲೆಯನ್ನು ಆವರಿಸಿಕೊಳ್ಳುತ್ತಿದ್ದಂತೆ ಲೋಕಲ್ ಪ್ರತಿಭೆಗಳು ಬೆಳಕಿಗೆ ಬಂದಿದ್ದವು. ಕೆಲವರು ಯೂಟ್ಯೂಬ್ ವಿಡಿಯೋ ಮಾಡಿ ಫೇಮಸ್ ಆಗಿದರೆ, ಮತ್ತೆ ಕೆಲವರು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಜನಪ್ರಿಯರಾಗುತ್ತಿದ್ದಾರೆ. ತಮ್ಮದೇ ಭಾಷೆಯಲ್ಲಿ ಜನರನ್ನು ತಮ್ಮದೇ ಶೈಲಿಯಲ್ಲಿ ರಂಜಿಸುತ್ತಿದ್ದಾರೆ. ಹೀಗೆ ಬೆಳಕಿಗೆ ಬಂದ ಪ್ರತಿಭೆ ಡಾ.ಬ್ರೋ.

"ನಮಸ್ಕಾರ ದೇವ್ರು..." ಅಂತಲೇ ಡಾ. ಬ್ರೋ ಯೂಟ್ಯೂಬ್ ಪ್ರಪಂಚಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ಥಳೀಯ ಪ್ರದೇಶಗಳನ್ನು ತನ್ನದೇ ವಿಶಿಷ್ಠ ಶೈಲಿಯಲ್ಲಿ ವಿಡಿಯೋಗಳನ್ನು ಮಾಡುತ್ತಾ ತನ್ನ ಯೂಟ್ಯೂಬ್ ಚಾನೆಲ್‌ಗೆ ಹಾಕುತ್ತಿದ್ದರು. ನಂತರದ ದಿನಗಳಲ್ಲಿ ಡಾ. ಬ್ರೋ ದೇಶ ಅಷ್ಟೇ ಅಲ್ಲ ವಿದೇಶಕ್ಕೂ ಹಾರಿದ್ದರು. ಬೇರೆ ಬೇರೆ ದೇಶಗಳ ಪ್ರದೇಶಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಸುತ್ತಿದ್ದರು.

After Ayodhya series Youtuber Dr Bro inactive from last one month

ಇತ್ತೀಚೆಗೆ ಡಾ. ಬ್ರೋ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೇಳೆ ಸರಣಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಅಲ್ಲಿಂದ ಮತ್ತೆ ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಸೈಲೆಂಟ್ ಆಗಿದ್ದಾರೆ. ಹೆಚ್ಚು ಕಡಿಮೆ ಒಂದು ತಿಂಗಳಾಗಿದೆ. ಒಂದೇ ಒಂದು ವಿಡಿಯೋವನ್ನು ಪೋಸ್ಟ್ ಮಾಡಿಲ್ಲ. ಅವರ ವಿಡಿಯೋಗಳನ್ನು ಕಣ್ಣು ಮಿಟುಕಿಸದೆ ನೋಡುವ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಏಳು ವಾರಗಳಿಂದ ಡಾ. ಬ್ರೋ ಒಂದೇ ಒಂದು ಹೊಸ ವಿಡಿಯೋ ಹಾಕಿಲ್ಲ. ಯೂಟ್ಯೂಬ್‌ನಲ್ಲಿ ಸುಮಾರು 2.37 ಮಿಲಿಯನ್ ಚಂದದಾರರನ್ನು ಹೊಂದಿರುವ ಡಾ. ಬ್ರೋ ಇಷ್ಟು ದಿನಗಳಾದರೂ ಒಂದೇ ಒಂದು ವಿಡಿಯೋ ಫೋಸ್ಟ್ ಮಾಡದೇ ಇರುವುದಕ್ಕೆ ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ. ಕೆಲವು ಮತ್ಯಾಕೆ ವಿಡಿಯೋಗಳನ್ನು ಶೇರ್ ಮಾಡುತ್ತಿಲ್ಲ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

After Ayodhya series Youtuber Dr Bro inactive from last one month

ಡಾ. ಬ್ರೋ ಇನ್‌ಸ್ಟಾಗ್ರಾಂನಲ್ಲೂ ಅಷ್ಟೇ ಆಕ್ಟಿವ್ ಆಗಿದ್ದಾರೆ. ಯೂಟ್ಯೂಬ್‌ಗಿಂತ ಹೆಚ್ಚು ಫಾಲೋವರ್ಸ್ ಇಲ್ಲಿದ್ದಾರೆ. ಸುಮಾರು 2.4 ಮಿಲಿಯನ್ ಮಂದಿ ಇನ್‌ಸ್ಟಾಗ್ರಾಂನಲ್ಲಿ ಡಾ.ಬ್ರೋರನ್ನು ಫಾಲೋ ಮಾಡುತ್ತಾರೆ. ಆದರೆ, ಇಲ್ಲೂ ಕೂಡ ಡಾ. ಬ್ರೋ ಕೊನೆಯದಾಗಿ ಏಳು ವಾರಗಳ ಹಿಂದೆ ಪ್ರೋಮೊ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲಿಂದ ಇಲ್ಲೂ ಸುಳಿವು ಇಲ್ಲ.

ಅಯೋಧ್ಯೆಗೆ ಸಂಬಂಧಿಸಿದ ಸರಣಿಯನ್ನು ಶೂಟ್ ಮಾಡುವುದಕ್ಕೂ ಮುನ್ನ ಇಂತಹದ್ದೇ ಒಂದು ಸುದ್ದಿ ಹಬ್ಬಿತ್ತು. ಡಾ. ಬ್ರೋ ಭಾರತದ ವಿರೋಧಿ ರಾಷ್ಟ್ರ ಚೀನಾಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ರಸ್ತೆ, ಆ ದೇಶ ಬೆಳೆದಿರೋ ರೀತಿಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು. ಇದಕ್ಕೆ ಕೆಲವು ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆ ವಿಡಿಯೋಗಳ ಬಳಿಕ ಡಾ.ಬ್ರೋ ಕೆಲವು ದಿನಗಳ ಕಲಾ ಸೈಲೆಂಟ್ ಆಗಿದ್ದರು.

ಆಗ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಚೀನಾದ ಜೈಲಿನಲ್ಲಿದ್ದಾರೆ. ಅವರನ್ನು ಕಮ್ಯೂನಿಸ್ಟ್ ಸರ್ಕಾರ ಬಂಧಿಸಿದೆ ಅಂತೆಲ್ಲ ಸುದ್ದಿ ಹಬ್ಬಿತ್ತು. ಬಳಿಕ ಮತ್ತೊಬ್ಬ ಯೂಟ್ಯೂಬರ್ ಹಾಗೂ ಆಪ್ತರಾಗಿರುವ ಗ್ಲೋಬಲ್ ಕನ್ನಡಿಗ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಡಾ.ಬ್ರೋ ಎಲ್ಲಿದ್ದಾರೆ? ಅವರಿಗೆ ಏನಾಗಿದೆ? ಅನ್ನೋದನ್ನು ರಿವೀಲ್ ಮಾಡಿದ್ದರು. ಈಗ ಮತ್ತೆ ಒಂದು ತಿಂಗಳಿಂದ ಸೈಲೆಂಟ್ ಆಗಿದ್ದು, ಡಾ. ಬ್ರೋ ಬೇಗನೇ ವಿಡಿಯೋಗಳನ್ನು ಹಾಕಬೇಕು ಅಂತ ನೆಟ್ಟಿಗರು ಬಯಸುತ್ತಿದ್ದಾರೆ.

More from Filmibeat

English summary
Famous Kannada youtuber Dr Bro inactive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X