ಐಶ್ವರ್ಯಾ ರೈ-ಸಲ್ಮಾನ್ ಖಾನ್‌ಗೆ ಅಭದ್ರತೆಯ ಭಾವನೆ ಮೂಡಿಸಿದ್ರಾ?; ಸಲ್ಲು ಸಹೋದರನ ಆರೋಪವೇನು?
ಸಂಬಂಧದಲ್ಲಿ ಎಲ್ಲವೂ ಸರಿ ಹೋಗಿದ್ದರೆ, ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಮದುವೆ ಆಗಿ ಸಂಸಾರ ಕಟ್ಟಿಕೊಂಡಿರುತ್ತಿದ್ದರು. ಆದರೆ, ಸಲ್ಮಾನ್ ಖಾನ್, ಐಶ್ವರ್ಯಾ ರೈ ನಡುವಿನ ಸಂಬಂಧದಲ್ಲಿ ದೊಡ್ಡ ಬಿರುಕು ಬಿಟ್ಟಿತ್ತು. ಇಡೀ ಪ್ರಪಂಚಕ್ಕೆ ಗೊತ್ತಾಗುವಂತೆ ಈ ಜೋಡಿ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದು ಕೂಡ ಅಷ್ಟೇ ವಿಪರ್ಯಾಸ.
ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 1999ರಲ್ಲಿ ತೆರೆಕಂಡಿದ್ದ 'ಹಮ್ ದಿಲ್ ದೇ ಚುಕೆ ಸನಮ್' ಸಿನಿಮಾದ ಚಿತ್ರೀಕರಣದ ವೇಳೆ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಮಧ್ಯೆ ಪ್ರೀತಿ ಹುಟ್ಟಿತ್ತು. ಇಲ್ಲಿಂದ ಒಂದಿಷ್ಟು ದಿನ ಡೇಟಿಂಗ್ ಮಾಡುತ್ತಿದ್ದ ಜೋಡಿ 2001ರಲ್ಲಿ ದೂರ ಆಯ್ತು. ಆ ವೇಳೆ ಇಬ್ಬರ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಂತೂ ನಿಜ.

2001ರಲ್ಲಿ ಸಲ್ಮಾನ್ ಖಾನ್‌ರಿಂದ ಐಶ್ವರ್ಯಾ ರೈ ಬಚ್ಚನ್ ದೂರ ಆಗಿದರು. ಬಳಿಕ ಐಶ್ವರ್ಯಾ ರೈ ಹೆಸರು ಮತ್ತೊಬ್ಬ ಬಾಲಿವುಡ್ ನಟ ವಿವೇಕ್ ಓಬೆರಾಯ್ ಜೊತೆ ತಳುಕು ಹಾಕಿಕೊಂಡಿತ್ತು. ಆಗಲೂ ಕೂಡ ಸಲ್ಮಾನ್ ಖಾನ್, ಐಶ್ವರ್ಯಾ ರೈ ಹಾಗೂ ವಿವೇಕ್ ಓಬೆರಾಯ್ ಹೆಸರುಗಳು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದವು.
ಸಲ್ಮಾನ್ ಖಾನ್-ಐಶ್ವರ್ಯಾ ರೈ ಬ್ರೇಕಪ್ ಬಗ್ಗೆ ಒಂದಿಷ್ಟು ಸುದ್ದಿಗಳು ಹರಿದಾಡುವುದಕ್ಕೆ ಶುರು ಮಾಡಿದ್ದವು. ಬಳಿಕ ಐಶ್ ಕೂಡ ತಮ್ಮ ಸಂಬಂಧ ಮುರಿದು ಬೀಳುವುದಕ್ಕೆ ಏನು ಕಾರಣ ಅನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸಲ್ಮಾನ್ ಖಾನ್ ಮಧ್ಯಪಾನ ಮಾಡಿದ ಬಳಿಕ ಆ ವರ್ತನೆಯಿಂದ ಬೇಸತ್ತು ಬ್ರೇಕಪ್ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ದೈಹಿಕವಾಗಿ, ಭಾವನಾತ್ಮಕವಾಗಿ ಹಾಗೂ ಮೌಖಿಕವಾಗಿ ಹಿಂಸೆ ನೀಡಿ, ಅವಮಾನ ಮಾಡುತ್ತಿದ್ದರೆಂದು ಹೇಳಿಕೊಂಡಿದ್ದರು.

ಈ ಜೋಡಿ ಬ್ರೇಕಪ್ ವಿಚಾರದ ಬಗ್ಗೆ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಕಿಡಿ ಕಾರಿದ್ದರು. ಐಶ್ವರ್ಯಾ ರೈಗೆ ತಿರುಗೇಟು ಕೂಡ ಕೊಟ್ಟಿದ್ದರು. ಮಾಧ್ಯಮವೊಂದರಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಸಂಬಂಧದ ಬಗ್ಗೆ ಓಪನ್ ಆಗಿ ಮಾತಾಡಿದ್ದರು. ಐಶ್ವರ್ಯಾ ರೈ ತಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು,. ಆ ವೇಳೆ ಅವರನ್ನು ತಮ್ಮ ಕುಟುಂಬದಂತೆ ನೋಡಿಕೊಂಡಿದ್ದೇವೆ ಎಂದಿದ್ದಾರೆ.
"ನಮ್ಮ ಮನೆಗೆ ಐಶ್ವರ್ಯಾ ರೈ ಬಂದು ಹೋಗತ್ತಿದ್ದರು. ಆ ವೇಳೆ ಅವರನ್ನು ಸ್ವಂತ ಕಟುಂಬದವರಂತೆ ನೋಡಿಕೊಂಡಿದ್ದೆವು. ಆದರೆ, ಸಲ್ಮಾನ್ ಖಾನ್‌ಗೆ ಐಶ್ವರ್ಯಾ ರೈ ಅಭದ್ರತೆ ಆಗುವಂತೆ ನಡೆದುಕೊಂಡಿದ್ದರು. ಎಲ್ಲಿಯೂ ಓಪನ್ ಆಗಿ ತಮ್ಮ ನಡುವಿನ ಸಂಬಂಧದ ಬಗ್ಗೆ ಹೇಳಿಕೊಳ್ಳಲಿಲ್ಲ" ಎಂದು ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಹೇಳಿಕೊಂಡಿದ್ದರು.
ಇದೇ ಸಂದರ್ಶನದಲ್ಲಿ ಸಲ್ಮಾನ್ ಖಾನ್‌ರಿಂದ ಐಶ್ವರ್ಯಾ ರೈ ಬೇರೆಯಾದ ಮೇಲೂ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದರು. ಅದೇ ಇನ್ನೊಂದು ಕಡೆ ವಿವೇಕ್ ಓಬೆರಾಯ್ ಜೊತೆನೂ ಅಫೇರ್ ಇಟ್ಟುಕೊಂಡಿದ್ದಾಗಿ ಹೇಳಿಕೊಂಡಿದ್ದರು. ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ನಡುವಿನ ವಿಚ್ಛೇದನದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಸೋಹೆಲ್ ಖಾನ್ ಹೇಳಿಕೆ ಸದ್ದು ಮಾಡುತ್ತಿದೆ.


Click it and Unblock the Notifications











